ಶಿಸ್ತು, ನಾಯಕತ್ವ ಬೆಳೆಯಲು ಎನ್.ಎಸ್.ಎಸ್ ಸಹಕಾರಿ : ಕೃಷ್ಣ ಭಟ್

Saturday, December 19th, 2015
nss

ಬದಿಯಡ್ಕ: ಶಿಸ್ತು,ನಾಯಕತ್ವ ಗುಣಗಳ ಅಭ್ಯಾಸ ಹಾಗೂ ವಿವಿಧ ಸೇವಾ ಚಟುವಟಿಕೆಗಳನ್ನು ವಿದ್ಯಾರ್ಥಿ ಜೀವನದಲ್ಲಿ ಬಿತ್ತುವುದರಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮಹತ್ವಪೂರ್ಣ ಕಾರ್ಯ ನಿರ್ವಹಿಸುತ್ತಿದ್ದು,ಭವಿಷ್ಯದ ಯಶಸ್ವೀ ಬದುಕಿಗೆ ಮಾರ್ಗದರ್ಶಕವಾಗುವುದು ಎಂದು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು. ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ರಾಷ್ಟ್ರೀಯ ಸೇವಾ ಯೋಜನೆ(ಎನ್.ಎಸ್.ಎಸ್ )ಪ್ರಸಕ್ತ ಸಾಲಿನ ವಾರ್ಷಿಕ ಒಂದು ವಾರಗಳ ಶಿಬಿರವನ್ನು ಶನಿವಾರ ಪಳ್ಳತ್ತಡ್ಕ ಎ.ಯು.ಪಿ ಶಾಲೆಯಲ್ಲಿ ಉದ್ಗಾಟಿಸಿ ಅವರು ಮಾತನಾಡುತ್ತಿದ್ದರು. ಇಂದಿನ ಸವಾಲಿನ ವಿದ್ಯಾಭ್ಯಾಸ ಗುಣಮಟ್ಟಗಳ […]

ಲಾರಿ ಡಿಕ್ಕಿಹೊಡೆದು ಮಹಿಳೆಗೆ ಗಂಭೀರ ಗಾಯ

Saturday, December 19th, 2015
Badiyadka

ಬದಿಯಡ್ಕ: ನೀರ್ಚಾಲು ಕೆಳಗಿನ ಪೇಟೆಯಲ್ಲಿ ಶನಿವಾರ ಬೆಳಿಗ್ಗೆ ಲಾರಿಯೊಂದು ಡಿಕ್ಕಿಹೊಡೆದು ಮಹಿಳೆಯೋರ್ವೆ ಗಾಯಗೊಂಡ ಘಟನೆ ನಡೆದಿದೆ. ಏತಡ್ಕ ನಿವಾಸಿ ಅಕ್ಕಮ್ಮ(50)ಗಾಯಗೊಂಡ ಮಹಿಳೆ.ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಶಿಕಿತ್ಸೆ ನೀಡಿದ ಬಳಿಕ ಕಾಸರಗೋಡು ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಶನಿವಾರ ಬೆಳಿಗ್ಗೆ ಏತಡ್ಕದಿಂದ ಆಗಮಿಸಿದ ಅಕ್ಕಮ್ಮ ನೀರ್ಚಾಲು ಪೇಟೆಯಲ್ಲಿ ನಡೆದು ಹೋಗುತ್ತಿದ್ದಾಗ ಬದಿಯಡ್ಕ ಭಾಗದಿಂದ ಆಗಮಿಸಿದ ಲಾರಿ ಎದು ಭಾಗದಿಂದ ಆಗಮಿಸುತ್ತಿದ್ದ ಕಾರೊಂದಕ್ಕೆ ಸೈಡ್ ನೀಡುತ್ತಿದ್ದಾಗ ನಿಯಂತ್ರಣ ತಪ್ಪಿ ಅಕ್ಕಮ್ಮರಿಗೆ ಡಿಕ್ಕಿಹೊಡೆದು ಬಳಿಕ ರಸ್ತೆ ಬದಿಯ ಮೋರಿಯನ್ನು ಕೆಡವಿ […]

