Blog Archive

ಬಿಜೆಪಿ ಅಭ್ಯರ್ಥಿ ಡಿ.ವೇದವ್ಯಾಸ್ ಕಾಮತ್ ಭಾರೀ ಮತಗಳ ಅಂತರದಿಂದ ಗೆಲುವು

Tuesday, May 15th, 2018
vedavyas-kamath

ಮಂಗಳೂರು: ಕಾಂಗ್ರೆಸ್ ಕೈಯಲ್ಲಿದ್ದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿಯು ತನ್ನ ತೆಕ್ಕೆಗೆ ಕಸಿದುಕೊಂಡಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ್ ಕಾಮತ್ ಗೆಲುವು ದಾಖಲಿಸಿದ್ದಾರೆ. ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೋ ಅವರ ವಿರುದ್ಧ ವೇದವ್ಯಾಸ್ ಕಾಮತ್ ಭಾರೀಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಕರಾವಳಿಯಲ್ಲಿ ಅರಳಿದ ಕಮಲ… ಮೂರು ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ

Tuesday, May 15th, 2018
srinivas-shetty

ಉಡುಪಿ: ಕರಾವಳಿ ಭಾಗದಲ್ಲಿ ಕಮಲ ಮುನ್ನಡೆ ಪಡೆದುಕೊಂಡಿದ್ದು, ಈಗಾಗಲೇ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮೂಡುಬಿದರೆಯಲ್ಲಿ ಉಮಾನಾಥ್ ಕೋಟ್ಯಾನ್‌, ಉಡುಪಿಯ ಕಾಪು ಕ್ಷೇತ್ರದ ಲಾಲಾಜಿ ಆರ್‌. ಮೆಂಡನ್‌ ಮತ್ತು ಕುಂದಾಪುರ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ್ ಗೆಲುವು ಪಡೆದಿದ್ದಾರೆ. ಹಾಲಾಡಿ ಶ್ರೀನಿವಾಸ್ ಸುಮಾರು 1 ಲಕ್ಷ ಮತಗಳ ಅಂತರದಲ್ಲು ಜೈಭೇರಿ ಬಾರಿಸುವುದರ ಮೂಲಕ ಕಾಂಗ್ರೆಸ್‌ ಅಭ್ಯರ್ಥಿಗೆ ಸೋಲುಣಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಎಸ್.ಅಂಗಾರ 15 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು

Tuesday, May 15th, 2018
angara

ಸುಳ್ಯ: ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿರುವ ಸುಳ್ಯದಲ್ಲಿ ಮತ್ತೊಮ್ಮೆ ಕಮಲ ಅರಳಿದೆ. ಸುಳ್ಯದಿಂದ ಕಣಕ್ಕಿಳಿದಿದ್ದ ಬಿಜೆಪಿ ಅಭ್ಯರ್ಥಿ ಎಸ್. ಅಂಗಾರ ಮತ್ತೊಮ್ಮೆ ಜಯಗಳಿಸಿದ್ದಾರೆ. ಕಾಂಗ್ರೆಸ್ ನ ಅಭ್ಯರ್ಥಿ ಡಾ. ರಘು ಅವರ ವಿರುದ್ಧ ಸುಮಾರು 15 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾ

ಮಂಗಳೂರಿನಲ್ಲಿ ಸಚಿವ ಖಾದರ್ ಮುನ್ನಡೆ

Tuesday, May 15th, 2018
u-t-kader

ಮಂಗಳೂರು: ಮಂಗಳೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ನಡೆಯುತ್ತಿದ್ದು, ಉಭಯ ಪಕ್ಷಗಳು ಸಮಬಲ ಸಾಧಿಸಿವೆ. ಮತಎಣಿಕೆ ಅಪ್ಡೇಟ್ಸ್ ಮಂಗಳೂರು ಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ಯು.ಟಿ.ಖಾದರ್ ಎರಡನೇ ಸುತ್ತಿನಲ್ಲಿ 6 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ. ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಅಂಗಾರ ಅವರು 2,034 ಮತಗಳನ್ನು ಪಡೆದುಕೊಂಡಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಭರತ್ ಶೆಟ್ಟಿ 2 ಸಾವಿರ ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ. ಮೂಡಬಿದಿರೆಯಲ್ಲಿ 5ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ 11,820 ಮತಗಳ […]

