Blog Archive

ಕಾಂಗ್ರೆಸ್ ಕಛೇರಿ ಸಹಾಯಕಿ ಶ್ರೀಮತಿ ರಾಜೀವಿಯವರ ನಿಧನಕ್ಕೆ ಶ್ರೀ ಬಿ.ರಮಾನಾಥ ರೈ ಸಂತಾಪ

Saturday, October 27th, 2018
ramanth-rai

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕಳೆದ ೩೫ ವರ್ಷಗಳಿಂದ ಕಛೇರಿ ಸಹಾಯಕಿಯಾಗಿ ಕಾರ್ಯನಿರ್ವಹಿಸಿದ ಶ್ರೀಮತಿ ರಾಜೀವಿಯವರು ಸ್ವಗೃಹದಲ್ಲಿ ನಿಧನ ಹೊಂದಿದರು. ಇವರು ಇತ್ತೀಚಿನ ದಿನಗಳಲ್ಲಿ ತೀವ್ರ ಅನಾರೋಗ್ಯದಲ್ಲಿ ಬಳಲುತ್ತಿದ್ದರು. ಇವರಿಗೆ 57 ವರ್ಷ ಆಗಿರುತ್ತದೆ. ಇವರು ೩ ಗಂಡು ಹಾಗೂ 2 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಮಾಜಿ ಸಚಿವರಾದ ಶ್ರೀ ಬಿ.ರಮಾನಾಥ ರೈಯವರು ಸಂತಾಪ ಸೂಚಿಸಿದರು. ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಮ.ನ.ಪಾ ಮುಖ್ಯ ಸಚೇತಕ […]

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್​​ಗೆ ಶರಣಾಗಿದೆ: ಯಡಿಯೂರಪ್ಪ

Friday, October 19th, 2018
yedyurappa

ಮಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಿರುವುದು ಮೈತ್ರಿಯಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ಗೆ ಶರಣಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಶಿವಮೊಗ್ಗ, ಬಳ್ಳಾರಿಯಲ್ಲಿ ಬಿಜೆಪಿಗೆ ಯಾವುದೇ ಪ್ರಾಬ್ಲಂ ಇಲ್ಲ. ರಾಮನಗರ ಮತ್ತು ಮಂಡ್ಯದಲ್ಲಿ ಫೈಟ್ ಇದೆ ಎಂದು ಹೇಳಿದರು. ಸಿದ್ದರಾಮಯ್ಯ ಅವರ ಚುನಾವಣಾ ರಾಜಕೀಯ ನಿವೃತ್ತಿಯು ಅವರ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಬಿಎಸ್ವೈ ತಿಳಿಸಿದರು.

ಕ್ರಿಕೆಟರ್​ ಪತ್ನಿ ಹಸಿನ್ ಜಹಾನ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ..!

Wednesday, October 17th, 2018
mohammed-shami

ಮುಂಬೈ: ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ಇಂದು ಮುಂಬೈ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಸಂಜಯ್ ನಿರುಪಮ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಮೊಹಮ್ಮದ್ ಶಮಿ ವಿರುದ್ಧ ಸರಣಿ ಆರೋಪ ಮಾಡುತ್ತಲೇ ಸುದ್ದಿಕೇಂದ್ರಕ್ಕೆ ಬಂದಿದ್ದ ಹಸಿನ್ ಜಹಾನ್ ಅವರ ಏಕಾಏಕಿ ರಾಜಕೀಯ ಎಂಟ್ರಿ ಕುತೂಹಲಕ್ಕೆ ಕಾರಣವಾಗಿದೆ. ಶಮಿ ತನಗೆ ವರದಕ್ಷಿಣೆ ಕಿರುಕುಳ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಜೊತೆಗೆ ಅಕ್ರಮ ಸಂಬಂಧವನ್ನೂ ಹೊಂದಿದ್ದಾರೆ ಎಂದು ಪತಿ ಶಮಿ ಮೇಲೆ ಹಸಿನ್ ಆರೋಪ ಮಾಡಿದ್ದಳು. […]

ಉಪ ಚುನಾವಣೆ ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್​​ನಿಂದ ಮ್ಯಾರಥಾನ್​ ಸಭೆ

Tuesday, October 9th, 2018
congress

ಬೆಂಗಳೂರು: ರಾಜ್ಯದ ಐದು ಉಪ ಚುನಾವಣೆಗಳಿಗೆ ಅಭ್ಯರ್ಥಿ ಆಯ್ಕೆ ಸಂಬಂಧ ಕಾಂಗ್ರೆಸ್ ಪಕ್ಷ ಇಂದು ಮ್ಯಾರಥಾನ್ ಸಭೆ ನಡೆಸಲಿದೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಈ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವಿನ ಮೈತ್ರಿ, ಎಲ್ಲೆಲ್ಲಿ ಕೈ ಅಭ್ಯರ್ಥಿಗಳನ್ನು […]

