ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 220 ಮಂದಿಗೆ ಕೊರೊನಾ ಸೋಂಕು, 5 ಮಂದಿ ಬಲಿ
Saturday, October 17th, 2020ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 220 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಶುಕ್ರವಾರ 391 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಶುಕ್ರವಾರದ ರಾಜ್ಯ ಆರೋಗ್ಯ ಬಲಿಟಿನ್ ಮಾಹಿತಿ ಪ್ರಕಾರ 5 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಈವರೆಗೆ ಕೊರೊನಾ ಸೋಂಕಿಗೆ ಒಟ್ಟು 624 ಸಾವು ಸಂಭವಿಸಿದೆ. ಶುಕ್ರವಾರದ 391 ಮಂದಿ ಒಳಗೊಂಡು ಈವರೆಗೆ ಒಟ್ಟು ಗುಣಮುಖರಾದವರು 23804 ಮಂದಿ. ದ.ಕ ಜಿಲ್ಲೆಯಲ್ಲಿ ಈವರೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 3531, ಒಟ್ಟು ಕೊರೊನಾ ನೆಗೆಟಿವ್ ಪ್ರಕರಣಗಳು 189046, ಪಾಸಿಟಿವ್ ಪ್ರಕರಣಗಳು 27959, ಈವರೆಗೆ 217005 ಮಂದಿಯ ಕೊರೊನಾ ಪರೀಕ್ಷೆ ಮಾಡಲಾಗಿದೆ.