‘ವ್ಯಾಲೆಂಟೈನ್ ಡೇ’ ನಿಮಿತ್ತ ನಡೆಯುವ ಅಯೋಗ್ಯ ಕೃತ್ಯಗಳನ್ನು ತಡೆಯಲು ಮನವಿ

Tuesday, February 8th, 2022
HJJS

ಉಜಿರೆ : ‘ವ್ಯಾಲೆಂಟೈನ್ ಡೇ’ ನಿಮಿತ್ತ ನಡೆಯುವ ಅಯೋಗ್ಯ ಕೃತ್ಯಗಳನ್ನು ತಡೆಯುವ ಕುರಿತು ಉಜಿರೆಯ ಉಪತಹಸೀಲ್ದಾರರಾದ, ಜಯ ಕೆ, ಪೊಲೀಸ್ ಕಾನ್ಸ್ಟೇಬಲ್ ಶ್ರೀ. ಧನಂಜಯ, ಹಾಗೂ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀ. ಭುವನೇಶ್ ಇವರಿಗೆ ಮನವಿ ನೀಡಲಾಯಿತು. ಕಳೆದ ಅನೇಕ ವರ್ಷಗಳಿಂದ ಭಾರತದಂತಹ ಸಾಂಸ್ಕ್ರತಿಕ ದೇಶದಲ್ಲಿ 14 ಫೆಬ್ರವರಿಯಂದು ‘ವ್ಯಾಲೆಂಟೈನ್ ಡೇ’ ಹೆಸರಿನಲ್ಲಿ ಪ್ರೇಮಿಗಳ ದಿನವನ್ನು ಆಚರಿಸುವ ಪದ್ಧತಿಯು ಹೆಚ್ಚಳವಾಗಿದೆ. ದೇಶದಲ್ಲಿ ಈ ಮೂಲಕ ವ್ಯವಹಾರಿಕ ಲಾಭಗಳಿಸುವ ಉದ್ದೇಶ ದಿಂದ ಪಾಶ್ಚಾತ್ಯರ ಈ ಅಂಧಾನುಕರಣೆಯು ಯುವಕ-ಯುವತಿಯರ ಅನೈತಿಕತೆ ಮತ್ತು ಸ್ವೇಚ್ಚಾಚಾರಕ್ಕೆ […]

3.48 ಕೋಟಿ ಮೌಲ್ಯದ ತಿಮಿಂಗಲ ವಾಂತಿಯನ್ನು ಸಾಗಿಸುತ್ತಿದ್ದ ಆರು ಮಂದಿಯ ಬಂಧನ

Tuesday, February 8th, 2022
Ambergris

ಮಂಗಳೂರು:  ನಿಷೇಧಿತ ವಸ್ತುವಾದ ಅಂಬರ್‌ಗ್ರೀಸ್ (ತಿಮಿಂಗಲ ವಾಂತಿ)ಯನ್ನು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಬಾಳಿಪುಣಿ ಗ್ರಾಮದ ನವೋದಯ ಶಾಲೆಯ ಬಳಿ ಅಕ್ರಮವಾಗಿ  ಸಾಗಾಟ ಮಾಡುತ್ತಿದ್ದ  ಬೆಂಗಳೂರು ಮತ್ತು ಉಡುಪಿ ಮೂಲದ ಆರು ಮಂದಿಯನ್ನು ಬಂಧಿಸಲಾಗಿದೆ. ಅವರಿಂದ 3.48 ಕೋಟಿ ಮೌಲ್ಯದ 3.480 ಕೆ.ಜಿ ಅಂಬರ್ ಗ್ರೀಸ್ ವಶ ಪಡಿಸಿಕೊಳ್ಳಲಾಗಿದೆ. ಕುಂದಾಪುರ ತಾಲೂಕು ಜಡ್ಕಲ್ ಗ್ರಾಮದ ಪ್ರಶಾಂತ್ (24), ಬೆಂಗಳೂರಿನ ವೀರಭದ್ರ ನಗರದ ಬಿಎಸ್‌ಕೆ ಮೂರನೇ ಹಂತದ ಸತ್ಯರಾಜ್ (32), ಮಂಗಳೂರು ತಾಲೂಕು ತೆಂಕ ಎಡಪದವು […]

