ಬೆಳ್ತಂಗಡಿ ಮಸೀದಿಯಲ್ಲಿ ಬಿಯರ್ ಬಾಟಲಿ, ಸ್ಥಳೀಯರಲ್ಲಿ ಆತಂಕ

Thursday, February 24th, 2022
Mosque

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಮುರ ಜುಮ್ಮಾ ಮಸೀದಿಯಲ್ಲಿ  ಬಿಯರ್ ಬಾಟಲಿ ಎಸೆದು ದಾಂಧಲೆ ನಡೆಸಿರುವ ಘಟನೆ ನಡೆದಿದೆ. ಬುಧವಾರ ತಡ ರಾತ್ರಿಯವೇಳೆ ಮಸೀದಿಯ ಆವರಣದೊಳಗೆ ಬಿಯರ್ ಬಾಟಲಿ ಎಸೆದಿದ್ದಾರೆ. ಆವರಣದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಮೇಲೇ ಬಿಯರ್ ಬಾಟ್ಲಿಗಳು ಬಿದ್ದಿರುವುದಾಗಿ ತಿಳಿದು ಬಂದಿದೆ. ದುಷ್ಕರ್ಮಿಗಳ ಕುಕೃತ್ಯವು ಸ್ಥಳದಲ್ಲಿದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಸೀದಿಯೊಳಗೆ ಬಿಯರ್ ಬಾಟ್ಲಿ ಎಸೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಲು ಕಾರಣವಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ಎಸಗಿದವರ ಬಗ್ಗೆ ಯಾವುದೇ ಮಾಹಿತಿಗಳು ತಿಳಿದು ಬಂದಿಲ್ಲ

ಬೆಳ್ತಂಗಡಿ : ತಾವರೆ ಕೆರೆಗೆ ಬಿದ್ದು ಪಿಯುಸಿ ವಿದ್ಯಾರ್ಥಿನಿ ಸಾವು

Monday, November 15th, 2021
Shreya

 ಬೆಳ್ತಂಗಡಿ : ಕಾಲೇಜು ವಿದ್ಯಾರ್ಥಿನಿ ಯೊಬ್ಬರು ತಾವರೆ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಕೊಣಾಲು ಗ್ರಾಮದ ಅಂಬರ್ಜೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. ಅಂಬರ್ಜೆ ನಿವಾಸಿ ಮೋಹನ ಹಾಗೂ ವಿನೋದಾ ದಂಪತಿ ಪುತ್ರಿ, ಶ್ರೀ ರಾಮಕುಂಜೇಶ್ವರ ಪ.ಪೂ. ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರೇಯಾ(18)ಮೃತಪಟ್ಟ ದುರ್ದೈವಿ. ಈಕೆ ಬೆಳಗ್ಗೆ ತನ್ನ ಮನೆ ಸಮೀಪದ ಕೆರೆಗೆ ತಾವರೆ ಹೂವಿನ ಗಿಡ ಹಾಕಲೆಂದು ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಶ್ರೇಯಾ ಹಿಂತಿರುಗಿ ಬಾರದೆ ಇದ್ದ […]

ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಯುವತಿ ನಾಪತ್ತೆ

Wednesday, October 27th, 2021
Renuka

ಮಂಗಳೂರು: ಕ್ಲಿನಿಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ  21 ವರ್ಷದ ಯುವತಿ ಬೆಳ್ತಂಗಡಿ ತಾಲೂಕಿನ ಲಾಯಿಲಾ ಗ್ರಾಮದಲ್ಲಿ ನಾಪತ್ತೆಯಾದ ಬಗ್ಗೆ ಆಕೆಯ ಪೋಷಕರು ಪೊಲೀಸ್ ದೂರು ದಾಖಲಿಸಿದ್ದಾರೆ. ನಾಪತ್ತೆಯಾದವರು ಲಾಯಿಲಾ ಗ್ರಾಮದ ರಾಮ ಅವರ ಪುತ್ರಿ ರೇಣುಕಾ(21). ರೇಣುಕಾ ಕಳೆದ ಒಂದು ವರ್ಷದಿಂದ ಬೆಳ್ತಂಗಡಿಯ ದುರ್ಗಾ ಕ್ಲಿನಿಕ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ತಾಯಿಯ ಆರೈಕೆಗೆಂದು ಮನೆಯಲ್ಲಿಯೇ ಇದ್ದರು. ಅ.25ರಂದು ಮನೆಯಿಂದ ಯಾರೂ ಇಲ್ಲದ ಸಂದರ್ಭದಲ್ಲಿ ಅವರು ನಾಪತ್ತೆಯಾಗಿದ್ದಾರೆ. ಆಕೆಯ ಮೊಬೈಲ್ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ […]