ದಕ್ಷಿಣ ಕನ್ನಡದಲ್ಲಿ ಬಿಜೆಪಿಗೆ ಮುನ್ನಡೆ, ಕಾಂಗ್ರೆಸ್ ಗೆ ಭಾರೀ ಹಿನ್ನಡೆ

Tuesday, May 15th, 2018
janatha-party

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಬಿಜೆಪಿ ಭಾರೀ ಮುನ್ನಡೆ ಕಾಯ್ದುಕೊಂಡಿದೆ. ಜಿಲ್ಲೆಯ 8 ಕ್ಷೇತ್ರಗಳಲ್ಲಿ 5ರಲ್ಲಿ ಬಿಜೆಪಿ ಅಭ್ಯರ್ಥಿಗಳು ಅಚ್ಚರಿಯ ರೀತಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಜಿದ್ದಾಜಿದ್ದಿನಿಂದ ಕೂಡಿದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಂಜೀವ ಮಠಂದೂರು ಕಾಂಗ್ರೆಸಿನ ಶಕುಂತಳಾ ಶೆಟ್ಟಿ ವಿರುದ್ಧ 1,102 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ ಎಸ್. ಅಂಗಾರ ಕಾಂಗ್ರೆಸಿನ ರಘು ವಿರುದ್ಧ 2034 ಮತಗಳಿಂದ ಮುಂದಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಭರತ್ ಶೆಟ್ಟಿ 2 ಸಾವಿರ […]

ಮೂಡಬಿದಿರೆಯಲ್ಲಿ ಕಮಲ ಅರಳಿಸುವ ಉಮನಾಥ ಕೋಟ್ಯಾನ್

Friday, May 11th, 2018
umanath-kotiayan

ಮೂಡಬಿದಿರೆ: ಮೂಡಬಿದಿರೆಯ ಉಮನಾಥ ಕೋಟ್ಯಾನ್ ಮೊದಲಿಗೆ ಸಾಂಸ್ಕೃತಿಕ ಲೋಕದಲ್ಲಿ ಪ್ರಮುಖ ಹೆಸರು. ರಂಗಭೂಮಿ, ಸಿನಿಮಾ ರಂಗದಲ್ಲಿ ನಟನಾಗಿ ಗುರುತಿಸಕೊಂಡವರು. ಹಿಂದುಳಿದ ಕೃಷಿಕ ಕುಟುಂಬದಲ್ಲಿ ಹುಟ್ಟೆ ಬೆಳೆದ ತನ್ನ ಪರಿಶ್ರಮದಿಂದಲೇ ವಿವಿದ ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಜೀವನದಲ್ಲಿ ಪ್ರಗತಿ ಕಂಡವರು. ಅನಂತರ ಇಲ್ಲಿನ ಸಂಸ್ಕೃತಿ, ಪರಂಪರೆಯ ಆದಮ್ಯ ಅಭಿಮಾನಿಯಾದ ಉಮನಾಥ ಕೋಟ್ಯಾನ್ ಅವರು ಸಹಜವಾಗಿ ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತರಾದವರು. ತನ್ನ ಪ್ರಮಾಣಿಕತೆ, ಪಕ್ಷ ನಿಷ್ಠೆ, ಜನಪರ ಕಾಳಜಿಯ ಕೆಲಸಗಳಿಂದಾಗಿ ತಾಲೂಕು ಪಂಚಾಯತ್ ಸದಸ್ಯರಾಗಿ ಜನಮಣ್ಣನೆ ಗಳಿಸಿದವರು. ಬಿಜೆಪಿ […]