ಮದರಸದಲ್ಲಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಉಸ್ತಾದ್​ ಬಂಧನ

Tuesday, February 8th, 2022
usthad

ಮಂಗಳೂರು: ಮದರಸದಲ್ಲಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಉಸ್ತಾದ್ನನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಂಡಡ್ಕದ ಶಂಶುಲ್ ಹುದಾ ಮದರಸದ ಉಸ್ತಾದ್ ಸಿರಾಜುದ್ದೀನ್ ಮದನಿ ಬಂಧಿತ ಆರೋಪಿ. ಮದರಸ ಶಿಕ್ಷಣ ಪಡೆಯುತ್ತಿದ್ದ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಈತ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಕುರಿತು ಆ ಬಾಲಕಿಯರು ತಮ್ಮ ತಾಯಿಯಲ್ಲಿ ಹೇಳಿಕೊಂಡಿದ್ದರು. ಆಕೆ ಪುತ್ತೂರು ಮಹಿಳಾ ಪೊಲೀಸರಿಗೆ ದೂರು ನೀಡಿದ್ದರು. ಮಹಿಳೆ ನೀಡಿದ್ದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿದ ಪುತ್ತೂರು ಮಹಿಳಾ ಠಾಣೆ […]

ಸಾಲಗಾರರ ಕಿರಿಕಿರಿ ತನ್ನ ಸ್ವಂತ ಬೈಕ್ ಗೆ ಶೋ ರೂಂ ಎದುರು ಬೆಂಕಿ ಹಚ್ಚಿದ ಯುವಕ

Tuesday, February 8th, 2022
Bike

ಬಂಟ್ವಾಳ : ವ್ಯಕ್ತಿಯೊಬ್ಬ ತನ್ನ ಸ್ವಂತ ಬೈಕ್ ಗೆ ಬೈಕ್ ಶೋ ರೂಂ ಎದುರೇ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಸೋಮವಾರ ಬಿ.ಸಿ.ರೋಡ್ ಕೈಕಂಬ ಸಮೀಪ ನಡೆದಿದೆ. ಫರಂಗಿಪೇಟೆ ನಿವಾಸಿ ಮುಹಮ್ಮದ್ ಹರ್ಷಾದ್ ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವ್ಯಕ್ತಿ ಎನ್ನಲಾಗಿದೆ. ಹರ್ಷಾದ್ ಫೈನಾನ್ಸ್ ನಿಂದ ಸಾಲ ಮಾಡಿ ಬೈಕ್ ಕೊಂಡುಕೊಂಡಿದ್ದು ಸಾಲದ ಕಂತು ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಫೈನಾನ್ಸ್ ನವರು ಬೈಕ್ ಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಆತನ ಕೈಯಿಂದ […]

ಹಿಜಾಬ್ ವಿಚಾರದಲ್ಲಿ ವಿವಾದ ಸೃಷ್ಟಿ ಮಾಡುತ್ತಿರುವುದು ದೇಶಕ್ಕೆ ಅವಮಾನ : ಡಿ ಕೆ ಶಿವಕುಮಾರ್

Monday, February 7th, 2022
DK Shivakumar

ಮಂಗಳೂರು : ಹಿಜಾಬ್ ವಿಚಾರದಲ್ಲಿ ವಿವಾದ ಸೃಷ್ಟಿ ಮಾಡುತ್ತಿರುವುದು ದೇಶಕ್ಕೆ ಅವಮಾನ, ವಿಶ್ವದ ಭೂಪಟದಲ್ಲಿ ಭಾರತವನ್ನು ಗುರುತಿಸುವ ಮೊದಲು ಜನ ಕರ್ನಾಟಕದತ್ತ ನೋಡುತ್ತಿದ್ದರೂ. ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ  ಅದರಲ್ಲೂ ಕರಾವಳಿ ಶಿಕ್ಷಣ, ವೈದ್ಯಕೀಯ ಕ್ಷೇತ್ರದ ಮೂಲಕದ ಮಹತ್ವದ ಕೊಡುಗೆ ನೀಡಿದ ಪ್ರದೇಶ. ಇಲ್ಲಿ ಎಲ್ಲಾ ಧರ್ಮದ ಜನರು ಪರಸ್ಪರ ಗೌರವದೊಂದಿಗೆ ಅವರವರ ಧಾರ್ಮಿಕ ಆಚಾರ ವಿಚಾರಗಳೊಂದಿಗೆ ಸೌಹಾರ್ದತೆಯೊಂದಿಗೆ ಬದುಕಬೇಕೆನ್ನುವುದು ಕಾಂಗ್ರೆಸ್ ಆಶಯ. ನ್ಯಾಯಾಲಯ ಮೇಲೆ ನಮಗೆ […]

ಸಂಸ್ಕೃತಿ-ಪರಂಪರೆಯ ಪ್ರತೀಕ ಮಂಗಳೂರು ರಥೋತ್ಸವ

Monday, February 7th, 2022
Venkataramana

ಮಂಗಳೂರು : ಶ್ರೀ ಮಂಗಳಾದೇವಿಯ ನೆಲೆಬೀಡಾದ ಮಂಗಳೂರು ಗೌಡ ಸಾರಸತ್ತ ಬ್ರಾಹ್ಮಣ ಸಮಾಜದ  ಪಾಲಿಗೂ ಸಾಧನೆಯ ಕ್ಷೇತ್ರ. ಇಲ್ಲಿನ ರಥಬೀದಿಯ ಶ್ರೀ ವೆಂಕಟರಮಣ ದೇವಳ ಸಮಾಜದ ಧರ್ಮ ಪೀಠಗಳಲ್ಲೊಂದಾದ ಶ್ರೀ ಕಾಶೀಮಠ ಸಂಸ್ಥಾನ್ ವಾರಾಣಸಿಯ ಒಂದ್ದು ಕಣ್ಣಿನಂತೆ ಮತ್ತು ದೇಶದ ಪ್ರಮುಖ ದೇವಾಲಯ ಎಂದು ಬಿಂಬಿತವಾಗಿದೆ ಕಾಲ ಉರುಳಿದ ಪ್ರಭಾವ ಇಲ್ಲಿನ ವಾರ್ಷಿಕ ರಥೋತ್ಸವ ಒಂದು. ಸಮಗ್ರ ಭಜಕ ವೃಂದದವರಿಗೆ ಅವರ್ಣನೀಯ ಪುಳಕೋತ್ಸವ, ಧನ್ಯತೆಯಿಂದ ಬೀಗುವ ಸಂದರ್ಭ. ಪ್ರತಿ ಮಾಘ ಮಾಸದ ಶುದ್ಧ ತದಿಗೆಯಂದು ಆರಂಭವಾಗಿ ಅಷಮಿಯಂದು […]

ಲತಾ ಮಂಗೇಶ್ಕರ್ ನಿಧನಕ್ಕೆ ದೇಶಾದ್ಯಂತ 2 ದಿನಗಳ ಕಾಲ ಶೋಕಾಚರಣೆ

Monday, February 7th, 2022
latha Mangeshkar

ನವದೆಹಲಿ : ಖ್ಯಾತ ಗಾಯಕಿ, ಭಾರತ ರತ್ನ ಪುರಸ್ಕೃತ ಲತಾ ಮಂಗೇಶ್ಕರ್ ನಿಧನಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ 2 ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿದ್ದು, 2 ದಿನಗಳ ಕಾಲ ದೇಶಾದ್ಯಂತ ಶೋಕಾಚರಣೆ ಘೋಷಣೆ ಮಾಡಲಾಗಿದ್ದು, ರಾಷ್ಟ್ರಧ್ವಜವು ಅರ್ಧ ಮಟ್ಟದಲ್ಲಿ ಹಾರಾಡಲಿದೆ. ಸರ್ಕಾರಿ ಗೌರವಗಳೊಂದಿಗೆ ಅವರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಎಂದು ತಿಳಿಸಲಾಗಿದೆ. ಭಾರತ ರತ್ನ ಲತಾ ಮಂಗೇಶ್ಕರ್ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. […]

