ಮಗಳ ಮನೆಯಲ್ಲಿ ಪೆಟ್ರೋಲ್‌ ಕುಡಿದು ಅಜ್ಜಿ ಸಾವು

Thursday, September 30th, 2021
Petrol

ಉಪ್ಪಿನಂಗಡಿ :  ಬಾಟಲಿಯಲ್ಲಿದ್ದ ಪೆಟ್ರೋಲ್‌ ಅನ್ನು ಕುಡಿದು ಅಜ್ಜಿ ಸಾವನ್ನಪ್ಪಿದ ಘಟನೆ ಪೆರ್ನೆ ಸಂಪದಕೋಡಿಯಲ್ಲಿ ಬುಧವಾರ ನಡೆದಿದೆ. ಮೃತರನ್ನು ಬಂಟ್ವಾಳದ ಪದ್ಮಾವತಿ (79) ಎಂದು ಗುರುತಿಸಲಾಗಿದೆ. ಪದ್ಮಾವತಿ ಅವರು ಸೆ.26ರಂದು ಪೆರ್ನೆಯ ಮಗಳ ಮನೆಗೆ ಬಂದಿದ್ದರು. ಹುಲ್ಲು ಕತ್ತರಿಸುವ ಯಂತ್ರಕ್ಕೆಂದು ಮನಯವರು ಬಾಟಲಿಯಲ್ಲಿ ಪೆಟ್ರೋಲ್‌ ತಂದಿಟ್ಟಿದ್ದರು. ದೃಷ್ಟಿ ದೋಷದಿಂದ ಬಳಲುತ್ತಿದ್ದ ಪದ್ಮಾವತಿ ಅವರು ಪೆಟ್ರೋಲ್‌ ಇದ್ದ ಬಾಟಲಿಯನ್ನು ನೀರೆಂದು ಭಾವಿಸಿ ಕುಡಿದಿದ್ದಾರೆ. ಈ ಸಂದರ್ಭ ಅಸ್ವಸ್ಥರಾದ ಅವರನ್ನು ಮಂಗಳೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು […]

ಅನಾವಶ್ಯಕವಾಗಿ ತಿರುಗಾಟ ನಡೆಸುತ್ತಿದ್ದ 35ಕ್ಕೂ ಮಿಕ್ಕಿ ವಾಹನ ವಶಕ್ಕೆ

Wednesday, June 9th, 2021
Bantwal Vehicle

ಬಂಟ್ವಾಳ: ಜಿಲ್ಲೆಯಲ್ಲಿ ಒಂದು ವಾರ ಕಠಿಣ ಲಾಕ್ ಡೌನ್ ಘೋಷಣೆಯಾಗಿದ್ದರೂ ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಅನಾವಶ್ಯಕವಾಗಿ ತಿರುಗಾಟ ನಡೆಸುತ್ತಿದ್ದ ವಾಹನಗಳ ವಿರುದ್ಧ ನಗರ ಠಾಣೆ ಇನ್ಸ್ ಪೆಕ್ಟರ್ ಚೆಲುವರಾಜು ನೇತೃತ್ವದ ಪೊಲೀಸರು ಬುಧವಾರ ಬೆಳಿಗ್ಗೆ ದಿಢೀರ್ ಕಾರ್ಯಾಚರಣೆ ನಡೆಸಿದ್ದಾರೆ. ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾಕ್ ಡೌನ್ ಮಾರ್ಗ ಸೂಚಿ ಉಲ್ಲಂಘಿಸಿ ಅನಾವಶ್ಯಕವಾಗಿ ತಿರುಗಾಟ ನಡೆಸುತ್ತಿದ್ದ 20ಕ್ಕೂ ಮಿಕ್ಕಿ ದ್ವಿಚಕ್ರ ವಾಹನ ಸೇರಿದಂತೆ ಸುಮಾರು 35ಕ್ಕೂ ಮಿಕ್ಕಿ ವಾಹನಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು […]

