Blog Archive

ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ, ಬೈಕ್ ಸವಾರ ಗಂಭೀರ

Friday, March 15th, 2013
Bike Pickup accident at bantwal

ಬಂಟ್ವಾಳ : ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿಯ ನಾವೂರ ಗ್ರಾಮದ ಫರ್ಲಾದಲ್ಲಿ  ಪಿಕಪ್ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಬೈಕ್ ಸವಾರ ಮೂರ್ಜೆ ನಿವಾಸಿ ವೀರಪ್ಪ ಮೂಲ್ಯ(42) ಅವರು ಬಿಸಿ.ರೋಡ್ ನಿಂದ ಮೂರ್ಜೆ ಕಡೆ ಹೋಗುತ್ತಿರುವಾಗ ಹಿಂದಿನಿಂದ ಬಂದ ಪಿಕಪ್ ಡಿಕ್ಕಿ ಹೊಡೆದಿದೆ. ಘಟನೆಯಿಂದ ಬೈಕ್ ಸವಾರ ವೀರಪ್ಪ ಮೂಲ್ಯ ಬೈಕ್ ಸಹಿತ ರಸ್ತೆ ಬದಿಯ ಚರಂಡಿಗೆ ಎಸೆಯಲ್ಪಟ್ಟಿದ್ದರು. ಘಟನೆಯಿಂದ ತೀವ್ರ ಅಸ್ವಸ್ಥ ರಾದ ಅವರನ್ನು […]

ಬಂಟ್ವಾಳದಲ್ಲಿ ಕಪಾಟು ವಿತರಣೆ, ಪುರಸಭಾ ಮುಖ್ಯಾಧಿಕಾರಿಯವರ ವಿರುದ್ಧ ಪ್ರಕರಣ ದಾಖಲು

Thursday, March 7th, 2013
Bantwal, Godraje delivary

ಬಂಟ್ವಾಳ : ಬುಧವಾರ ಬಂಟ್ವಾಳದಲ್ಲಿ ಚುನಾವಣಾ ನೀತಿ ಸಂಹಿತೆ ಪಾಲಿಸಬೇಕಾದ ಪುರಸಭಾ ಅಧಿಕಾರಿಗಳೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪುರಸಭಾ ವ್ಯಾಪ್ತಿಯ ಫಲಾನುಭವಿಗಳಿಗೆ ಕಪಾಟು ವಿತರಿಸಿದ ಘಟನೆ ಬೆಳಕಿಗೆ ಬಂದಿದೆ. ಬುಧವಾರ ಬೆಳಿಗ್ಗೆ ಚೆಂಡ್ತಿಮಾರು ದಲಿತಕಾಲೋನಿಗೆ ಪಿಕಪ್ ವಾಹನದಲ್ಲಿ ಕಪಾಟುಗಳನ್ನು ತರಲಾಗಿದ್ದು, ಮೂರು ಮನೆಗಳಿಗೆ ವಿತರಣೆ ಮಾಡಲಾಗಿದೆ. ಈ ಕುರಿತು ಮನೆಮಾಲಕರೊಬ್ಬರು ಪ್ರಶ್ನಿಸಿದರೂ  ಕೇಳದೆ ಕಪಾಟು ಇಳಿಸಿ ತೆರಳಿದ್ದಾರೆ. ಇದಕ್ಕೆ ಬಿಜೆಪಿಯ ಸೂಚನೆಯಂತೆ ಮುಖ್ಯಾಧಿಕಾರಿಗಳು ಕಪಾಟು ವಿತರಣೆ ಮಾಡಿದ್ದಾರೆ ಎಂದು ಕಾಂಗ್ರೇಸ್ ಕಾರ್ಯಕರ್ತರು ಆರೋಪಿಸಿದ್ದು ತನಿಖೆಗೆ ಒತ್ತಾಯಿಸಿದ್ದಾರೆ. […]

ಬಂಟ್ವಾಳ : ಭಾರತೀಯ ಜನತಾಪಾರ್ಟಿಯ ಚುನಾವಣಾ ಪ್ರಚಾರ ಅಭಿಯಾನದ ಉದ್ಘಾಟನೆ

Friday, March 1st, 2013
Bantval Bjp Polls

ಬಂಟ್ವಾಳ : ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಸಭಾಂಗಣದಲ್ಲಿ ಗುರುವಾರ ಸಂಜೆ ಭಾರತೀಯ ಜನತಾಪಾರ್ಟಿಯ ಚುನಾವಣಾ ಪ್ರಚಾರದ ಅಭಿಯಾನವನ್ನು ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿಯವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿದ್ದು ಕಳೆದ ೫ ವರ್ಷಗಳಲ್ಲಿ ಬಿಜೆಪಿ ಈ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡಿದೆ ಅದರಲ್ಲೂ ಮುಖ್ಯವಾಗಿ  ಈ ಅವಧಿಯಲ್ಲಿ ಅಭಿವೃದ್ಧಿಯಲ್ಲಿ ಬಂಟ್ವಾಳ ಪುರಸಭೆಯ ಪರಿಸರದ  ಚಿತ್ರಣವೇ ಬದಲಾಗಿದೆ ಎಂದು ಅವರು ಹೇಳಿದರು. ಬಂಟ್ವಾಳ ಪುರಸಭೆಯ 23 […]

ಬಂಟ್ವಾಳ : ಕಾನೂನು ಮಾಹಿತಿ ಶಿಬಿರ

Wednesday, February 27th, 2013
Legal Information Camp at Bantwal

ಬಂಟ್ವಾಳ : ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಬಂಟ್ವಾಳ ಹಾಗೂ ಗ್ರಾಮ ಪಂಚಾಯತ್ ಅಲ್ಲಿಪಾದೆ ಇವುಗಳ  ಆಶ್ರಯದಲ್ಲಿ ನಡೆದ ಕಾನೂನು ಮಾಹಿತಿ ಶಿಬಿರವನ್ನು ತಾಲೂಕು ಸೇವೆಗಳ ಸಮಿತಿಯ ಅಧ್ಯಕ್ಷರು ಹಿರಿಯ ಸಿವಿಲ್ ನ್ಯಾಯಧೀಶೆಯಾದ ಎ.ಕೆ ನವೀನಕುಮಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಾನೂನಿನ ದೃಷ್ಠಿಯಲ್ಲಿ  ಎಲ್ಲರೂ ಸಮಾನರಾಗಿದ್ದು ಅದಕ್ಕೆ ಮೇಲು -ಕೀಳು, ಗಂಡು ಹೆಣ್ಣು ಎಂಬ ಭೇದವಿಲ್ಲ ಈ ಅರಿವು ಎಲ್ಲರಲ್ಲೂ ಮೂಡಬೇಕು ಎಂಬ […]

ಬಂಟ್ವಾಳ ಯುವತಿಯ ಕೊಲೆ, ಶಂಕಿತ ಆರೋಪಿಯ ಸೆರೆ

Tuesday, February 26th, 2013
Girl found dead in Bantwal

ಬಂಟ್ವಾಳ : ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮ ಕಶೆಕೋಡಿ ಎಂಬಲ್ಲಿ ಸೋಮವಾರ ಯುವತಿಯೊಬ್ಬಳ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಲಾಗಿದೆ. ಯುವತಿಯನ್ನು ಕಶೆಕೋಡಿ ಸೀತಾರಾಮ ಮತ್ತು ನಳಿನಾಕ್ಷಿ ದಂಪತಿ ಪುತ್ರಿಯಾದ ಸೌಮ್ಯ ಎಂದು ಗುರುತಿಸಲಾಗಿದ್ದು, ಶಂಕಿತ ಆರೋಪಿ ಸ್ಥಳೀಯ ನಿವಾಸಿ ಸತೀಶ (30) ಎಂಬಾತನನ್ನು ನಗರ ಠಾಣೆ ಪೊಲೀಸರು ತಕ್ಷಣ ವಶಕ್ಕೆ ತೆಗೆದುಕೊಂಡಿದ್ದಾರೆ. ಸೀತಾರಾಮ ಅವರ ನಾಲ್ವರು ಪುತ್ರಿಯರಲ್ಲಿ ಸೌಮ್ಯಾ ಹಿರಿಯವಳಾಗಿದ್ದು, ಇತ್ತೆಚೆಗಷ್ಟೇ ಡಿಎಡ್‌ ಕೋರ್ಸ್ ಮುಗಿಸಿ 15 ದಿನಗಳ ಹಿಂದಷ್ಟೇ ಮಣಿಪಾಲದ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದರು. […]

ಕಟ್ಟಡ ನಿರ್ಮಾಣದ ವೇಳೆ ಮಣ್ಣು ಕುಸಿದು ಕಾರ್ಮಿಕನ ಸಾವು

Tuesday, January 29th, 2013
Labourer dies in landslip

ಮಂಗಳೂರು : ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರೀ ದೇವಸ್ಥಾನದ ಸಭಾಭವನದ ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆ ಕಾರ್ಮಿಕನೊಬ್ಬನ ಮೇಲೆ ಮಣ್ಣು ಕುಸಿದು ಮೃತಪಟ್ಟ ಘಟನೆ ಜನವರಿ 28 ಸೋಮವಾರ ಸಂಭವಿಸಿದೆ. ಉಳಿ ಗ್ರಾಮ ಮಿತ್ತರಿಪಾದೆ ನಿವಾಸಿ ರಾಮಣ್ಣ ಪೂಜಾರಿಯವರ ಪುತ್ರ ಶರತ್‌ ಪೂಜಾರಿ(23) ಮೃತ ವ್ಯಕ್ತಿ. ಶ್ರೀ ಚಂಡಿಕಾಪರಮೇಶ್ವರೀ ದೇವಸ್ಥಾನ ಮುಂಭಾಗ ನಿರ್ಮಾಣ ಹಂತದಲ್ಲಿರುವ ಸಭಾಭವನದ ಪಿಲ್ಲರ್‌ ಗುಂಡಿಯಲ್ಲಿ ಸ್ಟೀಲ್‌ ರಾಡನ್ನು ಬಿಗಿದು ನೇರ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪಿಲ್ಲರ್‌ ನಿರ್ಮಾಣ ಗುಂಡಿಗಳನ್ನು ಜೆಸಿಬಿ ಬಳಸಿ […]

ಬಂಟ್ವಾಳದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಕಟ್ಟಡ ಉದ್ಘಾಟನೆ

Saturday, February 5th, 2011
ಬಂಟ್ವಾಳದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಕಟ್ಟಡ ಉದ್ಘಾಟನೆ

ಮಂಗಳೂರು : ದೇಶದಲ್ಲಿ ಸರ್ವೋಚ್ಚ್ಚ ನ್ಯಾಯಾಲಯದಲ್ಲಿ ಪ್ರತಿ ವರ್ಷ 50,000 ಕಟ್ಲೆಗಳು ವಿಲೇವಾರಿಯಾಗುತ್ತಿದೆ.ರಾಜ್ಯಗಳ ಉಚ್ಚ ನ್ಯಾಯಾಲಯಗಳಲ್ಲಿ 16 ಲಕ್ಷ ಮೊಕದ್ದಮೆಗಳು ತೀರ್ಮಾನವಾಗುತ್ತವೆ. ಕೆಳಮಟ್ಟದ  ಕೋರ್ಟ್ ಗಳಲ್ಲಿ  1.6 ಕೋಟಿ ದಾವೆಗಳು ಇತ್ಯರ್ಥವಾಗುತ್ತಿದ್ದರೂ, ನಮ್ಮ ನ್ಯಾಯಾಲಯಗಳಲ್ಲಿ ಇನ್ನು 3 ಕೋಟಿ ಮೊಕದ್ದಮೆಗಳು ಬಾಕಿ ಉಳಿದಿವೆ.ಆದ್ದರಿಂದ ನ್ಯಾಯಾಂಗದಲ್ಲಿರುವ ಎಲ್ಲರೂ ಕಕ್ಷಿದಾರರಿಗೆ ತ್ವರಿತ ಹಾಗೂ ಗುಣಮಟ್ಟದ ನ್ಯಾಯದಾನ ವಿತರಿಸಲು ಮುಂದಾಗಬೇಕೆಂದರು. ಕರ್ನಾಟಕ  ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ಶ್ರೀ ಎಚ್.ಎನ್.ನಾಗಮೋಹನದಾಸ್ ಅವರು ನ್ಯಾಯಾಂಗ ಇಲಾಖೆ ಹಾಗೂ […]