Blog Archive

ನಾನು ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾದರೆ ಒಂದು ಕ್ಷಣವೂ ಅಧಿಕಾರದಲ್ಲಿರುವುದಿಲ್ಲ: ಎಚ್ ಡಿ ಕುಮಾರಸ್ವಾಮಿ

Tuesday, June 12th, 2018
kumarswamy

ಬೆಂಗಳೂರು: ‘ನಾನು ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾದರೆ ಒಂದು ಕ್ಷಣವೂ ಅಧಿಕಾರದಲ್ಲಿರುವುದಿಲ್ಲ’ ಎಂದು ಮುಖ್ಯಮಮತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ಸಾಕಷ್ಟಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಬೆಂಗಳೂರಿನ ಗಾಂಧಿ ಭವನದಲ್ಲಿ ಜೂನ್ 11 ರಂದು ಮಾತನಾಡುತ್ತಿದ್ದ ಅವರು, ‘ಭ್ರಷ್ಟಾಚಾರದ ಬೇರು ತುಂಬಾ ಆಳವಾಗಿದೆ. ಅದನ್ನು ಸ್ವಚ್ಛಗೊಳಿಸಬೇಕು ಎಂದರೂ ಸಾಧ್ಯವಾಗುತ್ತಿಲ್ಲ. ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಲು ಪ್ರಯತ್ನಿಸಿದರೆ ನನಗೇ ಅಪಾಯ’ ಎಂದು ಅವರು ಕಳವಳ ವ್ಯಕ್ತಪಡಿಸಿದರು. ವಿಧಾನಸೌಧದ ಕಾರಿಡಾರ್ ಗಳಲ್ಲಿ ಮಧ್ಯವರ್ತಿಗಳು ಅಡ್ಡಾಡುತ್ತಾ ಜನರಿಂದ […]

ಸಚಿವ ಸ್ಥಾನ ಸಿಗದವರು ತಾಳ್ಮೆಯಿಂದ ಕಾಯಿರಿ: ಪರಮೇಶ್ವರ್

Thursday, June 7th, 2018
G.parameshwara

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗುವ ಅವಕಾಶ ಕಳೆದುಕೊಂಡಿರುವ ಶಾಸಕರು ನಿರಾಶರಾಗಬೇಕಿಲ್ಲ. ತಾಳ್ಮೆಯಿಂದ ಕೆಲ ಸಮಯ ಕಾಯಿರಿ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮನವಿ ಮಾಡಿದ್ದಾರೆ. ಬೆಂಗಳೂರಿನ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರ ಆಶಯ ಈಡೇರಿಕೆ ಕಷ್ಟಸಾಧ್ಯ. ಆದ್ದರಿಂದ ಅತೃಪ್ತರು ಕೆಲ ಸಮಯ ತಾಳ್ಮೆಯಿಂದಿರಿ. ಮೈತ್ರಿ ಸರ್ಕಾರವನ್ನು ಇಡೀ ದೇಶ ನೋಡುತ್ತಿದೆ. ಪ್ರತಿಪಕ್ಷ ಬಿಜೆಪಿ ಅವಕಾಶಕ್ಕೆ ಕಾಯುತ್ತಿದೆ. ಇದಕ್ಕೆಲ್ಲಾ ಆಸ್ಪದ […]

ಗಿಡ ನೆಟ್ಟು ಪರಿಸರ ದಿನ ಆಚರಿಸಿದ ಸಿಎಂ ಹೆಚ್.ಡಿ.ಕುಮಾರಸ್ವಾಮಿ

Tuesday, June 5th, 2018
kumarswamy-3

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜೆಪಿ ನಗರದ ತಮ್ಮ ನಿವಾಸದ ಎದುರಿನ ನಗರ ಪಾಲಿಕೆ ಉದ್ಯಾನವನದಲ್ಲಿ ಇಂದು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ವಿಶ್ವ ಪರಿಸರ ದಿನದಂದು ಪ್ರತಿಯೊಬ್ಬರು ಪರಿಸರ ಉಳಿಸುವ ಪ್ರತಿಜ್ಞೆ ಮಾಡಬೇಕು . ಪರಿಸರ ಕಾಪಾಡಲು ನಮ್ಮ ಸರ್ಕಾರ ಪೂರ್ಣ ಪ್ರಮಾಣದ ಆದ್ಯತೆ ನೀಡುತ್ತದೆ ಎಂದರು. ಈ ಸಂದರ್ಭದಲ್ಲಿ ಅಧಿಕಾರಿಗಳು, ಸ್ಥಳೀಯ ನಿವಾಸಿಗಳು, ವಾಯುವಿಹಾರಿಗಳು ಹಾಜರಿದ್ದರು.

