ಮುಂದೆ ಗಲಾಟೆ ನಡೆಯುತ್ತಿದೆ ಎಂದು ಚಿನ್ನಾಭರಣ ದರೋಡೆ ಮಾಡುತ್ತಿದ್ದ ನಾಲ್ವರ ಬಂಧನ

Thursday, October 22nd, 2020
chain snatchers

ಉಡುಪಿ : ಉಡುಪಿ ಡಿಸಿಐಬಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜಪ್ಪ ಡಿ.ಆರ್. ನೇತೃತ್ವದಲ್ಲಿ  ನಾಲ್ವರು ಅಂತರ್ ‌ರಾಜ್ಯ ಸರ ಕಳವು ಆರೋಪಿಗಳನ್ನು ಪೊಲೀಸರು ಉಡುಪಿ ಶ್ರೀಕೃಷ್ಣ ಮಠ ಪಾರ್ಕಿಂಗ್ ಸ್ಥಳದ ಬಳಿ ಬಂಧಿಸಿದ್ದಾರೆ. ಉಡುಪಿ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ವಯಸ್ಸಾದ ಒಂಟಿ ಹೆಂಗಸರು ಹಾಗೂ ಗಂಡಸರನ್ನು ನಯವಾದ ಮಾತುಗಳಿಂದ ವಂಚಿಸಿ ಚಿನ್ನಾಭರಣಗಳನ್ನು ಆರೋಪಿಗಳು ಕಳವು ಮಾಡುತಿದ್ದರು. ಬಂಧಿತರನ್ನು ಇರಾನಿ ಗ್ಯಾಂಗ್‌ಗೆ ಸೇರಿದ ಅಂತಾರಾಜ್ಯ ವಂಚಕರಾದ ಮಹಾರಾಷ್ಟ್ರ ರಾಜ್ಯದ ಅಹ್ಮದ್‌ನಗರ ಜಿಲ್ಲೆ ಶ್ರೀರಾಮಪುರದ ಝಾಕಿರ್ ಹುಸೈನ್ (26), ಕಂಬರ್ ರಹೀಮ್ […]

ಮನಪಾ ವಿಪಕ್ಷ ನಾಯಕ ಪೂರ್ವಾಗ್ರಹ ಪೀಡಿತರಾಗಿ ಮಾತನಾಡುತ್ತಿದ್ದಾರೆ : ಪ್ರೇಮಾನಂದ ಶೆಟ್ಟಿ

Wednesday, October 21st, 2020
premanada shetty

ಮಂಗಳೂರು:  ಬಿಜೆಪಿ ಸರ್ಕಾರ ಕೆ ಎಫ್ ಡಿ ಸಿ ಯಿಂದ ಶೇ. 70ರಷ್ಟು ಸಾಲ ಮಂಜೂರಾತಿ ಪಡೆದಿದ್ದು, ಶೇ. 30ರಷ್ಟು ತಮ್ಮದೇ ನಿಧಿಯಿಂದ ಭರಿಸುವುದಾಗಿ ಮೇಯರ್ ಅವರ ಮೊದಲ ಕೌನ್ಸಿಲ್ನಲ್ಲಿ ಮಂಜೂರಾತಿ ಮಾಡಿದೆ ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ಪೂರ್ವಾಗ್ರಹ ಪೀಡಿತರಾಗಿ ಮಾತನಾಡುತ್ತಿದ್ದಾರೆ ಎಂದು ಮಂಗಳೂರು ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,  ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮಾರುಕಟ್ಟೆಗಳಿಗೆ ಬೇಕಾದ ಹಣವನ್ನು ಕ್ರೋಢೀಕರಿಸುವ ಕೆಲಸ ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿಲ್ಲ. […]

ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಚಾಕುವಿನಿಂದ ಇರಿದು ಹತ್ಯೆ

Wednesday, October 21st, 2020
Surendra Bantwal

ಮಂಗಳೂರು : ರೌಡಿಶೀಟರ್, ತುಳು ನಟ ಸುರೇಂದ್ರ ಬಂಟ್ವಾಳರನ್ನು ಬಸ್ತಿಪಡ್ಪುವಿನ ಅಪಾರ್ಟ್ಮೆಂಟ್ನಲ್ಲಿ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಸ್ತಿಪಡ್ಪುವಿನ ಅಪಾರ್ಟ್ಮೆಂಟ್ನಲ್ಲಿ ಸುರೇಂದ್ರರನ್ನು ಹತ್ಯೆಗೈಯ್ಯಲಾಗಿದೆ. ಸುರೇಂದ್ರ ಬಂಟ್ವಾಳ ಅವರು ಚಾಲಿಪೋಲಿಲು ತುಳು ಚಲನಚಿತ್ರದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರ ನಿರ್ವಹಿಸಿದ್ದರು. ಘಟನೆ ನಿನ್ನೆ ರಾತ್ರಿ ನಡೆದಿದೆ ಎಂದು ಅಂದಾಜಿಸಲಾಗಿದೆ. ಇಂದು ಮಧ್ಯಾಹ್ನದವರೆಗೆ ಮನೆ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ‌. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, […]

ಹೊಟೇಲ್ ಉದ್ಯಮಿ ಜಯ ಸಿ. ಸುವರ್ಣ ನಿಧನ

Wednesday, October 21st, 2020
JayaCSuvarna

ಮಂಗಳೂರು : ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಮಾಜಿ ಅಧ್ಯಕ್ಷ, ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೂಲ್ಕಿ ಜಯ ಸಿ. ಸುವರ್ಣ (74) ಬುಧವಾರ ಬೆಳಗ್ಗಿನ ಜಾವ ಮುಂಬೈಯಲ್ಲಿ ನಿಧನರಾದರು. ಮುಂಬಯಿಯಲ್ಲಿ ಹೊಟೇಲ್ ಉದ್ಯಮಿಯಾಗಿರುವ ಜಯ ಸಿ.ಸುವರ್ಣ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಮುಂಬಯಿ ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾಗಿ, ಅಭಿವೃದ್ಧಿಯ ರೂವಾರಿಯಾಗಿದ್ದರು. ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿಯವರ ನಿಕಟವರ್ತಿ, ಎಲ್ಲಾ […]

ಮಂಗಳೂರಿನಲ್ಲಿ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ಸಿಟಿ ಬಸ್​

Tuesday, October 20th, 2020
Ganesh Prasad bus

ಮಂಗಳೂರು  : ಮಂಗಳೂರಿನ ಬಸ್ ಮಾಲೀಕ ರೊಬ್ಬರು  ಡ್ರಗ್ಸ್ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಬರಹಗಳನ್ನು ‌ತಮ್ಮ ಬಸ್ನಲ್ಲಿ ಬರೆಸಿದ್ದಾರೆ. ನಗರದ ಸ್ಟೇಟ್ ಬ್ಯಾಂಕ್ನಿಂದ ಮಂಗಳಾದೇವಿಯ ನಡುವೆ ಸಂಚರಿಸುವ ‘ಶ್ರೀ ಗಣೇಶ್ ಪ್ರಸಾದ್’ ಎಂಬ 27 ನಂಬರ್ ಸಿಟಿ ಬಸ್ನಲ್ಲಿ‌ ಮಾಲೀಕ  ದಿಲ್ ರಾಜ್ ಆಳ್ವ ಅವರು ಡ್ರಗ್ಸ್ ಜಾಗೃತಿ ಬರಹ ಬರೆಸಿದ್ದಾರೆ. ಬಸ್ನ ಎರಡೂ ಬದಿಗಳಲ್ಲಿಯೂ ಆರೋಗ್ಯದ ಬಗ್ಗೆ ಕಾಳಜಿ, ಡ್ರಗ್ಸ್ ಸೇವನೆಯಿಂದ ಮರಣ ಸಂಭವಿಸುತ್ತದೆ, ಕುಟುಂಬಕ್ಕೂ ತೊಂದರೆ ಎಂಬ ಜಾಗೃತಿ ಬರಹಗಳನ್ನು ಬರೆಯಲಾಗಿದೆ. ಈ ಹಿಂದೆಯೂ ಅವರು […]