ರಸ್ತೆ ಅಫಘಾತ : ಮೃತ ವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ಹಸ್ತಾಂತರ

Sunday, August 8th, 2021
noor

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ವ್ಯಕ್ತಿಯೊಬ್ಬರು ವಾಹನ ಅಪಘಾತದಲ್ಲಿ ಮೃತರಾಗಿದ್ದರು. ಅವರ ಕುಟುಂಬಕ್ಕೆ ಇದೀಗ 25 ಲಕ್ಷ ರೂ. ಪರಿಹಾರ ಮೊತ್ತ ಬಿಡುಗಡೆಯಾಗಿದೆ. ಒಮಾನ್‌ ದೇಶದ ಮಬೇಲದಲ್ಲಿ 2 ವರ್ಷಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ತೀರಾ ಬಡಕುಟುಂಬದ ಯುವಕ ಬೆಳ್ತಂಗಡಿ ತಾಲೂಕಿನ ಸುನ್ನತ್‌ ಕೆರೆ ನಿವಾಸಿ ನೂರ್‌ ಮುಹಮ್ಮದ್‌ (25) ಅವರು “ಮಸ್ಕತ್‌ ವಾಟರ್‌’ ಬಾಟಲಿ ನೀರು ಕಂಪೆನಿಯಲ್ಲಿ ಸೇಲ್ಸ್‌ಮನ್‌ ಆಗಿ ಉದ್ಯೋಗಕ್ಕೆ ಸೇರಿಕೊಂಡಿದ್ದರು. 2019ರ ಮೇ 11ರಂದು ಸಂಭವಿಸಿದ ವಾಹನ ಅಪಘಾತದಲ್ಲಿ ಅವರು ಮತ್ತು ಚಾಲಕ […]

ಕೊರೊನಾ ಬಂದಿದ್ದ ವ್ಯಕ್ತಿಗೆ ಬ್ಲಾಕ್ ಫಂಗಸ್, ಬೆಳ್ತಂಗಡಿಯಲ್ಲಿ ಮೊದಲ ಬಲಿ

Friday, May 28th, 2021
black fungus

ಬೆಳ್ತಂಗಡಿ: ಕೊರೊನಾದ ಬಳಿಕ ಕಣ್ಣು ಮತ್ತು ಕಿಡ್ನಿ ಸಮಸ್ಯೆ ಉಂಟಾಗಿ ಬ್ಲಾಕ್ ಫಂಗಸ್ ಗೆ ಬೆಳ್ತಂಗಡಿಯ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಅಳಕೆ ನಿವಾಸಿ ನೋಣಯ್ಯ ಪೂಜಾರಿ (55) ಬ್ಲ್ಯಾಕ್ ಫಂಗಸ್ ವೈರಸ್‌ಗೆ ಬಲಿಯಾದ ವ್ಯಕ್ತಿ. ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಕೊರೊನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ವರದಿ ಬಂದಿತ್ತು ಕೊರೋನಾ ಚಿಕಿತ್ಸತೆಯ ಬಳಿಕ  ಬ್ಲ್ಯಾಕ್ ಫಂಗಸ್ ಗೋಚರಿಸಿದ್ದು ಕಣ್ಣಿನ ಆಪರೇಷನ್ ನಡೆಸಿದ್ದರು, ಬಳಿಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ […]

