ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಸಹ ಸವಾರ ಸಾವು – ಅಂಗಾಂಗ ದಾನ

Tuesday, May 31st, 2022
deeraj

ಮಂಗಳೂರು : ಬಿಕರ್ನಕಟ್ಟೆ ರಾ.ಹೆ 73ರಲ್ಲಿ ಡಿವೈಡರ್ ಗೆ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಸಹ ಸವಾರ ಸೋಮವಾರ ರಾತ್ರಿ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದು, ಮೃತರ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಶನಿವಾರ ತಡರಾತ್ರಿ ಗಣೇಶ್ ತನ್ನ ಸ್ನೇಹಿತ ಧೀರಜ್ ನನ್ನು ಮನೆಗೆ ಬಿಟ್ಟು ಬರುವುದಾಗಿ ಬೈಕ್ ನಲ್ಲಿ ತೆರಳಿದ್ದ ವೇಳೆ, ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಗೆ ಢಿಕ್ಕಿ ಹೊಡೆದು ಸವಾರರು ಗಂಭೀರ ಗಾಯಗೊಂಡಿದ್ದರು. ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೂರು ದಿನಗಳಿಂದ ಚಿಕಿತ್ಸೆ […]

ತರುಣ್ಸ್ ಡ್ಯಾನ್ಸಿಂಗ್ ಯೂನಿಟ್ – ನೃತ್ಯ ಸಂಭ್ರಮ 2022 28 ಮೇ 2022 – ನೇರಪ್ರಸಾರ ಸಂಜೆ 6ರಿಂದ

Saturday, May 28th, 2022
TarunsFront2022

ಮಂಗಳೂರು: ತರುಣ್ಸ್ ಡ್ಯಾನ್ಸಿಂಗ್ ಯೂನಿಟ್ – ನೃತ್ಯ ಮತ್ತು ಫಿಟ್ನೆಸ್ ಕೇಂದ್ರ, ಜೆಪ್ಪು ಮತ್ತು ತುಡರ್ ಸೇವಾ ಟ್ರಸ್ಟ್ ಅಮ್ಟಾಡಿ(ಆರ್.) ಬಂಟ್ವಾಳ ಇವರ ಸಹಭಾಗಿತ್ವದಲ್ಲಿ ನೃತ್ಯ ಸಂಭ್ರಮ 2022 ಅನ್ನು ಆಯೋಜಿಸಿದೆ – ಕಾರ್ಯಕ್ರಮವು ರಾಮ ಲಕ್ಷ್ಮೀ ನಾರಾಯಣ ಸಭಾಂಗಣ, ಎಮ್ಮೆಕೆರೆ, ಮಂಗಳೂರಿನಲ್ಲಿ 28 ಮೇ 2022 ಶನಿವಾರ ಸಂಜೆ 6 ಗಂಟೆಗೆ ಆರಂಭ ಆಗಲಿದೆ. ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್, ಚಿತ್ರನಟರಾದ ಪೃಥ್ವಿ ಅಂಬರ್ , ಸೌಜನ್ಯ ಹೆಗಡೆ, ಅನೂಪ್ಸಾಪ್ ಸಾಗರ್, ಶೈಲಶ್ರೀ ರಾಜೇಶ್ ಕಣ್ಣೂರು, […]

ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ

Saturday, May 28th, 2022
ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು  ಭರ್ತಿ ಮಾಡಲು ಅರ್ಜಿ ಆಹ್ವಾನ

ಬೆಂಗಳೂರು : ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ನಿರ್ದೇಶಕ, ಉಪ ನಿರ್ದೇಶಕ ಸೇರಿದಂತೆ ಒಟ್ಟು 12 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮೂರು ವರ್ಷದ ಅವಧಿಗೆ ಈ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆಯ ಹೆಸರು: ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾಹುದ್ದೆಗಳ ಸಂಖ್ಯೆ: 12ಉದ್ಯೋಗ ಸ್ಥಳ: ಭಾರದಾದ್ಯಂತಹುದ್ದೆಯ ಹೆಸರು: ನಿರ್ದೇಶಕ, ಉಪ ನಿರ್ದೇಶಕವೇತನ: ರೂ.67700-209200 ರೂ ಮಾಸಿಕಹುದ್ದೆ ಹುದ್ದೆ ಸಂಖ್ಯೆ ವೇತನಉಪನಿರ್ದೇಶಕರು 10 – 67700-208700 ರೂ […]

