ಸಂಘ ಪರಿವಾರ ದ ಸಕ್ರಿಯ ಕಾರ್ಯಕರ್ತ ರತೀಶ್ ಶೆಟ್ಟಿ ಪಾವಳ ನಿಧನ

Tuesday, October 22nd, 2024
Rathish-Shetty pavula

ವರ್ಕಾಡಿ: ಸಂಘ ಪರಿವಾರ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ, ಭಾರತೀಯ ಜನತಾಪಕ್ಷ ದಲ್ಲಿ ಸಕ್ರಿಯರಾಗಿದ್ದ ರತೀಶ್ ಶೆಟ್ಟಿ ಪಾವಳ (36) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಪಾವಳ ನಿವಾಸಿ ಹಿರಿಯ ಪ್ರಗತಿಪರ ಕೃಷಿಕ ರಘುನಾಥ ಶೆಟ್ಟಿ – ವಿಜಯಲಕ್ಷ್ಮಿ ದಂಪತಿಯ ಪುತ್ರ ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದ ರತೀಶ್ ಶೆಟ್ಟಿ ಕಳೆದೆರಡು ದಿನಗಳಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ರಾತ್ರಿ ನಿಧಾನರಾದರು. ಮೃತರು ತಂದೆ – ತಾಯಿ, ಹಾಗೂ ಸಹೋದರಿ ರಮ್ಯಾ ಭಂಡಾರಿ, […]

ಬೆಂಗಳೂರು ಕಂಬಳವನ್ನು ನಿಲ್ಲಿಸುವಂತೆ ಹೈಕೋರ್ಟ್ ಮೊರೆ ಹೋದ ಪ್ರಾಣಿ ದಯಾ ಸಂಘ

Monday, October 21st, 2024
peta

ಮಂಗಳೂರು : ಬೆಂಗಳೂರಿನಲ್ಲಿ ಅಕ್ಟೋಬರ್ 26 ರಂದು ಆಯೋಜಿಸಲಾಗಿರುವ ಬೆಂಗಳೂರು ಕಂಬಳವನ್ನು ನಿಲ್ಲಿಸುವಂತೆ ಪ್ರಾಣಿ ದಯಾ ಸಂಘ ಪೇಟಾ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದೆ. ಅಕ್ಟೋಬರ್ 26 ರಂದು ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆ ಎಂದು ಪೇಟಾ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಈ ಅರ್ಜಿಯ ತುರ್ತು ವಿಚಾರಣೆಗೆ ಪರಿಗಣಿಸುವಂತೆ ಸೋಮವಾರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ಪೀಠಕ್ಕೆ ಮನವಿ ಮಾಡಿದ್ದಾರೆ. ರಾಜ್ಯದ […]

ರೈಲ್ವೆ ಹಳಿ ಮೇಲೆ ಕಲ್ಲು : ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ದ.ಕ. ಸಂಸದ ಕ್ಯಾ. ಚೌಟ ಒತ್ತಾಯ

Monday, October 21st, 2024
Brijesh-Ullal-Rail

ಮಂಗಳೂರು: ಮಂಗಳೂರು-ಕೇರಳ ಮಾರ್ಗವಾದ ಉಳ್ಳಾಲದ ತೊಕ್ಕೊಟ್ಟು ರೈಲ್ವೆ ಹಳಿ ಮೇಲೆ ಕಲ್ಲುಗಳನ್ನು ಇಟ್ಟು ಅಪಾಯಕಾರಿ ಕೃತ್ಯವೆಸಗಿರುವುದು ಗಂಭೀರ ವಿಚಾರವಾಗಿದ್ದು, ಪೊಲೀಸರು ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕ್ಯಾ. ಚೌಟ ಅವರು, ರೈಲ್ವೆ ಹಳಿ ಮೇಲೆ ಕಲ್ಲು ಇಟ್ಟು ವಿಕೃತಿ ಮೆರೆದಿರುವ ಈ ಕೃತ್ಯದ ಬಗ್ಗೆ ಈಗಾಗಲೇ ನಾನು ಸಂಬಂಧಪಟ್ಟ ಪೊಲೀಸರು ಹಾಗೂ ರೈಲ್ವೆ ಇಲಾಖೆ […]

ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ

Monday, October 21st, 2024
jayarama-acharya

ಬಂಟ್ವಾಳ: ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಬೆಂಗಳೂರಿನಲ್ಲಿ ಅ.21ರಂದು ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಬೆಂಗಳೂರಿನಲ್ಲಿ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಆಗಮಿಸಿದ್ದ ಅವರಿಗೆ ಮುಂಜಾನೆ ನಾಲ್ಕು ಗಂಟೆಗೆ ಹೃದಯಸ್ತಂಭನವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆಗೆ ಸ್ಪಂಧಿಸದೆ ನಿಧನ ಹೊಂದಿದ್ದಾರೆ. 1957, ಅಕ್ಟೋಬರ್ 12ರಂದು ಬಂಟ್ವಾಳ ಗಣಪತಿ ಆಚಾರ್ಯ, ಭವಾನಿ ಅಮ್ಮ ಅವರ ಪುತ್ರರಾಗಿ ಜನಿಸಿದ ಜಯರಾಮ ಆಚಾರ್ಯರು, ಬಂಟ್ವಾಳ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿ, […]

ಯುವಸಿರಿ, ರೈತ ಭಾರತದ ಐಸಿರಿ: ಕಾಲೇಜು ವಿದ್ಯಾರ್ಥಿಗಳಿಂದ ನೇಜಿನಾಟಿ

Sunday, October 20th, 2024
Nati

ಉಜಿರೆ: ಪ್ರಕೃತಿಗೂ, ಕೃಷಿಗೂ ಅವಿನಾಭಾವ ಸಂಬಂಧವಿದ್ದು ಕೃಷಿ ನಮ್ಮ ಭವ್ಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಉಜಿರೆಯ ಸೋನಿಯಾ ಯಶೋವರ್ಮ ಹೇಳಿದರು. ಅವರು ಭಾನುವಾರ ಬೆಳಾಲು ಗ್ರಾಮದ ಅನಂತೋಡಿಯಲ್ಲಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಠಾರದಲ್ಲಿ ಉಜಿರೆಯ ಬದುಕು ಕಟ್ಟೋಣ ತಂಡ, ಬೆಳ್ತಂಗಡಿ ರೋಟರಿಕ್ಲಬ್, ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ರಾಷ್ಟೀಯ ಸೇವಾ ಯೋಜನೆಯ ಘಟಕ, ಎಸ್.ಡಿ.ಎಂ. ಕ್ರೀಡಾಸಂಘ, ತಾಲ್ಲೂಕು ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ನೇಜಿನಾಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅನ್ನದಾನಕ್ಕಿಂತ ಮಿಗಿಲಾದ ದಾನವಿಲ್ಲ. ಆಹಾರದ ಪೋಲು ಹಾಗೂ […]

ಮೀನು ಸಾಗಿಸುವ ಕಂಟೇನರ್ ಗೆ ಸ್ಕೂಟರ್‌ಗೆ ಡಿಕ್ಕಿ : ಯುವತಿ ಸಾವು

Sunday, October 20th, 2024
cristina crasta

ಮಂಗಳೂರು : ಮೀನು ಸಾಗಿಸುವ ಕಂಟೇನರ್ ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಯುವತಿಯೋರ್ವಳು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಂತೂರು ವೃತ್ತದ ಬಳಿ ಭಾನುವಾರ ಸಂಜೆ ನಡೆದಿದೆ. ಮೃತರನ್ನು ಕೋಡಿಕಲ್ ನಿವಾಸಿ ಕ್ರಿಸ್ತಿ ಕ್ರಾಸ್ತಾ (27) ಎಂದು ಗುರುತಿಸಲಾಗಿದೆ. ಕ್ರಿಸ್ತಿ ಕ್ರಾಸ್ತಾ ಅವರು ಕೋಡಿಕಲ್ ವೆಲಂಕಣಿ ವಾರ್ಡಿನ ಸಿರಿಲ್ ಕ್ರಾಸ್ತಾ ಮತ್ತು ಸ್ಯಾಂಡ್ರಾ ಕ್ರಾಸ್ತಾ ದಂಪತಿಯ ಪುತ್ರಿ. ಮೃತ ಕ್ರಿಸ್ತಿಯವರು ನಂತೂರು ವೃತ್ತದಿಂದ ಪಂಪೈಲ್ ಕಡೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಮೀನು ಸಾಗಿಸುವ ಕಂಟೇನರ್ […]

ಮಗನ ಬರ್ತಡೇಗಾಗಿ ಕಡವೆ ಕೊಂದು ಮಾಂಸ ಮಾಡಿದ ತಂದೆ

Saturday, October 19th, 2024
kadave

ಉಪ್ಪಿನಂಗಡಿ : ಮಗನ ಬರ್ತಡೇಗಾಗಿ ರಕ್ಷಿಣಾರಣ್ಯದಿಂದ ಕಡವೆಯನ್ನು ಗುಂಡಿಕ್ಕಿ ಕೊಂದು ಅದರ ಮಾಂಸವನ್ನು ಫ್ರಿಡ್ಜ್ ನಲ್ಲಿ ಇರಿಸಲಾಗಿದ್ದ ಪ್ರಕರಣವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಶಿರಾಡಿ ಗ್ರಾಮದ ಗುಂಡ್ಯ ನಿವಾಸಿ ಸುರೇಶ್‌ ಮತ್ತವರ ಸಹವರ್ತಿಗಳು ರಕ್ಷಿತಾರಣ್ಯದಲ್ಲಿದ್ದ ಕಡವೆಯೊಂದಕ್ಕೆ ಗುಂಡಿಕ್ಕಿ ಹತ್ಯೆಗೈದಿದ್ದರು ಎಂದು ಹೇಳಲಾಗಿದೆ. ಅದನ್ನು ಮಗನ ಹುಟ್ಟು ಹಬ್ಬದ ಔತಣ ಕೂಟಕ್ಕೆಂದು ಮಾಂಸ ಮಾಡಿ ಮನೆಯ ಪ್ರೀಝರ್‌ನಲ್ಲಿ ಇರಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿ ವಲಯ ಅರಣ್ಯಾಧಿ ಕಾರಿಗಳ ನಿರ್ದೇಶನದ […]

ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಗೆಲುವು ನಿಶ್ಚಿತ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Saturday, October 19th, 2024
Lakshmi-Hebbalkar

ಉಡುಪಿ : ದಕ್ಷಿಣ ಕನ್ನಡ – ಉಡುಪಿ ಸ್ಥಳೀಯ ಸಂಸ್ಥೆಗಳ ಕರ್ನಾಟಕ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಗೆಲುವು ಶತಸಿದ್ಧ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದ್ಧಾರೆ. ಉಡುಪಿಯ ಕಾಂಗ್ರೆಸ್ ಭವನದಲ್ಲಿ ನಡೆದ ಚುನಾವಣಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವು ನಿಶ್ಚಿತ. ಕರಾವಳಿಯಲ್ಲಿ ಪಕ್ಷದ ಅಭ್ಯರ್ಥಿ ರಾಜು ಪೂಜಾರಿ […]

ನವೆಂಬರ್ 24 ರಂದು – ಮೈಸೂರು ಕಲಾ ದಿವಸ 2024

Friday, October 18th, 2024
Vasundara 75

ಮೈಸೂರು : ಶಾಸ್ತ್ರೀಯ ಭರತನಾಟ್ಯ ಕ್ಷೇತ್ರದಲ್ಲಿ ನಾಡಿನಾದ್ಯಂತ ತನ್ನದೇ ಛಾಪನ್ನು ಮೂಡಿಸಿ ಪ್ರಖ್ಯಾತರಾಗಿರುವ ಡಾ. ವಸುಂಧರಾ ದೊರೆಸ್ವಾಮಿ ಅವರ 75 ನೇ ಹುಟ್ಟುಹಬ್ಬದ ಪ್ರಯುಕ್ತ ವಸುಂಧರೋತ್ಸವ 2024 ಎಂಬ ರಾಷ್ಟ್ರೀಯ ಗೀತ-ನೃತ್ಯ ಉತ್ಸವದ ಅಂಗವಾಗಿ ಕರ್ನಾಟಕದ ಕಲಾವಿದರು ಹಾಗೂ ನೃತ್ಯ ವಿದ್ಯಾರ್ಥಿಗಳಿಗಾಗಿ ಮೈಸೂರು ಕಲಾ ದಿವಸ್ ಎಂಬ ಸಾಂಸ್ಕೃತಿಕ ಉತ್ಸವವನ್ನು ಇದೇ ಬರುವ ನವೆಂಬರ್ 24 ರಂದು ಮೈಸೂರಿನಲ್ಲಿ ಆಯೋಜಿಸಲಾಗಿದೆ. ದೇಶ ವಿದೇಶಗಳಲ್ಲಿ ನೃತ್ಯಶಿಕ್ಷಕರಾಗಿರುವ ಡಾ. ವಸುಂಧರಾ ಅವರ ಶಿಷ್ಯರು ವಸುಂಧರಾ-75 ಎಂಬ ಸಮಿತಿಯನ್ನು ರಚಿಸಿ ಈ […]

ವಿಶ್ವ ಕೊಂಕಣಿ ಕೇಂದ್ರದಲ್ಲಿ “ಕ್ಷಿತಿಜ” ಕೌಶಲ್ಯಾಭಿವೃದ್ದಿ ಶಿಬಿರ

Friday, October 18th, 2024
vishwa-konkani

ಮಂಗಳೂರು : ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದು ಅಲ್ಲಿಯೇ ಉತ್ತಮ ಉದ್ಯೊಗಾವಕಾಶವಿದ್ದರೂ, ತನ್ನ ತಾಯ್ನಾಡಿನ ಬಳುವಳಿ – ಕೌಟುಂಬಿಕ ಉದ್ಯಮಕ್ಕೆ ಮರಳಿ, ಅನುಕರಣೀಯ ಮಾದರಿ ನಿರ್ಮಿಸಿದ ಕೀರ್ತಿ ಆನಂದ ಜಿ ಪೈಯವರದ್ದು ಎಂದು ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ ಎ ನಂದಗೋಪಾಲ ಶೆಣೈಯವರು ಅಭಿಪ್ರಾಯ ಪಟ್ಟರು. ವಿಶ್ವಕೊಂಕಣಿ ಕೇಂದ್ರದಲ್ಲಿ ನಡೆಯುತ್ತಿರುವ ವಿದ್ಯಾಕಲ್ಪಕ ವಿದ್ಯಾರ್ಥಿವೇತನ ಯೋಜನೆಯ ‘ಕ್ಷಿತಿಜ”- ಮೂರು ದಿನಗಳ ಉಚಿತ ಕೌಶಲ್ಯಾಭಿವೃದ್ದಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಕೆನರಾ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷರಾದ ಶ್ರೀ ಆನಂದ ಪೈಯವರು […]