ರಸ್ತೆಯಲ್ಲಿ ಇರಿಸಿದ್ದ ಬ್ಯಾರಿಕೇಡ್ ಗೆ ಸ್ಕೂಟಿ ಢಿಕ್ಕಿ ಹೊಡೆದು ಸವಾರ ಮೃತ್ಯು

Monday, April 22nd, 2019
shakith

ಪಡುಬಿದ್ರಿ :  ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇರಿಸಿದ್ದ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಮೃತಪಟ್ಟ ಘಟನೆ ಎ.20ರಂದು ನಸುಕಿನ ವೇಳೆ ಎರಡು ಗಂಟೆ ಸುಮಾರಿಗೆ ನಡೆದಿದೆ. ಮೃತರನ್ನು ಸ್ಕೂಟಿ ಸವಾರ ಕಾಪು ಕೈಪುಂಜಾಲಿನ ಶಕೀತ್(24) ಎಂದು ಗುರುತಿಸಲಾಗಿದೆ. ಹಿಂಬದಿ ಸವಾರ ಹರ್ಷಿತ್ ಎಂಬವರು ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹೆಜಮಾಡಿ ಕೋಡಿಯಲ್ಲಿ ಮದರಂಗಿ ಕಾರ್ಯಕ್ರಮಕ್ಕೆ ಲೈಟಿಂಗ್ ಹಾಗೂ ಸೌಂಡ್ ಸಿಸ್ಟಮ್ ಅಳವಡಿಸಲು ಬಂದಿದ್ದ ಶಕೀತ್ ತನ್ನ ಸ್ಕೂಟಿಯಲ್ಲಿ ಹರ್ಷಿತ್‌ರನ್ನು ಹಿಂಬದಿ ಸವಾರರಾಗಿ ಕರೆದು […]

ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಆಗಿ – ಡಾ. ಎಸ್. ಎಂ.ಶಿವಪ್ರಕಾಶ್ ನೇಮಕ

Monday, April 22nd, 2019
Dean- M shivaprakash

ಮಂಗಳೂರು : ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಇದರ ಅಂಗಸಂಸ್ಥೆಯಾದ ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ನೂತನ ಡೀನ್ ಆಗಿ ಪ್ರಾದ್ಯಾಪಕ ಡಾ. ಎಸ್. ಎಂ. ಶಿವಪ್ರಕಾಶ್ ಅವರು ನೇಮಕ ಗೊಂಡಿದ್ದಾರೆ. ಮೂರು ದಶಕಗಳ ಪ್ರಾದ್ಯಾಪಕ ವೃತ್ತಿಯ ಅನುಭವ ಹೊಂದಿರುವ ಇವರು ಈ ಮೊದಲು ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾನಿಲಯ, ಬೀದರ ಇಲ್ಲಿನ ವಿಸ್ತರಣಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ನಾರ್ವೆಯ ಬರ್ಗೆನ್ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷದ ಪಿಜಿ ಡಿಪ್ಲೊಮಾ, ಇಂಗ್ಲೆಂಡಿನ ಸ್ಟರ್ಲಿಂಗ್ ವಿಶ್ವವಿದ್ಯಾಲಯದಲ್ಲಿ […]

ಮಾನಸಿಕ ಸ್ವಾಸ್ಥ್ಯದಿಂದ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ : ನ್ಯಾ. ಸತ್ಯನಾರಾಯಣಾಚಾರ್ಯ

Monday, April 22nd, 2019
jail

ಮಂಗಳೂರು : ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯದಿಂದ ಇಡೀ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ಈ ಹಿನ್ನೆಲೆಯಿಂದ ಜೈಲು ನಿವಾಸಿಗರ ದೈಹಿಕ ಹಾಗೂ ಮಾನಿಸಿಕ ಆರೋಗ್ಯ ತಪಾಸಣೆಯ ಕ್ರಮ ಶ್ಲಾಘನೀಯ ಎಂದು ದ. ಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ಹೇಳಿದರು. ಭಾರತೀಯ ರೆಡ್‍ಕ್ರಾಸ್‍ನ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಜಿಲ್ಲಾ ಕಾರಾಗೃಹ, ಜಿಲ್ಲಾ ಸರಕಾರಿ ವೆನ್‍ಲಾಕ್ ಆಸ್ಪತ್ರೆ, ದ. ಕ. ಜಿಲ್ಲಾ ಆರೋಗ್ಯ ಇಲಾಖೆ, ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ದೇರಳಕಟ್ಟೆ […]

