Blog Archive

ಕನ್ನಡದಲ್ಲೇ ಬ್ಯಾಂಕ್ ಪರೀಕ್ಷೆ-ಕಲ್ಕೂರ ಸಂತಸ

Saturday, July 6th, 2019
Kalkura

ಮಂಗಳೂರು  : ಕನ್ನಡಿಗರ ಬಹುವರ್ಷಗಳ ಬೇಡಿಕೆಯಾದಕನ್ನಡದಲ್ಲೇ ಬ್ಯಾಂಕಿಂಗ್ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡಬೇಕುಎನ್ನುವ ಬಗ್ಗೆಕೇಂದ್ರ ಸರಕಾರವು ಮನ್ನಣೆ ನೀಡಿರುವುದನ್ನುದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಭಿನಂದಿಸುವ ಮೂಲಕ ತನ್ನ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ದೇಶದ ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆ ನಡೆಸಬೇಕೆಂಬ ಬೇಡಿಕೆಯನ್ನುಈಡೇರಿಸುವ ಕೇಂದ್ರ ಸರಕಾರ ಹಾಗೂ ಪ್ರಸ್ತುತಕಾರ್ಯನಿರ್ವಹಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರನ್ನುಕಲ್ಕೂರರವರು. ಶ್ಲಾಘಿಸಿದ್ದಾರೆ. 6 ರಾಷ್ಟ್ರಿಕೃತ ಬ್ಯಾಂಕ್ ಸಹಿತ ಅನೇಕ ವಿತ್ತ ಸಂಸ್ಥೆಗಳನ್ನು ದೇಶಕ್ಕೆ ನೀಡಿರುವ ಹಿರಿಮೆ […]

ಕನ್ನಡದ ಖ್ಯಾತ ನಿರ್ದೇಶಕ ಎಂ.ಎಸ್​ ರಾಜಶೇಖರ್​ ಆಸ್ಪತ್ರೆಗೆ ದಾಖಲು

Monday, October 29th, 2018
hospitalized

ಬೆಂಗಳೂರು: ಉಸಿರಾಟದ ತೊಂದರೆಯಿಂದಾಗಿ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಂ.ಎಸ್.ರಾಜಶೇಖರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ರಾಜಶೇಖರ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಅವರ ಪತ್ನಿ ರಾಣಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನು ರಾಜಶೇಖರ್, ಮೇರು ನಟ ಡಾ. ರಾಜ್ಕುಮಾರ್ ಅವರ ಧ್ರುವತಾರೆ ಸೇರಿದಂತೆ ರಥಸಪ್ತಮಿ, ನಂಜುಂಡಿ ಕಲ್ಯಾಣಿ, ಮನ ಮೆಚ್ಚಿದ ಹುಡುಗಿಯಂತಹ ಸಾಕಷ್ಟು ಹಿಟ್ ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ.  

ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ನಿಧನ

Saturday, October 20th, 2018
abdul

ಮಂಗಳೂರು: ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಅವರು ಇಂದು ನಿಧನರಾಗಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಅವರು ಇಂದು ಮಂಜಾನೆ. 5.30ಕ್ಕೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಕಾಸರಗೋಡು ಜಿಲ್ಲೆಯ ನಾಯನ್ಮಾರ್ ಮೂಲೆಯ ಅವರ ಮನೆಗೆ ಕೊಂಡೊಯ್ಯಲಾಗಿದೆ. ಎರಡು ಬಾರಿ ಮಂಜೇಶ್ವರ ಕ್ಷೇತ್ರದಿಂದ ಕೇರಳ ವಿಧಾನಸಭೆಗೆ ಆಯ್ಕೆಯಾದ ಅಬ್ದುಲ್ ರಜಾಕ್ 2011ರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಪಕ್ಷದಿಂದ ಸ್ಪರ್ಧಿಸಿದ್ದರು. ಅವರು ಸಿಪಿಎಂನ ಸಿ.ಎಚ್. ಕುಂಞಂಬುರನ್ನು 5825 […]