ಸಿನಿಮಾಗಿಂತ ನೀರು ಮುಖ್ಯ, ನಾನು ಜನರ ಪ್ರತಿನಿಧಿಯಾಗಿ ಬಂದಿದ್ದೇನೆ: ಕಮಲ್ ಹಾಸನ್

Monday, June 4th, 2018
kamal-kumaar

ಬೆಂಗಳೂರು: ಖ್ಯಾತ ನಟ, ರಾಜಕಾರಣಿ ಕಮಲ್ ಹಾಸನ್ ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮಧ್ಯಾಹ್ನ ಕಮಲ್ ಹಾಸನ್ ಹಾಗೂ ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸಿದ ಬಳಿಕ ಜಂಟಿಯಾಗಿ ಇಬ್ಬರೂ ಮಾತನಾಡಿದರು. ಸಿನಿಮಾಗಿಂತ ನೀರು ಮುಖ್ಯ: ಕಮಲ್ ಹಾಸನ್ ಮಾತನಾಡಿ, ನಾವು ಎರಡೂ ರಾಜ್ಯಗಳು ಸಹೋದರತ್ವದಿಂದ ಬಾಳಬೇಕಾಗಿದೆ. ನಾನು ಸರ್ಕಾರದ ಪ್ರತಿನಿಧಿಯಾಗಿ ಕರ್ನಾಟಕಕ್ಕೆ ಬಂದಿಲ್ಲ, ಜನರ ಪ್ರತಿನಿಧಿಯಾಗಿ ಬಂದಿದ್ದೇನೆ. ಅಷ್ಟೇ ಅಲ್ಲ ಕುರುವೈ ಬೆಳೆಗೆ ನೀರು […]

ಇಂದು ಹೆಚ್‌ಡಿಕೆ ಭೇಟಿ ಮಾಡಲಿರುವ ಕಮಲ್ ಹಾಸನ್

Monday, June 4th, 2018
kamal-hassan

ಬೆಂಗಳೂರು: ತಮಿಳುನಾಡಿನ ಹಿರಿಯ ನಟ, ರಾಜಕಾರಣಿ ಕಮಲ್ ಹಾಸನ್ ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಬೆಳಗ್ಗೆ 11.30 ರ ಸುಮಾರಿಗೆ ಕುಮಾರಸ್ವಾಮಿ ಅವರು ಕಮಲ್ ಹಾಸನ್ ಭೇಟಿ ಮಾಡಲಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ. ಕರ್ನಾಟಕದಲ್ಲಿ ತಮಿಳು ಚಿತ್ರ ಬಿಡುಗಡೆಗೆ ಅಡ್ಡಿ ವಿಚಾರ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ ವಿಚಾರವಾಗಿ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕುಮಾರಸ್ವಾಮಿ ಪ್ರಮಾಣ ವಚನ ಸಮಾರಂಭಕ್ಕೂ ಆಗಮಿಸಿದ್ದ ಕಮಲ […]

ಬೆಂಗಳೂರು ಅಭಿವೃದ್ಧಿ ಬಗ್ಗೆ ನಾರಾಯಣಮೂರ್ತಿ ಜೊತೆ ಸಿಎಂ ಚರ್ಚೆ

Friday, June 1st, 2018
kumarswamy

ಬೆಂಗಳೂರು: ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ಕುರಿತು ಇನ್ಫೋಸಿಸ್‌ನ ಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರು ಸದ್ಯದಲ್ಲೇ ತಮ್ಮ ಸಲಹೆಗಳನ್ನು ಮುಖ್ಯಮಂತ್ರಿಗಳಿಗೆ ನೀಡಲಿದ್ದಾರೆ. ಬೆಂಗಳೂರಲ್ಲಿ ಇಂದು ಬೆಳಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಾರಾಯಣಮೂರ್ತಿ ಅವರನ್ನು ಭೇಟಿಯಾಗಿ ಈ ಸಂಬಂಧ ಚರ್ಚಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಂಗಳೂರಿನ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ ಹಾಗೂ ಇನ್ನಿತರ ಮಹತ್ವದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಮಿತಿ ರಚಿಸಲು ಮಾರ್ಗದರ್ಶನ ನೀಡುವಂತೆ ನಾರಾಯಣ ಮೂರ್ತಿ ಅವರನ್ನು ಕೋರಿದರು. ಮುಖ್ಯಮಂತ್ರಿಗಳ ನೇತೃತ್ವದಲ್ಲಿಯೇ ರಚಿಸಲಾಗುವ […]

ರಾಜರಾಜೇಶ್ವರಿ ನಗರದ ಅಭ್ಯರ್ಥಿ ನಟ ಹುಚ್ಚ ವೆಂಕಟ್‌ ಹೀನಾಯ ಸೋಲು..!