ಅಂಬೇಡ್ಕರ್ ಸಮಾನತೆಯ ಪ್ರಜ್ಞೆ ಭಾರತಕ್ಕೆ ಬಲಿಷ್ಠ ಸಂವಿಧಾನವನ್ನು ನೀಡುವಂತೆ ಪ್ರೇರೆಪಿಸಿತು

Monday, April 22nd, 2019
Alvas

ಮೂಡಬಿದಿರೆ: ಅಂಬೇಡ್ಕರ್ ಎಂಬ ಮಹಾನ್ ಚೇತನ ಸಂಘರ್ಷದ ಅನುಭವದಿಂದ ಹುಟ್ಟಿಕೊಂಡ ವ್ಯಕಿತ್ವ. ಅವರ ಮನಸ್ಸಿನಲ್ಲಿ ಅಂದು ಮೂಡಿದ ಸಮಾನತೆಯ ಪ್ರಜ್ಞೆ ,ಭವ್ಯ ಭಾರತಕ್ಕೆ ಬಲಿಷ್ಠ ಸಂವಿಧಾನವನ್ನು ನೀಡುವಂತೆ ಪ್ರೇರೆಪಿಸಿತು ಎಂದು ಆಳ್ವಾಸ್ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಪಕ ಡಾ ಯೋಗೀಶ್ ಕೈರೋಡಿ ನುಡಿದರು. ಅವರು ಆಳ್ವಾಸ್ ಪದವಿ ಕಾಲೇಜಿನ ಐಕ್ಯೂಎಸಿವತಿಯಿಂದ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿ ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ನಮ್ಮ ಇಂದಿನ ದಿನ ನಿತ್ಯದ ಜೀವನ ನಮ್ಮ ಸಂವಿಧಾನದ ತಳಹದಿಯ ಮೇಲೆ ನಿಂತಿದೆ. ಅಂದು ಅಂಬೇಡ್ಕರ್ […]

ದ.ಕ. ಲೋಕಸಭಾ ಚುನಾವಣೆಯಲ್ಲಿ ಶೇ.77.25 ಮತದಾನ

Friday, April 19th, 2019
Control-room

ಮಂಗಳೂರು  : ದ.ಕ. ಲೋಕಸಭಾ ಚುನಾವಣೆಯಲ್ಲಿ ಶೇ.77.25 ಮತದಾನವಾಗಿದೆ. ದ.ಕ.ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಸಂಜೆ 6 ಗಂಟೆಗೆ ಮತದಾನ ಪ್ರಕ್ರಿಯೆ ಮುಗಿದ ಮೇಲೆ ಬೆಳ್ತಂಗಡಿಯಲ್ಲಿ ಶೇ.80.92, ಮೂಡಬಿದ್ರೆ ಶೇ.73.17, ಬಂಟ್ವಾಳ ಶೇ. 80.31, ಪುತ್ತೂರು ಶೇ.80.71 ಸುಳ್ಯ ಶೇ.84.10, ಮಂಗಳೂರು ಉತ್ತರ ( ಸುರತ್ಕಲ್) ಶೇ.74.83, ಮಂಗಳೂರು ದಕ್ಷಿಣ ಶೇ. 69.15 ಹಾಗೂ ಮಂಗಳೂರು (ಉಳ್ಳಾಲ) ಶೇ.75.62 ಮತದಾನವಾಗಿದೆ. ಇದರಲ್ಲಿ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಮತ್ತು ಸುಳ್ಯದಲ್ಲಿ ಅತೀ ಹೆಚ್ಚು ಮತದಾನವಾಗಿದೆ. 2014ರ […]

