ವಸತಿ ಸಮುಚ್ಚಯದಿಂದ ಬಿದ್ದು 9ನೇ ತರಗತಿಯ ವಿದ್ಯಾರ್ಥಿ ಮೃತ್ಯು

Saturday, August 6th, 2022
sushan-rai

ಪುತ್ತೂರು: ವಸತಿ ಸಮುಚ್ಚಯದ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದ ಪ್ರೌಢಶಾಲೆ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಪುತ್ತೂರಿನ ಸುದಾನ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಶಾನ್ ರೈ(15) ಮೃತ ಬಾಲಕ. ಕೆನರಾ ಬ್ಯಾಂಕ್‍ನ ನಿವೃತ್ತ ಮ್ಯಾನೇಜರ್, ಬೊಳುವಾರು ಶ್ರೀ ದುರ್ಗಾಪರಮೇಶ್ವರಿ ಉಳ್ಳಾಲ್ತಿ ಮಲರಾಯ ಕ್ಷೇತ್ರದ ವಿಶ್ವಸ್ಥ ಮಂಡಳಿಯ ಮನೋಹರ್ ರೈ ಎಂಬವರ ಪುತ್ರ, ಶುಕ್ರವಾರ ಸಂಜೆ ಶಾಲೆ ಬಿಟ್ಟ ಬಳಿಕ ಮನೆಗೆ ತೆರಳದೆ ಈತ ಮನೆಯ ದಾರಿಯಲ್ಲಿರುವ ವಸತಿ ಸಮುಚ್ಚಯಕ್ಕೆ ತೆರಳಿದ್ದು, […]

ದ.ಕ.ಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯ ವರಮಹಾಲಕ್ಷ್ಮೀ ಪೂಜೆ

Friday, August 5th, 2022
varamahalakshmi

ಮಂಗಳೂರು: ವರಲಕ್ಷ್ಮಿ ವ್ರತವನ್ನು ಶ್ರಾವಣ ಶುಕ್ಲ ಪಕ್ಷದ ಕೊನೆಯ ಶುಕ್ರವಾರದಂದು ಆಚರಿಸಲಾಗುತ್ತದೆ, ಕ್ಷೀರಸಾಗರದಿಂದ ವರಮಹಾಲಕ್ಷ್ಮಿ ದೇವಿಯು ಮೊದಲ ಬಾರಿಗೆ ಪ್ರಕಟಗೊಂಡಳು ಎನ್ನಲಾಗುತ್ತದೆ. ಅವಳು ಕ್ಷೀರಸಾಗರದ ಮೈಬಣ್ಣವನ್ನು ಹೊಂದಿದ್ದಳು ಮತ್ತು ಅದೇ ಬಣ್ಣದ ಉಡುಪನ್ನು ಧರಿಸಿದ್ದಳು ಎಂದು ಕಥೆಗಳಲ್ಲಿ ಉಲ್ಲೇಖವಿದೆ. ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದಿನವಿಡೀ ಉಪವಾಸವಿದ್ದು ದೇವಳಗಳಲ್ಲಿ ಪೂಜೆಯಲ್ಲಿ ಭಾಗವಹಿಸಿದ ಭಕ್ತರು ಬಳಿಕ ಪ್ರಸಾದ ಸೇವನೆ ಮಾಡಿದರು. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಮಂಗಳಾದೇವಿ ದೇವಸ್ಥಾನ, ಕುದ್ರೋಳಿ ಭಗವತೀ […]

28 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಗೊಳ್ಳಲಿರುವ ವಾಮಜೂರು ಪ್ರವೀಣ್‌, ಮನೆಯರಿಗೆ ತೀವ್ರ ಆತಂಕ

Friday, August 5th, 2022
Vamanjooru Praveen

ಮಂಗಳೂರು: ಈ ವರ್ಷ ಭಾರತದ ಸ್ವಾತಂತ್ಯ್ರೋತ್ಸವದ ಅಮೃತೋತ್ಸವದ ಸಂದರ್ಭದಲ್ಲಿ ಜೈಲಿನಿಂದ ಬಿಡುಗಡೆ ಆಗುವ ಖೈದಿಗಳ ಜೊತೆ ವಾಮಜೂರು ಪ್ರವೀಣ್‌ ಕುಮಾರ್‌ ಎಂಬಾತನು 28 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಗೊಳ್ಳಲಿದ್ದಾನೆ. 90 ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಮಂಗಳೂರಿನ ವಾಮಂಜೂರಿನಲ್ಲಿ ನಡೆದ ನಾಲ್ಕು ಮಂದಿಯ ಬರ್ಬರ ಕೊಲೆ ಪ್ರಕರಣದ ಅರೋಪಿ ವಾಮಜೂರು ಪ್ರವೀಣ್‌ ಕುಮಾರ್‌ (62)ನನ್ನು ಸರಕಾರ ಜೈಲಿನಿಂದ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಆದರೆ ಆತನಿಂದ ಕೊಲೆಯಾದವರ ಕುಟುಂಬದವರಿಂದ ಬಿಡುಗಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. […]

ನಿಮ್ಮ ಹಣ ವಾಪಸ್ಸು ಬರುವ ಹಾಗೆ ಆಗುವ ಫಲಿತಾಂಶ ಇಲ್ಲಿದೆ

Friday, August 5th, 2022
sooryadeva

ಅದ್ಯಾವುದೋ ಗಳಿಗೆಯಲ್ಲಿ ನಿಮ್ಮನ್ನು ಪುಸುಲಾಯಿಸಿ ಅಥವಾ ನಂಬಿಕಸ್ಥರಂತೆ ನಾಟಕವಾಡಿ ನಿಮ್ಮ ಬಳಿ ಹಣವನ್ನು ಪಡೆದುಕೊಳ್ಳಬಹುದು. ಆದರೆ ತೆಗೆದುಕೊಂಡಿರುವ ಹಣವನ್ನು ಕೇಳಲು ಹೋದರೆ ಸತಾಯಿಸುತ್ತಾ ಅಥವಾ ಸುಳ್ಳು ಹೇಳುತ್ತಾ ಅಥವಾ ನಿಮ್ಮ ವಿರುದ್ಧವೇ ತಿರುಗಿ ಬಿದ್ದರೆ ನಿಮ್ಮ ಸ್ಥಿತಿ ಹತಾಶವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಈ ಸಣ್ಣ ಪರಿಹಾರವೂ ನಿಮ್ಮ ಹಣ ವಾಪಸ್ಸು ಬರುವ ಹಾಗೆ ಫಲಿತಾಂಶ ನೀಡಬಹುದಾಗಿದೆ. ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿ ಸೂರ್ಯನಿಗೆ ನೀರು ಅರ್ಪಿಸಿ. ಆ ನೀರಿನಲ್ಲಿ 11 ಕೆಂಪು ಮೆಣಸಿನಕಾಯಿಯನ್ನು ಹಾಕಿ ಮತ್ತು ಹಣವನ್ನು […]

ಶ್ರೀ ವರಮಹಾಲಕ್ಷ್ಮಿ ನೆನೆಯುತ್ತಾ ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಫಲ ತಿಳಿಯೋಣ

Friday, August 5th, 2022
varamahalaksmi

ಖ್ಯಾತ ಜ್ಯೋತಿಷಿ ವಾಸುದೇವ ತಂತ್ರಿ ಗಿರಿಧರ ಭಟ್ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಇಂದೇ ಕರೆ ಮಾಡಿ.9945098262 ಮೇಷ ರಾಶಿಕೆಲಸದ ಒತ್ತಡ ಹೆಚ್ಚಾಗಬಹುದು. ಕೌಟುಂಬಿಕವಾಗಿ ಅನುಕೂಲಕರ ವಾತಾವರಣ ಮೂಡಲಿದೆ. ಭವಿಷ್ಯದ ಯೋಜನೆಗಳ ಬಗ್ಗೆ ಚಿಂತನೆ ಮಾಡಲಿದ್ದೀರಿ.ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸಮಸ್ಯೆಗಳ ಸಮಾಲೋಚನೆಗೆ ಕರೆ ಮಾಡಿ. 9945098262 ವೃಷಭ ರಾಶಿಆರ್ಥಿಕ ಲಾಭದಾಯಕವಾದ ದಿನವಾಗಿರುತ್ತದೆ. ಪೂಜಾ ಪುನಸ್ಕಾರಗಳು ಹೆಚ್ಚಾಗಿ ಜರಗುವ ಸಾಧ್ಯತೆ. ಈ ದಿನ ಆರಾಮದಾಯಕವಾದ ಕ್ಷಣಗಳನ್ನು ಅನುಭವಿಸುವಿರಿ. ವಸ್ತುಗಳ ಖರೀದಿ ಭರಾಟೆ ನಡೆಯಲಿದೆ.ಜ್ಯೋತಿಷ್ಯರು ಗಿರಿಧರ […]

ಅರ್ಜುನ್ ಕಾಪಿಕಾಡ್ ನಿರ್ದೇಶನದ ಅಬತರ ಆಗೋಸ್ಟ್ 18ರಂದು ತೆರೆಗೆ

Thursday, August 4th, 2022
abatara

ಮಂಗಳೂರು : ಬೊಳ್ಳಿ ಮೂವೀಸ್ ಮತ್ತು ಅವಿಕ ಪ್ರೊಡಕ್ಷನ್ ನಡಿಯಲ್ಲಿ ಅರ್ಜುನ್ ಕಾಪಿಕಾಡ್ ನಿರ್ದೇದಸನದಲ್ಲಿ ತಯಾರಾದ ಬಹು ನಿರೀಕ್ಷೆಯ ತುಳು ಸಿನಿಮಾ “ಅಬತರ” ಅಗೋಸ್ಟ್ 18 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ಈ ಸಿನಿಮಾವನ್ನು ನಿಖಿಲ್ ಕೀರ್ತಿ ಸಾಲ್ಯಾನ್ ನಿರ್ಮಿಸಿದ್ದಾರೆ. ಈ ಸಿನಿಮಾಕ್ಕೆ ಮಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕೋವಿಡ್ ನಿಂದಾಗಿ ಚಿತ್ರ ತೆರೆಗೆ ಬರುವುದು ಸ್ವಲ್ಪ ವಿಳಂಬವಾಗಿದೆ. ಸಮಯ ಸಂದರ್ಭ ನೋಡಿ ಈಗ ಸಿನಿಮಾವನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದು ನಿರ್ದೇಶಕ, ನಟ ಅರ್ಜುನ್ ಕಾಪಿಕಾಡ್ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 5 ರಿಂದ ರಾತ್ರಿ ನಿರ್ಬಂಧ ಸಡಿಲಿಕೆ

Thursday, August 4th, 2022
KV Rajendra

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಧಿಸಲಾಗಿದ್ದ ರಾತ್ರಿ ನಿರ್ಬಂಧ ಕ್ರಮಗಳನ್ನು ಆ. 5 ರಿಂದ ಮುಂದಿನ ಮೂರು ದಿನಗಳ ಕಾಲ ಕೊಂಚ ಸಡಿಲಿಕೆ ಮಾಡಿ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಆದೇಶಿಸಿದ್ದಾರೆ. ಆ. 5 ರಿಂದ ಅಂಗಡಿ ಮುಂಗಟ್ಟುಗಳನ್ನು ರಾತ್ರಿ 9 ರವರೆಗೆ ತೆರೆಯಲು ಅವಕಾಶ ನೀಡಲಾಗಿದ್ದು , ಮದ್ಯದಂಗಡಿಗಳನ್ನು ನಾಳೆಯಿಂದ ಸಂಜೆ 6 ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿದೆ. 144 ಸೆಕ್ಷನ್ ಅಡಿಯಲ್ಲಿ ವಿಧಿಸಲಾದ ನಿಷೇಧಾಜ್ಞೆ ಹಾಗೂ ಇತರ ನಿರ್ಬಂಧಗಳು ಮೊದಲಿನಂತೆಯೇ ಮುಂದುವರಿಯಲಿದೆ.

ಈ ಗರುಡ ಮಂತ್ರವನ್ನು ಪಠಿಸುಸಿದರೆ ಸರ್ಪದೋಷ ಪರಿಹಾರ

Thursday, August 4th, 2022
garuda

ಕುಂಕುಮಾಂಕಿತ ವರ್ಣಾಯ ಕುದೆಂದು ಧವಲಾಯಚವಿಷ್ಣುವಾಹನ ನಮಸ್ತುಭ್ಯಂ ಪಕ್ಷಿರಾಜಾಯ ತೇ ನಮಃ ಈ ಗರುಡ ಮಂತ್ರವನ್ನು ತಾವು ಪ್ರತಿನಿತ್ಯ 9 ಅಥವಾ 11 ಬಾರಿ ಪಠಿಸುತಿದ್ದರೆ ರಾಹು ಸಂಬಂಧಿತ ದೋಷಗಳು, ಕಣ್ಣಿಗೆ ಸಂಬಂಧಪಟ್ಟಂತಹ ಬಾಧೆ, ಸರ್ಪದೋಷ ದಂತಹ ಸಮಸ್ಯೆಗಳು, ಕುಜ ದೋಷದಂತಹ ಸಮಸ್ಯೆ ಪರಿಹಾರ ಸಿಗುವುದು. ನಿಮ್ಮ ಮನಸ್ಥಿತಿಯಲ್ಲಿ ಅಶಾಂತತೆ, ಬೇಸರ, ದುಃಖ, ಸದಾಕಾಲ ಚಿಂತೆಗಳು ಮನೆ ಮಾಡಿದ್ದರೆ ಅವುಗಳ ನಿವಾರಣೆ ಕೂಡ ಈ ಮಂತ್ರದಿಂದ ಸಾಧ್ಯವಿದೆ. ಈ ಗರುಡ ಮಂತ್ರವನ್ನು ತಾವು ಭಕ್ತಿಯಿಂದ ಪಠಿಸಿ ಶುಭದಾಯಕವಾದ ಫಲಗಳನ್ನು […]