ಲೀಸ್‌ಗೆ ಮನೆ ಕೊಡಿಸುವುದಾಗಿ ಮಹಿಳೆಗೆ ಐದು ಲಕ್ಷ ರೂ. ವಂಚನೆ

Thursday, February 3rd, 2022
lease fraud

ಮಂಗಳೂರು :  ಮಹಿಳೆಯೊಬ್ಬರಿಗೆ ನಗರದಲ್ಲಿ ಲೀಸ್‌ಗೆ ಮನೆ ಕೊಡಿಸುವುದಾಗಿ ಹೇಳಿ ಐದು ಲಕ್ಷ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಉತ್ತರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ವಾಮಂಜೂರು ನಿವಾಸಿ ಪ್ರದೀಪ್ ಯಾನೆ ದೀಪಕ್ ಸಾವಿಯೋ ಅಂದ್ರಾದೆ (31), ಫಳ್ನೀರ್ ನಿವಾಸಿ ಇಮ್ತಿಯಾಝ್ (43) ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ನಿವಾಸಿ ಹಾಗೂ ನಗರದ ಕರಂಗಲ್ಪಾಡಿಯ ಮೆಡಿಕಲ್‌ನಲ್ಲಿ ಉದ್ಯೋಗಿಯಾಗಿರುವ ಪ್ರಿಯಾ ಕೆ. ಆರ್. ಎಂಬವರಿಗೆ 2020ರ ಜೂನ್‌ ತಿಂಗಳಿನಲ್ಲಿ ಲೀಸ್‌ಗೆ ಮನೆ ಕೊಡಿಸುವುದಾಗಿ ಹೇಳಿ ಕೆ.ಎಸ್. […]

ಕಾಟಿಪಳ್ಳದಲ್ಲಿ ಯುವಕನನ್ನು ತಲವಾರ್‌ನಿಂದ ಕಡಿದು ಪರಾರಿಯಾದ ತಂಡ

Wednesday, February 2nd, 2022
Mohammed Anas

ಮಂಗಳೂರು : ನಗರದ ಹೊರ ವಲಯದ ಸುರತ್ಕಲ್‌ನ ಕಾಟಿಪಳ್ಳ 6ನೇ ಬ್ಲಾಕ್‌ನಲ್ಲಿ ತಂಡವೊಂದು ಮಹಮ್ಮದ್ ಅನಾಸ್ (29) ಎಂಬವರನ್ನು ತಲವಾರ್‌ನಿಂದ ಕಡಿದು ಕೊಲೆಗೆ ಯತ್ನಿಸಿದೆ. ಮನೆ ಬಾಡಿಗೆ ವಿಚಾರದಲ್ಲಿ ಚಾರು, ರವೂಫ್, ಅಕ್ಕಿ, ಮುಸ್ತಫಾ ಮತ್ತಿತರರ ತಂಡ ಮಂಗಳವಾರ ರಾತ್ರಿ ತಲವಾರ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದೆ. ಕೈ, ತಲೆ ಹಾಗು ಕುತ್ತಿಗೆಯ ಭಾಗಕ್ಕೆ ಗಂಭೀರ ಗಾಯಗೊಂಡ ಮಹಮ್ಮದ್ ಅನಾಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾರು ಮತ್ತು ರವೂಫ್ ವಾಸವಾಗಿದ್ದ ಬಾಡಿಗೆ […]

ಅಮೂಲ್ಯ ಬಳೆಯನ್ನು ಪ್ರಯಾಣಿಕರಿಗೆ ಹಿಂತಿರುಗಿಸಿದ ವಿಮಾನ ನಿಲ್ದಾಣದ ಸಿಬ್ಬಂದಿ

Wednesday, February 2nd, 2022
Airport Gold

ಮಂಗಳೂರು  : ಸುರಕ್ಷಿತ ಮತ್ತು ಸುರಕ್ಷಿತ ಅನುಭವದೊಂದಿಗೆ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರಂತರ ಪ್ರಯತ್ನವನ್ನು ಗಮನದಲ್ಲಿಟ್ಟುಕೊಂಡು, ಟ್ರಾಲಿ ರಿಟ್ರೀವರ್ ಆಗಿರುವ ತಂಡದ ಸದಸ್ಯ  ಅಶ್ರಫ್ ಮೊಯ್ದೀನ್ ಅವರು ಸೋಮವಾರ ವಿಮಾನ ನಿಲ್ದಾಣದ ಟರ್ಮಿನಲ್ ನ ಕೆಳ ಮಹಡಿಯ ನಿರ್ಗಮನದಲ್ಲಿ ಅಮೂಲ್ಯವಾದ ಕಾಣುವ ಬಳೆಯನ್ನು ಗುರುತಿಸಿದರು. ಈ ವಜ್ರಖಚಿತ ಬಳೆ ಯು ತನ್ನ ಸಂಬಂಧಿಯನ್ನು ಸ್ವಾಗತಿಸಲು ಬಂದಿದ್ದ ಪ್ರಯಾಣಿಕರ ಸಂಬಂಧಿಯ ಸಂಬಂಧಿಯಾಗಿದ್ದು, ಅವರು ಬೆಂಗಳೂರಿನಿಂದ ವಿಮಾನದಲ್ಲಿ ಬಂದಿದ್ದರು. ತನ್ನ ಬಳೆ ಕಾಣೆಯಾಗಿದೆ ಎಂದು […]