Blog Archive

ಬಿಜೆಪಿಯಿಂದ ಸರಕಾರ ರಚನೆಗೆ ಹಕ್ಕು ಮಂಡನೆ

Wednesday, May 16th, 2018
yedeyurappa-2

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಇಂದು ಬೆಳಗ್ಗೆ ರಾಜಭವನಕ್ಕೆ ಆಗಮಿಸಿದ ಯಡಿಯೂರಪ್ಪ ನೇತೃತ್ವದ ಪಕ್ಷದ ನಿಯೋಗವು ರಾಜ್ಯಪಾಲ ವಜುಬಾಯಿ ರುಡಬಾಯಿ ವಾಲ ಅವರನ್ನು ಭೇಟಿಯಾಗಿ 104 ಶಾಸಕರ ಸಹಿ ಇರುವ ಪತ್ರವನ್ನು ಸಲ್ಲಿಸಿದೆ. ಆ ಮೂಲಕ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಸರಕಾರ ರಚಿಸಲು ಅವಕಾಶ ಕಲ್ಪಿಸುವಂತೆ ಕೋರಿದ್ದಾರೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ […]

ಕನ್ನಡಿಗರ ಸರ್ಕಾರ, ಕುಮಾರಸ್ವಾಮಿ ಸಿಎಂ ಅಗುವುದು ಬಹುತೇಕ ಖಚಿತ..!

Tuesday, May 15th, 2018
kumaraswamy-cm

ಬೆಂಗಳೂರು: 15ನೇ ವಿಧಾನಸಭೆಗಾಗಿ ಮೇ 12ರಂದು ಚುನಾವಣೆ ನಡೆದಿದ್ದು, ಮೇ 15ರಂದು ಫಲಿತಾಂಶ ಹೊರಬಂದಿದೆ. ಬೆಂಗಳೂರಿನ ಜಯನಗರದ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಅವರ ನಿಧನ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ಮುಂದೂಡಿಕೆಯಿಂದಾಗಿ 224ಕ್ಷೇತ್ರಗಳ ಬದಲಿಗೆ 222 ಕ್ಷೇತ್ರಗಳಲ್ಲಿ ಮಾತ್ರ ಮತದಾನವಾಗಿತ್ತು. ಯಾರಿಗೆ ಸಿಗಲಿದೆ ಬಹುಮತ? ಯಾರು ಅಧಿಕಾರ ಸ್ವೀಕರಿಸಲಿದ್ದಾರೆ? ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಯಾವ ಪಕ್ಷಕ್ಕೂ ಮ್ಯಾಜಿಕ್ ನಂಬರ್ ದಾಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಸಾಧ್ಯತೆ ಹಿನ್ನಲೆಯಲ್ಲಿ ಟ್ರಾಲ್ಸ್ […]

ಸರ್ಕಾರ ರಚಿಸಲು ಜೆಡಿಎಸ್ ಗೆ ಬೆಂಬಲ: ಸಿದ್ದರಾಮಯ್ಯ

Tuesday, May 15th, 2018
merged-jds

ಬೆಂಗಳೂರು: ಮತದಾರರ ತೀರ್ಪಿಗೆ ತಲೆಬಾಗಿದ್ದೇವೆ. ಜನರ ತೀರ್ಪನ್ನು ಒಪ್ಪಿಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಇದೇ ಮೊದಲ ಬಾರಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು ಮಾತನಾಡಿದ ಸಿಎಂ, ರಾಜ್ಯದಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ. ಯಾರಿಗೂ ಸ್ವತಂತ್ರ ಸರ್ಕಾರ ರಚನೆ ಮಾಡಲು ಆಗಲ್ಲ. ಹೀಗಾಗಿ ಕಾಂಗ್ರೆಸ್ ಒಂದು ತೀರ್ಮಾನಕ್ಕೆ ಬಂದಿದೆ. ಜಾತ್ಯತೀತ ಹಿನ್ನೆಲೆಯಿರುವ ಪಕ್ಷಕ್ಕೆ ಬೆಂಬಲ, ಜೆಡಿಎಸ್ ಗೆ ಸರ್ಕಾರ ರಚಿಸಲು ಸಂಪೂರ್ಣ ಬೆಂಬಲ ನೀಡಲು ನಿರ್ಧರಿಸಿದೆ ಎಂದು ಹೇಳಿದರು. ಜನಾದೇಶವನ್ನು ಗೌರವಿಸುತ್ತೇವೆ. […]