ಮಂಗಳೂರು ಸ್ಮಾರ್ಟ್ ಸಿಟಿ ಲಿ.ನ ಆಡಳಿತ ನಿರ್ದೇಶಕ ಮುಹಮ್ಮದ್ ನಝೀರ್ ವರ್ಗಾವಣೆ

Tuesday, October 20th, 2020
Mohammed Nazir

ಮಂಗಳೂರು : ಮಂಗಳೂರು ಸ್ಮಾರ್ಟ್ ಸಿಟಿ ಲಿ.ನ ಆಡಳಿತ ನಿರ್ದೇಶಕ ಮುಹಮ್ಮದ್ ನಝೀರ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ನಝೀರ್ ಅವರನ್ನು ಒಂದು ವರ್ಷದಿಂದ ಸ್ಮಾರ್ಟ್ ಸಿಟಿ ಲಿ.ಇದರ ನಿರ್ದೇಶಕರಾಗಿ ನಿಯುಕ್ತಿಗೊಳಿಸಲಾಗಿತ್ತು. ಮುಹಮ್ಮದ್ ನಝೀರ್ ಅವರಿಗೆ ಹೊಸ ಹುದ್ದೆ ಇನ್ನೂ ನಿಗದಿಯಾಗಿಲ್ಲ. ಅವರ ಸ್ಥಾನಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಅವರನ್ನು ನೇಮಿಸಲಾಗಿದೆ.

ರಸ್ತೆ ಬದಿ ನಿಂತಿದ್ದ ಕಾರಿಗೆ ರಿಕ್ಷಾ ಢಿಕ್ಕಿ, ಚಾಲಕ ಸಾವು

Tuesday, October 20th, 2020
Sunil Dead

ಉಡುಪಿ :  ರಿಕ್ಷಾವೊಂದು ರಸ್ತೆ ಬದಿ ನಿಂತಿದ್ದ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಗುಂಡಿಬೈಲು ನಾಗನಕಟ್ಟೆ ಸಮೀಪ ಮಂಗಳವಾರ ಸಂಜೆ ವೇಳೆ ನಡೆದಿದೆ. ಮೃತರನ್ನು ಮೂಡಬೆಟ್ಟುವಿನ ಸುನೀಲ್(44) ಎಂದು ಗುರುತಿಸಲಾಗಿದೆ. ಅಂಬಾಗಿಲು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ರಿಕ್ಷಾ, ರಸ್ತೆ ಬದಿ ನಿಂತಿದ್ದ ಕಾರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಿಕ್ಷಾ ಪಲ್ಟಿಯಾಗಿದ್ದು, ಈ ವೇಳೆ ಚಾಲಕ ರಿಕ್ಷಾದಿಂದ ಹೊರಗೆ ಎಸೆಯಲ್ಪಟ್ಟರೆನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಸುನೀಲ್, ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ […]

ಮಗಳನ್ನು ಉಳಿಸಿ, ಮಗಳನ್ನು ಓದಿಸಿ ಕಾರ್ಯಕ್ರಮಕ್ಕೆ ಡಾ. ವೈ ಭರತ್ ಶೆಟ್ಟಿ ಚಾಲನೆ

Tuesday, October 20th, 2020
Zilla-Panchayth-

ಮಂಗಳೂರು :  ಪ್ರತೀ ಹೆಣ್ಣು ಹುಟ್ಟಿನಿಂದಲೇ ಸ್ವತಂತ್ರಳು, ಇದನ್ನು ಸಮಾಜ ಮನವರಿಕೆ ಮಾಡಿಕೊಳ್ಳಬೇಕೆಂದು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು. ಅವರು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಮಗಳನ್ನು ಉಳಿಸಿ, ಮಗಳನ್ನು ಓದಿಸಿ ಕಾರ್ಯಕ್ರಮದ ಅಂಗವಾಗಿ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದಲ್ಲಿ ಮಹಿಳೆಯರ ಮೇಲೆ […]

