Blog Archive

ಪರೀಕ್ಷಾ ಜ್ವರದ ನಡುವೆ ಬೆಂಗಳೂರಲ್ಲಿ ಬಣ್ಣದ ಹಬ್ಬದ ಸಂಭ್ರಮ

Thursday, March 1st, 2018
holi-day

ಬೆಂಗಳೂರು: ಮಹಾನಗರದಲ್ಲಿ ಬಣ್ಣದ ಹಬ್ಬ ಕಳೆಗಟ್ಟಿದೆ. ಎಲ್ಲಿ ನೋಡಿದರೂ ಮಕ್ಕಳು, ವಯಸ್ಕರು ಬೀದಿಗಿಳಿದು ಬಣ್ಣದ ಹೋಳಿ ಆಟದಲ್ಲಿ ತೊಡಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಬಣ್ಣದ ಹಬ್ಬ ಹೋಳಿ ಆಚರಣೆ ನಡೆಯಲಿದ್ದು, ಗುರುವಾರ ಬೆಳಗ್ಗಿನಿಂದಲೇ ಬಣ್ಣ ಎರಚಾಡುವ ಪ್ರಕ್ರಿಯೆ ಆರಂಭವಾಗಿದೆ. ಕಳೆದ ವರ್ಷಗಳಂತೆ ಈ ವರ್ಷವೂ ಹಲವು ಸಂಘ, ಸಂಸ್ಥೆಗಳು ವಿಶೇಷವಾಗಿ ಬಣ್ಣದ ಹಬ್ಬ ಆಯೋಜಿಸಿದ್ದು ಯುವಕ, ಯುವತಿಯರು ಪಾಲ್ಗೊಂಡಿದ್ದಾರೆ. ಖಾಸಗಿ ಪಂಚತಾರಾ ಹೋಟೆಲ್‌ಗಳಲ್ಲಿ ಕೂಡ ಬಣ್ಣದ ಹಬ್ಬ ಆಚರಣೆಗೆ ಅವಕಾಶ ನೀಡಲಾಗಿದೆ. ಉತ್ತರ ಭಾರತೀಯರು ವಾಸವಾಗಿರುವ […]

ರೈತರು, ಸರ್ಕಾರಿ ನೌಕರರರಿಗೆ ಸಿಎಂ ಸಿಹಿಸುದ್ದಿ?!

Thursday, February 15th, 2018
siddaramaih

ಬೆಂಗಳೂರು: ಪ್ರಸಕ್ತ ಬಜೆಟ್‍ನಲ್ಲಿ ರಾಜ್ಯದ ರೈತರು ಹಾಗೂ ಸರ್ಕಾರಿ ನೌಕರರಿಗೆ ಬಂಪರ್ ಬಹುಮಾನ ಕಾದಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಸಿಎಂ ಸಿದ್ದರಾಮಯ್ಯ ಚುನಾವಣೆ ಹೊಸ್ತಿಲಲ್ಲಿ ಮಂಡಿಸುತ್ತಿರುವ ಬಜೆಟ್ ಇದಾಗಿದೆ. ಮುಖ್ಯಮಂತ್ರಿಯಾಗಿ ಆರನೇ ಹಾಗೂ ಹಣಕಾಸು ಸಚಿವರಾಗಿ ದಾಖಲೆಯ 13ನೇ ಬಜೆಟ್ ಮಂಡಿಸುತ್ತಿರುವ ಕೀರ್ತಿಗೆ ಸಿಎಂ ಭಾಜನರಾಗಲಿದ್ದು, ಈ ಮಹತ್ವದ ಗಳಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕೃಷಿಕರು ಹಾಗೂ ಸರ್ಕಾರಿ ನೌಕರರನ್ನು ಸಮಾಧಾನಪಡಿಸಲು ಸಿಎಂ ಮುಂದಾಗಿದ್ದಾರೆ. ರಾಜ್ಯ ಬಜೆಟ್‍ನಲ್ಲಿ ಈ ಎರಡು ವರ್ಗದವರನ್ನು ಸಮಾಧಾನಪಡಿಸುವ ಉತ್ತಮ ಕೊಡುಗೆ ಇರಲಿದೆ […]

110 ವಯಸ್ಸಿನ ಶ್ರೀಗಳಿಗೆ ಚಿಕಿತ್ಸೆ ನೀಡುವುದು ಕಷ್ಟದ ಕಾರ್ಯ: ಡಾ.ರವೀಂದ್ರ

Friday, January 26th, 2018
swamiji

ಬೆಂಗಳೂರು: ಸಿದ್ದಗಂಗಾ ಶಿವಕುಮಾರ ಸ್ವಾಮಿಗಳ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಕೃತಕ ಆಮ್ಲಜನಕ ಮತ್ತು ಡ್ರಿಪ್‌ ಹಾಕಲಾಗಿದೆ ಎಂದು ಅವರನ್ನು ಪರೀಕ್ಷಿಸಿದ ಡಾ.ರವೀಂದ್ರ ಅವರು ಹೇಳಿದ್ದಾರೆ. ಶ್ರೀಗಳ ದೇಹದಲ್ಲಿ ಆಮ್ಲಜನಕ ಕೊರತೆ ಇದೆ ಜೊತೆಗೆ ಬಿಪಿ ಸಹ ಕಡಿಮೆ ಇದೆ ಎಂದು ಡಾ.ರವೀಂದ್ರ ಹೇಳಿದ್ದು, ಶ್ರೀಗಳ ರಕ್ತ ಪರೀಕ್ಷೆ ಮಾಡಲಾಗುತ್ತಿದೆ ಎಂದಿದ್ದಾರೆ. ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಕೊಂಚ ಏರುಪೇರು ಶ್ರೀಗಳಿಗೆ ಲಿವರ್ ಸಮಸ್ಯೆ ಇದ್ದು, ಅವರ ದೇಹದಲ್ಲಿ ಈಗಾಗಲೇ 5 ಸ್ಟಂಟ್‌ಗಳಿವೆ […]

ಶಿರಾಡಿ ಘಾಟಿ ರಸ್ತೆ : ಎರಡನೇ ಹಂತದ ಕಾಂಕ್ರೀಟ್‌ ಕಾಮಗಾರಿಗೆ ಸಿದ್ಧತೆ

Friday, January 19th, 2018
shiradi-gatt

ಉಪ್ಪಿನಂಗಡಿ: ಶಿರಾಡಿ ಘಾಟಿ ರಸ್ತೆಯ 2ನೇ ಹಂತದ ಕಾಂಕ್ರೀಟ್‌ ರಸ್ತೆ ಕಾಮಗಾರಿ 26 ತಿಂಗಳು ವಿಳಂಬವಾಗಿ ಆರಂಭವಾಗುತ್ತಿದ್ದು, ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. 2015ರ ಮಳೆಗಾಲ ಮುಗಿದ ಮೇಲೆ ಆರಂಭವಾಗಬೇಕಿದ್ದ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಲಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಂಪುಹೊಳೆಯಿಂದ ಅಡ್ಡಹೊಳೆ ತನಕ 12.38 ಕಿ.ಮೀ. ಕಾಂಕ್ರೀಟ್‌ ರಸ್ತೆ 2ನೇ ಹಂತದ ಕಾಮಗಾರಿಗೆ 2015ರಲ್ಲಿ 85.28 ಕೋಟಿ ರೂ. ಮಂಜೂರಾಗಿತ್ತು. ಇದರಲ್ಲಿ 12.38 ಕಿ.ಮೀ. ಕಾಂಕ್ರೀಟೀಕರಣಕ್ಕೆ 63.10 ಕೋಟಿ […]

ಕಾಲೇಜ್‌ ಹಾಸ್ಟೆಲ್‌ನಲ್ಲಿ ಪಿಯು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

Tuesday, January 9th, 2018
Moodbidre

ಮೂಡಬಿದಿರೆ : ಆಳ್ವಾಸ್ ವಿದ್ಯಾಸಂಸ್ಥೆ ವಿದ್ಯಾರ್ಥಿಯೋರ್ವ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಬೆಂಗಳೂರು ಮೂಲದ ತೇಜಸ್ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಈತ ಆಳ್ವಾಸ್‌ನಲ್ಲಿ ಪ್ರಥಮ ಪಿಯುಸಿ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ. ಈತ ಡೆತ್ ನೋಟ್ ಬರೆದಿಟ್ಟು ನಿನ್ನೆ ರಾತ್ರಿ 8 ಗಂಟೆಗೆ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಹಿರಿಯ ನಾಗರಿಕರಿಗೆ ಕುಮಾರಸ್ವಾಮಿಯಿಂದ ಉಚಿತ ಸೇವೆಗಳ ಭರವಸೆ

Thursday, January 4th, 2018
kumaraswamy

ಬೆಂಗಳೂರು:’ಹಿರಿಯ ನಾಗರಿಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆಗೆ ಅವಕಾಶ. ಬಸ್, ಮೆಟ್ರೋ ರೈಲಿನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ಶ್ರೀ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್, ಬೆಂಗಳೂರು ನಗರ ಜೆಡಿಎಸ್ ಘಟಕದ ವತಿಯಿಂದ ಬುಧವಾರ ‘ಬೆಂಗಳೂರು ನಗರದ ಹಿರಿಯ ನಾಗರಿಕರೊಂದಿಗೆ ಸಂವಾದ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಿರಿಯರ ವ್ಯಥೆ ಮತ್ತು ಒಂದಿಷ್ಟು ಸ್ವಾರಸ್ಯಕರ ಕಥೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ […]

ಇನ್ನೆರಡು ತಿಂಗಳಲ್ಲಿ ರಾಜ್ಯದಲ್ಲಿ ರಸ್ತೆಗೆ ಇಳಿಯಲಿವೆ ಎಲೆಕ್ಟ್ರಾನಿಕ್‌ ಬಸ್‌‌‌ಗಳು!