ಮತದಾನ ಮಾಡಿದರೆ ತಪಾಸಣೆ ವೆಚ್ಚದಲ್ಲಿ ರಿಯಾಯಿತಿ..!

Friday, May 11th, 2018
election

ಬೆಂಗಳೂರು: ಮತದಾನ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದಕ್ಕೆ ಪೂರಕವಾಗಿ ಕೆಲವು ಖಾಸಗಿ ಸಂಸ್ಥೆಗಳು ತಾವು ನೀಡುವ ಸೇವೆಗಳಲ್ಲಿ ಹಲವು ವಿನಾಯಿತಿ ಮತ್ತು ರಿಯಾಯಿತಿಗಳನ್ನು ಘೋಷಣೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಮತ ಜಾಗೃತಿ ಮೂಡಿಸುತ್ತಿದೆ. ಚಾಮರಾಜಪೇಟೆಯಲ್ಲಿರುವ ಬೃಂದಾವಣ ಆಸ್ಪತ್ರೆಯು ಮತದಾನ ಮಾಡಿದವರಿಗೆ ತಪಾಸಣೆ ಹಾಗೂ ಪ್ರಯೋಗಾಲಯದ ವೆಚ್ಚದಲ್ಲಿ ಶೇ.10ರಷ್ಟು ರಿಯಾಯಿತಿಯನ್ನು ಘೋಷಿಸಿದೆ. ಮೇ 12 ಶನಿವಾರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವವರು ಮತದಾನದ ಗುರುತು ತೋರಿಸಿದರೆ […]

ನಾನು ಕಂಡಿರುವ ಎಷ್ಟೋ ಭಾರತೀಯರಿಗಿಂತಲೂ ನನ್ನ ತಾಯಿ ಉತ್ತಮ ಭಾರತೀಯಳು: ರಾಹುಲ್‌ ಗಾಂಧಿ

Thursday, May 10th, 2018
sonia-gandhi

ಬೆಂಗಳೂರು: ನನ್ನ ತಾಯಿ ಇಟಲಿ ಮೂಲದವರು. ಅವರ ಜೀವನದ ಬಹುಪಾಲು ಸಮಯವನ್ನು ಭಾರತದಲ್ಲಿ ಕಳೆದಿದ್ದಾರೆ. ನಾನು ಕಂಡಿರುವ ಎಷ್ಟೋ ಭಾರತೀಯರಿಗಿಂತಲೂ ನನ್ನ ತಾಯಿ ಉತ್ತಮ ಭಾರತೀಯಳು ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಈ ದೇಶಕ್ಕಾಗಿ ಆಕೆ ಸಾಕಷ್ಟು ತ್ಯಾಗ ಮಾಡಿದ್ದಾಳೆ, ನೋವುಂಡಿದ್ದಾಳೆ. ಸೋನಿಯಾ ಮತ್ತು ರಾಹುಲ್ ಬಗ್ಗೆ ಮಾತನಾಡುವುದರಿಂದ ಅವರಿಗೆ ಖುಷಿ ಆಗುತ್ತೆ ಎಂಬುದಾದರೆ ಮಾತನಾಡಲಿ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದೆ ನಮಗೂ ಸಮಯ ಬರುತ್ತದೆ ಎಂದು ಹೇಳಿದರು. […]

