ಧರ್ಮಸ್ಥಳದಲ್ಲಿ ಹಣೆಗೆ ತಿಲಕ ಹಾಕಿ ಹಿಂದೂ ಯುವತಿ ಜೊತೆ ಸುತ್ತಾಡುತ್ತಿದ್ದ ಮುಸ್ಲಿಂ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

Tuesday, January 16th, 2024
Dharmasthala Lovers

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯೋರ್ವಳು ಸುತ್ತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ. ಬೆಂಗಳೂರು ಮೂಲದ ಜೋಡಿ ಧರ್ಮಸ್ಥಳದಲ್ಲಿ ತಿರುಗಾಡುತ್ತಿದ್ದಾಗ ತಡೆದ ಕೆಲವರು, ಅವರ ವಿವರಗಳನ್ನು ಕೇಳಿದ್ದಾರೆ. ಪಂಚೆ ಧರಿಸಿ ತಿಲಕ ಹಾಕಿ ಯುವತಿ ಜೊತೆ ಸುತ್ತಾಡುತ್ತಿದ್ದ ಯುವಕನನ್ನು ವಿಚಾರಿಸಿದಾಗ ಆತ ಮುಸ್ಲಿಂ ಯುವಕ ಎಂದು ಗೊತ್ತಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಧರ್ಮಸ್ಥಳ ಠಾಣೆಯ ಪೊಲೀಸರು, ಜೋಡಿಯನ್ನು ಬಳಿಕ ಠಾಣೆಗೆ ಕರೆದೊಯ್ದು ವಿಚಾರಣೆ […]

ಫೆ.11-15: ಉರ್ವ ಶ್ರೀ ಮಾರಿಯಮ್ಮ ನ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ 

Tuesday, January 16th, 2024
Mariyamma-Temple

ಮಂಗಳೂರು: “ಪುರಾಣ ಪ್ರಸಿದ್ಧ ದೇವಸ್ಥಾನಗಳಲ್ಲಿ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ಕೂಡಾ ಪ್ರಾಮುಖ್ಯತೆ ಪಡೆದಿರುತ್ತದೆ. ದ.ಕ. ಜಿಲ್ಲೆ ಮಾತ್ರವಲ್ಲದೇ ನಾಡಿನ ಸಮಸ್ತ ವರ್ಗದ ಭಕ್ತಾಭಿಮಾನಿಗಳು ಉರ್ವ ಶ್ರೀ ಮಾರಿಯಮ್ಮ ದೇವಿಯ ಕ್ಷೇತ್ರದ ಬಗ್ಗೆ ಅಪಾರ ಭಕ್ತಿ ಮತ್ತು ನಂಬಿಕೆಯನ್ನಿಟ್ಟು, ಶ್ರದ್ಧೆಯಿಂದ ಆರಾಧಿಸಿಕೊಂಡು ಬಂದಿದ್ದಾರೆ. ಇಂತಹ ದಿವ್ಯ ಮಾತೆಯ ಕ್ಷೇತ್ರದಲ್ಲಿ ಫೆ.11ರಿಂದ 15ರವರೆಗೆ ಬ್ರಹ್ಮಕಲಶೋತ್ಸವವು ನಡೆಯಲಿದ್ದು ಈ ಸಂದರ್ಭದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಪ್ರಚಾರ ರಥದ ಸಂಚಾರ, ಹೊರೆಕಾಣಿಕೆ ಮೆರವಣಿಗೆ, ಬೃಹತ್ ನೂತನ ಸಭಾಂಗಣ ಉದ್ಘಾಟನೆ ನಡೆಯಲಿದೆ” […]

ಉಳ್ಳಾಲ ಠಾಣಾಗೆ ಡಿವೈಎಫ್ ಐ ಮುತ್ತಿಗೆ, ಠಾಣೆಗೆ ಬೀಗ ಹಾಕಿದ ಪೊಲೀಸರು

Tuesday, January 16th, 2024
ಉಳ್ಳಾಲ ಠಾಣಾಗೆ ಡಿವೈಎಫ್ ಐ ಮುತ್ತಿಗೆ, ಠಾಣೆಗೆ ಬೀಗ ಹಾಕಿದ ಪೊಲೀಸರು