ಕನ್ನಡ ನಟಿ ನೇಹಾ ಪಾಟೀಲ್​​​​ಗೆ ಇಂದು ನಿಶ್ಚಿತಾರ್ಥದ ಸಂಭ್ರಮ

Friday, October 19th, 2018
neha-patil

ಬೆಂಗಳೂರು: ಸ್ಮೈಲ್ ಪ್ಲೀಸ್, ಸಿತಾರ, ವರ್ಧನ ಸಿನಿಮಾಗಳಲ್ಲಿ ನಟಿಸಿದ್ದ ನಟಿ ನೇಹಾ ಪಾಟೀಲ್ಗೆ ಇಂದು ನಿಶ್ಚಿತಾರ್ಥದ ಸಂಭ್ರಮ. ಬೆಂಗಳೂರು ಮೂಲದ ಪ್ರಣವ್ ಜೊತೆ ಇಂದು ನೇಹಾ ನಿಶ್ಚಿತಾರ್ಥ ಜರುಗಿದೆ. ಮಾಗಡಿ ರಸ್ತೆಯಲ್ಲಿರುವ ವಿಸ್ಮಯ ಪಾರ್ಟಿ ಹಾಲ್ನಲ್ಲಿ ನೇಹಾ ಪಾಟೀಲ್ ಎಂಗೇಜ್ ಮೆಂಟ್ ಜರುಗಿದೆ. ಎರಡು ಕುಟುಂಬಗಳ ಸಮ್ಮುಖದಲ್ಲಿ, ನೇಹಾ ಪಾಟೀಲ್ ಹಾಗು ಪ್ರಣವ್ ನಿಶ್ಚಿತಾರ್ಥ ಶಾಸ್ತ್ರ, ಸಂಪ್ರದಾಯದಂತೆ ನಡೆಸಲಾಯಿತು. ಕೆಂಪು ಸೀರೆ ಹಾಗೂ ಹಸಿರು ಬ್ಲೌಸ್ನಲ್ಲಿ ನೇಹಾ ಬಹಳ ಮುದ್ದಾಗಿ ಕಾಣುತ್ತಿದ್ದರು. ಚಿತ್ರರಂಗದ ಹಾಗೂ ಕಿರುತೆರೆಯ ಸಾಕಷ್ಟು […]

ಮೊದಲು ಕನ್ನಡದಲ್ಲಿ ಸರಿಯಾಗಿ ಬರೆಯುವ ಯೋಗ್ಯತೆಯನ್ನು ಪಡೆಯಬೇಕು: ಅನಂತ್‌‌ಕುಮಾರ್ ಹೆಗಡೆ

Monday, February 19th, 2018
ananth-kumar-hegde

ಮಂಗಳೂರು: ಕನ್ನಡದ ಪರವಾಗಿ ಹೋರಾಟ ಮಾಡುವ ಮೊದಲು ಕನ್ನಡದಲ್ಲಿ ಸರಿಯಾಗಿ ಬರೆಯುವ ಯೋಗ್ಯತೆಯನ್ನು ಪಡೆಯಬೇಕು ಎಂದು ಕೇಂದ್ರ ಸಚಿವ ಅನಂತ್‌‌ಕುಮಾರ್ ಹೆಗಡೆ ಹೇಳಿದ್ದಾರೆ. ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್‌‌ನಲ್ಲಿ ನಡೆದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಇಂಗ್ಲೀಷ್ ಹಾವಳಿ ಹೆಚ್ಚುತ್ತಿದೆ ಎನ್ನುವ ಹೋರಾಟಗಳು ನಿರಂತರವಾಗಿ ನಡೆಯುತ್ತಿದೆ. ಆದರೆ, ಹೀಗೆ ಹೋರಾಟ ಮಾಡುವ, ಒದರುವ ನಾವೇ ಸರಿಯಾಗಿ ಕನ್ನಡ ಬರೆಯುವ ಯೋಗ್ಯತೆಯನ್ನು ಕಳೆದುಕೊಂಡಿದ್ದೇವೆ. ಇಂದು ಕನ್ನಡವನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡುವ ಬದಲು ಇಂಗ್ಲಿಷ್‌‌ನ್ನು ಕನ್ನಡಕ್ಕೆ ತರ್ಜುಮೆ ಮಾಡುವಂತಹ […]

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಚನ ಸಂಗೀತೋತ್ಸವ

Thursday, February 1st, 2018
mangaluru

ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು,ದೆಹಲಿ ಕರ್ನಾಟಕ ಸಂಘದ ಸಹಯೋಗದಲ್ಲಿ ವಚನ ಸಂಗೀತೋತ್ಸವ ಕಾರ್ಯಕ್ರಮವನ್ನುಇದೇ ಜನವರಿ 28 ರಂದುದೆಹಲಿ ಕರ್ನಾಟಕ ಸಂಘದಲ್ಲಿ ಆಯೋಜಿಸಿತ್ತು. ಜೆ.ಎನ್.ಯು.ವಿನ ಪ್ರಾಧ್ಯಾಪಕರಾದ ಪ್ರೊ.ಎಚ್.ಎಸ್. ಶಿವಪ್ರಕಾಶ್ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಧಾರವಾಡ ಕೃಷಿ ವಿಶ್ವವಿದ್ಯಾಲಯ ಹಾಗೂ ಮಾಜಿಅಧ್ಯಕ್ಷರು, ಕೃಷಿ ಸಂಶೋಧನಾಕೇಂದ್ರ, ನವದೆಹಲಿ ನಿವೃತ್ತ ಕುಲಪತಿಗಳಾದ ಶ್ರೀ ಆರ್.ಆರ್.ಹಂಚನಾಳ ಸಭಾಅಧ್ಯಕ್ಷತೆಯನ್ನು ವಹಿಸಿದ್ದರು. ರಾಷ್ಟ್ರೀಯಗ್ರಾಹಕರ ವ್ಯಾಜ್ಯ ಪರಿಹಾರಆಯೋಗದ ನ್ಯಾಯಾಧೀಶರಾದಡಾ. ಸಿದ್ದರಾಮೇಶ್ವರ ಕಂಟೀಕರಅವರು ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಜಂಟಿ ನಿರ್ದೇಶಕರಾದ ಶ್ರೀ […]