Blog Archive

ಸದಾ ನಾಟಿ ಕೋಳಿ, ಮಟನ್ ಸಾರನ್ನೇ ನೆಚ್ಚಿಕೊಂಡಿದ್ದ ಮಾಜಿ ಸಿಎಂ ಈಗ ಶುದ್ಧ ಸಸ್ಯಹಾರಿ..!

Wednesday, June 20th, 2018
siddaramaih

ಮಂಗಳೂರು: ನಾಟಿ ಕೋಳಿ, ಬನ್ನೂರು ಮಟನ್ ಹಾಗು ಪಾಯ ಸೂಪ್ ಎಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಂಚಪ್ರಾಣ. ಮುಂಜಾನೆ ಅವರಿಗೆ ಪಾಯ ಸೂಪ್ ಬೇಕೇ ಬೇಕು. ಹೆಚ್ಚಾಗಿ ಮಾಂಸಾಹಾರಕ್ಕೆ ಒಲವು ತೋರುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಆಪ್ಪಟ ಸಸ್ಯಹಾರಿ. ಅರೆರೆ ಇದು ಹೇಗೆ ಸಾಧ್ಯ ಎಂಬ ಕುತೂಹಲವೇ? ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿ ವನದಲ್ಲಿ ಪ್ರಾಕೃತಿಕ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಈಗ ಸಸ್ಯಹಾರಿಯಾಗಿ ಬದಲಾಗಿದ್ದಾರೆ. ಸದಾ ನಾಟಿ ಕೋಳಿ, ಮಟನ್ ಸಾರನ್ನೇ ನೆಚ್ಚಿಕೊಂಡಿದ್ದ ಮಾಜಿ […]

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸಚಿವ ರೇವಣ್ಣ!

Tuesday, June 19th, 2018
h-d-revanna

ಮಂಗಳೂರು: ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಜಿಲ್ಲಾ ಪ್ರವಾಸದಲ್ಲಿರುವ ಸಚಿವ ರೇವಣ್ಣ ಅವರು ಭೇಟಿ ಮಾಡಿ ಮಾತುಕತೆ ನಡೆಸಿದರು. ಜಿಲ್ಲಾ ಪ್ರವಾಸದಲ್ಲಿರುವ ರೇವಣ್ಣ ಅವರು ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯದಲ್ಲಿ ಭೇಟಿಯಾಗಿ ವಿವಿಧ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಸಚಿವ ರೇವಣ್ಣ ಅವರು ಗುಡ್ಡ ಕುಸಿತದಿಂದ ಸಮಸ್ಯೆಗಳೊಗಾದ ಚಾರ್ಮಾಡಿ ಘಾಟಿಯನ್ನು ವೀಕ್ಷಿಸಿದರು.

ಚಾರ್ಮಾಡಿ ಗುಡ್ಡ ಕುಸಿತ..ವಾಹನ ಸಂಚಾರ ಸ್ಥಗಿತ..!

Tuesday, June 12th, 2018
charmudi-ghat

ಮಂಗಳೂರು: ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದು ರಸ್ತೆ ಗೆ ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣ ಸಾಧ್ಯವಾಗದೆ ಸಂಕಷ್ಟದಲ್ಲಿರುವ ಸಣ್ಣ ಮಕ್ಕಳು, ವೃದ್ದರ ನೆರವಿಗೆ ಧರ್ಮಸ್ಥಳ , ಬೆಳ್ತಂಗಡಿ ಪೊಲೀಸರು ಆಹಾರ ಒದಗಿಸುವ ವ್ಯವಸ್ಥೆ ಮಾಡಿದ್ದಾರೆ. ಮತ್ತೊಂದೆಡೆ ಗುಡ್ಡ ಕುಸಿತದಿಂದ ರಸ್ತೆ ಗೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುತ್ತಿದ್ದಾರೆ.

ಧರ್ಮಸ್ಥಳದಲ್ಲಿ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ (ಆರ್‌ಸೆಟಿ) ರಾಜ್ಯ ನಿರ್ದೇಶಕರುಗಳ ಪರಿಶೀಲನಾ ಸಭೆ

Wednesday, May 30th, 2018
dr-veerendra-hegde

ಉಜಿರೆ: ಹಿಂದಿನ ವರ್ಷಗಳ ಸಾಧನೆ ಹಾಗೂ ಅನುಭವದ ಹಿನ್ನೆಲೆಯಲ್ಲಿ ಭವಿಷ್ಯದ ಬಗ್ಗೆ ಚಿಂತನೆ ಮಾಡಿ ಬಡತನ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಹೊಸ ಅವಕಾಶಗಳನ್ನು ಸೃಷ್ಟಿಸಬೇಕು. ನಿರುದ್ಯೋಗಿ ಯುವ ಜನತೆಗೆ ಹೊಸ ಉದ್ಯೋಗಾವಕಾಶ ಕಲ್ಪಿಸುವುದರಿಂದ ಆರ್ಥಿಕ ಸ್ವಾವಲಂಬನೆ ಹಾಗೂ ಉತ್ತಮ ಪ್ರಗತಿ ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಮಂಗಳವಾರ ಧರ್ಮಸ್ಥಳದಲ್ಲಿ ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ಎರಡು ದಿನ ನಡೆಯುವ ಆರ್‌ಸೆಟಿಗಳ ರಾಜ್ಯ ನಿರ್ದೇಶಕರುಗಳ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ದೇಶದ […]

ಧರ್ಮಸ್ಥಳದಲ್ಲಿ ರಾತ್ರಿ ಹತ್ತನಾವಧಿ ಉತ್ಸವ

Saturday, May 26th, 2018
dharmastala

ಉಜಿರೆ: ಧರ್ಮಸ್ಥಳದಲ್ಲಿ ಗುರುವಾರ ರಾತ್ರಿ ಹತ್ತನಾವಧಿ (ತುಳು: ಪತ್ತನಾಜೆ) ಉತ್ಸವ ನಡೆಯಿತು.ಉತ್ಸವ ಬಲಿ, ವಸಂತ ಪೂಜೆ, ಅಷ್ಟಾವಧಾನ ಸೇವೆ ನಡೆದು ಧ್ವಜ ಮರ (ಕೊಡಿಮರ) ಅವರೋಹಣದೊಂದಿಗೆ ವರ್ಷದ ಉತ್ಸವಗಳು ಸಮಾಪನಗೊಂಡವು. ಮುಂದೆ ದೀಪಾವಳಿ ವರೆಗೆ ರಂಗಪೂಜೆ, ಉತ್ಸವ ಮೊದಲಾದ ವಿಶೇಷ ಸೇವೆಗಳು ನಡೆಯುವುದಿಲ್ಲ. ಯಕ್ಷಗಾನ ಮೇಳದ ಶ್ರೀ ಮಹಾಗಣಪತಿ ದೇವರ ಮೂರ್ತಿಯನ್ನು ವೈಭವದ ಮೆರವಣಿಗೆಯಲ್ಲಿ ಛತ್ರ ಗಣಪತಿ ಸನ್ನಿಧಿಗೆ ಕೊಂಡು ಹೋಗಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಹತ್ತನಾವಧಿ ಬಳಿಕ ಮೂರು ದಿನ ಸೇವೆ ಆಟ ಪ್ರದರ್ಶನ […]

ಧರ್ಮಸ್ಥಳದಲ್ಲಿ ಹೆಗ್ಗಡೆಯವರು ಮತ್ತು ಕುಟುಂಬದವರಿಂದ ಮತದಾನ

Saturday, May 12th, 2018
Hegde Vote

ಧರ್ಮಸ್ಥಳ : ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಸಹೋದರ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಶನಿವಾರ ಧರ್ಮಸ್ಥಳದಲ್ಲಿ ಎಸ್.ಡಿ.ಎಮ್. ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು.

ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ರಾಹುಲ್ ಗಾಂಧಿ

Friday, April 27th, 2018
veerendra-hegde

ಮಂಗಳೂರು: ಕರಾವಳಿ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಮಧ್ಯಾಹ್ನ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಂಟ್ವಾಳದಿಂದ ಹೆಲಿಕಾಪ್ಟರ್ ನಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಈ ವೇಳೆ ದೇವಸ್ಥಾನಗಳ ಸಿಬ್ಬಂದಿಯನ್ನು ರಾಹುಲ್ ಗಾಂಧಿ ಗುರುತು ಹಿಡಿದಿದ್ದಾರೆ. ತಮಗೆ ನಿಮ್ಮನ್ನು ನೋಡಿದ ನೆನಪಿದೆ ಎಂದಿದ್ದಾರೆ. ಇದರಿಂದ ಸಿಬ್ಬಂದಿಗಳು ಖುಷಿಯಾಗಿದ್ದಾರೆ. ಮಂಜುನಾಥ ಸ್ವಾಮಿಗೆ ಫಲಕಾಣಿಕೆ ಅರ್ಪಿಸಿದ ರಾಹುಲ್ ಗಾಂಧಿ, ವಿಶೇಷ ಪೂಜೆಯಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಮಂಜುನಾಥ ಸ್ವಾಮಿ ಎದುರು […]