ಕುಮಾರಧಾರ ನದಿಯಲ್ಲಿ ಸುಬ್ರಹ್ಮಣ್ಯ ದೇವರ ಅವಭೃತೋತ್ಸವ

Saturday, December 19th, 2015
champa shashti

ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾರ್ಗಶಿರ ಶುದ್ಧ ಸಪ್ತಮಿಯ ದಿನವಾದ ಶುಕ್ರವಾರ ಬೆಳಗ್ಗೆ ಕುಮಾರಾಧಾರ ನದಿಯಲ್ಲಿ ಶ್ರೀ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ನಡೆಯಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಅವಭೃತೋತ್ಸವದ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.ಇತರ ಪುರೋಹಿತರ ಮಂತ್ರ ಘೋಷಗಳನ್ನು ಮಾಡಿದರು. ನೂರಾರು ಭಕ್ತರು ಶ್ರೀ ದೇವರ ಅವಭೃತ ಸ್ನಾನದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಿ ಪಾವನರಾದರು. ಕುಮಾರಧಾರ ನದಿಯ ಮತ್ಸ್ಯತೀರ್ಥದಲ್ಲಿ ಸಿಂಗರಿಸಲ್ಪಟ್ಟ ತೆಪ್ಪದಲ್ಲಿ ಕುಕ್ಕೆ […]

ಮುಳಿಯಾರು : ಷಷ್ಠಿ ಉತ್ಸವ ಸಂಪನ್ನ

Saturday, December 19th, 2015
shashti

ಮುಳ್ಳೇರಿಯಾ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಷಷ್ಠೀ ಉತ್ಸವವು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಸಂಪನ್ನವಾಯಿತು. ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಜರಗಿತು. ಕಾರ್ಯಕ್ರಮದಂಗವಾಗಿ ಅಭಿಷೇಕ, ಗಣಹೋಮ, ನವಕಾಭಿಷೇಕ ಜರಗಿತು. ಶ್ರೀ ಸಿದ್ಧಿವಿನಾಯಕ ಮಹಿಳಾ ಭಜನಾ ಸಂಘದವರಿಂದ ಭಜನಾ ಉಪಾಸನೆ ಜರಗಿತು. ಭಕ್ತರಿಂದ ತುಲಾಭಾರ ಸೇವೆ ನಡೆಯಿತು. ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ಜರಗಿತು. ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ ರಂಗೇರಿತು. ರಾತ್ರಿ ಪ್ರತಿ […]

ಜೈಲು ಶಿಕ್ಷೆಗೆ ಸೀಮಿತವಾದುದಲ್ಲ ಅದು ಸತ್‌ಪರಿವರ್ತನೆಯ ದಾರಿ : ರವೀಶ ತಂತ್ರಿ

Thursday, December 17th, 2015
Kasaragod subjail

ಮುಳ್ಳೇರಿಯ : ಜೈಲು ಶಿಕ್ಷೆ ಎಂಬುದು ಕೇವಲ ಶಿಕ್ಷೆಗೆ ಮಾತ್ರ ಸೀಮಿತವಾದ ಜಾಗವಲ್ಲ ಅದೊಂದು ಆತ್ಮಚಿಂತನೆಯೊಡಗೂಡಿ ಸತ್‌ಪರಿವರ್ತನೆಯ ದಾರಿಯಲ್ಲಿ ಮುನ್ನಡೆಯುವ ಸದವಕಾಶವಾಗಿರುತ್ತದೆ. ಹಾಗಾಗಿ ಜೈಲಿನಲ್ಲಿರುವ ಎಲ್ಲಾ ಕೈದಿಗಳು ಬಿಡುಗಡೆಯಾಗಿ ಬರುವಾಗ ಸನ್ನಡತೆಯಿಂದ ಸಮಾಜದಲ್ಲಿ ಗುರುತಿಸಿಕೊಂಡು ಉನ್ನತಿಗೇರಲು ಭಗವತ್‌ಶಕ್ತಿಗಳು ಆನುಗ್ರಹಿಸಿ ಜನ್ಮಸಾರ್ಥಕ್ಯಗೊಳಿಸಿಕೊಳ್ಳಲಿ ಎಂದು ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಸರಗೋಡು ಜಿಲ್ಲಾ ಸ್ಪೆಶಲ್ ಸಬ್ ಜೈಲಿನಲ್ಲಿ ಜೈಲಿನ ವಾಚನಾಲಯಕ್ಕೆ ಸುಮಾರು 250 ರಷ್ಟು ಕನ್ನಡ ಪುಸ್ತಕಗಳು ಹಾಗೂ ಕನ್ನಡ ದಿನಪತ್ರಿಕೆಯನ್ನು ಕುಂಟಾರಿನ ಪರಿವರ್ತನಾ ಯುವಕ ಸಂಘದ […]