ಫಲ್ಗುಣಿ ನದಿಯಲ್ಲಿ ಈಜಲು ಹೋದ ಯುವಕ ಮೃತ್ಯು

Thursday, May 6th, 2021
Nishanth

ಬೆಳ್ತಂಗಡಿ:  ಯುವಕನೋರ್ವ ಫಲ್ಗುಣಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಮೃತ ಯುವಕನನ್ನು ಕಾರ್ಯಾಣ ದುಗ್ಗಪ್ಪ ಎಂಬವರ ಪುತ್ರ ನಿಶಾಂತ್ (22) ಎಂದು ಗುರುತಿಸಲಾಗಿದೆ. 5 ಮಂದಿ ಸ್ನೇಹಿತರು ಫಲ್ಗುಣಿ ನದಿಯಲ್ಲಿ ಈಜಲು ಹೋಗಿದ್ದರು ಎನ್ನಲಾಗಿದೆ. ಆದರೆ ನಿಶಾಂತ್ ನೀರಿನಲ್ಲಿ ಮುಳುಗಿದ್ದಾಗಿ ತಿಳಿದುಬಂದಿದ್ದು, ಈ ವೇಳೆ ಆತನ ಸ್ನೇಹಿತರು ನಿಶಾಂತ್ ನನ್ನು ಉಳಿಸುವ ಪ್ರಯತ್ನ ನಡೆಸಿ ದಡಕ್ಕ ತಂದಿದ್ದು, ಆ ವೇಳೆಗಾಗಲೇ ನಿಶಾಂತ್ ಮೃತಪಟ್ಟಿದ್ದ ಎಂದು ಯುವಕರು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ […]

ವಿದ್ಯುತ್ ಸ್ಪರ್ಶಿಸಿ ಯುವಕನ ದಾರುಣ ಸಾವು

Thursday, February 18th, 2021
Avinash

ಬೆಳ್ತಂಗಡಿ :  ವಿದ್ಯುತ್ ಸ್ಪರ್ಶಿಸಿ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕಾನರ್ಪ ಕೌಡಂಗೆ ಎಂಬಲ್ಲಿ ನಡೆದಿದೆ. ಕೌಡಂಗೆ ನಿವಾಸಿ ಅವಿನಾಶ್(23) ಮೃತ ದುರ್ದೈವಿಯಾಗಿದ್ದಾರೆ. ಮನೆಯಲ್ಲಿ ವಿದ್ಯುತ್ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ವಿದ್ಯುತ್ ಅವಘಡ ಸಂಭವಿಸಿದೆ. ತಕ್ಷಣ ಮನೆಮಂದಿ ಯುವಕನನ್ನು ಆಸ್ಪತ್ರೆಗೆಂದು ಕರೆದೊಯ್ದಿದ್ದಾರೆ. ಆದರೆ, ದಾರಿ ಮಧ್ಯೆ ಯುವಕ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. ಕೌಡಂಗೆ ನಿವಾಸಿ ಕೃಷಿಕ ಚನನ ಗೌಡ ಮತ್ತು ದೇವಕಿ ದಂಪತಿಯ ಮೂರನೇ ಪುತ್ರರಾಗಿರುವ ಅವಿನಾಶ್ ಮೇಸ್ತ್ರಿ ಕೆಲಸದ ಜೊತೆಗೆ ಎಲೆಕ್ಟ್ರೀಷಿಯನ್ […]

ಎರಡನೇ ಹಂತದ ಗ್ರಾಮಪಂಚಾಯತ್ ಚುನಾವಣೆ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ 52.64 ಮತದಾನ

Sunday, December 27th, 2020
vote

ಮಂಗಳೂರು : ದ.ಕ. ಜಿಲ್ಲೆಯ ನಾಲ್ಕು ತಾಲೂಕಿನ 114 ಗ್ರಾಪಂಗಳಿಗೆ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದ್ದು ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಬೆಳ್ತಂಗಡಿ.  53.35 , ಪುತ್ತೂರು. 52.85, ಸುಳ್ಯ.51.37 ,ಕಡಬ  52.07  ಮತದಾನವಾಗಿದ್ದು  ಜಿಲ್ಲೆಯಲ್ಲಿ  ಒಟ್ಟು.52.64 ಮತದಾನವಾಗಿದೆ. ಬೆಳಗ್ಗೆ 9 ಗಂಟೆಯ ಬಳಿಕ ಮತಗಟ್ಟೆಗಳಿಗೆ ಮತದಾರರು ಅಧಿಕ ಸಂಖ್ಯೆಯಲ್ಲಿ ಬರಲಾರಂಭಿಸಿದರು ಮತದಾನ ಬಿರುಸಿನಿಂದ ಸಾಗಿದೆ. ಎರಡನೇ ಹಂತದಲ್ಲಿ ಬೆಳ್ತಂಗಡಿಯ 46, ಪುತ್ತೂರಿನ 22, ಕಡಬದ 21, ಸುಳ್ಯದ 25 ಸಹಿತ 114 ಗ್ರಾಪಂಗಳ 11,541 ಸ್ಥಾನಗಳಿಗೆ ಚುನಾವಣೆ […]

