Blog Archive

ಪ್ರಖ್ಯಾತ ಯಕ್ಷ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟರಿಗೆ ಗಾಯ

Wednesday, February 21st, 2018
govinda-bhat

ಬೆಳ್ತಂಗಡಿ: ಧರ್ಮಸ್ಥಳ ಮೇಳದ ಖ್ಯಾತ ಯಕ್ಷಗಾನ ಕಲಾವಿದ, ಈಚೆಗಷ್ಟೇ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸೂರಿಕುಮೇರು ಕೆ. ಗೋವಿಂದ ಭಟ್‌ ಅವರಿಗೆ ತೀರ್ಥಹಳ್ಳಿ ಸಮೀಪ ಅಪಘಾತವಾಗಿದೆ. ಅವರು ಯಕ್ಷಗಾನ ಪ್ರದರ್ಶನ ಮುಗಿಸಿ ಬಂಧ‌ುವಿನ ಜತೆ ಕಾರಿನಲ್ಲಿ ಹೋಗುತ್ತಿದ್ದಾಗ ಕಾರು ದರೆಗೆ ಢಿಕ್ಕಿಯಾಗಿ ಅಪಘಾತವಾಗಿದ್ದು ಸ್ವಲ್ಪ ಪ್ರಮಾಣದ ಗಾಯಗಳಾದ ಗೋವಿಂದ ಭಟ್‌ ಅವರಿಗೆ ಮೂರು ವಾರದ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.

5 ಬಾರಿಯ ಶಾಸಕ ವಸಂತ ಬಂಗೇರ ಸ್ಪರ್ಧೆಯ ನಿರ್ಧಾರವೇ ಹೈಲೈಟ್

Monday, February 5th, 2018
belthangadi

ಮಂಗಳೂರು: ಪಶ್ಚಿಮ ಘಟ್ಟದ ತಪ್ಪಲು, ಹಸಿರು ಸಿರಿಯಿಂದ ಕಂಗೊಳಿಸುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರುತ್ತದೆ. ಪ್ರಸ್ತುತ ಈ ಕ್ಷೇತ್ರವನ್ನು ಕಾಂಗ್ರೆಸ್ ನ ವಸಂತ ಬಂಗೇರ ಶಾಸಕರಾಗಿದ್ದಾರೆ. 5 ಬಾರಿ ಬೆಳ್ತಂಗಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವಸಂತ ಬಂಗೇರರು ಕಳೆದ 2 ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿದ್ದಾರೆ. 2013 ನೇ ಸಾಲಿನ ಚುನಾವಣೆಯಲ್ಲಿ ವಸಂತ ಬಂಗೇರರು ಎದುರಾಳಿ ಬಿಜೆಪಿಯ ರಂಜನ್ ಜಿ. ಗೌಡ ರನ್ನು 15741 ಮತಗಳ ಅಂತರದಿಂದ ಸೋಲಿಸಿದ್ದರು. ವಸಂತ ಬಂಗೇರ ಕಳೆದ ಬಾರಿ […]

ಪರಿಶಿಷ್ಟರ ಕುಂದುಕೊರತೆಗಳ ಅಹವಾಲು ಸ್ವೀಕಾರ

Thursday, February 1st, 2018
belthangady

ಬೆಳ್ತಂಗಡಿ : ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪ್ರಾದೇಶಿಕ ಕಚೇರಿ ಮಂಗಳೂರಿನ ಪೊಲೀಸ್‌ ಅಧೀಕ್ಷಕ ಸಿ.ಬಿ. ವೇದಮೂರ್ತಿ ಅವರು ಬುಧವಾರ ಬೆಳ್ತಂಗಡಿ ತಾಲೂಕು ಪ್ರವಾಸದಲ್ಲಿ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರ ಕುಂದುಕೊರತೆಗಳ ಅಹವಾಲು ಸ್ವೀಕಾರ ನಡೆಸಿದರು. ಕೊಯ್ಯೂರಿನ ಪಿಜಕ್ಕಳದ ಪಿಜಕ್ಕರೆ ಎಂಬ ಮಹಿಳೆ ಪಕ್ಕದ ಜಾಗದ ಚನನ ಗೌಡ ಅವರು ದೌರ್ಜನ್ಯ ನಡೆಸುತ್ತಿದ್ದಾರೆ, ಕೋವಿ ತೋರಿಸಿ ಬೆದರಿಕೆ ಹಾಕುತ್ತಿದ್ದಾರೆ, ಪೊಲೀಸರು ಬಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಎಸ್‌ಐ ಅವರಿಗೆ ಈ ಕುರಿತು ತನಿಖೆ […]