ಪುತ್ತೂರಿನ ಜನಪ್ರಿಯ ಶಾಸಕಿ ಶಕುವಕ್ಕ

Friday, May 11th, 2018
shakuntala-shetty

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಎರಡನೇ ದೊಡ್ಡನಗರ ಪುತ್ತೂರು ಹೇಳಿ ಕೇಳಿ ಬಿಜೆಪಿ ಭದ್ರಕೋಟೆ.1994ರಿಂದ 2008ರ ವರೆಗೆ ಇಲ್ಲಿ ಬಿಜೆಪಿಯದ್ದೇ ರಾಜ್ಯಭಾರ.ಅದಕ್ಕೂ ಮೊದಲು ಇಲ್ಲಿ ಪರಿವಾರದ ಶಾಸಕರೇ ಆಯ್ಕೆ ಆಗಿದ್ದರು. ಕಳೆದ ಬಾರಿ ಬಿಜಪಿಯಿಂದ ವಲಸೆ ಬಂದ ಶಕುಂತಳಾ ಶೆಟ್ಟಿ ಕಾಂಗ್ರೆಸ್ ಪಕ್ಷಕ್ಕೆ ಪುತ್ತೂರನ್ನು ಗೆದ್ದು ಕೊಟ್ಟರು. ಒಂದು ಬಾರಿ ಬಿಜೆಪಿಯಿಂದಲೂ ಆಯ್ಕೆ ಆಗಿದ್ದ ಶಕುವಕ್ಕ ಇಂದು ಪುತ್ತೂರಿನ ಜನಪ್ರಿಯ ಶಾಸಕಿ. ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ, ಶಿವರಾಮ ಕಾರಂತರ ಕಾರ್ಯಕ್ಷೇತ್ರ ಬಾಲವನ , ಬಿರುಮಲೆ […]

ಬಿಜೆಪಿಯ ನಿಷ್ಠಾವಂತ ಕಟ್ಟಾಳು ಸಂಜೀವ ಮಠಂದೂರು

Friday, May 11th, 2018
sanjeeva-matandoor

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಯಾಗಿ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ ಸಂಜೀವ ಮಠಂದೂರು. ಕಳೆದ ಬಾರಿ ಶಕುಂತಳಾ ಶೆಟ್ಟಿ ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿ ಆದಾಗ ಬಿಜೆಪಿ ಮಠಂದೂರುಅವರನ್ನು ಅಭ್ಯರ್ಥಿ ಮಾಡಿತ್ತು. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಆಗಿರುವ ಸಂಜೀವ ಮಠಂದೂರು ಒಬ್ಬ ಅದರ್ಶ ಕೃಷಿಕ ,ಒಬ್ಬ ಪ್ರಾಮಾಣಿಕ ವ್ಯಕ್ತಿತ್ವ ಉಳ್ಳವರು,ಕಾರ್ಯದಕ್ಷತೆಯನ್ನು ಮೈಗೂಡಿಸಿಕೊಂಡವರು.ಮಾತು ಕಡಿಮೆ‌ ಕೆಲಸ ಜಾಸ್ತಿ ಮಾಡುವ ನಾಯಕ. ಗ್ರಾಮ ಪಂಚಾಯತ್ ನಿಂದ ಇಲ್ಲಿಯವರೆಗೆ ಬಿಜೆಪಿಯ ಮುಖಾಂತರ ಹಿಂದುತ್ವದ ಪಕ್ಷ ಬಿಜೆಪಿಯನ್ನು ಸಂಘಟನೆ ಮಾಡಿದವರು. […]

