ಹತ್ಯೆಯಾದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ 50 ಲಕ್ಷ ಪರಿಹಾರ ಚೆಕ್ ವಿತರಣೆ

Thursday, July 28th, 2022
cm-bellare

ಮಂಗಳೂರು: ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ಪರಿಹಾರದ ಚೆಕ್ ಹಸ್ತಾಂತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಲೆ ಪ್ರಕರಣವನ್ನು ಬೇಧಿಸುವವರೆಗೆ ಅಕ್ಷರಶ: ದಣಿವಿಲ್ಲದೇ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ರಾಜ್ಯ ಸರ್ಕಾರದಿಂದ 25 ಲಕ್ಷ ಹಾಗೂ ಬಿಜೆಪಿ ಪಕ್ಷದಿಂದ 25 ಲಕ್ಷ ಸೇರಿ ಒಟ್ಟು 50 ಲಕ್ಷ ರೂ. ಪರಿಹಾರ ಘೋಷಿಸಿದಂತೆ, ಕುಟುಂಬಸ್ಥರಿಗೆ ಪರಿಹಾರ ಚೆಕ್ ವಿತರಣೆ ಮಾಡಲಾಗಿದೆ. ಸರ್ಕಾರದ ವತಿಯಿಂದ 25 ಲಕ್ಷ, ಬಿಜೆಪಿ ವತಿಯಿಂದ 25 ಲಕ್ಷ ರೂ.ಗಳ ಚೆಕ್ ಅನ್ನು […]

ಸುರತ್ಕಲ್ – ಕಾರ್‌ನಲ್ಲಿ ಬಂದಿದ್ದ ಮುಸುಕುದಾರಿಗಳಿಂದ ಯುವಕನ ಹತ್ಯೆ

Thursday, July 28th, 2022
Mohammed fazil

ಮಂಗಳೂರು : ಕಾರ್‌ನಲ್ಲಿ ಬಂದಿದ್ದ ನಾಲ್ವರು ಮುಸುಕುದಾರಿ ದುಷ್ಕರ್ಮಿಗಳು ಬಟ್ಟೆ ಅಂಗಡಿಗೆ ನುಗ್ಗಿ ಮಹಮ್ಮದ್ ಫಾಸಿಲ್(23)ಎಂಬಾತನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಪರರಾರಿಯಾಗಿರುವ ಘಟನೆ ಮಂಗಳೂರು ಬಳಿಯ ಸುರತ್ಕಲ್‍ನಲ್ಲಿ ನಡೆದಿದೆ. ಗ್ಯಾಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಫಾಜೀಲ್ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ. ಚಿಕಿತ್ಸೆ ಫಲಕಾರಿಯಾಗದೇ ಫಾಸಿಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದಾನೆ. ಸುರತ್ಕಲ್ ಕಾಟಿಪಳ್ಳ ಮಂಗಳಪೇಟೆ ನಿವಾಸಿ ಮಹಮ್ಮದ್ ಫಾಝಿಲ್ ಅವರು, ರಾತ್ರಿ 8 ಗಂಟೆಯ ಸುಮಾರಿಗೆ ಎಂಆರ್ ಪಿಯಲ್ ರಸ್ತೆಯ ಸುರತ್ಕಲ್ ಮಾರುಕಟ್ಟೆ ಸನಿಹದ ಸಂಕೀರ್ಣದಲ್ಲಿರುವ ಬಟ್ಟೆ ಅಂಗಡಿಗೆ […]

ದಿ.ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ ಮುಖ್ಯಮಂತ್ರಿಗಳು

Thursday, July 28th, 2022
CM-Bellare

ಮಂಗಳೂರು : ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಜು.28ರ ಗುರುವಾರ ಸಂಜೆ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ನೆಟ್ಟಾರಿನಲ್ಲಿರುವ ದಿ. ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಪ್ರವೀಣ್ ಹತ್ಯೆ ಆರೋಪಿಗಳ ಬಂಧನ ಶೀಘ್ರದಲ್ಲೇ ಆಗಲಿದೆ. ಇದರ ಹಿಂದಿರುವ ಶಕ್ತಿಗಳು ಯಾರೇ ಇರಲಿ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಸುನೀಲ್ ಕುಮಾರ್, ಸಮಾಜ ಕಲ್ಯಾಣ […]

ದುಷ್ಕರ್ಮಿಗಳಿಂದ ಕೊಲೆಯಾದ ಪ್ರವೀಣ್ ನೆಟ್ಟಾರು ಮನೆಗೆ ಬಸವರಾಜ ಬೊಮ್ಮಾಯಿ

Thursday, July 28th, 2022
CMBellare

ಮಂಗಳೂರು : ದುಷ್ಕರ್ಮಿಗಳಿಂದ ಕೊಲೆಯಾದ ಪ್ರವೀಣ್ ನೆಟ್ಟಾರು ಅವರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರದ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಸಂಜೆ ಆಗಮಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಸುನೀಲ್ ಕುಮಾರ್, ಕೋಟಾ ಶ್ರೀನಿವಾಸ್ ಪೂಜಾರಿ, ಸಂಸದರಾದ ನಳೀನ್ ಕುಮಾರ್ ಕಟೀಲ್, ಸಿ.ಟಿ ರವಿ, ಶಾಸಕರಾದ ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ […]

ಶುಕ್ರನ ದೃಷ್ಟಿಯು ಶುಭಕರವಾಗಿದ್ದರೆ ಬಹಳಷ್ಟು ಕಲ್ಯಾಣಕರವಾದ ಅಂಶಗಳನ್ನು ಪಡೆಯಬಹುದು

Thursday, July 28th, 2022
shukra

ಜಾತಕದಲ್ಲಿ ಶುಕ್ರ ರಾಹುವಿನ ಸಂಯೋಗವು ವಿರುದ್ಧ ಲಿಂಗದ ಕಡೆಗೆ ಹೆಚ್ಚಿನ ಆಕರ್ಷಣೆಯನ್ನು ಉಂಟುಮಾಡುತ್ತದೆ. ಈ ಸಂಯೋಗವು ಯಾವುದೇ ಮನೆಯಲ್ಲಿದ್ದರೆ, ಪತಿ-ಪತ್ನಿಯರ ನಡುವಿನ ವೈಚಾರಿಕ ಭಿನ್ನಾಭಿಪ್ರಾಯ, ಜಗಳ, ಕಲಹ ಅಥವಾ ಪತಿ ಪತ್ನಿ ಪರಸ್ಪರ ದೂರವಾಗಿ ಬೇರೆ ಊರಿನಲ್ಲಿ ಅಥವಾ ವಿದೇಶದಲ್ಲಿ ವಾಸಿಸುತ್ತಿರುತ್ತಾರೆ. ನಿಮ್ಮ ಜೀವನದಲ್ಲಿ ಶುಕ್ರನ ಕೊರತೆ ಇದ್ದರೆ ವ್ಯಕ್ತಿಯ ಜೀವನದಲ್ಲಿ ಒಂಟಿತನ ಉಳಿಯುತ್ತದೆ. ಅನೇಕ ಬಾರಿ ಪತಿ-ಪತ್ನಿಯರ ನಡುವಿನ ಸಂಬಂಧವು ಉತ್ತಮವಾಗಿದ್ದರೂ ಒಬ್ಬರು ಅನಾರೋಗ್ಯದಿಂದ ಉಳಿಯುತ್ತಾರೆ. ಪರಸ್ಪರ ಸಂಬಂಧವು ನಗಣ್ಯವಾಗಿರುತ್ತದೆ. ಅಂತಹ ಸಂಯೋಜನೆಯ ಮನೆಗಳಲ್ಲಿ, ಮಹಿಳೆಯರು […]