ನಾರಾವಿಯಲ್ಲಿ ಜರ್ಮನ್‌ ಮಾದರಿ ಬಸ್‌ ನಿಲ್ದಾಣ

Monday, January 22nd, 2018
belthangady

ಬೆಳ್ತಂಗಡಿ: ತಾಲೂಕಿನ ನಾರಾವಿಯಲ್ಲಿ ಜರ್ಮನ್‌ ಮಾದರಿಯ ಸರ್ವಸೌಲಭ್ಯಗಳುಳ್ಳ ಬಸ್‌ ನಿಲ್ದಾಣ ರವಿವಾರ ಲೋಕಾರ್ಪಣೆಯಾಗಿದ್ದು, ಇಂತಹ ಅತ್ಯಾಧುನಿಕ ಬಸ್‌ನಿಲ್ದಾಣ ಪ್ರಾಯಃ ರಾಜ್ಯದಲ್ಲಿಯೇ ಮೊತ್ತ ಮೊದಲನೆಯದು. ನಾರಾವಿಯ ರಾಮೆರೆಗುತ್ತು ಕುಟುಂಬದ ನಿರಂಜನ ಅಜ್ರಿ ಅವರು ತನ್ನ ತಂದೆ ಎನ್‌. ಮಂಜಪ್ಪ ಅತಿಕಾರಿ ಹಾಗೂ ತಾಯಿ ಬಿ. ಮಿತ್ರಾವತಿ ಅವರ ನೆನಪಿನಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ಈ ತಂಗುದಾಣವನ್ನು ನಿರ್ಮಿಸಿದ್ದಾರೆ. ವಿದೇಶಗಳಲ್ಲಿ ಕಾಣಸಿಗುವ ಬಸ್‌ ನಿಲ್ದಾಣಗಳಂತೆ ಎಲ್ಲ ಸೌಲಭ್ಯಗಳನ್ನು ಹೊಂದಿರುವುದು ಇದರ ವೈಶಿಷ್ಟ é. ಸಾಮಾನ್ಯವಾಗಿ ಬಸ್‌ ತಂಗುದಾಣ ಎಂದರೆ ಕಸದ […]

ಅತ್ತೆಗೆ ಅಮಾನವೀಯವಾಗಿ ಥಳಿಸಿದ ಯ್ವಕನಿಗೆ ಪೊಲೀಸ್ ಹುಡುಕಾಟ

Saturday, January 20th, 2018
hemanth

ಬೆಳ್ತಂಗಡಿ: ಕುಡಿದ ಮತ್ತಿನಲ್ಲಿ ತನ್ನ ಅತ್ತೆಗೆ ಯುವಕನೋರ್ವ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ. ಈತ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಪಕ್ಕದ ಮನೆಯವರು ಚಿತ್ರೀಕರಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವಕನ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬೆಳ್ತಂಗಡಿ ತಾಲೂಕಿನ ವೇಣೂರಿನ ಜಂತಿಗೋಳಿಸ ಸಮೀಪದ ನಿವಾಸಿ ಹೇಮಂತ್ (24) ಎಂಬಾತನೇ ಅಮಾನವೀಯವಾಗಿ ವರ್ತಿಸಿದ ಯುವಕ ಎನ್ನಲಾಗಿದೆ. ಇಟ್ಟಿಗೆ ಫ್ಯಾಕ್ಟರಿ ವಿಚಾರಕ್ಕೆ ಗಲಾಟೆ ಸಂಭವಿಸಿದೆ ಎನ್ನಲಾಗಿದೆ. ಇಟ್ಟಿಗೆ ಫ್ಯಾಕ್ಟರಿ ವಿರುದ್ಧ ಸಹಿ ಸಂಗ್ರಹಕ್ಕೆ ಅತ್ತೆ […]