ಉಡುಪಿ SPಅನ್ನು ರಾಜಕೀಯ ಕಾರಣಕ್ಕೆ ವರ್ಗಾವಣೆ ಮಾಡಿದರೆ ಸಹಿಸುವುದಿಲ್ಲ: ಕೋಟ ಶ್ರೀನಿವಾಸ ಪೂಜಾರಿ

Wednesday, October 3rd, 2018
srinivas-poojary

ಉಡುಪಿ: ಸುಸೂತ್ರ ಆಡಳಿತಕ್ಕೆ ನಮ್ಮ ಸಹಕಾರವಿದೆ. ಆದರೆ ಉಡುಪಿ ಜಿಲ್ಲಾ ಎಸ್ಪಿಯವರನ್ನು ರಾಜಕೀಯ ಕಾರಣಕ್ಕೆ ವರ್ಗಾವಣೆ ಮಾಡಿದರೆ ಅಹಿಸೋದಿಲ್ಲ..ಇದು ಎಚ್ಚರಿಕೆ ಎಂದು ಸರಕಾರಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದ ಟ್ವೀಟ್ ಇದು. ಕೆಲ ದಿನಗಳ ಹಿಂದೆ ನಡೆದ ಭಾರತ್ ಬಂದ್ ವೇಳೆ ಉಡುಪಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಜೊತೆ ವಾಗ್ವಾದ ನಡೆದಿತ್ತು. ಆ ಬಳಿಕ ಪೊಲೀಸ್ ವರಿಷ್ಟಾಧಿಕಾರಿಗಳ ಕಛೆರಿ ಎದುರು ಇತ್ತಂಡದವರು ಜಮಾಯಿಸಿದ್ದರು. ಈ ವಾಗ್ವಾದ ವಿಕೋಪಕ್ಕೆ ತಿರುಗಿ […]

ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೇಯೇ ಇಲ್ಲ: ಟಿ.ಡಿ.ರಾಜೇಗೌಡ

Tuesday, September 18th, 2018
t-d-rajegouda

ಚಿಕ್ಕಮಗಳೂರು: ನನಗೆ ಕೆಲವು ಬಿಜೆಪಿ ಮುಖಂಡರು ಪಕ್ಷಕ್ಕೆ ಸೇರುವಂತೆ ಕೇಳಿಕೊಂಡಿದ್ದರು. ಆದರೆ ಅದನ್ನು ನಾನು ಈಗಾಗಲೇ ತಿರಸ್ಕಾರ ಮಾಡಿದ್ದೇನೆ ಎಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಹೇಳಿದ್ದಾರೆ. ರಾಜ್ಯದಲ್ಲಿ ಅಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೇಯೇ ಇಲ್ಲ. ನಾನು ತತ್ವ ಸಿದ್ಧಾಂತಗಳ ಮೇಲೆ ರಾಜಕೀಯಕ್ಕೆ ಬಂದವನು. ಕೆಲವು ಮುಖಂಡರು ಬಿಜೆಪಿಗೆ ಬರುವಂತೆ ಭಾರಿ ಮೊತ್ತದ ಹಣ ಹಾಗೂ ಸಚಿವ ಸ್ಥಾನ ನೀಡೋದಾಗಿ ಆಫರ್ ನೀಡಿದ್ದರು. […]

ಕಾಂಗ್ರೆಸ್‌ ಯುವ ನಾಯಕ ಮಿಥುನ್ ರೈ ನಿಶ್ಚಿತಾರ್ಥ

Tuesday, September 18th, 2018
mithun-rai

ಮಂಗಳೂರು: ಯುವ ಕಾಂಗ್ರೆಸ್ ಕಣ್ಮಣಿ ಮಿಥುನ್ ರೈ ದಾಂಪತ್ಯ ಜೀವನಕ್ಕೆ ಶೀಘ್ರದಲ್ಲಿಯೇ ಕಾಲಿರಿಸಲಿದ್ದಾರೆ. ಮಂಗಳೂರಿನ ಶರಣ್ಯ ಶೆಟ್ಟಿ ಜತೆ ಭಾನುವಾರ ಮನೆಯಲ್ಲಿ ಹಿರಿಯರ ಸಮ್ಮುಖದಲ್ಲಿ ತಾಂಬೂಲ ವಿನಿಮಯ ನಡೆಯಿತು. ಕೇವಲ ಕುಟುಂಬದ 50 ಮಂದಿ ಮಾತ್ರ ಶುಭ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಶರಣ್ಯ ಶೆಟ್ಟಿ ಎಂಕಾಂ ಪದವೀಧರೆ ಮಧ್ಯಮ ಕುಟುಂಬದ ಹೆಣ್ಣುಮಗಳು. ಮಿಥುನ್ ರೈಗೆ ಅನೇಕ ಅಗರ್ಭ ಶ್ರೀಮಂತ ಮನೆತನದ ಸಂಬಂಧಗಳು ಬಂದಿದ್ದವು. ಆದರೆ ತನಗೆ ಒಪ್ಪುವ ಸುಶಿಕ್ಷಿತ ಹುಡುಗಿಯನ್ನೇ ವರಿಸಲು ನಿರ್ಧರಿಸಿದ್ದಾರೆ. ಇದು ಸಂಪೂರ್ಣ ಅರೇಂಜ್ ಮ್ಯಾರೇಜ್. […]