ಸುರೇಂದ್ರ ಬಂಟ್ವಾಳ್‌ ಹತ್ಯೆಗೆ ಸಹಕರಿಸಿದ ಇಬ್ಬರ ಬಂಧನ

Tuesday, November 3rd, 2020
PratheekKotian Jayesh

ಬಂಟ್ವಾಳ :  ರೌಡಿ ಶೀಟರ್ ಮತ್ತು ನಟ ಸುರೇಂದ್ರ ಬಂಟ್ವಾಳ್‌ ಹತ್ಯೆಗೆ ಸಹಕಾರ ನೀಡಿದ ಆರೋಪಿಗಳಾದ ಪ್ರತೀಕ್ ಕೋಟ್ಯಾನ್  ಬೆಳ್ತಂಗಡಿ  ಮತ್ತು ಜಯೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದಾಗಿ ಪ್ರಕರಣದಲ್ಲಿ ಒಟ್ಟು 11 ಆರೋಪಿಗಳನ್ನು ಇದುವರೆಗೆ ಬಂಧಿಸಲಾಗಿದೆ. ಮಂಗಳವಾರ ಇಬ್ಬರು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಲಯ ಬಂಧನ ವಿಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ 5 ವಿಶೇಷ ಪತ್ತೆ ತಂಡವನ್ನು ರಚಿಸಲಾಗಿತ್ತು. ಈಗಾಗಲೇ ಆರೋಪಿಗಳಾದ ಸತೀಶ್ ಕುಲಾಲ್, ಗಿರೀಶ್ ಕಿನ್ನಿಗೋಳಿ, ಆಕಾಶ್ ಭವವ್ ಶರಣ್, ವೆಂಕಟೇಶ್ ಪೂಜಾರಿ, ಪ್ರದೀಪ್, ಶರೀಫ್, ದಿವರಾಜ್, […]

ಬೆಳ್ತಂಗಡಿ ತಾಲೂಕಿನಲ್ಲಿ ಗಬ್ಬದ ಹಸುವಿನ ಮೇಲೆ ಚಿರತೆ ದಾಳಿ

Sunday, October 18th, 2020
leapored

ಬೆಳ್ತಂಗಡಿ : ಚಿರತೆಯೊಂದು ಬೆಳ್ತಂಗಡಿ ತಾಲೂಕಿನ ಕರಿಮಣೇಲು ಗ್ರಾಮದಲ್ಲಿ ಗಬ್ಬದ ಹಸುವಿನ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಮೂರು ದಿನಗಳ ಹಿಂದೆ  ಹೋರಿಯನ್ನು ಹಟ್ಟಿಯಿಂದ ಹೊತ್ತೊಯ್ದು ತಿಂದು ಹಾಕಿತ್ತು. ಇದೀಗ ಶನಿವಾರ ರಾತ್ರಿ ಮತ್ತೆ ಖಂಡಿಗ ನಿವಾಸಿ ಜಯರಾಮ್ ಶೆಟ್ಟಿಯರ ತೋಟದಲ್ಲಿ ಗಬ್ಬದ ಹಸುವಿಗೆ ಆಕ್ರಮಣ ಮಾಡಿ ಗಾಯಗೊಳಿಸಿದೆ. ಸ್ಥಳಕ್ಕೆ ಭೇಟಿ ನೀಡಿರುವ ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳು ಬೋನ್ ಅಳವಡಿಸಿ ಶೀಘ್ರ ಚಿರತೆಯನ್ನು ಪತ್ತೆ ಮಾಡುವ ಭರವಸೆಯನ್ನು ಗ್ರಾಮಸ್ಥರಿಗೆ ನೀಡಿದ್ದಾರೆ. ಆದರೆ ಇಲ್ಲಿನ ಜನತೆ ಮಾತ್ರ […]