ಆಯುಷ್ ಹಬ್ಬ ಕಾರ್ಡ್ ವಿತರಣೆಯ ಜಾಗೃತಿ ಜಾಥಾ ವಾಹನ ಉದ್ಘಾಟನೆ

Wednesday, December 16th, 2015
Ayush Habba

ಮಂಗಳೂರು : ಪಿಲಿಕುಳ ನಿಸರ್ಗಧಾಮದಲ್ಲಿ ಡಿಸೆಂಬರ್ 19 ಮತ್ತು 20ರಂದು ನಡೆಯಲಿರುವ ಆಯುಷ್ ಹಬ್ಬ – 2015ರ ಪ್ರಯುಕ್ತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಆರೋಗ್ಯ ಕಾರ್ಡ್ ವಿತರಣೆಯ ಜಾಗೃತಿ ಜಾಥಾ ಹಾಗೂ ಜಾಹೀರಾತು ವಾಹನವನ್ನು ಕರ್ನಾಟಕ ಆಯುರ್ವೆದೀಕ್ ಮೆಡಿಕಲ್ ಕಾಲೇಜಿನ ಟ್ರಸ್ಟಿಯಾದ ಡಾ| ರಜನೀಶ್ ಸೊರಕೆಯವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರು ವಿಶೇಷಾಧಿಕಾರಿಯಾದ ಡಾ| ಇಕ್ಬಾಲ್, ಆಯುಷ್ ಹಬ್ಬ 2015ರ ಆರ್ಥಿಕ ಸಮಿತಿ ಅಧ್ಯಕ್ಷರಾದ ಡಾ| ಗೋಪಾಲಕೃಷ್ಣ ನಾಯಕ್ ಮತ್ತು ಪ್ರಚಾರ ಸಮಿತಿ […]

ಕುಕ್ಕೆ:ಚಂಪಾಷಷ್ಠಿ ಸಾಂಗವಾಗಿ ನಡೆದ ಎಡೆಸ್ನಾನ ಸೇವೆ

Tuesday, December 15th, 2015
Ede Snana

ಸುಬ್ರಹಣ್ಯ: ಚಂಪಾಷಷ್ಠಿ ಜಾತ್ರ ದಿನವಾದ ಮಂಗಳವಾರ ಚೌತಿಯಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ 124 ಮಂದಿ ಎಡೆಸ್ನಾನ ಸೇವೆಗೈದರು. ದೇವಳದ ಪೂಜೆಯ ಬಳಿಕ ಪ್ರಸಾದವನ್ನು ಗೋವುಗಳಿಗೆ ತಿನ್ನಲು ಕೊಟ್ಟು ನಂತರ ಆ ಎಲೆಯ ಮೇಲೆ ಭಕ್ತರು ಹೊರಾಂಗಣದಲ್ಲಿ ಉರುಳು ಸೇವೆ ನಡೆಸುವ ಮೂಲಕ ಎಡೆಸ್ನಾನ ಹರಕೆ ಸಲ್ಲಿಸಿದರು. ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತ ವೆ.ಮೂ. ಎಸ್ ರಾಜಗೋಪಾಲ ಹಾಗೂ ಪಾಂಚರಾತ್ರ ಪಂಡಿತ ವೆ.ಮೂ. ವಿಜಯಕುಮಾರ್ ಅವರು ಸ್ಥಳದಲ್ಲಿದ್ದು ಎಡೆಸ್ನಾನದ ಕುರಿತು ಮಾರ್ಗದರ್ಶನ ನೀಡಿದರು. ಮಧ್ಯಾಹ್ನ ಮಹಾಪೂಜೆ ಬಳಿಕ ದೇವಳದ […]

ಧರ್ಮಸ್ಥಳ : ಸಮವಸರಣ ಪೂಜಾ ವೈಭವ

Saturday, December 12th, 2015
Dharmasthala

ಧರ್ಮಸ್ಥಳ : ಲಕ್ಷದೀಪೋತ್ಸವ ಸಂದರ್ಭದಲ್ಲಿ ಶುಕ್ರವಾರ ರಾತ್ರಿ ಮಹೋತ್ಸವ ಸಭಾ ಭವನದಲ್ಲಿ ಸಮವಸರಣ ಪೂಜಾ ವೈಭವವನ್ನು ಊರ-ಪರವೂರ ಶ್ರಾವಕ-ಶ್ರಾವಕಿಯರು ವೀಕ್ಷಿಸಿ ಪೂನ್ಯ ಸಂಚಯ ಮಾಡಿಕೊಂಡರು. ಉತ್ಸಾಹದಿಂದ ಭಾಗವಹಿಸಿದರು. ಬೀಡಿನಿಂದ (ಹೆಗ್ಗಡೆಯವರ ನಿವಾಸ) ಸಭಾ ಭವನಕ್ಕೆ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ತೀರ್ಥಂಕರರ ಭವ್ಯ ಮೆರವಣಿಗೆ ಬಳಿಕ ಮಹೋತ್ಸವ ಸಭಾ ಭವನದಲ್ಲಿ ಸಮವಸರಣ ಪೂಜೆ ನಡೆಯಿತು. ಪಂಚ ನಮಸ್ಕಾರ ಮಂತ್ರ ಪಠಣ, ಅಷ್ಟವಿಧಾರ್ಚನೆ ಪೂಜೆ, ಸಂಗೀತ ಪೂಜೆ ಇತ್ಯಾದಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸಾಕ್ಷಾತ್ ಸಮವಸರಣವನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದಂತಾಯಿತು. ಧರ್ಮಾಧಿಕಾರಿ […]

ದೆಹಲಿಯಲ್ಲಿ ಡೀಸೆಲ್ ಕಾರು ಬ್ಯಾನ್

Friday, December 11th, 2015
diesel car

ನವದೆಹಲಿ: ದೆಹಲಿಯಲ್ಲಿ ಹೆಚ್ಚಾದ ವಾಯು ಮಾಲಿನ್ಯ ಹಿನ್ನೆಲೆಯಲ್ಲಿ ಇನ್ಮುಂದೆ ಹೊಸ ಡೀಸೆಲ್ ಕಾರುಗಳ ನೋಂದಣಿ ಬೇಡ. ಅಲ್ಲದೇ 10 ವರ್ಷಗಳ ಹಳೆಯ ಡೀಸೆಲ್ ಕಾರುಗಳನ್ನು ನಿಷೇಧಿಸುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ಪೀಠ ಶುಕ್ರವಾರ ಆದೇಶ ಹೊರಡಿಸುವ ಮೂಲಕ ಸೂಚನೆ ನೀಡಿದೆ. ಸರ್ಕಾರ ಕೂಡ ತಮ್ಮ ಇಲಾಖೆಗಳಿಗಾಗಿ ಡೀಸೆಲ್ ವಾಹನಗಳನ್ನು ಖರೀದಿಸಬಾರದು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನಿರ್ದೇಶನ ನೀಡಿದೆ. ಹೊಸ ಡೀಸೆಲ್ ವಾಹನಗಳನ್ನು ಖರೀದಿಸಬಾರದು. ಹೊಸ ಡೀಸೆಲ್ ಕಾರುಗಳ ನೋಂದಣಿಯೂ […]

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ: ಸಾಹಿತ್ಯ ಸಮ್ಮೇಳನದ ಉದ್ಘಾಟನೆ:

Thursday, December 10th, 2015
Darmasthala Deepotsava

ಧರ್ಮಸ್ಥಳ : ಲಕ್ಷದೀಪೋತ್ಸವ ಸಂದರ್ಭದಲ್ಲಿ ಗುರುವಾರ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ ಎಂಬತ್ತಮೂರನೆ ಅಧಿವೇಶನವನ್ನು ಖ್ಯಾತ ಸಂಶೋಧಕ ಡಾ. ಷ. ಶೆಟ್ಟರ್ ಉದ್ಘಾಟಿಸಿ ಮಾತನಾಡಿದರು. ನಮ್ಮತನವನ್ನು ಧರ್ಮ ಮತ್ತು ಸಾಹಿತ್ಯದ ಮೇಲೆ ಹೇರುವುದು ಸರಿಯಲ್ಲ. ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ನಾವು ವಿಶಾಲ ಮನೋಭಾವವನ್ನು ಕಳೆದುಕೊಂಡು ಕುಬ್ಜರಾಗುತ್ತಿದ್ದೇವೆ. ಇಂದಿನ ವಿಚಿತ್ರವಾದ ಅಸಹಿಷ್ಣುತೆ ಎಲ್ಲಾ ಸಮಾಜದಲ್ಲಿಯೂ ಇದೆ. ಆದರೆ, ಅಲ್ಲಿ ಸಾಹಿತಿಗಳಿಲ್ಲ, ವಿಚಾರವಂತರಿದ್ದಾರೆ. ಧರ್ಮ ಗುರುಗಳಿಲ್ಲ, ರಾಜಕೀಯ ವ್ಯಕ್ತಿಗಳಿದ್ದಾರೆ. ಮುಕ್ತ ಮನಸ್ಸಿನಿಂದ ಇಂದು ಸಂಶೋಧನೆ ಮಾಡುವುದೇ ಅಪರಾಧವಾಗಿದೆ ಎಂದು […]