ಓದುವ ಹವ್ಯಾಸದಿಂದ ವ್ಯಕ್ತಿತ್ವ ವಿಕಸನ : ಹುಕ್ಕೇರಿ ಸದಾಶಿವ ಮಹಾಸ್ವಾಮೀಜಿ

Saturday, August 10th, 2024
Hukkeri

ಉಜಿರೆ: ಆಟ-ಪಾಠಗಳು ಜೊತೆಯಾಗಿದ್ದಾಗ ಶಿಕ್ಷಣ ಅರ್ಥಪೂರ್ಣವಾಗಿದ್ದು ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಪುಸ್ತಕದ ಜೊತೆ ಇದ್ದಾಗ ಮಸ್ತಕದ ವಿಕಾಸವೂ ಆಗುವುದರಿಂದ ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮೀಜಿ ಹೇಳಿದರು. ಅವರು ಶನಿವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಶಾಂತಿವನ ಟ್ರಸ್ಟ್ ನಿಂದ ಪ್ರಕಟಿಸಿದ “ಜ್ಞಾನದರ್ಶಿನಿ ಮತ್ತು ಜ್ಞಾನವರ್ಷಿಣಿ” ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಪುಸ್ತಕಗಳನ್ನು ಓದುವುದರಿಂದ ಜ್ಞಾನವೃದ್ಧಿಯೊಂದಿಗೆ ಮಸ್ತಕದ ವಿಕಾಸವೂ ಆಗುತ್ತದೆ. ಕಾಲಹರಣ ಮಾಡುವ ಮೊಬೈಲ್ ಫೋನ್ […]

ಮಹಿಳಾ ವಿದ್ಯಾರ್ಥಿಗಳಿಗೆ ಪತ್ರಿಕಾಲಯಗಳಲ್ಲಿ ತರಬೇತಿಗೆ ಅರ್ಜಿ ಆಹ್ವಾನ

Friday, August 9th, 2024
ಮಹಿಳಾ ವಿದ್ಯಾರ್ಥಿಗಳಿಗೆ ಪತ್ರಿಕಾಲಯಗಳಲ್ಲಿ ತರಬೇತಿಗೆ ಅರ್ಜಿ ಆಹ್ವಾನ

ಮಂಗಳೂರು : ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪದವಿ ಪಡೆದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಪತ್ರಿಕಾಲಯದಲ್ಲಿ ತರಬೇತಿ ಪಡೆಯಲು ಅರ್ಜಿ ಆಹ್ವಾನಿಸಿದೆ. ಪ್ರಸಕ್ತ ಸಾಲಿನಲ್ಲಿ 5 ಮಂದಿ ಮಹಿಳಾ ವಿದ್ಯಾರ್ಥಿಗಳಿಗೆ ಪ್ರಮುಖ ದಿನಪತ್ರಿಕೆಗಳ ಕಾರ್ಯಾಲಯಗಳಲ್ಲಿ 2 ತಿಂಗಳ ಕಾಲ ತರಬೇತಿ ಪಡೆಯಲು, ಮಾಸಿಕ ತಲಾ 20,000/- ರೂ ಗಳನ್ನು ಶಿಶ್ಯವೇತನ ನೀಡಲಾಗುವುದು. ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ/ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗಿದೆ. ಮಹಿಳಾ ವಿದ್ಯಾರ್ಥಿಗಳು […]

ಕುಡುಪು ಆನಂತ ಪದ್ಮನಾಭ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ, ದಲ್ಲಿ ಶೃದ್ಧಾ ಭಕ್ತಿಯ ನಾಗರ ಪಂಚಮಿ

Friday, August 9th, 2024
kudupu-nagarapanchami

ಮಂಗಳೂರು : ನಾಗರ ಪಂಚಮಿ ಹಬ್ಬವನ್ನು ನಾಡಿನೆಲ್ಲೆಡೆ ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಎಲ್ಲೆಡೆ ನಾಗರಾಧನೆ ಶೃದ್ಧಾ ಭಕ್ತಿಯಿಂದ ನಡೆಯುತ್ತಿದ್ದು, ಕುಡುಪು ಆನಂತ ಪದ್ಮನಾಭ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ, ಶರವು ಮಹಾಗಣಪತಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಮೊದಲಾದೆಡೆ ಭಕ್ತರು ಬೆಳಗ್ಗಿನಿಂದಲೇ ಹಾಲಿನ ಅಭಿಷೇಕ, ಸೀಯಾಳ ಅಭಿಷೇಕ ಕೈಗೊಂಡರು. ಇಂದು ನಾಗಾರಾಧನೆ ಕುಟುಂಬದ ಮೂಲ ನಾಗಬನಗಳಲ್ಲಿಯೂ ನಡೆಯುತ್ತಿದ್ದು ಮುಂಜಾನೆಯಿಂದಲೇ ಜನರು ತೆರಳಿ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆಯುತ್ತಿದ್ದಾರೆ. ನಾಗರಾಧನೆ ಕ್ಷೇತ್ರಗಳಲ್ಲಿ ಸಾವಿರಾರು […]

ವಿದ್ಯಾಭಾರತಿ ಜಿಲ್ಲಾಮಟ್ಟದ ಕರಾಟೆ ಪಂದ್ಯಾಟ- ವಿವೇಕಾನಂದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Thursday, August 8th, 2024
vivekananda-college.-Karate

ಪುತ್ತೂರು : ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜು ಉಪ್ಪಿನಂಗಡಿ ಇಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ಕರಾಟೆ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆದಿರುತ್ತದೆ. ಬಾಲಕರ ವಿಭಾಗದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಅದ್ವಿತ್‌ ಶರ್ಮ, ದುರ್ಗೇಶ್‌ ಮೌರ್ಯ ದ್ವಿತೀಯ ವಾಣಿಜ್ಯ ವಿಭಾಗದ ಸೃಜನ್‌ ಲಕ್ಕಪ್ಪ ಪ್ರಥಮ ವಾಣಿಜ್ಯ ವಿಭಾಗದ ಪ್ರಮಥ್‌ ಎಮ್‌ ಭಟ್‌, ರಾಮಪ್ರಸಾದ್‌ ಬಿ ಎನ್‌ ಪ್ರಥಮ ವಿಜ್ಞಾನ ವಿಭಾಗದ ರಿಷಿ ಬೆಳ್ಳಿಯ ಪದಕ ಗಳಿಸಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ವಾಣಿಜ್ಯ […]

ಶಿಕ್ಷಣ ಸಂಸ್ಥೆಗಳ ಪರಿಸರದಲ್ಲಿ ತಂಬಾಕು ಮಾರಿದರೆ ಅಂಗಡಿ ಲೈಸನ್ಸ್ ರದ್ದುಗೊಳಿಸಲು ಸೂಚನೆ

Thursday, August 8th, 2024
Santhosh-G

ಮಂಗಳೂರು : ಶಾಲಾ ಕಾಲೇಜುಗಳ 100 ಮೀಟರ್ ಅಂತರದ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಂಡು ಪರವಾನಿಗೆಯನ್ನು ನವೀಕರಿಸದೆ, ರದ್ದುಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್ ಸೂಚಿಸಿದ್ದಾರೆ. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ 2024-25ರ ಸಾಲಿನ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ದಡಿಯಲ್ಲಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹೊಸ ತಂಬಾಕು ಪರವಾನಿಗೆ ನೀತಿಯು ಮಹಾನಗರ ಪಾಲಿಕೆಯಲ್ಲಿ ಜಾರಿಯಾದ ತಕ್ಷಣ ಶಾಲಾ ಕಾಲೇಜು ಗಳ […]

ಭೂಕುಸಿದಿಂದ ಬಂದ್ ಆಗಿದ್ದ ಮಂಗಳೂರು ಬೆಂಗಳೂರು ರೈಲು ಪ್ರಯಾಣ ಇದೀಗ ಮತ್ತೆ ಪ್ರಾರಂಭ

Thursday, August 8th, 2024
Bangalore-Train

ಮಂಗಳೂರು : ಸಕಲೇಶಪುರ–ಸುಬ್ರಹ್ಮಣ್ಯ ನಿಲ್ದಾಣಗಳ ನಡುವಿನ ಕಡಗರಹಳ್ಳಿ ಎಂಬಲ್ಲಿ ಉಂಟಾಗಿದ್ದ ಭೂಕುಸಿದಿಂದಾಗಿ ಸಂಪೂರ್ಣ ಬಂದ್ ಆಗಿದ್ದ ಮಂಗಳೂರು ಬೆಂಗಳೂರು ರೈಲು ಪ್ರಯಾಣ ಇದೀಗ ಮತ್ತೆ ಪ್ರಾರಂಭವಾಗಿದೆ. ಗುರುವಾರ ಯಶವಂತಪುರ–ಮಂಗಳೂರು ಜಂಕ್ಷನ್‌ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಈ ಮಾರ್ಗದಲ್ಲಿ ಸಂಚರಿಸುವ ಮೂಲಕ ರೈಲು ಸಂಚಾರ ಆರಂಭಗೊಂಡಿದೆ. ಭಾರೀ ಮಳೆಯಿಂದಾಗಿ ಕಡಗರವಳ್ಳಿ ಮತ್ತು ಯಡಕುಮೇರಿ ನಡುವಿನ ರೈಲು ಮಾರ್ಗದ ಕೆಳಬದಿಯಲ್ಲಿ ಭೂಕುಸಿತವಾಗಿತ್ತು, ರೈಲ್ವೆ ಇಲಾಖೆ ನಿರಂತರ ಮಳೆಯ ನಡುವೆಯೂ ಕ್ರಿಬ್‌ ಗೋಡೆ, ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿದೆ. ಆಗಸ್ಟ್ […]

ಮಂಗಳೂರಿನಲ್ಲಿ ಉದ್ಯಮಿಯನ್ನು ಅಪಹರಿಸಿ, ಬಿಡುಗಡೆಗೆ 10 ಲಕ್ಷ ಡಿಮಾಂಡ್

Thursday, August 8th, 2024
kidnap

ಮಂಗಳೂರು : ವ್ಯವಹಾರ ನಿಮಿತ್ತ ಮಂಗಳೂರಿಗೆ ಬಂದಿದ್ದ ಉದ್ಯಮಿಯನ್ನು ದುಷ್ಕರ್ಮಿಗಳು ಅಪಹರಿಸಿದ ಘಟನೆ ನಡೆದಿದೆ. ಈ ಸಂಬಂಧ ಮಂಗಳೂರು ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಮಂಗಳೂರಿನ ಖಾಸಾಗಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸೀಟು ಮಾಡಿಸಿಕೊಡಲು ಕೇರಳದಿಂದ ಬಂದಿದ್ದ ಶರತ್ ಕೆಲಸ ಮುಗಿಸಿ ಬೆಂಗಳೂರಿಗೆ ತೆರಳಲು ಮಂಗಳವಾರ ರಾತ್ರಿ ನಗರ ಪಿವಿಎಸ್‌ ಬಳಿ ಬಸ್ ಕಾಯುತ್ತಿದ್ದಾಗ ಕಾರಿನಲ್ಲಿ ಬಂದ ನಾಲ್ವರ ತಂಡ ಶರತ್ ಅವರನ್ನು ಬಲವಂತವಾಗಿ ಕಾರಿಗೆ ಹಾಕಿ ಅಪಹರಿಸಿದ್ದಾರೆ. ಬಳಿಕ ಆತನ ಮನೆಯವರಿಗೆ ಫೋನ್ […]

ಜೋಕಟ್ಟೆ 14 ವರ್ಷದ ಬಾಲಕಿಯ ಕೊಲೆ , ಆರೋಪಿಯನ್ನು ಬಂಧಿಸಿದ ಪೊಲೀಸರು

Wednesday, August 7th, 2024
Hanamappa madara

ಮಂಗಳೂರು: ಜೋಕಟ್ಟೆಯಲ್ಲಿ ಬೆಳಗಾವಿ ಮೂಲದ 14 ವರ್ಷದ ಬಾಲಕಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಪರಸಘಡ, ಹಂಚಿನಾಳ, ಮಾದರ ಓಣಿ ನಿವಾಸಿ ಪಕ್ಕೀರಪ್ಪ ಹಣಮಪ್ಪ ಮಾದರ (51) ಬಂಧಿತ. ಈತ ಪ್ರಸ್ತುತ ಜೋಕಟ್ಟೆ ವಿಜಯ ವಿಠಲ ಭಜನಾ ಮಂದಿರದ ಹಿಂಭಾಗ ಕೇಶವ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ಕಳೆದ 6 ತಿಂಗಳುಗಳಿಂದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಪರಿಸರದಲ್ಲಿ ದಿನಗೂಲಿ ಕಾರ್ಮಿಕನಾಗಿದ್ದ. ಜೋಕಟ್ಟೆಯ […]

ಚಿಲ್ಲರೆ ವಿಚಾರಕ್ಕೆ ಕಂಡೆಕ್ಟರ್ ಕುತ್ತಿಗೆ, ಕೈಗೆ ಪರಚಿ ಗಾಯಗೊಳಿಸಿದ ಪ್ರಯಾಣಿಕ

Wednesday, August 7th, 2024
Bus-conductor

ಉಪ್ಪಿನಂಗಡಿ: ಪ್ರಯಾಣಿಕನೊಬ್ಬ ಕಂಡೆಕ್ಟರ್ ಮೇಲೆ ಟಿಕೆಟ್ ವಿಚಾರಕ್ಕೆ ಹಲ್ಲೆ ಮಾಡಿರುವ ಘಟನೆ ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್ ನಲ್ಲಿ ಮಂಗಳವಾರ ಸಂಜೆ ನಡೆದಿದೆ. ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್ ನಲ್ಲಿ ವಿಪರೀತ ಪ್ರಯಾಣಿಕರು, ಶಾಲಾ ಮಕ್ಕಳು ತುಂಬಿ ತುಳುಕುತ್ತಿದ್ದರು. ಈ ವೇಳೆ ಕೆಮ್ಮಾರ ಬಳಿ ತಲುಪುತ್ತಿದ್ದಂತೆ ಪ್ರಯಾಣಿಕನೊಬ್ಬನಲ್ಲಿ ಕಂಡಕ್ಟರ್ ರಫೀಕ್ ಅವರು ಟಿಕೇಟ್ ಕೇಳಿದ್ದಾರೆ. ಬಳಿಕ ಈತ ಚಿಲ್ಲರೆ ವಿಚಾರದಲ್ಲಿ ತಗಾದೆ ತೆಗೆದಿದ್ದಾನೆ ಎನ್ನಲಾಗಿದೆ. ಪ್ರಯಾಣಿಕ ಜಗಳ ಮಾಡಿದ್ದಲ್ಲದೇ ಬಸ್ ನಲ್ಲಿ ರಂಪಾಟವಾಡಿ ಬಸ್ ಕಿಟಕಿಗೆ ಹಾನಿ […]

ಶಿರೂರು-ಉಳವರೆಗೆ ಭೇಟಿ ನೀಡಿ ಮಾನವೀಯ ನೆರವು ಚಾಚಿದ ಮಂಗಳೂರಿನ ಪತ್ರಕರ್ತರು

Wednesday, August 7th, 2024
journalist

ಶಿರೂರು: ಗುಡ್ಡ ಕುಸಿತದಿಂದ ಮನೆಮಠ ಕಳೆದುಕೊಂಡ ಅಂಕೋಲ ತಾಲೂಕಿನ ಉಳವರೆ ಗ್ರಾಮಕ್ಕೆ ಉಳ್ಳಾಲ ಪತ್ರಕರ್ತರ ಸಂಘ ಹಾಗೂ ಮಂಗಳೂರಿನ ಪತ್ರಕರ್ತರ ಚಾರಣ ಬಳಗದ ಸದಸ್ಯರು ಭೇಟಿ ಕೊಟ್ಟು ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಮೂಲಕ ಮಾನವೀಯ ನೆರವು ಚಾಚಿದರು. ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿದು ಉಂಟಾದ ದುರಂತದ ಪರಿಣಾಮ ಗಂಗಾವಳಿ ನದಿ ತೀರದಲ್ಲಿರುವ ಉಳವರೆ ಗ್ರಾಮದ 27 ಕುಟುಂಬಗಳು ಮನೆ ಮಠ ಕಳೆದುಕೊಂಡಿದ್ದರೆ 6 ಮನೆಗಳು‌ ಸಂಪೂರ್ಣ ನಾಶವಾಗಿತ್ತು. ಸದ್ಯ ಉಳವರೆ ಗ್ರಾಮ‌ […]