Tuesday, January 2nd, 2018
electric-bus

ಬೆಂಗಳೂರು: ಇನ್ನೆರಡು ತಿಂಗಳಲ್ಲಿ ರಾಜ್ಯದಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಾನಿಕ್ ಬಸ್‌‌‌ಗಳು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿವೆ ಎಂದು ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮೊದಲ ಹಂತವಾಗಿ ಬೆಂಗಳೂರು ನಗರದ ಕೆಲವು ಮಾರ್ಗ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಡಿ ಬೆಂಗಳೂರು-ಮೈಸೂರು, ಬೆಂಗಳೂರು-ತುಮಕೂರು-ಕೋಲಾರ ನಗರಗಳ ನಡುವೆ ಎಲೆಕ್ಟ್ರಾನಿಕ್ ಬಸ್ ಸಂಚಾರ ನಡೆಸಲಿವೆ ಎಂದರು. ರಾಷ್ಟ್ರದಲ್ಲಿ ಮೊದಲಿಗೆ ಈ ಸೌಲಭ್ಯ ತರುತ್ತಿರುವ ರಾಜ್ಯ ಕರ್ನಾಟಕವಾಗಲಿದೆ. ಪ್ರತಿ ಬಸ್‍ಗೆ ಮೂರು ಕೋಟಿ ರೂ. ವೆಚ್ಚ […]

ಮತ್ತೆ ರಾಜ್ಯಕ್ಕೆ ಕಾಲಿಟ್ಟ ಮಹಾಮಾರಿ… ಬೆಂಗಳೂರಲ್ಲಿ ಹಕ್ಕಿ ಜ್ವರ ಭೀತಿ

Tuesday, January 2nd, 2018
bird-flue

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಹಕ್ಕಿ ಜ್ವರ ಇದೀಗ ಸಿಲಿಕಾನ್ ಸಿಟಿಯಲ್ಲಿಯೂ ಪತ್ತೆಯಾಗಿದೆ. ದಾಸರಹಳ್ಳಿಯ ಕೆಜಿಎನ್ ಕೋಳಿ ಮಾರಾಟ ಅಂಗಡಿಯಲ್ಲಿನ ಕೋಳಿಗಳಲ್ಲಿ ಹಕ್ಕಿ ಜ್ವರ ಇರುವುದು ಪ್ರಯೋಗಾಲಯದಲ್ಲಿ ಸಾಬೀತಾಗಿದ್ದು ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಹೌದು, ಉದ್ಯಾನನಗರಿಗೆ ಹಕ್ಕಿ ಜ್ವರ ಕಾಲಿಟ್ಟಿದೆ. ತಮಿಳುನಾಡಿನಿಂದ ಬಂದಂತಹ ನಾಟಿ ಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಕಳೆದ ವಾರ ತಮಿಳುನಾಡಿನ ಕೋಳಿ ಮಾರಾಟಗಾರರಿಂದ 15 ಕೋಳಿ ಖರೀದಿಸಿದ್ದ ಕೆಜಿಎನ್ ಅಂಗಡಿ ಮಾಲೀಕರು ನಾಲ್ಕೈದು ಕೋಳಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮೃತ ಕೋಳಿಗಳನ್ನು ಪರೀಕ್ಷೆ ಒಳಪಡಿಸಿದ್ದರು. […]

ಮಾರ್ಚ್‌ 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ

Wednesday, December 13th, 2017
PUC-Exam

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಬುಧವಾರ ಪ್ರಕಟಿಸಿದೆ. 2018ರ ಮಾರ್ಚ್ 1ರಂದು ಪರೀಕ್ಷೆ ಆರಂಭಗೊಳ್ಳಲಿದ್ದು, ಮಾರ್ಚ್‌ 17ಕ್ಕೆ ಪರೀಕ್ಷೆ ಮುಗಿಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಪಣಂಬೂರು : ಪ್ರವಾಸಿಗರನ್ನು ರಕ್ಷಿಸಿದ ಜೀವ ರಕ್ಷಕ ಪಡೆಯ ಸಿಬ್ಬಂದಿ .

Monday, October 2nd, 2017
panamburu

ಮಂಗಳೂರು: ಪಣಂಬೂರು ಬೀಚ್‌ನಲ್ಲಿ ನೀರಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಬೀಚ್‌ನಲ್ಲಿರುವ ಜೀವ ರಕ್ಷಕ ಪಡೆಯ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಂಗಳೂರು ದಾಸರ ಹಳ್ಳಿಯ 8ನೇ ಕ್ರಾಸ್‌ನ ಮೆಕ್ಯಾನಿಕ್‌ಗಳಾದ ಸಾದಿಕ್ (21), ನರಸಿಂಹ ಮೂರ್ತಿ (19) ಎಂಬುವವರನ್ನು ರಕ್ಷಣೆ ಮಾಡಲಾಗಿದೆ . ಬೆಂಗಳೂರಿನ ದಾಸರಹಳ್ಳಿಯ 8 ನೇ ಕ್ರಾಸ್‌ ನಿವಾಸಿಗಳಾದ ಇವರು ಮಂಗಳೂರಿಗೆ ಪ್ರವಾಸಕ್ಕಾಗಿ ಬಂದಿದ್ದರು.