ಕೆಎಸ್‌ಆರ್‌ಟಿಸಿ ಬಸ್ ಅಪಘಾತದಲ್ಲಿ ಬೆಳ್ತಂಗಡಿಯ ನಾಲ್ವರು ಮೃತ

Saturday, January 13th, 2018
Hasan Accident

ಬೆಳ್ತಂಗಡಿ : ಒಂದೇ ಕುಟುಂಬದ ಮೂವರು ಸೇರಿದಂತೆ ಬೆಳ್ತಂಗಡಿ ತಾಲೂಕಿನ ನಾಲ್ವರು ಹಾಸನ ಸಮೀಪ ಶಾಂತಿಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದ್ದ ಕೆಎಸ್‌ಆರ್‌ಟಿಸಿ ಐರಾವತ ಬಸ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶನಿವಾರ ಹಾಗೂ ರವಿವಾರ ದೇವಗಿರಿ ಸೈಂಟ್ ಜೂಡು ಚರ್ಚ್‌ನಲ್ಲಿ ನಡೆಯುವ ಸಾಂತ್‌ಮೇರಿ ವಾರ್ಷಿಕ ಹಬ್ಬದಲ್ಲಿ ಭಾಗವಹಿಸಲೆಂದು ಕೆಎಸ್‌ಆರ್‌ಟಿಸಿ ಐರಾವತ ಬಸ್ ನಲ್ಲಿ  ಹೊರಟಿದ್ದ ನೆರಿಯ ಗ್ರಾಮದ ಗಂಡಿಬಾಗಿಲು ಸಮೀಪದ ದೇವಗಿರಿಯ ಪುತ್ತೋಟ್ಟು ಪಡವಿಲ್ ಬೇಬಿ ದೇವಸ್ಯ ಎಂಬವರ ಪುತ್ರ ಬಿಜೋ ಜಾರ್ಜ್ (26), ವಿನು ತೋಮಸ್ ಎಂಬವರ ಪತ್ನಿ […]

ಬೀದಿನಾಯಿ ಚಿಕಿತ್ಸೆಗೆ ದಿಲ್ಲಿಯಿಂದ ಫೋನ್‌!

Thursday, January 11th, 2018
treatment

ಬೆಳ್ತಂಗಡಿ: ಹಳ್ಳಿ ಬೀದಿಯಲ್ಲಿ ಅನಾರೋಗ್ಯಕ್ಕೀಡಾಗಿ ಒದ್ದಾಡುತ್ತ ಬೀದಿನಾಯಿಯೊಂದರ ಚಿಕಿತ್ಸೆಗಾಗಿ ರಾಜಧಾನಿ ದಿಲ್ಲಿಯಿಂದ ಬಂದ ಫೋನ್‌ ಕರೆ ಬಂದು ಚಿಕಿತ್ಸೆ ನೀಡಿದ ಘಟನೆ ಕುತೂಹಲಕ್ಕೆ ಕಾರಣವಾಗಿದೆ. ಧರ್ಮಸ್ಥಳದ ವೈಶಾಲಿ ವಸತಿಗೃಹದ ಬಳಿ ಬುಧವಾರ ಅಪರಾಹ್ನ ಬೀದಿನಾಯಿಯೊಂದು ಅನಾರೋಗ್ಯ ದಿಂದ ಬಳಲಿ ನರಳುತ್ತಿತ್ತು. ಇದನ್ನು ಕಂಡ ಯಾತ್ರಿಕರೊಬ್ಬರು ದಿಲ್ಲಿಯ ಪ್ರಾಣಿದಯಾ ಸಂಘಕ್ಕೆ ವಾಟ್ಸ್‌ಆ್ಯಪ್‌ ಮೂಲಕ ಚಿತ್ರ ಸಹಿತ ಮಾಹಿತಿ ನೀಡಿದರು. ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮನೇಕಾ ಗಾಂಧಿ ಅವರು ಜಿಲ್ಲಾಡಳಿತವನ್ನು ಸಂಪರ್ಕಿಸಿ,ತತ್‌ಕ್ಷಣ ಸ್ಪಂದಿಸಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು. ನಾಯಿಯಿದ್ದ […]

ಪಿಲಿ ಚಾಮುಂಡಿ ಕಲ್ಲಿನ ಬೇಲಿ ತೆರವು; ಬೆಳ್ತಂಗಡಿಯಲ್ಲಿ ಆಕ್ರೋಶ

Wednesday, January 10th, 2018
hindu-parishat

ಬೆಳ್ತಂಗಡಿ: ಇಲ್ಲಿನ ಗುರುವಾಯನಕೆರೆಯಲ್ಲಿರುವ ಅಪಾರ ಭಕ್ತರ ನಂಬಿಕೆಯ ಸ್ಥಳವಾದ ಪಿಲಿ ಚಾಮುಂಡಿ ಕಲ್ಲಿನ ಬೇಲಿ ತೆರವು ಮಾಡಿರುವುದನ್ನು ಖಂಡಿಸಿ ಹಿಂದೂ ಪರ ಸಂಘಟನೆಯ ಸಾವಿರಾರು ಕಾರ್ಯಕರ್ತರು ಮಂಗಳವಾರ ಬೆಳ್ತಂಗಡಿಯಿಂದ ಗುರುವಾಯನಕರೆಯ ವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ‘ನಮ್ಮ ನಡಿಗೆ ಪಿಲಿ ಚಾಮುಂಡಿ ಕಲ್ಲಿನೆಡೆ’ ಎಂಬ ಹೆಸರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದ್ದು, ಮಹಿಳೆಯರೂ ಸೇರಿದಂತೆ ಹಿಂದೂ ಪರ ಸಂಘಟನೆಯ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ. ಡಿಸೆಂಬರ್‌ ತಿಂಗಳಿನಲ್ಲಿ ಇಲ್ಲಿ ನೇಮ ನಡೆದ ಬಳಿಕ ಕಲ್ಲಿಗೆ […]

ಕೋಮು ಸೌಹಾರ್ದ ಕಾಪಾಡಿ: ಡಾ. ವೀರೇಂದ್ರ ಹೆಗ್ಗಡೆ ಮನವಿ

Tuesday, January 9th, 2018
virendra-hegde

ಬೆಳ್ತಂಗಡಿ: ಕರಾವಳಿಯಲ್ಲಿ ಕೋಮು ಸೌಹಾರ್ದ, ಶಾಂತಿ ಕಾಪಾಡುವ ಅಗತ್ಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ ಜನತೆಯಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕರಾವಳಿಯಲ್ಲಿ ಕಳೆದ ಸ್ವಲ್ಪ ಸಮಯದಿಂದ ಅವಿರತವಾಗಿ ಅಶಾಂತಿಯ ವಾತಾವರಣ ಕಂಡುಬರುತ್ತಿದೆ. ಅನೇಕ ಸಾವು-ನೋವುಗಳು ಸಂಭವಿಸಿವೆ. ಎರಡೂ ಧರ್ಮಗಳ ವ್ಯಕ್ತಿಗಳು ಬಲಿಯಾಗುತ್ತಿದ್ದಾರೆ. ಘಟನಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಒಂದು ಧರ್ಮದ ವ್ಯಕ್ತಿಯ ಕೊಲೆಯಾದ ಬಳಿಕ ಪ್ರತೀಕಾರವೆಂಬಂತೆ ಇನ್ನೊಂದು ಧರ್ಮದ ವ್ಯಕ್ತಿಯ ಹತ್ಯೆ ನಡೆಯುವುದು ಕಂಡುಬರುತ್ತದೆ. ಕರಾವಳಿ ಭಾಗದ ಜನರು […]

ಜಾತಿ, ಧರ್ಮ ನೋಡಿ ಕೆಲಸ ಮಾಡಿಲ್ಲ

Monday, January 8th, 2018
belthangady

ಮಂಗಳೂರು: ‘ನಾಲ್ಕು ವರ್ಷ ಎಂಟು ತಿಂಗಳ ಅವಧಿಯಲ್ಲಿ ಜನರಿಗೆ ಕೊಟ್ಟ ಮಾತಿನಂತೆ ನಡೆದಿದ್ದೇನೆ. ಜಾತಿ, ಧರ್ಮ ನೋಡಿ ಯಾವ ಕೆಲಸವನ್ನೂ ಮಾಡಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಳ್ತಂಗಡಿ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ 76 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ‘ನಮ್ಮ ಸರ್ಕಾರ ಧರ್ಮ, ಜಾತಿ ನೋಡಿ ಯಾವ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂಬುದನ್ನು ತೋರಿಸಿ’ ಎಂದು ಸವಾಲು ಹಾಕಿದರು. ‘ಅನ್ನಭಾಗ್ಯ ಯೋಜನೆಯಡಿ ಎಲ್ಲ ಧರ್ಮ, ಜಾತಿಯ […]