ತುಂಬೆ ಮಜಿಯಲ್ಲಿ ನಾಲ್ಕು ಮನೆಗಳಿಗೆ ನುಗ್ಗಿ ನಗದು ದರೋಡೆ

Friday, April 16th, 2021
tumbe

ಬಂಟ್ವಾಳ :   ನಾಲ್ಕು ಮನೆಗಳಿಗೆ ನುಗ್ಗಿರುವ ಕಳ್ಳರು ಒಂದು ಮನೆಯಿಂದ ನಗದು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತುಂಬೆಯಲ್ಲಿ ಗುರುವಾರ ನಡೆದಿದೆ. ಮನೆಮಂದಿ ನಾಟಕ ವೀಕ್ಷಣೆಗೆಂದು ತೆರಳಿದ್ದ ಸಂದರ್ಭ ತುಂಬೆ ಗ್ರಾಮದ ಮಜಿ ಎಂಬಲ್ಲಿ ನಾಲ್ಕು ಮನೆಗಳಿಗೆ ನುಗ್ಗಿರುವ ಕಳ್ಳರು ಒಂದು ಮನೆಯಿಂದ 8 ಸಾವಿರ ರೂ. ನಗದನ್ನು ದೋಚಿದ್ದಾರೆ. ಇನ್ನುಳಿದ ಮೂರು ಮನೆಯ ಕಪಾಟು ಸಹಿತ ಇತರ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಜಾಲಾಡಿದ್ದು, ನಗದು ಸಹಿತ ಬೆಲೆಬಾಳುವ ಯಾವುದೇ […]

ಸಾಮಾನ್ಯ ಯುವತಿಯೊಬ್ಬಳು ಪಂಚಾಯತ್ ಅಧ್ಯಕ್ಷೆಯಾದಾಗ..

Friday, January 1st, 2021
Bharati

ಬಂಟ್ವಾಳ : ಪುರುಷ ಪ್ರಧಾನ ವ್ಯವಸ್ಥೆಯೊಳಗಡೆ ಮಹಿಳಾ ಸಬಲೀಕರಣವೆಂಬುದು ಸಾಮಾನ್ಯ ವಿಷಯವಲ್ಲ. ಮಹಿಳೆ ಅಬಲೆಯಲ್ಲ,ಸಬಲೆ ಎಂದು ಎಷ್ಟೇ ಬೀಗಿದರೂ ಅವರಿಗೆ ಸಿಗಬೇಕಾದ ಅವಕಾಶಗಳನ್ನು ಸರಿಯಾಗಿ ನೀಡಿದರೆ ಮಾತ್ರ ಎಂತಹ ಕ್ಷೇತ್ರದಲ್ಲೂ ಮಿಂಚಬಲ್ಲರು ಎಂಬುದಕ್ಕೆ ಕೇರಳದ ತಾಜಾ ಉದಾಹರಣೆಗಳು ನಮ್ಮ ಮುಂದಿದೆ.ಈಗಾಗಲೇ ಎಳೆಯ ಪ್ರಾಯದ ಯುವತಿಯರು ಕೇರಳದ ರಾಜದಾನಿಯ ಮೇಯರ್ ಹುದ್ದೆಯಿಂದ ಹಿಡಿದು ಪಂಚಾಯತ್ ಅಧ್ಯಕ್ಷೆಯವರೆಗೆ ಹಲವಾರು ಮಂದಿ ಆಯ್ಕೆಯಾಗಿರುವುದು ಮಹಿಳಾ ಸಮುದಾಯಕ್ಕೆ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಅದರಂತೆ ಗಡಿನಾಡ ಪ್ರದೇಶವಾದ ಮಂಜೇಶ್ವರದ ವರ್ಕಾಡಿ ಯಲ್ಲೂ ಅಂತಹ ಘಟನೆ […]

ಬಂಟ್ವಾಳ : ಕಳೆನಾಶಕ ಸೇವಿಸಿ ಗ್ರಾಪಂ ಅಭ್ಯರ್ಥಿ ಸಾವು

Monday, December 28th, 2020
Jayantha Prabhu

ಮಂಗಳೂರು:  ಕಳೆನಾಶಕವನ್ನು ಸೇವಿಸಿ ಗ್ರಾಪಂ ಸದಸ್ಯ ಹಾಗೂ ಹಾಲಿ ಅಭ್ಯರ್ಥಿಯೊಬ್ಬರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕಾವಳಮುಡೂರು ಗ್ರಾಮದಲ್ಲಿ ನಡೆದಿದೆ. ಕಾವಳಮುಡೂರು ಗ್ರಾಮದ ಅರ್ಗತ್ಯಾರು ನಿವಾಸಿ ಜಯಂತ ಪ್ರಭು (58) ಮೃತ ವ್ಯಕ್ತಿ. ಡಿ. 21ರಂದು ರಾತ್ರಿ 11 ಗಂಟೆಯ ವೇಳೆ ಬಾಯಿ ಹುಣ್ಣಿಗೆಂದು ತೆಗೆದುಕೊಳ್ಳುತ್ತಿದ್ದ ಔಷಧದ ಬದಲಾಗಿ ಖಾಲಿಯಾಗಿದ್ದ ಔಷಧ ಬಾಟಲಿಯಲ್ಲಿ ಶೇಖರಿಸಿಟ್ಟಿದ್ದ ಟ್ರೈಕಾಟ್ ಎಂಬ ಹುಲ್ಲಿಗೆ ಸಿಂಪಡಣೆ ಮಾಡುವ ಕಳೆನಾಶಕ ಸೇವಿಸಿದ್ದರು. ಮರುದಿನ ಗ್ರಾಪಂ ಚುನಾವಣೆಯಲ್ಲಿ ಮತದಾನ ಮಾಡಿದ್ದರಲ್ಲದೆ ಮತಗಟ್ಟೆಯಲ್ಲೂ ಒಂದಷ್ಟು ಹೊತ್ತು ಕಳೆದು […]

ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ, ಬಂಟ್ವಾಳದಲ್ಲಿ ಹಲವು ಕಾರ್ಯಕರ್ತರು ಬಿಜೆಪಿ ಸೇರ್ಪಡೆ

Monday, December 7th, 2020
Bantwala BJP

ಬಂಟ್ವಾಳ  : ಕಾಂಗ್ರೆಸ್ ನಾಯಕರ ನಡುವಿನ ಹೊಂದಾಣಿಕೆ ಕೊರತೆಯಿಂದ ಅಸಮಾಧಾನಗೊಂಡು ಪಕ್ಷದ ಕೆಲವು ಕಾರ್ಯಕರ್ತರು  ಬಿಜೆಪಿಗೆ  ಸೇರ್ಪಡೆ ಗೊಂಡಿದ್ದಾರೆ. ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸಮ್ಮುಖದಲ್ಲಿ ತಾಪಂ ಮಾಜಿ ಸದಸ್ಯ ಹಂಝ ಮಂಚಿ, ಜಗದೀಶ್ ಶೆಟ್ಟಿ ಮವಂತೂರು, ಚಂದ್ರಹಾಸ ಕರ್ಕೆರ ಅರಳ, ಮುಸ್ತಫ ಮೂಲರಪಟ್ಣ ಮತ್ತು ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ರಾಷ್ಟ್ರೀಯ ಚಿಂತನೆಗಳ ಮೂಲಕ ದೇಶಕ್ಕಾಗಿ ಕೆಲಸ ಮಾಡುವ ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಬರುವ ಎಲ್ಲರಿಗೂ ಸ್ವಾಗತ. ಕೇಂದ್ರದಿಂದ ತೊಡಗಿ ಗ್ರಾಮ ಪಂಚಾಯತ್ […]

ಬಂಟ್ವಾಳ : ಟ್ರಕ್ ಪಲ್ಟಿ ಚಾಲಕ ಮೃತ್ಯು

Wednesday, December 2nd, 2020
Bantwala Truck

ಬಂಟ್ವಾಳ:  ಬಂಟ್ವಾಳ ತಾಲೂಕಿನ ರಾ.ಹೆ.75ರ ನರಹರಿ ಪರ್ವತ ಬಳಿ ಕೃಷ್ಣಕೋಡಿ ಎಂಬಲ್ಲಿ ನಡೆದಿದ್ದುಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಪಲ್ಟಿಯಾದ ಘಟನೆ ನಡೆದಿದೆ, ಗಂಭೀರವಾಗಿ ಗಾಯಗೊಂಡಿದ್ದ ಚಾಲಕ  ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ವೈರ್ಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟ್ರಕ್, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಗಾಯಗೊಂಡ ಚಾಲಕ   ಅಕ್ರಮ್ ಬಾಷಾ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಮೆಲ್ಕಾರ್ ಸಂಚಾರ ಠಾಣಾ ಪೋಲೀಸರು ಬೇಟಿ ನೀಡಿ, […]

ಪೊಲೀಸರಿಗೆ ಮಾಹಿತಿ ನೀಡಿದ್ದೆ ಸ್ಟುಡಿಯೋ ಮಾಲೀಕ ನ ಕೊಲೆ ಯತ್ನಕ್ಕೆ ಕಾರಣವಾಯಿತೇ ?

Wednesday, October 28th, 2020
dinesh Shetty

ಬಂಟ್ವಾಳ : ಮೂವರು ದುಷ್ಕರ್ಮಿಗಳ ತಂಡ ಫರಂಗಿಪೇಟೆಯಲ್ಲಿ  ಫೊಟೋಗ್ರಾಫರ್ ಒಬ್ಬರ ಮೇಲೆ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ ರಾತ್ರಿ ವೇಳೆ ನಡೆದಿದೆ. ಫರಂಗಿಪೇಟೆಯಲ್ಲಿರುವ ಪೂಂಜಾ ಕಾಂಪ್ಲೆಕ್ಸ್ ನಲ್ಲಿರುವ ತೃಷಾ ಸ್ಟುಡಿಯೋ ಮಾಲಕ ದಿನೇಶ್ ಕೊಟ್ಟಿಂಜ ಎಂಬವರ ಮೇಲೆ ಅಪರಿಚಿತ ವ್ಯಕ್ತಿಗಳು ರಾತ್ರಿ ತಲವಾರು ದಾಳಿ ನಡೆಸಿದ್ದಾರೆ. ದಿನೇಶ ಅವರ ಹೊಟ್ಟೆಯಭಾಗಕ್ಕೆ ಮೊದಲು ಇರಿಯಲಾಗಿದೆ. ಹಲ್ಲೆಯನ್ನು ತಡೆಯಲೆತ್ನಿಸಿದ್ದಾಗ ಕೈ ಬೆರಳು ತುಂಡಾಗಿದೆ ಮತ್ತು ತಲೆಯ ಹಿಂಬದಿಗೆ ಗಂಭೀರ ಗಾಯಗಳಾಗಿದೆ. ಗಂಭೀರ ಸ್ಥಿತಿಯಲ್ಲಿ  ಗಾಯಗೊಂಡ ದಿನೇಶ್ ಅವರನ್ನು ಮಂಗಳೂರು ಎಜೆ  […]

ಬಂಟ್ವಾಳ ಉಪ ತಹಶೀಲ್ದಾರ್ ಕೋಡಜಾಲು ಶ್ರೀಧರ್ ಹೃದಯಾಘಾತದಿಂದ ನಿಧನ

Sunday, September 6th, 2020
sridhar

ಬಂಟ್ವಾಳ: ಬಂಟ್ವಾಳ ಉಪ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಧರ್ ಕೋಡಿಜಾಲ್ ಅವರು ರವಿವಾರ  ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೂಲತಃ ಪುತ್ತೂರಿನ ಕಸ್ಬಾ ಕೋಡಜಾಲು ನಿವಾಸಿಯಾಗಿದ್ದ ಶ್ರೀಧರ್ (46), ಪ್ರಸ್ತುತ ಪುತ್ತೂರಿನ ಜಿಡೆಕಲ್ಲುನಲ್ಲಿ ವಾಸವಾಗಿದ್ದರು. ನಿನ್ನೆ ಸಂಜೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಶ್ರೀನಿವಾಸ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಕೋವಿಡ್ ವಾರಿಯರ್ […]

ತಲಕಾವೇರಿಯಲ್ಲಿ ಗುಡ್ಡ ಜರಿದು ಅರ್ಚಕರ ಮನೆ ಸಮಾಧಿ, ಬಂಟ್ವಾಳದ ಅರ್ಚಕ ನಾಪತ್ತೆ

Thursday, August 6th, 2020
Archak

ಬಂಟ್ವಾಳ: ಕೊಡಗು ಜಿಲ್ಲೆಯ ತಲಕಾವೇರಿ ಭಾಗದಲ್ಲಿ ಗುಡ್ಡ ಜರಿದು ಅರ್ಚಕರ ಮನೆ ಸಮಾಧಿಯಾದ ದುರಂತ ಪ್ರಕರಣದಲ್ಲಿ ನಾಪತ್ತೆಯಾಗಿರುವ ನಾಲ್ವರಲ್ಲಿ ಬಂಟ್ವಾಳ ಮೂಲದ ಯುವ ಅರ್ಚಕರೊಬ್ಬರೂ ಸೇರಿದ್ದಾರೆ ಎಂಬ ಮಾಹಿತಿ ಇದೀಗ ಲಭಿಸಿದೆ. ಬಂಟ್ವಾಳ ಮೂಲದ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿ ರವಿಕಿರಣ್ ಈ ದುರಂತದಲ್ಲಿ ನಾಪತ್ತೆಯಾಗಿರಬಹುದೆಂದು ಇದೀಗ ಶಂಕಿಸಲಾಗುತ್ತಿದೆ. 24 ವರ್ಷದ ರವಿಕಿರಣ್ ಅವರು ರಾಮಕೃಷ್ಣ ಮತ್ತು ರೇಣುಕಾ ಭಟ್ (ಅಪ್ಪು ಭಟ್) ದಂಪತಿಯ ಪುತ್ರನಾಗಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಊರಿನಲ್ಲೇ ಇದ್ದ ರವಿಕಿರಣ್ ಅವರು ಬಳಿಕ […]