ಮತದಾನದ ದಿನ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ

Thursday, May 10th, 2018
wheather

ಬೆಂಗಳೂರು: ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಂಡಮಾರುತ ಅಪ್ಪಳಿಸಿದ್ದು, ಮುಂದಿನ ಐದು ದಿನಗಳ ಕಾಲ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಐದು ದಿನಗಳ ಕಾಲ ಓಡಿಶಾ, ಆಸ್ಸೋಂ, ಮೇಘಾಲಯ, ನಾಗಾಲ್ಯಾಂಡ್‌, ಮಣಿಪುರ, ಮಿಜೋರಾಂ, ತ್ರಿಪುರಾ, ಕರಾವಳಿ ಹಾಗೂ ಉತ್ತರ ಕರ್ನಾಟಕದ ಹಲವು ಭಾಗ, ತಮಿಳುನಾಡು ಹಾಗೂ ಕೇರಳದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಮಧ್ಯೆ […]

ಚುನಾವಣೆಗೆ 2 ದಿನ ಮುನ್ನ ಬಿಜೆಪಿ ಸೇರ್ಪಡೆಯಾದ ನಟಿ ಭಾವನಾ

Thursday, May 10th, 2018
bavana

ಬೆಂಗಳೂರು: ಬಿಜೆಪಿಗೆ ಇನ್ನೋರ್ವ ನಟಿ ಸೇರ್ಪಡೆಯಾಗಿದ್ದು, ಚುನಾವಣೆಗೆ 2 ದಿನಗಳಿರುವಾಗ ಕಾಂಗ್ರೆಸ್‌ ತೊರೆದಿದ್ದ ನಟಿ , ನಿರ್ಮಾಪಕಿ ಭಾವನಾ ರಾಮಣ್ಣ ಕಮಲ ಹಿಡಿದಿದ್ದಾರೆ. ಪಕ್ಷದ ಕಚೇರಿಯಲ್ಲಿ ಗುರುವಾರ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಅವರ ಸಮ್ಮುಖದಲ್ಲಿ ಭಾವನಾ ಪಕ್ಷಕ್ಕೆ ಸೇರ್ಪಡೆಯಾಗದರು. ಈ ವೇಳೆ ಬಿಜೆಪಿ ರಾಜ್ಯ ವಕ್ತಾರೆ ತೇಜಸ್ವಿನಿ ಸೇರಿದಂತೆ ಪ್ರಮುಖ ಮುಖಂಡರು ಹಾಜರಿದ್ದರು. ಭಾವನಾ ಚಿತ್ರದುರ್ಗ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಟಿಕೆಟ್‌ ಕೈ ತಪ್ಪಿದ ಕೂಡಲೆ ಪಕ್ಷದಿಂದ ಹೊರ ಬಂದಿದ್ದರು. ಕೆಲ ದಿನಗಳ […]

‘ಆನ್ಸರ್ ಮಾಡಿ ಮೋದಿ’… ಪ್ರಧಾನಿಗೆ ಚಾಲೆಂಜ್ ಹಾಕಿದ ಕಾಂಗ್ರೆಸ್

Saturday, May 5th, 2018
rahul-gandhi

ಬೆಂಗಳೂರು: ಕರ್ನಾಟಕದ ಅಭಿವೃದ್ಧಿ ಬಗ್ಗೆ 15 ನಿಮಿಷ ಮಾತನಾಡಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಇತ್ತೀಚೆಗಷ್ಟೇ ಸವಾಲು ಹಾಕಿದ್ದರು. ಈ ಬೆನ್ನಲ್ಲೇ ‘ಆನ್ಸರ್ ಮಾಡಿ ಮೋದಿ’ ಎಂಬ ಹ್ಯಾಸ್‌ಟ್ಯಾಗ್ ಮೂಲಕ ಟ್ವಿಟರ್‌ನಲ್ಲಿ ಪ್ರಧಾನಿಗೆ ಕಾಂಗ್ರೆಸ್‌ ಭರ್ಜರಿಯಾಗೇ ತಿರುಗೇಟು ನೀಡಿದೆ. ಮೋದಿ ಅವರೇ ನೀವು ತುಂಬಾ ಮಾತಾಡ್ತಿರಿ. ಆದ್ರೆ ನಿಮ್ಮ ಮಾತಿಗೂ ಕ್ರಿಯೆಯೂ ಹೊಂದಾಣಿಕೆ ಆಗಲ್ಲ. ಕರ್ನಾಟಕದಲ್ಲಿ ಎಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೀರಿ ಎಂಬುದಕ್ಕೆ ಇಲ್ಲಿದೆ ಚಿಕ್ಕ ವಿಡಿಯೋ ತುಣಕು. ಇದು ‘ಕರ್ನಾಟಕ ಮೋಸ್ಟ್ […]

ರಾಜ್ಯ ವಿಧಾನಸಭೆಗೆ ಚುನಾವಣೆ….ಮೇ 12 ರಂದು ಸಾರ್ವತ್ರಿಕ ರಜೆ ಘೋಷಣೆ

Friday, May 4th, 2018
election

ಬೆಂಗಳೂರು: ಮೇ 12 ರಂದು ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಈ ಹಿನ್ನೆಲೆ ಅಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ, ವಿವಿಧ ಸಂಘ ಸಂಸ್ಥೆಗಳಿಗೆ, ಖಾಸಗಿ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಈ ಕುರಿತು ಇಂದು ರಾಜ್ಯ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಈ ರಜೆ ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ ಎಂದು ಸೂಚಿಸಿದೆ. ಇನ್ನು ಸರ್ಕಾರಿ ಕಚೇರಿ ಹಾಗೂ ಶಾಲೆಗಳಲ್ಲಿ ಮತಗಟ್ಟೆ ಸ್ಥಾಪಿಸಿದ್ದಲ್ಲಿ ಅಂತಹ ಕಚೇರಿ ಹಾಗೂ ಶಾಲೆಗಳಿಗೆ ಮತದಾನ ಪೂರ್ವ […]

ಪ್ರಚಾರದ ವೇಳೆ ಹೆಚ್‌ಡಿಕೆ-ನಿಖಿಲ್‌ ಮುಖಾಮುಖಿ: ಭಾವುಕರಾದ ಅಪ್ಪ-ಮಗ

Tuesday, April 24th, 2018
nickil-kumar

ಬೆಂಗಳೂರು: ಚುನಾವಣಾ ಹಿನ್ನೆಲೆಯಲ್ಲಿ ದೇವೇಗೌಡರ ಕುಟುಂಬಸ್ಥರು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಪ್ರಚಾರ ಮಾಡುತ್ತಿದ್ದಾರೆ. ಹಾಗೆಯೇ ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಗೌಡ ಕೂಡ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಚಾರದ ವೇಳೆ ಅನಿರೀಕ್ಷಿತವಾಗಿ ಕುಮಾರಸ್ವಾಮಿ ಹಾಗೂ ನಿಖಿಲ್ ಗೌಡ ಕುಣಿಗಲ್‌ನಲ್ಲಿ ಮುಖಾಮುಖಿಯಾದರು. ಈ ವೇಳೆ ಅಪ್ಪ, ಮಗ ಭಾವುಕರಾಗಿ ಅಪ್ಪಿಕೊಂಡ ಪ್ರಸಂಗ ನಡೆಯಿತು. ಇದೇ ವೇಳೆ ಕುಮಾರಸ್ವಾಮಿ ಅವರು ಮಮತೆಯಿಂದ ಮಗನ ಮುಖದ ಮೇಲೆ ಕೈಯಾಡಿಸಿದರು. ಈ ಸನ್ನಿವೇಶಕ್ಕೆ ಅಪರೂಪದ ಚಿತ್ರಗಳೇ […]