ಹೆಗ್ಗಡೆಯವರಿಗೆ ಜೀವಮಾನ ಶ್ರೇಷ್ಠ ಸಾಧಕ ಪ್ರಶಸ್ತಿ ಪ್ರದಾನ

Tuesday, April 24th, 2018
veerenda-hegde

ಧರ್ಮಸ್ಥಳ: ಸುರಾನ ವಿದ್ಯಾ ಸಂಸ್ಥೆಗಳ ವತಿಯಿಂದ ಮಂಗಳವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಜೀವಮಾನ ಶ್ರೇಷ್ಠ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಸುರಾನ ವಿದ್ಯಾ ಸಂಸ್ಥೆಗಳ ವತಿಯಿಂದ 2017 ರ ಸಾಲಿನ ಜೀವಮಾನ ಶ್ರೇಷ್ಠ ಸಾಧಕ ಪ್ರಶಸ್ತಿಯನ್ನು ಮಂಗಳವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಸುರಾನ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಡಾ. ಅರ್ಚನಾ ಸುರಾನ ಮತ್ತು ವಿವಿಧ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಪ್ರಶಸ್ತಿ ಸ್ವೀಕರಿಸಿದ ಹೆಗ್ಗಡೆಯವರು ಮಾತನಾಡಿ ಸುರಾನ […]

ಕರ್ನಾಟಕದ 07 ರುಡ್‌ಸೆಟ್ ಸಂಸ್ಥೆಗಳ 2017-18 ರ ಸಾಲಿನ ವಾರ್ಷಿಕ ವರದಿ ಬಿಡುಗಡೆ

Wednesday, April 4th, 2018
veerendra-hegde

ಧರ್ಮಸ್ಥಳ: ಕರ್ನಾಟಕದ 07 ರುಡ್‌ಸೆಟ್ ಸಂಸ್ಥೆಗಳ 2017-18 ರ ಸಾಲಿನ ವಾರ್ಷಿಕ ವರದಿಯನ್ನು ಧರ್ಮಸ್ಥಳದಲ್ಲಿ ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಪದ್ಮವಿಭೂಷಣ ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಸಂಸ್ಥೆಗಳ ಒಂದು ವರ್ಷದ ಕಾರ‍್ಯ ಚಟುವಟಿಕೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೆಶಕರಾದ ಶ್ರೀ ಎಮ್. ಜನಾರ್ಧನ್‌ರವರು ಉಪಸ್ಥಿತರಿದ್ದರು.

ಧರ್ಮಸ್ಥಳ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜಯಂತಿ ಆಚರಣೆ

Friday, March 30th, 2018
dharmastala

ಧರ್ಮಸ್ಥಳ: ದಿನಾಂಕ 29-03-18 ನೇ ಗುರುವಾರದಂದು ಧರ್ಮಸ್ಥಳ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜಯಂತಿಯನ್ನು ಆಚರಿಸಲಾಯಿತು. ಸ್ವಾಮಿಗೆ ಜನ್ಮಾಭಿಷೇಕ, ಮಕ್ಕಳಿಂದ ಅಷ್ಟವಿಧಾರ್ಚನೆ ಪೂಜೆ, ನಾಮಕರಣ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು ಮತ್ತು ಕುಟುಂಬದವರ ಮಾರ್ಗದರ್ಶನದಲ್ಲಿ ಬಾಹುಬಲಿ ಮಹಿಳಾ ಸೇವಾ ಸಮಿತಿಯ ವತಿಯಿಂದ ಮಹಾವೀರ ಜಯಂತಿ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಊರ ಶ್ರಾವಕ ಶ್ರಾವಿಕಿಯರು ಪಾಲ್ಗೊಂಡು ಪುಣ್ಯಭಾಗಿಗಳಾದರು.