ಬಿಜೆಪಿಯ ಹೊಸ ಯುವ ಮುಖ ಡಾ.ವೈ.ಭರತ್ ಶೆಟ್ಟಿ

Friday, May 11th, 2018
bharath-shetty

ಮಂಗಳೂರು: ಬಿಜೆಪಿಯ ಮಾಜಿ ಸಚಿವರನ್ನೇ ಹಿಂದಿಕ್ಕಿ ಮಂಗಳೂರು ನಗರಉತ್ತರ ವಿಧಾನಸಭಾಕ್ಷೇತ್ರದ ಭಾರತೀಯಜನತಾ ಪಾರ್ಟಿಅಭ್ಯರ್ಥಿಯಾಗಿಆದವರುಡಾ.ವೈ.ಭರತ್ ಶೆಟ್ಟಿ. ಮಂಗಳೂರು ನಗರ ಉತ್ತರಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಕೃಷ್ಣ ಪಾಲೇಮಾರ್‌ಎಂದೇ ಹೇಳಲಾಗಿತ್ತು. ಈಗ ಬಿಜೆಪಿ ಅಭ್ಯರ್ಥಿಯಾಗಿಡಾಕ್ಟರ್ ಭರತ್ ಶೆಟ್ಟಿಆಯ್ಕೆಆಗಿರುವುದು ಕ್ಷೇತ್ರದ ಯುವಕರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಮಂಗಳೂರು ನಗರದಯೆಯ್ಯಿಡಿಯ ನಿವಾಸಿಯಾಗಿರುವ ಪ್ರೊ.ಡಾ.ವೈ. ಭರತ್ ಶೆಟ್ಟಿ (45 ವರ್ಷ ) ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದವರು. ಭರತ್ ಶೆಟ್ಟಿ ಸರ್ದಾರ್ ವಲ್ಲಭಬಾಯಿ ಪಟೇಲ್ ಲೋಹ ಸಂಗ್ರಹಣಾ ಸಮಿತಿಯಜಿಲ್ಲಾ ಸಂಚಾಲಕನಾಗಿದ್ದರು. ಕಳೆದ ಎರಡು […]

ಜನಮನ್ನಣೆ ಪಡೆದ ಜನನಾಯಕ ವಸಂತ ಬಂಗೇರ

Friday, May 11th, 2018
vasanth-bangera

ಮಂಗಳೂರು: ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬೆಳ್ತಂಗಡಿಯ ವಸಂತ ಬಂಗೇರ ಇನ್ನು ಚುನಾವಣೆಯಲ್ಲಿ ಸ್ಪರ್ಧೆಮಾಡದಿರಲು ನಿರ್ಧರಿಸಿದ್ದರು. ಆದರೆ ಕಾರ್ಯಕರ್ತರ ಒತ್ತಡ ಮತ್ತು ಸ್ವತಃ ಮುಖ್ಯಮಂತ್ರಿಸಿದ್ದರಾಮಯ್ಯ ಅವರೇ ಸ್ಪರ್ಧಿಸುವಂತೆ ಒತ್ತಾಯಿಸಿದ ಮೇರೆಗೆ ನಿರ್ಧಾರ ಬದಲಾಯಿಸಿದ, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ವಸಂತ ಬಂಗೇರ ಮತ್ತೆ ನಾಮಪತ್ರ ಸಲ್ಲಿಸಿದ್ದಾರೆ. ರಾಜಕಾರಣದಲ್ಲಿ ಇಂಥ ವ್ಯಕ್ತಿಗಳೂ ಅಪರೂಪ, ಈ ರೀತಿ ವರ್ಚಸ್ಸು ಉಳಿಸಿಕೊಂಡವರೂವಿರಳ. ಅಧಿಕಾರವೋ ವೈಯಕ್ತಿಕ ಪ್ರತಿಷ್ಠೆಯೋ ಮತ್ಯಾವ ಕಾರಣಕ್ಕೋ ಪಕ್ಷಾಂತರ ಮಾಡುತ್ತಾರೆ.ಅಂಥವರ ರಾಜಕೀಯ ಭವಿಷ್ಯ ಆರಕ್ಕೆ ಏರಿದ್ದೂ ಇದೆ. ಮೂರಕ್ಕೆ […]