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ನೆನೆಯುತ್ತಾ ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಫಲ ತಿಳಿಯೋಣ

Thursday, August 4th, 2022
Raghavendra

ಖ್ಯಾತ ಜ್ಯೋತಿಷಿ ವಾಸುದೇವ ತಂತ್ರಿ ಗಿರಿಧರ ಭಟ್ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಇಂದೇ ಕರೆ ಮಾಡಿ.9945098262 ಮೇಷ ರಾಶಿಆತ್ಮವಿಶ್ವಾಸದ ಜೊತೆಗೆ ಕಾರ್ಯಗಳಲ್ಲಿ ಮುನ್ನುಗ್ಗಿ. ನಿಮ್ಮ ಪ್ರತಿಯೊಂದು ಕೆಲಸಗಳು ಯಶಸ್ವಿಯಾಗಿ ನಡೆಯಲಿದೆ. ಅಪರಿಚಿತರೊಡನೆ ವ್ಯವಹರಿಸುವಾಗ ಆದಷ್ಟು ಎಚ್ಚರಿಕೆ ಇರಲಿ. ಆರೋಗ್ಯದ ವಿಷಯವಾಗಿ ಉತ್ತಮ ನಿರ್ಧಾರ ತೆಗೆದುಕೊಳ್ಳಿ.ಜ್ಯೋತಿಷ್ಯರು ಗಿರಿಧರ ಭಟ್ ನಿಮ್ಮ ಸಮಸ್ಯೆಗಳ ಸಮಾಲೋಚನೆಗೆ ಕರೆ ಮಾಡಿ. 9945098262 ವೃಷಭ ರಾಶಿಮನಸ್ಸನ್ನು ಪ್ರಫುಲ್ಲತೆಯಿಂದ ಇರಿಸಲು ಪ್ರಯತ್ನಿಸಿ. ದೈಹಿಕ ಕ್ರಿಯಾಶೀಲತೆಗೆ ಒತ್ತು ನೀಡಿ. ಈ ದಿನ ಲೇವಾದೇವಿ […]

ಮಂಗಳೂರು ವಿವಿ: ಪದವಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ

Wednesday, August 3rd, 2022
mangalore university

ಮಂಗಳೂರು: ವಿಶ್ವವಿದ್ಯಾನಿಲಯವು ಎಪ್ರಿಲ್/ಮೇ 2022 ರಲ್ಲಿ ನಡೆಸಿದ ಪ್ರಥಮ, ತೃತೀಯ ಮತ್ತು ಪಂಚಮ ಸೆಮಿಸ್ಟರ್ನ ಆವರ್ತಿತ ಹಾಗೂ ಪುನರಾವರ್ತಿತ (ಆಯ್ಕೆ ಆಧಾರಿತ ಸೆಮಿಸ್ಟರ್ ಸ್ಕೀಂ) ಸ್ನಾತಕ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಮಂಗಳೂರು ವಿವಿಯ ವೆಬ್ಸೈಟ್ನಲ್ಲಿ ನಲ್ಲಿ ಪ್ರಕಟಿಸಲಾಗಿರುತ್ತದೆ. ಫಲಿತಾಂಶ ವೀಕ್ಷಿಸಲು ಈ ಕೆಳಗಿನ ಜಾಲತಾಣಗಳಲ್ಲಿ ವೀಕ್ಷಿಸಬಹುದಾಗಿದೆ. http://results1.mangaloreuniversity.in/Main/ http://results2.mangaloreuniversity.in ಈ ಬಾರಿ ಮೌಲ್ಯಮಾಪನವನ್ನು ಎಲ್ಲಾ ಗೌಪ್ಯತಾ ಕ್ರಮಗಳೊಂದಿಗೆ ವ್ಯವಸ್ಥಿತವಾಗಿ ನಡೆಸಿದ್ದು, ಮೌಲ್ಯಮಾಪನ ಕೇಂದ್ರದಲ್ಲಿಯೇ ಅಂಕತ:ಖ್ತೀಕರಣ ದಾಖಲಿಸುವ ಪ್ರಕ್ರಿಯೆನ್ನು ವಿವಿ ಸ್ವಯಂ ನಿರ್ವಹಣೆ ಸಾಫ್ಟ್ವೇರ್ ಎಂ.ಯು.ಲಿಂಕ್ಸ್ ಆನ್ಲೈನ್ ವ್ಯವಸ್ಥೆ […]