ಅಪರಿಚಿತರೊಡನೆ ವ್ಯವಹಾರ ಮಾಡುವಾಗ ಆದಷ್ಟು ನಿಗಾ ಇಡಿ

Thursday, July 28th, 2022
guruRaghavendra

ಶ್ರೀ ಗುರು ರಾಘವೇಂದ್ರ ಸ್ವಾಮಿಯ ನೆನೆಯುತ್ತಾ ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಫಲ ತಿಳಿಯೋಣ ಖ್ಯಾತ ಜ್ಯೋತಿಷಿ ವಾಸುದೇವ ತಂತ್ರಿ ಗಿರಿಧರ ಭಟ್ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಇಂದೇ ಕರೆ ಮಾಡಿ.9945098262 ಮೇಷ ರಾಶಿಮಾತೇ ಮುತ್ತು, ಮಾತೇ ಮೃತ್ಯು ಎಂಬುದನ್ನು ನೆನಪಿಡಿ ನಿಮ್ಮ ಮಾತುಗಳು ವಿವಾದ ಸ್ವರೂಪ ಪಡೆಯಬಹುದು ಎಚ್ಚರವಿರಲಿ. ಸಾಮಾಜಿಕವಾಗಿ ಗೌರವಾದರಗಳು ಹೆಚ್ಚಲಿವೆ. ವಿವಿಧ ಮೂಲಗಳಿಂದ ಹಣಕಾಸು ಬರಲಿದೆ. ಮತ್ತೊಬ್ಬರ ವಿಚಾರದಲ್ಲಿ ಮಧ್ಯಸ್ಥಿಕೆ ಮಾಡಲು ಹೋಗಿ ದ್ವೇಷ ಕಟ್ಟಿ ಕೊಳ್ಳಬೇಡಿ. […]

ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮಿಯನ್ನು ಪೂಜಿಸುವ ಸರಳ ಮಾರ್ಗ

Sunday, July 24th, 2022
mahalakshmi

ಜ್ಯೋತಿಷ್ಯರು ಗಿರಿಧರ ಭಟ್9945098262 ಆರ್ಥಿಕವಾಗಿ ಸಮಸ್ಯೆ ಅನುಭವಿಸುತ್ತಿದ್ದರೆ, ಹಣಕಾಸಿನಲ್ಲಿ ಉಳಿತಾಯವಿಲ್ಲದಿದ್ದರೆ, ಮಾಡುವಂತ ಕಾರ್ಯಗಳಿಂದ ನಷ್ಟ ಹೆಚ್ಚಳವಾಗುತ್ತಿದ್ದರೆ ಈ ಪರಿಹಾರವನ್ನು ಒಮ್ಮೆ ಮಾಡಬಹುದು. ನಿಮ್ಮಲ್ಲಿನ ಋಣ ಬಾದೆ, ಸಾಲದ ಹೊಡೆತ ಇವುಗಳು ಕೆಲವೊಮ್ಮೆ ಜಾತಕ ಆಧಾರಿತ ದೋಷಗಳಿಂದ ಅಥವಾ ಕರ್ಮಾನುಸಾರವಾಗಿ ಜಂಜಾಟಗಳು ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮಿಯನ್ನು ಪೂಜಿಸುವ ಮತ್ತೆ ಅವರ ಆಶೀರ್ವಾದ ಪಡೆಯುವ ಸರಳ ಮಾರ್ಗ. ಭಾನುವಾರ ಸಂಜೆಯ ಸಮಯದಲ್ಲಿ ಅರಳಿಮರದ ಬುಡದ ಬಳಿ ದೀಪವನ್ನು ಬೆಳಗಿ ಈ ರೀತಿ ಮಾಡುವುದರಿಂದ ಮಹಾಲಕ್ಷ್ಮಿಯ ಆಶೀರ್ವಾದ […]

ಮಂಗಳೂರು ವಿವಿ: ಕನಕ ಸಾಹಿತ್ಯ ಸಮ್ಮೇಳನ ಉದ್ಗಾಟಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ

Friday, July 22nd, 2022
Kanaka Jayanthi

ಮಂಗಳೂರು : ಕನಕದಾಸರು, ಪುರಂದರದಾಸರು, ನಾರಾಯಣ ಗುರುಗಳಂತಹ ಸಂತರು ಯಾವುದೇ ಜಾತಿ ಧರ್ಮಕ್ಕೆ ಸೀಮಿತರಾದವರಲ್ಲ. ಅವರು ಅಧಿಕಾರಶಾಹಿಯ ದರ್ಪದ ವಿರುದ್ಧ, ಆರ್ಥಿಕ ಸಂಗ್ರಹದ ಆಸೆಯ ವಿರುದ್ದ ಧ್ವನಿಯೆತ್ತಿ ಸಮಾನತೆಯ ನಿರ್ಮಲ ಬದುಕಿನ ದಾರಿಯನ್ನು ತೋರಿದವರು, ಎಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ .ಎಂ ಮೋಹನ್ ಆಳ್ವ ಹೇಳಿದರು. ಅವರು ಶುಕ್ರವಾರ ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಸಭಾಂಗಣದಲ್ಲಿ ಕನಕದಾಸ ಸಂಶೋಧನ ಕೇಂದ್ರ ಮತ್ತು ಬೆಂಗಳೂರಿನ ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ […]

ಕೆಸರಿನಲ್ಲಿ ಹೂತು ಮೃತಪಟ್ಟ ಯುವಕ

Thursday, July 21st, 2022
damodhar

ಬಂಟ್ವಾಳ: ಗದ್ದೆಯಲ್ಲಿ ಶಂಕಹುಳು ಹೆಕ್ಕುವ ವೇಳೆ ಯುವಕನೋರ್ವ ಕೆಸರಿನಲ್ಲಿ ಹೂತು ಮೃತಪಟ್ಟ ಘಟನೆ ಪೊಳಲಿ ಸಮೀಪದ ಕಲ್ಕುಟದ ಗದ್ದೆಯೊಂದರಲ್ಲಿ ಬುಧವಾರ ನಡೆದಿದೆ. ಕರಿಯಂಗಳ ಗ್ರಾಮದ ಸಾಣೂರುಪದವು ನಿವಾಸಿ ದಾಮೋದರ್(31) ಮೃತಪಟ್ಟ ಯುವಕ. ದಾಮೋದರ್‌ ಗದ್ದೆಯ ಬದಿಯಲ್ಲಿ ಕೂತು ನರ್ತೆ ಹೆಕ್ಕುತ್ತಿದ್ದ ವೇಳೆ ಆಯತಪ್ಪಿ ಗದ್ದೆಗೆ ಬಿದ್ದಿದ್ದಾರೆ. ಗದ್ದೆಯಲ್ಲಿ ನೀರಿನ ಜತೆಗೆ ಕೆಸರು ಕೂಡ ತುಂಬಿಕೊಂಡಿದ್ದು, ಈ ವೇಳೆ ಅವರ ಕುತ್ತಿಗೆವರೆಗೂ ಹೂತು ಹೋಗಿದ್ದಾರೆ. ಬಳಿಕ ಮೇಲಕ್ಕೆ ಬರಲು ಆಗದೆ ಮೃತಪಟ್ಟಿದ್ದಾರೆ. ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದ ದಾಮೋದರ್ ಅವರು […]

ವಿಕೋಪ ಎದುರಿಸಲು ಅಧಿಕಾರಿಗಳಲ್ಲಿ ಸಮನ್ವಯತೆ ಅಗತ್ಯ: ಡಾ. ರಾಜೇಂದ್ರ

Thursday, July 21st, 2022
Rajendra Kumar KV

ಮಂಗಳೂರು : ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತಂಡವಾಗಿ ಕಾರ್ಯತಂತ್ರ ರೂಪಿಸಿ, ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಯಾವುದೇ ರೀತಿಯ ವಿಕೋಪಗಳು ಎದುರಾದರೂ ಯಶಸ್ವಿಯಾಗಿ ನಿಭಾಯಿಸಬಹುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಅಭಿಪ್ರಾಯಪಟ್ಟರು. ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜು.21ರ ಗುರುವಾರ ಜಿಲ್ಲಾಡಳಿತ, ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ತರಬೇತಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಎ’ ಮತ್ತು ಬಿ’ ವೃಂದದ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆ ಪರಿಷ್ಕರಣೆ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ […]