Blog Archive

ಹೆಲಿಕಾಪ್ಟರ್ ಬಾಡಿಗೆ ಹಣ ವಿಚಾರ: ಬಿಎಸ್‌ವೈಗೆ ಹೆಚ್‌ಡಿಕೆ ತಿರುಗೇಟು

Thursday, June 7th, 2018
yedyurappa

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ, ವಿಧಾನಸಭೆ ಪ್ರತಿಪಕ್ಷ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಂದ ಹೆಲಿಕಾಪ್ಟರ್ ಬಾಡಿಗೆ ಹಣ ಕಟ್ಟಿಸಿಕೊಳ್ಳುವಷ್ಟು ದರಿದ್ರ ರಾಜ್ಯ ಸರ್ಕಾರಕ್ಕೆ ಬಂದಿಲ್ಲವೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರಿಂದ ನಮಗೆ ಯಾವುದೇ ಪತ್ರ ಬಂದಿಲ್ಲ. ಸರ್ಕಾರದ ಹಣ ದುಂದು ವೆಚ್ಚ ಆಗಬಾರದು ಎಂದು ಹೆಲಿಕಾಪ್ಟರ್ ಪ್ರಯಾಣದ ವೆಚ್ಚವನ್ನು ಉಲ್ಲೇಖಿಸಲಾಗಿತ್ತು. ತಾವು ದೆಹಲಿಗೆ ವಿಶೇಷ ವಿಮಾನದಲ್ಲಿ ಹೋಗಿ ಬಂದಿದ್ದರೆ 40 ಲಕ್ಷ ರೂ. ಖರ್ಚಾಗುತ್ತಿತ್ತು. ಆದರೆ, ಸಾಮಾನ್ಯ […]

ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟ: ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಗರಂ

Tuesday, June 5th, 2018
eshwarappa

ಬೆಂಗಳೂರು: ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದೆ. ಶಿವಮೊಗ್ಗದ ಹಿಡಿತ ಸಾಧಿಸುವ ಸಲುವಾಗಿಯೇ ಈ ಬಾರಿಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕೆ.ಎಸ್.ಈಶ್ವರಪ್ಪ ಮತ್ತೊಮ್ಮೆ ಸಿಡಿದು ನಿಂತಿದ್ದಾರೆ. ಹೌದು, ರಾಜ್ಯ ಬಿಜೆಪಿಯಲ್ಲಿ ತಲೆದೂರುವ ಭಿನ್ನಮತದ ಮೂಲ ಹುಡುಕಿಕೊಂಡು ಹೊರಟರೆ ಅದು ತಲುಪುವುದು ಶಿವಮೊಗ್ಗಕ್ಕೆ. ಒಂದಲ್ಲ ಒಂದು ಕಾರಣದಿಂದ ಶಿವಮೊಗ್ಗ ನಾಯಕರಿಂದಲೇ ಭಿನ್ನಮತೀಯ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿರುತ್ತದೆ, ಈಗಲೂ ಹಾಗೆಯೇ ಆಗಿದೆ. ವಿಧಾನಸಭೆ ಚುನಾವಣೆಗೂ ಮುನ್ನ ಶಿವಮೊಗ್ಗ ಟಿಕೆಟ್ ಈಶ್ವರಪ್ಪ ಕೈತಪ್ಪಲಿದೆ ಎನ್ನುವ ಮಾತುಗಳು […]

ದ್ವೇಷ ರಾಜಕಾರಣ ಕಾಂಗ್ರೆಸ್ ಸಂಸ್ಕೃತಿಯಲ್ಲ…ಅದು ಬಿಜೆಪಿಯ ಸಂಸ್ಕೃತಿ: ಯು.ಟಿ.ಖಾದರ್

Tuesday, June 5th, 2018
u-t-kader

ಮಂಗಳೂರು: ದ್ವೇಷ ರಾಜಕಾರಣ ಕಾಂಗ್ರೆಸ್ ಸಂಸ್ಕೃತಿಯಲ್ಲ. ಅದು ಬಿಜೆಪಿಯ ಸಂಸ್ಕೃತಿ. ನಮ್ಮದು ಏನಿದ್ದರೂ ಪ್ರೀತಿಯ ರಾಜಕಾರಣ. ಜಿಲ್ಲೆಯಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದರೂ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸುವುದರಲ್ಲಿ ಕಾರ್ಯಕರ್ತರ ಪರಿಶ್ರಮವೇ ಕಾರಣ. ಮುಂದಿನ ಲೋಕಸಭೆ ಚುನಾವಣೆಗೆ ನಾವೆಲ್ಲರೂ ಸಿದ್ದರಾಗಬೇಕಿದೆ ಎಂದು ಶಾಸಕ ಯು.ಟಿ.ಖಾದರ್ ಅವರು ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ಖಾಸಗಿ ಸಭಾಂಗಣದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮ ಹಾಗೂ ಇಪ್ತಾರ್‌ಕೂಟದಲ್ಲಿ ಭಾಗವಹಿಸಿ ಮಾತನಾಡಿದರು. ಮಂಗಳೂರು ಕ್ಷೇತ್ರದ ಜನತೆ ಅತ್ಯಂತ ಪ್ರೀತಿ ವಿಶ್ವಾಸ ನಂಬಿಕೆಯೊಂದಿಗೆ […]

ನಮ್ಮ ಗುರಿ ಮೂಡುಬಿದಿರೆ ಪುರಸಭೆಯನ್ನು ಕಾಂಗ್ರೆಸ್ ಮುಕ್ತ ಮಾಡುವುದು: ಉಮಾನಾಥ ಕೋಟ್ಯಾನ್

Monday, June 4th, 2018
umanath-kotian

ಮೂಡುಬಿದಿರೆ: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಉಮಾನಾಥ ಕೋಟ್ಯಾನ್ ಹಾಗೂ ಕಾರ್ಯಕರ್ತರಿಗೆ ಭಾರತೀಯ ಜನತಾ ಪಾರ್ಟಿ ಮೂಡುಬಿದಿರೆ ಇದರ ವತಿಯಿಂದ ಅಭಿನಂದನಾ ಕಾರ್ಯಕ್ರಮವು ರವಿವಾರ ಪದ್ಮಾವತಿ ಕಲಾ ಮಂಟಪದಲ್ಲಿ ನಡೆಯಿತು. ಸಂಸದ ನಳಿನ್ ಕುಮಾರ್ ಕಟೀಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜಕೀಯವಾಗಿ ಬೆಳೆದಿರುವ ಕ್ಷೇತ್ರ ಮೂಡುಬಿದಿರೆಯಲ್ಲಿ ಬಿಜೆಪಿಯ ಗೆಲುವಿನ ಸಾಧನೆ ಅದ್ಭುತ. ಈ ಗೆಲುವಿನ ಹಿಂದೆ ಸಹಸ್ರರು ಕಾರ್ಯಕರ್ತರ ಪರಿಶ್ರಮವಿದೆ. ಕಾಂಗ್ರೆಸ್ ಮುಕ್ತ ಕ್ಷೇತ್ರವಾಗಿ ಮೂಡುಬಿದಿರೆಯು ಮಾರ್ಪಾಡಾಗಬೇಕೆಂಬುದು ಭಾರತೀಯ […]

ರಾಜೇಶ್ ನಾಯಕ್ ಬಂಟ್ವಾಳ ಕ್ಷೇತ್ರದಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ವತಿಯಿಂದ ವಿಜಯೋತ್ಸವ..!

Saturday, June 2nd, 2018
Rajesh-nayak

ಬಂಟ್ವಾಳ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಂಟ್ವಾಳ ಕ್ಷೇತ್ರದಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಬಿ.ಸಿ.ರೋಡು-ಕೈಕಂಬದಿಂದ ಬಿ.ಸಿ.ರೋಡು, ಗಾಣದಪಡ್ಪು, ಬಂಟ್ವಾಳ ನೆರೆವಿಮೋಚನಾ ರಸ್ತೆ, ಬಂಟ್ವಾಳ ಪೇಟೆ,ಬಡ್ಡಕಟ್ಟೆ, ಜಕ್ರಿಬೆಟ್ಟು ಮೂಲಕ ಬೈಪಾಸ್ ರಾಮನಗರ ಜಂಕ್ಷನ್‌ವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಶಿಲ್ಪ ಗೊಂಬೆ ಕುಣಿತ, ಚೆಂಡೆ, ಡಿಜೆ ಸೆಟ್ ಆಕರ್ಷಣೀಯವಾಗಿತ್ತು.

ಬಿಜೆಪಿಗೆ ತಕ್ಕ ಉತ್ತರ ನೀಡಿದ ಮತದಾರರಿಗೆ ನಾನು ತುಂಬು ಧನ್ಯವಾದ ಅರ್ಪಿಸುತ್ತೇನೆ: ಅಖಿಲೇಶ್ ಯಾದವ್

Thursday, May 31st, 2018
akhilesh-yadav

ಲಕ್ನೋ: “ಉಪಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಿದ ಮತದಾರರಿಗೆ ನಾನು ತುಂಬು ಧನ್ಯವಾದ ಅರ್ಪಿಸುತ್ತೇನೆ” ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದಾರೆ. “ನಮಗೆ ಮತಚಲಾಯಿಸಿದ ಎಲ್ಲರಿಗೂ ನಾನು ಕೃತಜ್ಞತೆ ಅರ್ಪಿಸುತ್ತೇನೆ. ಇದು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರ ಸೋಲು. ಬಿಜೆಪಿಗೆ ಜನರು ಯೋಗ್ಯ ಉತ್ತರ ನೀಡಿದ್ದಾರೆ” ಎಂದು ಅವರು ಪ್ರತಿಕ್ರಿಯೆ ನೀಡಿದರು. ಉತ್ತರ ಪ್ರದೇಶದ ಕೈರಾನಾ, ಪಂಜಾಬಿನ ಶಹಕೋಟ್, ಪಶ್ಚಿಮ ಬಂಗಾಳದ ಮಹೆಶ್ತಲ, ಉತ್ತರಾಖಂಡದ ಥರಾಲಿ ಸೇರಿದಂತೆ ಒಟ್ಟು 4 ಲೋಕಸಭಾ ಕ್ಷೇತ್ರ 9 ವಿಧಾನಸಭಾ […]

ಉಡುಪಿಯಲ್ಲಿ ಬಿಜೆಪಿ ಪ್ರತಿಭಟನಾ ಮೆರವಣಿಗೆ

Monday, May 28th, 2018
protest

ಉಡುಪಿ: ಜೆಡಿಎಸ್ ಮೈತ್ರಿ ಸರಕಾರ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿ ಮಾತು ತಪ್ಪಿದೆ ಎಂದು ಆರೋಪಿಸಿ ಸೋಮವಾರ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಜೋಡುಕಟ್ಟೆಯಿಂದ ಸರ್ವಿಸ್ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಮುಖ್ಯಮಂತ್ರಿಯಾದ ಬಳಿಕ ಕುಮಾರಸ್ವಾಮಿ ಚುನಾವಣೆಗೆ ಮೊದಲು ನೀಡಿದ ಪ್ರಮುಖ ಭರವಸೆ ಗಳಲ್ಲಿ ಒಂದಾದ ರೈತರ ಸಾಲಮನ್ನಾ ಮಾಡದೆ ವಚನ ಭ್ರಷ್ಟರಾಗಿದ್ದಾರೆ. ಆದುದರಿಂದ ರೈತರ ಸಾಲಮನ್ನಾ ತಕ್ಷಣವೇ ಮಾಡುವ ಮೂಲಕ ರೈತರಿಗೆ ನ್ಯಾಯ ಸಿಗಬೇಕು ಎಂಬ […]

ಮತದಾನ ಮಾಡಿದ ಆರ್ ಆರ್ ನಗರ ಕ್ಷೇತ್ರದ ಕಲಾವಿದರು

Monday, May 28th, 2018
election-star

ಆರ್ ಆರ್ ನಗರ: ನಕಲಿ ಗುರುತಿನ ಚೀಟಿ ತಯಾರು ಪ್ರಕರಣದ ಹಿನ್ನಲೆಯಲ್ಲಿ ಆರ್ ಆರ್ ನಗರದ ಚುನಾವಣೆಯನ್ನು ಎರಡು ವಾರಗಳ ಕಾಲ ಮುಂದೂಡಲಾಗಿತ್ತು. ಇಂದು ಆರ್ ಆರ್ ನಗರ ಕ್ಷೇತ್ರದ ಚುನಾವಣೆ ಬೆಳಗ್ಗಿನಿಂದ ನಡೆಯುತ್ತಿದೆ. ರಾಜರಾಜೇಶ್ವರಿ ನಗರದಲ್ಲಿಯೂ ಸಾಕಷ್ಟು ಸಿನಿಮಾ ಕಲಾವಿದರು ವಾಸವಾಗಿದ್ದು ಮೇ 12 ರಂದು ಮತದಾನ ಮಾಡಲು ಸಾಧ್ಯವಾಗದವರು ಇಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಹಾಗಾದರೆ ಯಾವ ಕಲಾವಿದರು ಆರ್ ಆರ್ ನಗರದ ಕ್ಷೇತ್ರದಲ್ಲಿ ಮತದಾನ ಮಾಡಿದರು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. […]

ಬಿಜೆಪಿ ಕರೆ ನೀಡಿದ ರಾಜ್ಯ ಬಂದ್ ಗೆ ಯಾರು ಬೆಂಬಲಿಸಿಲ್ಲ: ಐವನ್ ಡಿಸೋಜ

Monday, May 28th, 2018
ivan-dsouza

ಮಂಗಳೂರು: ಬಿಜೆಪಿ ಕರೆ ನೀಡಿದ ರಾಜ್ಯ ಬಂದ್ ಗೆ ಯಾರು ಬೆಂಬಲಿಸಿಲ್ಲ ಎಂದು ಮಂಗಳೂರಿನಲ್ಲಿ ‌ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ. ನಿನ್ನೆಯಿಂದಲೆ ಸಂಘಸಂಸ್ಥೆಗಳು ಬೆಂಬಲಿಸುವುದಿಲ್ಲ ಎಂದು ತಿಳಿಸಿದೆ. ಯಡಿಯೂರಪ್ಪ ಕರೆ ನೀಡಿರುವ ಬಂದ್ ಸಂಪೂರ್ಣ ವಿಫಲ, ಯಡಿಯೂರಪ್ಪ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಎಂದಿದ್ದಾರೆ. ರಾಜ್ಯ ಬಂದ್ ಗೆ ಕರೆ ನೀಡಿ ಆಸ್ತಿಪಾಸ್ತಿ ಗೆ ನಷ್ಟವಾದರೆ ಯಡಿಯೂರಪ್ಪ ಅವರೆ ಹೊಣೆ .ಸಾಲಮನ್ನಾ ಮಾಡಲು ಸರಕಾರ ಬದ್ದವಿದೆ. ರಾಜ್ಯದ ಹಣಕಾಸು ಪರಿಸ್ಥಿತಿ ಚರ್ಚೆ ಮಾಡಿ ತೀರ್ಮಾನ […]

ಬಿಜೆಪಿ ಕರೆ ನೀಡಿರುವ ಬಂದ್ ರಾಜಕೀಯ ಗಿಮಿಕ್: ಯು.ಟಿ. ಖಾದರ್

Saturday, May 26th, 2018
u-t-kader-cngs

ಮಂಗಳೂರು: ರೈತರ ಸಾಲಮನ್ನಾ ವಿಚಾರದಲ್ಲಿ ಬಿಜೆಪಿ ಕರೆ ನೀಡಿರುವ ಕರ್ನಾಟಕ ಬಂದ್ ರಾಜಕೀಯ ಗಿಮಿಕ್ ಎಂದು ಮಾಜಿ ಸಚಿವ ಯು.ಟಿ. ಖಾದರ್ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಚಿವ ಸಂಪುಟವೇ ರಚನೆ ಆಗದೆ, ಚರ್ಚೆಯೇ ನಡೆಯದೆ, ಏಕಾಏಕಿ ರೈತರ ಸಂಪೂರ್ಣ ಸಾಲಮನ್ನಾ ಮಾಡಿ ಎಂದು ಒತ್ತಾಯಿಸುವುದು ಬಿಜೆಪಿಗೆ ಶೋಭೆ ತರುವಂತದ್ದಲ್ಲ,”ಎಂದು ಕಿಡಿಕಾರಿದರು. ಸಾಲಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್: ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸೋಮವಾರ ಕರೆ ನೀಡಿರುವ ರಾಜ್ಯ ಬಂದ್ ರಾಜಕೀಯ ಪ್ರೇರಿತ […]