ಉಳ್ಳಾಲ : ಉಳ್ಳಾಲ ಠಾಣಾಗೆ ಡಿವೈಎಫ್ ಐ ಸಂಘಟನೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಜ.16ರ ಮಂಗಳವಾರ ನಡೆದಿದೆ. ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಭಟ್ ವಿರುದ್ಧ ಪ್ರತಿಭಟಿಸಿದ ಡಿವೈಎಫ್ ಐ ಮುಖಂಡರ ಮೇಲೆ ಪ್ರಕರಣ ದಾಖಲು ಮಾಡಿದ ಹಿನ್ನಲೆಯಲ್ಲಿ ಉಳ್ಳಾಲ ಠಾಣಾಗೆ ಡಿವೈಎಫ್ ಐ ಮುತ್ತಿಗೆ ಹಾಕಲು ಯತ್ನಿಸಿದೆ. ಈ ವೇಳೆ ಮುಂಜಾಗ್ರತ ಕ್ರಮವಾಗಿ ಠಾಣೆಗೆ ಬೀಗ ಹಾಕಿದ್ದರು. ಆರ್ ಎಸ್ಎಸ್ ಹಾಗೂ ಶಾಸಕರ ಚೇಲಾಗಳಂತೆ ಪೊಲೀಸರು ವರ್ತಿಸುತ್ತಿದ್ದಾರೆ ಎಂದು ಡಿವೈಎಫ್ ಐ ಆರೋಪಿಸಿ […]

ಸಿಸಿಆರ್‌ಬಿ ಘಟಕಕ್ಕೆ ವರ್ಗಾವಣೆ ಗೊಂಡ ಹೆಡ್‌ಕಾನ್‌ಸ್ಟೇಬಲ್ ನಾಪತ್ತೆ

Monday, January 15th, 2024
police

ಮಂಗಳೂರು : ಪೊಲೀಸ್ ಇಲಾಖೆಯಲ್ಲಿ ಸುಮಾರು 15 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ ಹೆಗ್ಡೆ (41) ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿದ್ದ ಮಂಜುನಾಥ ಹೆಗ್ಡೆ ಅವರನ್ನು ಮಂಗಳೂರು ನಗರ ಸಿಸಿಆರ್‌ಬಿ ಘಟಕಕ್ಕೆ ಒಒಡಿ ನೆಲೆಯಲ್ಲಿ ವರ್ಗಾವಣೆಗೊಳಿಸಲಾಗಿತ್ತು. ಅಲ್ಲಿ ಕೆಲಸಕ್ಕೆ ವರದಿ ಮಾಡುವುದಾಗಿ ಹೇಳಿ ಜ.13ರಂದು ಮನೆಯಿಂದ ಹೋಗಿದ್ದರು. ಆ ದಿನ ಮಧ್ಯಾಹ್ನ 1 ಗಂಟೆಗೆ ಮನೆಮಂದಿ ಮಂಜುನಾಥ್‌ರ ಮೊಬೈಲ್‌ಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ […]

ನರಿಂಗಾನ ಲವ – ಕುಶ ಜೋಡುಕರೆ ಕಂಬಳ ಕೂಟದ ಫಲಿತಾoಶ

Monday, January 15th, 2024
Naringana-Kamabala

ಮಂಗಳೂರು : ಉಳ್ಳಾಲ ತಾಲೂಕಿನ ನರಿಂಗಾನದ ಲವ- ಕುಶ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ ನರಿಂಗಾನದ ಮೋರ್ಲ ಬೋಳದಲ್ಲಿ ಜನವರಿ 13ಮತ್ತು 14, 2024 ರಂದು ನಡೆದ ದ್ವಿತೀಯ ವರ್ಷದ ಹೊನಲು ಬೆಳಕಿನ ಲವ-ಕುಶ ಜೋಡುಕರೆ `ನರಿಂಗಾನ ಕಂಬಳೋತ್ಸವದ’ ಫಲಿತಾoಶ ಈ ರೀತಿ ಇದೆ. ಕಂಬಳ ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ ಸಂಖ್ಯೆ: 204 ಜೊತೆಯಾಗಿದ್ದು ಅದರಲ್ಲಿ ಕನೆಹಲಗೆ: 05 ಜೊತೆ, ಅಡ್ಡಹಲಗೆ: 06 ಜೊತೆ, ಹಗ್ಗ ಹಿರಿಯ: 16 ಜೊತೆ, ನೇಗಿಲು ಹಿರಿಯ: 34 ಜೊತೆ, […]

ಕದ್ರಿ ಶೀ ಮಂಜುನಾಥ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭ

Monday, January 15th, 2024
ಕದ್ರಿ ಶೀ ಮಂಜುನಾಥ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭ

ಮಂಗಳೂರು: ಕದ್ರಿ ಶೀ ಮಂಜುನಾಥ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸೋಮವಾರ ಆರಂಭಗೊಂಡಿತು. ಏಳು ಪಟ್ಟಣ ಮೊಗವೀರ ಸಭಾದವರಿಂದ ಸಾಯಂಕಾಲ ಧ್ವಜ ಆರೋಹಣ ನಡೆಯಿತು. ಬಳಿಕ ಮಹಾಪೂಜೆ ನಡೆದು, ಶ್ರೀ ಮಲರಾಯ ದೈವದ ಭಂಡಾರ ಆಗಮನವಾಯಿತು. ರಾತ್ರಿ ಧ್ವಜಬಲಿ, ಕದ್ರಿಯ ಹತ್ತು ಸಮಸ್ತರಿಂದ ಗರುಡಾರೋಹಣ, ಉತ್ಸವ ಬಲಿ, ಭೂತ ಬಲಿ, ಕಂಚುದೀಪ ಬೆಳಗಿಸುವುದು, ದೀಪಬಲಿ ಉತ್ಸವ, ಶ್ರೀ ಮಲರಾಯ ದೈವದ ಭೇಟಿ, ಕಂಚಿಲು ಸೇವೆ ಮತ್ತು ಸಣ್ಣ ರಥೋತ್ಸವ ನೆರವೇರಿತು. ಬೆಳಗೆ ನಾಲ್ಕು ಗಂಟೆಯಿಂದಲೇ ನೂರಾರು ಸಂಖ್ಯೆಯಲ್ಲಿ […]

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಂಪಲ ಆಯ್ಕೆ

Monday, January 15th, 2024
satish-kumapala

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಂಪಲ ಆಯ್ಕೆಯಾಗಿದ್ದಾರೆ. ಜಿಲ್ಲಾಪಂಚಾಯತ್ ಉಪಾಧ್ಯಕ್ಷರಾಗಿದ್ಧ ಸತೀಶ್ ಕುಂಪಲ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಯು.ಟಿ ಖಾದರ್ ವಿರುದ್ಧ ಬಿಜೆಪಿಯಿಂದ ಸತೀಶ್ ಕುಂಪಲ ಅವರು ಸ್ಪರ್ಧಿಸಿ ಸೋತಿದ್ದರು.ಸತೀಶ್ ಕುಂಪಲ ಅವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಬಿಲ್ಲಯ್ಯ ಸಮುದಾಯದ ಮುಖಂಡರಾಗಿದ್ದಾರೆ.

ಜನವರಿ 14 ಕ್ಕೆ ಅತಿಶಯ ಶ್ರೀ ಕ್ಷೇತ್ರ ಕುಂದಾದ್ರಿ ಯಲ್ಲಿ ವಾರ್ಷಿಕ ಜಾತ್ರ ಮಹೋತ್ಸವ

Saturday, January 13th, 2024
ಜನವರಿ 14 ಕ್ಕೆ ಅತಿಶಯ ಶ್ರೀ ಕ್ಷೇತ್ರ ಕುಂದಾದ್ರಿ ಯಲ್ಲಿ ವಾರ್ಷಿಕ ಜಾತ್ರ ಮಹೋತ್ಸವ

ತೀರ್ಥಹಳ್ಳಿ : ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಶಾಖಾ ಕ್ಷೇತ್ರ ಅಚಾರ್ಯ ಶ್ರೀ ಕುಂದ ಕುಂದಾಚಾರ್ಯ ತಪೋಭೂಮಿ ಶ್ರೀ ಕ್ಷೇತ್ರ ಕುಂದಾದ್ರಿ ಯಲ್ಲಿ ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಜಗನ್ಮಾತೆ ಶ್ರೀ ಪದ್ಮಾವತಿ ಅಮ್ಮನವರ ವಾರ್ಷಿಕ ಜಾತ್ರ ಮಹೋತ್ಸವ 14-1-2024 ನೇ ಭಾನುವಾರ ಪರಮಪೂಜ್ಯ ಜಗದ್ಗುರು ಸ್ವಸ್ತೀಶ್ರೀ ಡಾ‌. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ಪಾವನ ಸಾನಿಧ್ಯದಲ್ಲಿ ಜರುಗಲಿದೆ . ಕಲಿಕುಂಡ ಯಂತ್ರಾರಾಧನೆ, ಬ್ರಹ್ಮ ಯಕ್ಷ ಆರಧಾನೆ, ವಿಶೇಷ ಅಭಿಷೇಕ ಪೂಜೆ ಸಹಿತ […]

ತೌಡುಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ 50ನೇ ಶಬರಿಮಲೆ ಯಾತ್ರೆ ಮತ್ತು ಧಾರ್ಮಿಕ ಸಭೆ

Saturday, January 13th, 2024
Thoudugoli

ಮಂಗಳೂರು : ಶ್ರೀ ದುರ್ಗಾದೇವಿ ಕ್ಷೇತ್ರ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ತೌಡುಗೋಳಿ, ವರ್ಕಾಡಿ ಇಲ್ಲಿ ಶ್ರೀ ಗೋವಿಂದ ಗುರುಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಶಬರಿಮಲೆ ಯಾತ್ರೆಯ ಸುವರ್ಣ ಸಂಭ್ರಮದ ಕಾರ್ಯಕ್ರಮ ಜನವರಿ 12, ಶುಕ್ರವಾರ ನಡೆಯಿತು. ಕ್ಷೇತ್ರದ ತಂತ್ರಿಗಳಾದ ರಾಜೇಶ್ ತಳಿತ್ತಾಯರಿಂದ ಶ್ರೀ ದುರ್ಗಾ ದೇವಿಗೆ ಶುದ್ಧಕಲಶ ಮತ್ತು ಗಣಹೋಮ ನಡೆಯಿತು, ಬಳಿಕ ಸ್ವಾಮಿಗಳ ಇರುಮುಡಿಕಟ್ಟುವ ಕಾರ್ಯಕ್ರಮ ಶ್ರೀ ಗೋವಿಂದ ಗುರುಸ್ವಾಮಿಗಳ ದಿವ್ಯ ಹಸ್ತದಲ್ಲಿ ನೆರವೇರಿತು, ಬಳಿಕ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಗಳು ನಡೆದವು. ಧಾರ್ಮಿಕ […]

ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಬೆಳ್ಳಿಯ ಪೂಜಾ ಸಾಮಗ್ರಿಗಳನ್ನು ಸಮರ್ಪಣೆ

Wednesday, January 10th, 2024
veerendra-heggade

ಧರ್ಮಸ್ಥಳ : ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಬೆಳ್ಳಿಯ ಪೂಜಾ ಸಾಮಗ್ರಿಗಳನ್ನು ಸಮರ್ಪಿಸಿದ್ದೇವೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಶ್ರೀ ರಾಮ ಮಂದಿರ ನಿರ್ಮಾಣವಾಗುವ ಮೂಲಕ ಭಾರತೀಯರ ಅನೇಕ ವರ್ಷದ ಕನಸು, ನಿರೀಕ್ಷೆಗಳು ಸಾಕಾರಗೊಂಡಿದೆ ಎಂದು ಅವರು ಹೇಳಿದರು. ಶ್ರೀ ರಾಮ ಮಂದಿರ ನಿರ್ಮಾಣದ ಮಹತ್ ಕಾರ್ಯದ ನೇತೃತ್ವ ವಹಿಸಿದ ಪ್ರಧಾನಿ ಮೋದಿ ಹಾಗೂ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡ ಎಲ್ಲರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.