ವಾಸ್ತುದೋಷದಿಂದ ಬಂಟ್ವಾಳ ತಾಲೂಕು ಕಚೇರಿಯ ಇಬ್ಬರು ಉಪತಹಶೀಲ್ದಾರ್ ಗಳ ಸಾವು

Monday, October 19th, 2020
Bantwala TP

ಬಂಟ್ವಾಳ: ಪ್ರಶ್ನಾಚಿಂತನೆಯಲ್ಲಿ ತಾಲೂಕು ಕಚೇರಿಯಲ್ಲಿ ವಾಸ್ತುದೋಷ ಕಂಡು ಬಂದಿದೆ ಎಂದು ಸಂಕಲ್ಪಿಸಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ಸನ್ನಿಧಿಯಲ್ಲಿ ಸೋಮವಾರ  ಬೆಳಗ್ಗೆ ಮಹಾ ಮೃತ್ಯುಂಜಯ ಹೋಮ ನಡೆಯಿತು. ಕಳೆದ ಕೆಲವು ತಿಂಗಳ ಹಿಂದೆ ತಾಲೂಕು ಕಚೇರಿಯ ಇಬ್ಬರು ಉಪತಹಶೀಲ್ದಾರ್ ಗಳು ಅನಾರೋಗ್ಯದಿಂದ ಮೃತಪಟ್ಟಿದ್ದು, ಹೀಗಾಗಿ ಜಿಲ್ಲಾ ಪಂಚಾಯತ್ ಸದಸ್ಯರು ಪ್ರಶ್ನಾಚಿಂತನೆ ನಡೆಸಿದ್ದರು. ಶ್ರೀ ವೆಂಕಟರಮಣ ಮುಚ್ಚಿನ್ನಾಯರ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಮನೋಹರ್ ತಂತ್ರಿಗಳು ಚಂದ್ರಮೌಳೀಶ್ವರ ದೇವಸ್ಥಾನ ಉಡುಪಿ ಇವರ ವೈದಿಕ ವಿಧಿ […]

ಕಾಂಗ್ರೆಸ್ ಅವಧಿಯಲ್ಲಿ ಆರಂಭಿಸಿದ ಕೆಲಸಗಳನ್ನೇ ಬಿಜೆಪಿ ಶಾಸಕರು ತಮ್ಮದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ : ವಿಪಕ್ಷ ನಾಯಕ

Monday, October 19th, 2020
Ravoof

ಮಂಗಳೂರು : ನಗರದ 8 ಮಾರುಕಟ್ಟೆಗಳಿಗೆ 2017ರಲ್ಲಿಯೇ ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿತ್ತು ಅಳಕೆ ಮಾರುಕಟ್ಟೆ ಶಿಲಾನ್ಯಾಸ ಮಾತ್ರ ಹಿಂದಿನ ಅವಧಿಯಲ್ಲಿ ನಡೆದಿರುವುದು ಎಂಬುದಾಗಿ ಮಂಗಳೂರು ದಕ್ಷಿಣ ಶಾಸಕರು ನೀಡಿರುವ ಹೇಳಿಕೆ ಅಪ್ಪಟ್ಟ ಸುಳ್ಳು’’ ಎಂದು ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಅಬ್ದುಲ್ ರವೂಫ್ ಹೇಳಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರಾದವರು  ಜನರನ್ನು ದಾರಿತಪ್ಪಿಸುವ ಹೇಳಿಕೆ ನೀಡಬಾರದು ಅಳಕೆ ಮಾರುಕಟ್ಟೆ ಮಾತ್ರವಲ್ಲದೆ ಸುರತ್ಕಲ್, ಕಾವೂರು, ಉರ್ವಾ, ಜೆಪು, ಬಿಜೈ, ಕಂಕನಾಡಿ ಹಾಗೂ ಕದ್ರಿ ಸೇರಿ […]