ಮಳಲಿಯಲ್ಲಿ ಲಿಂಗಾಯತ ಮಠ ಇತ್ತು, ಟಿಪ್ಪು ಸಹಚರರು ಗುರುಮಠ ನಾಶಮಾಡಿದ್ದಾರೆ – ರುದ್ರಮುನಿ ಸ್ವಾಮೀಜಿ

Friday, May 27th, 2022
Rudramuni Swamiji

ಮಂಗಳೂರು : ಮಳಲಿಯ ಜುಮ್ಮಾ ಮಸೀದಿ ಇರುವ ಜಾಗ ಈ ಹಿಂದೆ ಗುರುಮಠಕ್ಕೆ ಸೇರಿತ್ತು. ಶಿವನ ಆರಾಧನೆ ಇತ್ತು ಟಿಪ್ಪು ಕಾಲದಲ್ಲಿ ನಾಶ ಆಗಿರುವ ಬಗ್ಗೆ ಶಂಕೆಯಿದೆ ಎಂದು ಹೇಳಿದ್ದಾರೆ. ತಾಂಬೂಲ ಪ್ರಶ್ನೆಯಲ್ಲಿ ತಿಳಿದುಬಂದ ಬೆನ್ನಲ್ಲೇ ಗುರುಪುರದ ಜಂಗಮ ಮಠದ ರುದ್ರಮುನಿ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಭಾಗದಲ್ಲಿ ಹಿಂದಿನ ಕಾಲದಲ್ಲಿ 64 ಮಠಗಳಿದ್ದವು. ಆ ಪೈಕಿ ಈಗ ಉಳಿದುಕೊಂಡಿರುವುದು 21 ಮಾತ್ರ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಲಿಂಗಾಯತರು ಉಳಿದುಕೊಂಡಿದ್ದಾರೆ. ಮಠದಲ್ಲಿರುವ ನೀಲಕಂಠ […]

ಕುಂದಾಪುರ : ಲವ್ ಜಿಹಾದ್ ಗೆ ಮತ್ತೊಂದು ಬಲಿ, ಕುಂದಾಪುರ ಮೂಲದ ಹಿಂದು ಯುವತಿ ಆತ್ಮಹತ್ಯೆ

Thursday, May 26th, 2022
kundapura Love Jihad

ಕುಂದಾಪುರ : ತಾಲ್ಲೂಕಿನ ಉಪ್ಪಿನಕುದ್ರು ಮೂಲದ ಶಿಲ್ಪಾ ದೇವಾಡಿಗ ಎಂಬ ಹಿಂದು ಯುವತಿ ಕೋಟೇಶ್ವರ ಸಮೀಪದ ಮೂಡುಗೋಪಾಡಿ ನಿವಾಸಿ ಅಜೀಜ್ (32ವರ್ಷ) ಎಂಬ ಜಿಹಾದಿಯ ಪ್ರೀತಿ ಪ್ರೇಮದ ಕಾಮದಾಟಕ್ಕೆ ಬಲಿಯಾಗಿದ್ದಾಳೆ. ಹಂಗಳೂರಿನ ಸಲ್ಮಾ (30ವರ್ಷ) ಎಂಬ ಮುಸ್ಲಿಂ ಯುವತಿಯನ್ನು ಐದಾರು ವರ್ಷದ ಹಿಂದೆ ವಿವಾಹವಾಗಿದ್ದ ಅಜೀಜ್ ತಲ್ಲೂರಿನ ಜವಳಿ ಅಂಗಡಿಯಲ್ಲಿ ಉದ್ಯೋಗಕ್ಕಿದ್ದ ಶಿಲ್ಪಾಳನ್ನು 4 ವರ್ಷಗಳ ಹಿಂದೆ ಪ್ರೀತಿಯೆಂದು ಪುಸಲಾಯಿಸಿ ಜಿಹಾದ್ ನ ಬಲೆಗೆ ಬೀಳಿಸಿಕೊಂಡಿದ್ದ, ನಂತರದ ದಿನಗಳಲ್ಲಿ ತನ್ನ ಕಾಮದ ತೃಷೆ ತೀರಿಸಿಕೊಳ್ಳುವುದಕ್ಕಾಗಿ ವಾಟ್ಸಾಪ್ ಮೂಲಕ […]

ಹಾವಿನ ಮೊಟ್ಟೆಗೆ ಕಾವು ಕೊಡಲು 54 ದಿನ ರಾಷ್ಟ್ರೀಯ ಹೆದ್ದಾರಿ ಕೆಲಸ ನಿಲ್ಲಿಸಿದ ಇಲಾಖೆ

Tuesday, May 17th, 2022
python-egg

ಕುಂಬಳೆ : ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಹೊಣೆ ಹೊತ್ತಿರುವ ಉರಾಳುಂಗಲ್ ಸೊಸೈಟಿ ಅರಣ್ಯ ಇಲಾಖೆ ಅಧಿಕಾರಿಗಳು ಹಾವು ಮೊಟ್ಟೆ ಇಡುವ ತನಕ ಕಾಮಗಾರಿಯನ್ನು ಸ್ಥಗಿತಗೊಳಿಸಿತ್ತು. ಸೋಮವಾರ 24 ಮೊಟ್ಟೆಗಳು ಒಡೆದಿವೆ. ಹದಿನೈದು ಹಾವಿನ ಮರಿಗಳನ್ನು ಕಾಡಿಗೆ ಕಳುಹಿಸಲಾಗಿದೆ. ಉಳಿದ ಒಂಬತ್ತು ಮರಿಗಳನ್ನು ಶೀಘ್ರದಲ್ಲೇ ಅರಣ್ಯಕ್ಕೆ ಬಿಡಲಾಗುವುದು ಎಂದು ಉರಗಜ್ಞ ಅಮೀನ್ ತಿಳಿಸಿದ್ದಾರೆ. ಹೆದ್ದಾರಿ ಕಾಮಗಾರಿ ಪುನರಾರಂಭಗೊಂಡಿದೆ. ತಲಪಾಡಿ ಕಾಸರಗೋಡು ರಸ್ತೆ ಕಾಮಗಾರಿ ವೇಳೆ ಹಾವನ್ನು ಗಮನಿಸಿ, ಸ್ಥಳಾಂತರಿಸಲು ಯತ್ನಿಸುತ್ತಿರುವಾಗ ಮೊಟ್ಟೆಗಳಿಗೆ ಕಾವು ನೀಡುತ್ತಿರುವ ಅಂಶ […]

ಭಾರಿ ಮಳೆ : ಕರಾವಳಿ ಭಾಗದಲ್ಲಿ ಮುಂದಿನ ಮೂರು ದಿನ ರೆಡ್ ಅಲರ್ಟ್

Monday, May 16th, 2022
Mangalore Rain

ಮಂಗಳೂರು: ಕರ್ನಾಟಕದ ಕರಾವಳಿ ಭಾಗದಲ್ಲಿ ಮುಂದಿನ ಐದು ದಿನಗಳ ಕಾಲ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು, ಜಿಲ್ಲಾಧಿಕಾರಿಗಳು ಆರೆಂಜ್ ಮತ್ತು ರೆಡ್ ಅಲರ್ಟ್ ಘೋಷಿಸಿದ್ದಾರೆ. 16 ಮೇ ಮಧ್ಯಾಹ್ನದ ವರದಿಯ ಪ್ರಕಾರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 17 ಮತ್ತು 19 ರಂದು ಭಾರಿ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಅನ್ನು ಜಿಲ್ಲಾಧಿಕಾರಿಗಳು ಘೋಷಿಸಿದ್ದಾರೆ. ಮೇ 18 ರಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಉಡುಪಿ ಮತ್ತು ದಕ್ಷಿಣ […]

ವಿಧಾನಪರಿಷತ್ ಸಭಾಪತಿ‌ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

Monday, May 16th, 2022
Basavaraja Horatti

ಬೆಂಗಳೂರು : ವಿಧಾನಪರಿಷತ್ ಸಭಾಪತಿ‌ ಸ್ಥಾನಕ್ಕೆ ಹಾಗೂ‌ ಪರಿಷತ್ ಸದಸ್ಯತ್ವಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಘೋಷಿಸಿದ್ದಾರೆ. ವಿಧಾನಸೌಧದ ಸಭಾಪತಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹೊರಟ್ಟಿ ಅವರು ರಾಜೀನಾಮೆ ಘೋಷಣೆ ಮಾಡಿದರು. ಬದಲಾವಣೆ ಬಗ್ಗೆ ಕೆಲವೊಮ್ಮೆ ಮನಸ್ಸಿಗೆ ಸಣ್ಣ,ಪುಟ್ಟ ನೋವಾಗುತ್ತದೆ. ನನಗೆ ದೇವೇಗೌಡರ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಅವರ ಬಳಿಗೆ ಹೋಗಿ ಮಾತನಾಡಲು ಧೈರ್ಯವಾಗಲಿಲ್ಲ. ಹಾಗಾಗಿ ಪತ್ರ ಬರೆದಿದ್ದೇನೆ. ಈಗಿನ ಪರಿಸ್ಥಿತಿ ನೋಡಿದರೆ ರಾಜಕೀಯದಲ್ಲಿರಬಾರದು ಎಂದೆನಿಸುತ್ತದೆ. ಜನರು ಈಗ ಹಾಗೇ ಇದ್ದಾರೆ, ರಾಜಕಾರಣಿಗಳು ಹಾಗೇ ಇದ್ದಾರೆ ಎಂದರು. ಏಳು […]

