Blog Archive

ಯಡಿಯೂರಪ್ಪ ಸರ್ಕಾರ ಭ್ರಷ್ಟಾಚಾರದಲ್ಲಿ ನಂಬರ್‌ 1: ಹೇಳಿಕೆ ನೀಡಿ ಮುಜುಗರಕ್ಕೊಳಗಾದ ಶಾ

Tuesday, March 27th, 2018
amit-shah

ದಾವಣಗೆರೆ: ಮಾತನಾಡುವ ಭರದಲ್ಲಿ, ಭ್ರಷ್ಟಾಚಾರದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ನಂಬರ್‌‌ 1 ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮುಜುಗರಕ್ಕೊಳಗಾಗಿರುವ ಘಟನೆ ನಡೆದಿದೆ. ದಾವಣಗೆರೆ ತಾಲೂಕಿನ ದೊಡ್ಡ ಬಾತಿ ಗ್ರಾಮದಲ್ಲಿ ಐದು ರೈತರ ಮನೆಗಳಲ್ಲಿ ಮುಷ್ಠಿ ಅಕ್ಕಿ ಸಂಗ್ರಹಿಸಿ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ರೀತಿಯ ಹೇಳಿಕೆ ನೀಡಿ ಮುಜುಗರಕ್ಕೆ ಒಳಗಾಗಿದ್ದಾರೆ. ಸುದ್ದಿಗೋಷ್ಠಿ ವೇಳೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಶಾ ಮಾತಿನ ಭರದಲ್ಲಿ ಈ ರೀತಿ […]

ಶಾಶ್ವತ ಸೂರು ನೀಡುವ ಕಾರ್ಯದಲ್ಲಿ ಯಶಸ್ವಿ: ಮೊದಿನ್ ಬಾವಾ

Wednesday, March 21st, 2018
mohaiddin-bava

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬಡ ವರ್ಗಕ್ಕೆ ಭೂಮಿಯ ಹಕ್ಕು ನೀಡುವ ಮೂಲಕ ಶಾಶ್ವತ ಸೂರು ನೀಡುವ ಕಾರ್ಯದಲ್ಲಿ ಯಶಸ್ವಿಯಾಗಿದೆ ಎಂದು ಶಾಸಕ ಮೊದಿನ್ ಬಾವಾ ಹೇಳಿದರು. ಇಂದು ನಾನಾ ಸೌಲಭ್ಯದ ಫಲಾನುಭವಿಗಳಿಗೆ ಚೆಕ್ ಹಾಗೂ ಹಕ್ಕುಪತ್ರ ವಿತರಣೆಯ ಬಳಿಕ ಅವರು ಮಾತನಾಡುತ್ತಿದ್ದರು. ಮಾಜಿ ಮುಖ್ಯ ಮಂತ್ರಿಗಳಾದ ಗುಂಡೂರಾವ್ ಮತ್ತು ಎಸ್.ಎಂ. ಕೃಷ್ಣ ಅವಧಿಯಲ್ಲಿ ಹಕ್ಕು ಪತ್ರ ನೀಡಿದ ಕಾಂಗ್ರೆಸ್ ಸರಕಾರ ಇದೀಗ ಹಕ್ಕು ಪತ್ರ ನೀಡುವ ಕೆಲಸ ಮಾಡಿದೆ. ಹಕ್ಕುಪತ್ರ ನೀಡುವ ಕಾನೂನು ಜಾರಿಗೊಳಿಸಿದ ರಾಜ್ಯ […]

ಯೋಗಿ, ಅಮಿತ್ ಶಾ ಬಂದರೂ ಬಿಜೆಪಿ ಗೆಲ್ಲುವುದಿಲ್ಲ : ಸಿದ್ದರಾಮಯ್ಯ

Wednesday, March 21st, 2018
siddaramaih

ಮಂಗಳೂರು: ‘ಕರ್ನಾಟಕ ಶಿಶುನಾಳ ಷರೀಫ, ಬಸವಣ್ಣ ಅವರ ನಾಡು. ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಎಷ್ಟು ಬಾರಿ ಬೇಕಾರೂ ಬರಲಿ, ಅವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಗಳವಾರ ಸಂಜೆ ಮಂಗಳೂರಿನ ನೆಹರು ಮೈದಾನದಲ್ಲಿ ಜನಾಶೀರ್ವಾದ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು. ಬೃಹತ್ ಸಮಾವೇಶ ಕರಾವಳಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಆಯಿತು. ಕಾಂಗ್ರೆಸ್ ಪಾಂಡವರಂತೆ, ಬಿಜೆಪಿ ಕೌರವರಂತೆ : ರಾಹುಲ್ ಗಾಂಧಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ […]