ಬಿಜೆಪಿ-ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಬಾರದಾ: ಸಿ.ಟಿ. ರವಿ

Tuesday, September 11th, 2018
c.t-ravi

ಬೆಂಗಳೂರು: ಮಾತುಕತೆ ಭಾರತ ಮತ್ತು ಪಾಕಿಸ್ತಾನ ಮಧ್ಯೆಯೂ ನಡೆಯುತ್ತದೆ. ಅಂತಹದ್ದರಲ್ಲಿ ಬಿಜೆಪಿ-ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಬಾರದಾ?‌ ಎಂದು ಶಾಸಕ ಸಿ.ಟಿ. ರವಿ ಪ್ರಶ್ನಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಶಾಸಕ ಶ್ರೀರಾಮುಲು ಅವರು ಜಾರಕಿಹೊಳಿ ಸಹೋದರರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನುವ ಸುದ್ದಿಗೆ ಪ್ರತಿಕ್ರಿಯಿಯಿಸಿದರು. ಸರ್ಕಾರವನ್ನು ನಾವು ಬೀಳಿಸುವ ಪ್ರಯತ್ನ ಮಾಡುವುದಿಲ್ಲ. ಅವಕಾಶ ಬಂದಾಗ ಕಣ್ಮುಚ್ಚಿ ಕುಳಿತುಕೊಳ್ಳುವ ಮೂರ್ಖರು ನಾವಲ್ಲ. ಸರ್ಕಾರವೇ ತನ್ನ ಆಂತರಿಕ ಕಿತ್ತಾಟದಿಂದ ಪತನವಾಗುತ್ತದೆ ಎಂದರು. ಬಿಜೆಪಿ ಅಧಿಕಾರಕ್ಕೆ […]

ರಫೇಲ್ ಡೀಲ್​ನಲ್ಲಿ ಅವ್ಯವಹಾರ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಿಂದ ಪ್ರತಿಭಟನೆ

Tuesday, September 11th, 2018
congress

ಮಂಗಳೂರು: ರಫೇಲ್ ಡೀಲ್ನಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿತು. ಮಂಗಳೂರಿನ ಜ್ಯೋತಿ ಸರ್ಕಲ್ನಿಂದ ದ.ಕ. ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ರಮನಾಥ ರೈ, ರಫೇಲ್ ಡೀಲ್ನ ಹಗರಣದ ಮೂಲಕ ಬಿಜೆಪಿ ತನ್ನ ಖಜಾನೆಯನ್ನು ತುಂಬಿಸಿಕೊಂಡಿದೆ ಎಂದು ಆರೋಪಿಸಿದರು. ಅಲ್ಲದೆ ಬೋಫೋರ್ಸ್ ನಂತೆ ರಫೇಲ್ ಡೀಲ್ ಹಗರಣದ ಬಗ್ಗೆಯೂ ತನಿಖೆಯಾಗಲಿ ಎಂದು […]

ಭಾರತ್ ಬಂದ್ ಕರೆದು ದೇಶಕ್ಕೆ ನಷ್ಟ ಮಾಡುವುದೇ ಮೊದಲು ಅಪರಾಧ: ಜನಾರ್ಧನ ಪೂಜಾರಿ

Tuesday, September 11th, 2018
janardhan-poojary

ಮಂಗಳೂರು: ಮೈತ್ರಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಭಾರತ್ ಬಂದ್ ಕರೆದು ದೇಶಕ್ಕೆ ನಷ್ಟ ಮಾಡುವುದೇ ಮೊದಲು ಅಪರಾಧ, ಅದರಲ್ಲೂ ಆಡಳಿತ ಪಕ್ಷದವರೇ ಬಂದ್ ಗೆ ಕರೆನೀಡುವುದೆಂದರೆ ಏನರ್ಥ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಲೋಕಸಭಾ ಸದಸ್ಯ ಜನಾರ್ಧನ ಪೂಜಾರಿ, ಕಾಂಗ್ರೆಸ್ ಪಕ್ಷವನ್ನು ಬೆಂಡೆತ್ತಿದ್ದಾರೆ.