ಜಿಲ್ಲೆಯ ಸಾಮರಸ್ಯದ ಪರಂಪರೆಯ ಉಳಿವಿಗೆ ಮತದಾರರು ಬೆಂಬಲಿಸುತ್ತಾರೆ : ಮಿಥುನ್ ರೈ

Thursday, April 18th, 2019
Mithun-Rai

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಬಲ್ಮಠ ಮಹಿಳಾ ಕಾಲೇಜಿನಲ್ಲಿ ಮತ ಚಲಾಯಿಸಿದರು. ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಸಾಮರಸ್ಯದ ಪರಂಪರೆಯ ಉಳಿವಿಗೆ ಮತದಾರರು ಬೆಂಬಲಿಸುತ್ತಾರೆಂಬ  ಸಂಪೂರ್ಣ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಕೇಸರಿ ಎಂಬುದು ತ್ಯಾಗ, ಸೌಹಾರ್ದತೆಯ ಸಂಕೇತ. ದುರದೃಷ್ಟವೆಂದರೆ ಕೆಲ ದಿನಗಳಿಂದ ಕೇಸರಿ ಅಂದರೆ ಭೀತಿಯನ್ನು ಹುಟ್ಟಿಸುವ ಕೆಲಸ ನಡೆಯುತ್ತಿದೆ. ಈ ತಪ್ಪು ಅಭಿಪ್ರಾಯ ನಿವಾರಣೆಗೆ ಕೇಸರಿ ಶಾಲು ನಿರಂತರ ಬಳಸುತ್ತಿದ್ದೇನೆ ಎಂದು ಸಮರ್ಥನೆ ನೀಡಿದ್ದಾರೆ.  

ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮತದಾನ

Thursday, April 18th, 2019
Nalin Kumar

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ  ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು ಬೆಳಗ್ಗೆ 11ರ ವೇಳೆಗೆ 32.5 % ಮತದಾನವಾಗಿದೆ . ಉರ್ವ ಲೇಡಿಹಿಲ್ ಸಮೀಪದ  ಸಂತ ಅಲೋಶಿಯಸ್ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮತ ಚಲಾಯಿಸಿದ್ದಾರೆ. ಮತದಾರರು ಮತಗಟ್ಟೆಯಲ್ಲಿ ಬೆಳಿಗ್ಗೆಯೇ ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದು, ಚುರುಕಿನಿಂದ ಮತದಾನ ನಡೆಯುತ್ತಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ […]

ಬಂಟ್ವಾಳ : ಬೆಳಗ್ಗೆ 6.30ರ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಬಿ.ಜನಾರ್ದನ ಪೂಜಾರಿ

Thursday, April 18th, 2019
Poojary

ಬಂಟ್ವಾಳ: ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರು ಎಸ್.ವಿ.ಎಸ್.ದೇವಳ ಶಾಲೆಯಲ್ಲಿ ಇಂದು ಬೆಳಿಗ್ಗೆ ಮತ ಚಲಾಯಿಸಿದರು. ಅವರು ಪತ್ನಿ ಮಾಲತಿ ಪೂಜಾರಿ ಜೊತೆ ಸುಮಾರು 6.30ರ ವೇಳೆ ಆಗಮಸಿ ಸರತಿ ಸಾಲಿನಲ್ಲಿ ನಿಂತು ಪ್ರಥಮವಾಗಿ ಹಕ್ಕು ಚಲಾಯಿಸಿದರು. ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವಂತೆ ಮನವಿ ಮಾಡಿದರು. ಕಳೆದ ಹಲವು ವರ್ಷಗಳಿಂದ ಪೂಜಾರಿ ಅವರು ಸರತಿ ಸಾಲಿನಲ್ಲಿ ನಿಂತು ಪ್ರಥಮ‌ ಮತಚಲಾಯಿಸುವುದನ್ನು ರೂಡಿ ಮಾಡಿಕೊಂಡಿದ್ದಾರೆ. ಇಂದು ಕೂಡಾ ಪ್ರಥಮ ವಾಗಿ ಮತ ಚಲಾಯಿಸಿದರು. .

ಬಂಟ್ವಾಳ ಇಂದು ಹಸೆಮಣೆ ಏರುವ ಹೊಸ ಜೋಡಿಗಳಿಂದ ಮತದಾನ

Thursday, April 18th, 2019
Mundadi

ಬಂಟ್ವಾಳ  : ಬಂಟ್ವಾಳದಲ್ಲಿ ಬೆಳಿಗ್ಗೆ 11 ರ ವೇಳೆಗೆ 33.89 ಶೇಕಡಾ ಮತದಾನವಾಗಿದ್ದು, ಮತದಾರರು ಉತ್ಸುಕತೆಯಿಂದ ಮತದಾನ ಮಾಡುತ್ತಿದ್ದಾರೆ.  ಇಂದು ಮದುವೆಯಾಗುವ ನವಜೋಡಿ ಬೆಳಗ್ಗೆ ಓಟ್ ಮಾಡಿದ್ದಾರೆ. ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ಸುಭಾಸ್ ನಗರದ ಬೇಂಕೆ ನಿವಾಸಿ ಅಶೋಕ್ ಪುಷ್ಪಲತಾ ಅವರ ಪುತ್ರಿ ಪ್ರತಿಜ್ಞಾ ಅವರು ಬೇಂಕ್ಯೆ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಚಲಾಯಿಸಿದ್ದಾರೆ. ಅದಲ್ಲದೆ, ಮದುಮಗ ಸುಮಿತ್ ಪೂಜಾರಿ ಅವರು ತನ್ನ ಬಾವಿ ಪತ್ನಿ ಪ್ರತಿಜ್ಞಾ ಅವರ ಜೊತೆ ಪೊಳಲಿ ಸರಕಾರಿ ಶಾಲೆಯ ಮತಗಟ್ಟೆಗೆ ತೆರಳಿ ಮತಚಲಾಯಿಸಿದರು. […]

ಮುಕ್ತ ಮತ್ತು ನ್ಯಾಯಯುತ ಚುನಾವಣಾ ಪ್ರಕ್ರಿಯೆಗೆ ದಕ್ಷಿಣ ಕನ್ನಡ ಜಿಲ್ಲೆ ಸಜ್ಜು

Wednesday, April 17th, 2019
election duty

ಮಂಗಳೂರು : ಮುಕ್ತ ಮತ್ತು ನ್ಯಾಯಯುತ ಚುನಾವಣಾ ಪ್ರಕ್ರಿಯೆಗೆ ಜಿಲ್ಲೆ ಸಜ್ಜಾಗಿದ್ದು ಒಟ್ಟು 8920 ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂದು ನಡೆದ ಮಸ್ಟರಿಂಗ್‍ನಲ್ಲಿ ಎಲ್ಲ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಯಾ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರದಲ್ಲಿ ಚುನಾವಣಾ ಸಾಮಗ್ರಿಗಳಾದ ಇವಿಎಂ, ವಿವಿಪ್ಯಾಟ್‍ಗಳ ಜೊತೆಗೆ ನಮೂನೆಗಳನ್ನು ಹಾಗೂ ಲಕೋಟೆಗಳೊಂದಿಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಬಸ್‍ಗಳೊಂದಿಗೆ ಮತಗಟ್ಟೆಗಳಿಗೆ ಸಿಬ್ಬಂದಿಗಳು ತೆರಳಿದ್ದಾರೆ. ಚುನಾವಣಾ ಕರ್ತವ್ಯಕ್ಕಾಗಿ 668 ಬಸ್‍ಗಳಲ್ಲಿ ಸಿಬ್ಬಂದಿಗಳು ತಮಗೆ ನಿಗದಿಪಡಿಸಿದ ಸ್ಥಳಗಳಿಗೆ ತೆರಳಿ ಕರ್ತವ್ಯ […]