ಕಟ್ಟಡಗಳು ಉದ್ಘಾಟನೆ ಆಗ್ತಿವೆ ಅಂದ್ರೆ ಇಲಾಖೆಗಳು ಪ್ರಗತಿಯಲ್ಲಿವೆ ಎಂದರ್ಥ: ಸಿಎಂ

Thursday, March 15th, 2018
ingruation

ಬೆಂಗಳೂರು: ರಾಜಾಜಿನಗರದಲ್ಲಿ ನಿರ್ಮಿಸಿರುವ ಕರ್ನಾಟಕ ರಾಜ್ಯದ ರಸ್ತೆ ಅಭಿವೃದ್ಧಿ ನಿಗಮದ ಆಡಳಿತ ಕಚೇರಿ ಕಟ್ಟಡ “ಸಂಪರ್ಕ ಸೌಧ”ವನ್ನು ಸಿಎಂ ಸಿದ್ದರಾಮಯ್ಯ ಇಂದು ಉದ್ಘಾಟಿಸಿದರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ನೂತನ ಆಡಳಿತ ಕಚೇರಿ ಕಟ್ಟಡ ಇದಾಗಿದೆ. ಡಾ. ರಾಜ್‍ಕುಮಾರ್‍ ರಸ್ತೆಯ ಒರಾಯನ್ ಮಾಲ್ ಮುಂಭಾಗ ಕಟ್ಟಡ ನಿರ್ಮಿಸಲಾಗಿದೆ. ಸಮಾರಂಭ ಉದ್ಘಾಟಿಸಿದ ಸಿಎಂ, ನಗರದ ವಿವಿಧ ಭಾಗಗಳಲ್ಲಿ ಸರ್ಕಾರದ ನಾನಾ ಇಲಾಖೆಯ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ. ಇದು ಸಂತಸದ ಸಂಗತಿ. ಇಲಾಖೆಗಳು ಪ್ರಗತಿಯಲ್ಲಿವೆ ಎನ್ನುವುದಕ್ಕೆ ಇಂತಹ ಕಟ್ಟಡಗಳೇ ಸಾಕ್ಷಿ ಎಂದರು. […]

ಕರ್ನಾಟಕದಲ್ಲಿ ಭಾಷಣ ಬಿಗಿಯುವ ಬದಲು, ಉತ್ತರ ಪ್ರದೇಶದ ಬಗ್ಗೆ ಯೋಗಿ ತಲೆಕೆಡಿಸಿಕೊಳ್ಳಲಿ: ಸಿದ್ದರಾಮಯ್ಯ

Thursday, March 15th, 2018
siddaramaih

ಬೆಂಗಳೂರು: ಉಪ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ಧ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಕರ್ನಾಟಕದಲ್ಲಿ ಭಾಷಣ ಬಿಗಿಯುವ ಬದಲು, ಉತ್ತರ ಪ್ರದೇಶದ ಬಗ್ಗೆ ಯೋಗಿ ತಲೆಕೆಡಿಸಿಕೊಳ್ಳಲಿ ಎಂದು ಸಿದ್ದರಾಮಯ್ಯ ಟ್ವಿಟರ್ ಮೂಲಕ ವ್ಯಂಗ್ಯವಾಡಿದ್ದಾರೆ. ಈ ಹಿಂದೆಯೂ ಟ್ವಿಟರ್‌‌ನಲ್ಲಿ ಪರಸ್ಪರ ಇಬ್ಬರು ಮುಖಂಡರು ವಾಗ್ದಾಳಿ ನಡೆಸಿದ್ದರು. ಈಗ ಯೋಗಿ ತವರು ಕ್ಷೇತ್ರ ಗೋರಖ್‌ಪುರದಲ್ಲಿ ಬಿಜೆಪಿ ಸೊಲುಂಡಿರುವುದ್ದಕ್ಕೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಉತ್ತರ ಪ್ರದೇಶದ ಅಭಿವೃದ್ಧಿಯ ಬಗ್ಗೆ ಗಮನ […]

ರೌಡಿಗಳೆಲ್ಲಾ ಸಿಎಂ ಮನೆ ಸೇರಿದ್ದಾರೆ: ಆರ್. ಅಶೋಕ್

Wednesday, March 14th, 2018
R-ashok

ಬೆಂಗಳೂರು: ಮಹಾನಗರದಲ್ಲಿ ರೌಡಿಗಳೆಲ್ಲಾ ಸಿಎಂ ಸಿದ್ದರಾಮಯ್ಯ ಮನೆ ಸೇರಿಕೊಂಡಿದ್ದಾರೆ. ಅವರಿಗೆ ಮುಖ್ಯಮಂತ್ರಿಯೇ ಆಶ್ರಯ ನೀಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಆರೋಪಿಸಿದ್ದಾರೆ. ಬೆಂಗಳೂರಿನ ಪುಲಕೇಶಿನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಹಮ್ಮಿಕೊಂಡಿದ್ದ ಬೆಂಗಳೂರು ರಕ್ಷಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಾನು ಗೃಹ ಸಚಿವನಾಗಿದ್ದಾಗ ರೌಡಿಗಳು ಪರಾರಿಯಾಗಿದ್ದರು. ಜೀವ ಉಳಿಸಿಕೊಳ್ಳಲು ಬೆಂಗಳೂರಿನಿಂದ ಓಡಿ ಹೋಗಿದ್ದರು. ಆದರೆ ಅವರೆಲ್ಲಾ ವಾಪಸಾಗಿ ಸಿಎಂ ಮನೆ ಸೇರಿದ್ದಾರೆ ಎಂದು ಹೇಳಿದರು. ಮೊಹಮದ್ ನಲಪಾಡ್, ನಾರಾಯಣಸ್ವಾಮಿ ಅಂತವರು ಏನು ಮಾಡಿದ್ದಾರೆ ಎನ್ನುವುದು […]

ತಮ್ಮನ್ನು ಭಯೋತ್ಪಾದಕರು ಎಂದಿರುವ ಬಿಜೆಪಿ ಮುಖಂಡನ ವಿರುದ್ಧ ಖಾದರ್‌ ಕಿಡಿ

Monday, March 12th, 2018
cong-BJP

ಮಂಗಳೂರು: ಸಚಿವರಾದ ರೈ ಹಾಗೂ ಖಾದರ್‌ಅನ್ನು ಭಯೋತ್ಪಾದಕರು ಎಂದಿರುವ ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿ ಕುಮಾರ್ ಹೇಳಿಕೆಗೆ ಸಚಿವ ಯು.ಟಿ. ಖಾದರ್ ತಿರುಗೇಟು ನೀಡಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರವಿ ಕುಮಾರ್ ಮಾತಿಗೆ ನಾವು ದೊಡ್ಡ ಮಹತ್ವ ಕೊಡಲ್ಲ. ಅವರು ಬುದ್ಧಿಯ ಸ್ಥಿಮಿತತೆ ಕಳೆದುಕೊಂಡು ಅವಿವೇಕದಿಂದ ಮಾತನ್ನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ರವಿಕುಮಾರ್‌ ವ್ಯಕ್ತಿತ್ವ ಹಾಗೆ ಇದ್ದಿರಬಹುದಾದ್ದರಿಂದ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಮಾನಸಿಕ ರೋಗ ಬರುವ ಸೀಜನ್ ಆದ್ದರಿಂದ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರಬಹುದು. […]

ರಾಜ್ಯ ಧ್ವಜ ಬಳಕೆಗೆ ಅನುಮತಿ ಕೋರಿ ಕೇಂದ್ರಕ್ಕೆ‌ ಪತ್ರ: ಸಿಎಂ ಸಿದ್ದರಾಮಯ್ಯ

Thursday, March 8th, 2018
flag-karnataka

ಬೆಂಗಳೂರು : ಹಳದಿ ಬಿಳಿ ಹಾಗೂ ಕೆಂಪು ಬಣ್ಣವನ್ನು ಒಳಗೊಂಡ ತ್ರಿವರ್ಣ ಧ್ವಜದ ಮಧ್ಯೆ ನೀಲಿ ಬಣ್ಣದಲ್ಲಿ ರಾಜ್ಯ ಲಾಂಛನ ಗಂಡ ಭೇರುಂಡ ಇರುವ ಧ್ವಜವನ್ನು ರಾಜ್ಯ ಧ್ವಜವನ್ನಾಗಿ ಅಧಿಕೃತವಾಗಿ ಬಳಸಲು ಒಪ್ಪಿಗೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದ್ದ ಸಮಿತಿ ಸಿದ್ಧಪಡಿಸಿರುವ ನಾಡಧ್ವಜದ ವಿನ್ಯಾಸದ ಬಗ್ಗೆ ಚರ್ಚಿಸಲು ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮುಖ್ಯಮಂತ್ರಿಯವರು ರಾಜ್ಯದ ಕನ್ನಡಪರ […]

ಮಕ್ಕಳಿಗೆ ಆಕ್ಸಿಜನ್ ಪೂರೈಸಲಾಗದ ಆದಿತ್ಯನಾಥ್ : ಎಚ್ ಡಿಕೆ ವಾಗ್ದಾಳಿ

Wednesday, March 7th, 2018
kumarswamy

ಮಂಗಳೂರು: ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಅಲ್ಲಿನ ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳಿಗೆ ಆಕ್ಸಿಜನ್ ಪೂರೈಸಲು ಆಗಲಿಲ್ಲ. ರಾಜ್ಯದಲ್ಲಿ ಸುರಕ್ಷತೆ ಸಂದೇಶ ಕೊಡಲು ಇಲ್ಲಿಯ ಬಿಜೆಪಿಯ ನಾಯಕರು ಅವರನ್ನು ಕರೆಸಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿ ಆಯೋಜಿಸಿದ್ದ ಜೆಡಿಎಸ್ ವಿಕಾಸ ಪರ್ವ ಸಮಾವೇಶದಲ್ಲಿ ಅವರು ಮಾತನಾಡಿ, ರಾಜ್ಯದ ಬಿಜೆಪಿ ನಾಯಕರು ಭೋಗಿಗಳಾಗಿದ್ದಕ್ಕೆ, ಯೋಗಿ ಆದವರನ್ನು ರಾಜ್ಯಕ್ಕೆ ಕರೆಸಿದ್ದಾರೆ. ವಿಧಾನಸೌಧದಲ್ಲಿ ನೀಲಿ ಚಿತ್ರಗಳನ್ನು ನೋಡಿ ಬಿಜೆಪಿಯ ಕೆಲವರು ಭೋಗಿಗಳಾಗಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ […]

ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ಇದ್ದಂತೆ : ಯೋಗಿ

Wednesday, March 7th, 2018
yogi-adithyanath

ಮಂಗಳೂರು: ‘ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ಇದ್ದಂತೆ. ಕರ್ನಾಟಕದ ಪ್ರತಿ ಯೋಜನೆಯಿಂದ ಜನರ ದುಡ್ಡನ್ನು ಕಾಂಗ್ರೆಸಿಗರು ಲೂಟಿ ಮಾಡಿದ್ದಾರೆ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದರು. ಮಂಗಳೂರಿನಲ್ಲಿ ಬಿಜೆಪಿಯ ಜನಸುರಕ್ಷಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮಂಗಳೂರಿನ ಕೇಂದ್ರ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಯಡಿಯೂರಪ್ಪ ನೇತೃತ್ವದಲ್ಲಿ ಕರ್ನಾಟಕದಲ್ಲಿ ಹೊಸ ಅಲೆ ಎದ್ದಿದೆ. ಈಶಾನ್ಯದ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ತ್ರಿಪುರಾ, ನಾಗಾಲ್ಯಾಂಡಲ್ಲಿ ಕಾಂಗ್ರೆಸ್ […]