Thursday, May 31st, 2018
huccha-venkat

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಚುನಾವಣಾ ಸ್ಪರ್ಧೆಗಿಳಿದಿದ್ದ ನಟ ಹುಚ್ಚ ವೆಂಕಟ್‌ ಹೀನಾಯವಾಗಿ ಸೋಲು ಅನುಭವಿಸಿದ್ದಾರೆ. ಚಲಾವಣೆಯಾದ 2,56,444 ಮತಗಳ ಪೈಕಿ ಹುಚ್ಚ ವೆಂಕಟ್‌ ಕೇವಲ 764 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹುಚ್ಚ ವೆಂಕಟ್‌ ‘ನಾನು ಸೋತಿಲ್ಲ. ಕ್ಷೇತ್ರದ ಜನತೆ ಸೋತಿದ್ದಾರೆ. ನಾನು ಹಣ ಹಂಚಿಲ್ಲ .ಹೆಂಡ ಹಂಚಿಲ್ಲ, ಕುಕ್ಕರ್ ಹಂಚಿಲ್ಲ. ನನ್‌ ಯಕ್ಡಾ ಕೂಡ ಅಂತಾ ವೋಟುಗಳನ್ನು ಕೇಳಲ್ಲಾ’ ಎಂದು ಕಿಡಿ ಕಾರಿದರು.

ಸಾಲ ಮನ್ನಾ ಮಾಡಲು ಕಾಂಗ್ರೆಸ್‌ ವಿರೋಧವಿಲ್ಲ: ಪರಮೇಶ್ವರ್‌

Wednesday, May 30th, 2018
g-pareshmeshwar

ಬೆಂಗಳೂರು: ರೈತರ ಸಾಲಮನ್ನಾ ಮಾಡಲು ಕಾಂಗ್ರೆಸ್ ಪಕ್ಷದ ವಿರೋಧವಿಲ್ಲ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ. ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಾಲಮನ್ನಾ ಕುರಿತ ಪ್ರಮುಖ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಜೆಡಿಎಸ್‌ಗೆ ಬಹುಮತ ಬಂದಿದ್ದರೆ ಕುಮಾರಸ್ವಾಮಿ ಈ ಹೊತ್ತಿಗೆ ಸಾಲಮನ್ನಾ ಮಾಡಿರುತ್ತಿದ್ದರು, ಆದರೆ ಸಮ್ಮಿಶ್ರ ಸರ್ಕಾರವಾದ್ದರಿಂದ ಚರ್ಚಿಸಿಯೇ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ರೈತರೊಂದಿಗಿನ ಸಭೆಯಲ್ಲೂ ಈ ವಿಷಯ ಮಾತನಾಡಿದ ಪರಮೇಶ್ವರ್ ಅವರು, ಮನೆ, ವಾಹನಕ್ಕೆ ಮಾಡಿದ ಸಾಲಗಳನ್ನು ಮನ್ನಾ […]

ಮಧ್ಯಾಹ್ನದ ಹೊತ್ತಿಗೆ ರೈತರಿಗೆ ಗುಡ್ ನ್ಯೂಸ್: ಜಿ.ಟಿ. ದೇವೇಗೌಡ

Wednesday, May 30th, 2018
g-t-devegowda

ಬೆಂಗಳೂರು: ರೈತರ ಸಾಲಮನ್ನ ಕುರಿತು ಇಂದು ಸಿಎಂ ನಿರ್ಧಾರ ಪ್ರಕಟಿಸಲಿರುವ ಹಿನ್ನೆಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು ಭೇಟಿ ಮಾಡಿ ಚರ್ಚಿಸಿದರು. ಜೆಪಿ ನಗರ ನಿವಾಸಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ್ದ ಅವರು, ಕೆಲ ಸಮಯ ಸಿಎಂ ಹೆಚ್‌ಡಿಕೆ ಜೊತೆ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಮುಗಿದ ನಂತರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದು ಅವರನ್ನು ಭೇಟಿ ಮಾಡಿದ್ದೇನೆ ಎಂದರು. ಅಲ್ಲದೆ, ಮಧ್ಯಾಹ್ನದ […]

ಶೀಘ್ರದಲ್ಲೇ ಕೆಎಸ್‌ಆರ್‌ಟಿಸಿ ಬಸ್‌‌‌‌ ಟಿಕೆಟ್‌ ದರ ಏರಿಕೆ?

Monday, May 28th, 2018
ksrtc-bus

ಬೆಂಗಳೂರು: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಬೆನ್ನಲ್ಲೇ ಈಗ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಟಿಕೆಟ್ ದರ ಹೆಚ್ಚಳದ ಬಗ್ಗೆ ಸರ್ಕಾರದ ಮುಂದೆ ಕೆಎಸ್‌ಆರ್‌ಟಿಸಿ ನಿಗಮ ಪ್ರಸ್ತಾವನೆ ಇಡಲಿದೆ ಎನ್ನಲಾಗಿದೆ. ಕಳೆದ ಮೂರು ವರ್ಷಗಳಿಂದ ಟಿಕೆಟ್ ದರ ಏರಿಕೆ ಮಾಡದೇ ಇರುವ ಹಿನ್ನೆಲೆ ಮತ್ತು ದಿನದಿಂದ ದಿನಕ್ಕೆ ಡಿಸೇಲ್ ಬೆಲೆ ಏರಿಕೆಯಾಗುತ್ತಿರುವ ಕಾರಣದಿಂದ ಬಸ್ ಟಿಕೆಟ್ ದರ ಏರಿಕೆ ಮಾಡಲು ಸಾರಿಗೆ ನಿಗಮ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಇನ್ನು ಪೆಟ್ರೋಲ್, […]