ಕೇರಳದಲ್ಲಿ ಟೊಮೇಟೊ ಜ್ವರ, ಮಂಗಳೂರಿನಲ್ಲಿ ಆತಂಕ

Saturday, May 14th, 2022
Tomato-Flue

ಮಂಗಳೂರು : ನೆರೆಯ ಕೇರಳದಲ್ಲಿ 5 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬಂದ ಟೊಮೇಟೊ ಜ್ವರದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ವಿಶೇಷ ನಿಗಾ ಇರಿಸಲು ಆರೋಗ್ಯ ಇಲಾಖೆ ಸೂಚಿಸಿದೆ. ಈ ಕಾಯಿಲೆಯು ಸಾಮಾನ್ಯವಾಗಿ ಚರ್ಮದ ತುರಿಕೆ, ಮೈಯಲ್ಲಿ ಕೆಂಪಾಗುವುದು, ತೀವ್ರಜ್ವರ, ಮೈ-ಕೈ ನೋವು, ಕೀಲು ನೋವು, ಆಯಾಸ ಮೊದಲಾದ ಲಕ್ಷಣಗಳಿರುತ್ತದೆ. “ಕೋವಿಡ್‌ಗೂ ಈ ಕಾಯಿಲೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಮಕ್ಕಳ ಮೈಯಲ್ಲಿ ಯಾವುದೇ ರೀತಿಯ ಗುಳ್ಳೆಗಳು ಕಂಡುಬಂದಲ್ಲಿ ವೈದ್ಯರ ಭೇಟಿಯಾಗಬೇಕು. ಸದ್ಯಕ್ಕೆ ದ.ಕ. ಜಿಲ್ಲೆಯಲ್ಲಿ ಈ ರೀತಿಯ ಗುಣಲಕ್ಷಣ […]

ಮೋಯ ಸಮುದಾಯದ ಜಾಗತಿಕ ಮಟ್ಟದ ಸಂಘಟನೆ, ‘ನಮೋ ಮೋಯರ್ ಗ್ಲೋಬಲ್ ಫೌಂಡೇಶನ್’ ಲೊಕಾರ್ಪಣೆ

Thursday, May 5th, 2022
ಮೋಯ ಸಮುದಾಯದ ಜಾಗತಿಕ ಮಟ್ಟದ ಸಂಘಟನೆ, 'ನಮೋ ಮೋಯರ್ ಗ್ಲೋಬಲ್ ಫೌಂಡೇಶನ್' ಲೊಕಾರ್ಪಣೆ

ಮುಂಬಯಿ : ಜನಸಾಮಾನ್ಯರ ಸೇವೆಗಾಗಿ ಹೊಸ ಉದ್ದೇಶವನ್ನು ಇಟ್ಟುಕೊಂಡು ಸಮುದಾಯದ ಜನರ ಪ್ರೋತ್ಸಾಹ ಮತ್ತು ಅಮ್ಮ ಭಗವತಿಯವರ ಆಶೀರ್ವಾದಿಂದ, ನಾವು ಜಾಗತಿಕ ಮಟ್ಟದ ನೂತನ ಸಂಘಟನೆ (ಟ್ರಸ್ಟ್ ) ಯನ್ನು ಸ್ಥಾಪಿಸಿದ್ದು , ಇವತ್ತು ಇದನ್ನು ಲೋಕಾರ್ಪಣೆ ಮಾಡಿದ್ದೇವೆ ಎಂದು ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ನ ಅಧ್ಯಕ್ಷರಾದ ರವಿ ಉಚ್ಚಿಲ್ ನುಡಿದರು. ಮೇ 1 ರಂದು, ರಾಜೇ ಸಂಭಾಜಿ ಸಭಾಗ್ರಹ ಮುಲುಂಡ್ (ಪೂರ್ವ) ದಲ್ಲಿ ನಡೆದ ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು […]