Blog Archive

ಜೂನ್ ಒಳಗೆ ಕಲಬುರಗಿಯಲ್ಲಿ ಧರ್ಮಸ್ಥಳ ಯೋಜನೆಯ ಬೃಹತ್ ಕೃಷಿ ಮೇಳ

Monday, December 16th, 2019
kalaburagi

ಕಲಬುರಗಿ : ಕಲಬುರಗಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ಜೂನ್ ಒಳಗಾಗಿ ’ಬೃಹತ್ ಕೃಷಿ ಮೇಳ’ ನಡೆಸಲು ಚಿಂತನೆ ಮಾಡಲಾಗಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕರಾದ ಡಾ. ಎಲ್. ಎಚ್. ಮಂಜುನಾಥ್ ತಿಳಿಸಿದರು. ಕಲಬುರಗಿ ಆಕಾಶವಾಣಿಗೆ ಇತ್ತೀಚೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು ಯೋಜನೆಯ ಬಲು ದೊಡ್ಡ ಕಾರ್ಯಕ್ರಮ ಕೃಷಿ ಮೇಳ ಆಯೋಜನೆಯಾಗಿದ್ದು ಈ ಭಾಗದಲ್ಲಿ ಕೃಷಿ, ಕೃಷಿ ಮಾಧ್ಯಮ, ಕೃಷಿ ಯಂತ್ರೋಪಕರಣ, ಕೃಷಿಯ ಆಧುನಿಕ ಬೆಳವಣಿಗೆ , ಅನುದಾನ, ಜಾನುವಾರು […]

ಕಲಬುರಗಿ : ಸ್ನೇಹಿತರಿಂದಲೇ ಯುವಕನ ಬರ್ಬರ ಹತ್ಯೆ

Thursday, September 19th, 2019
Prashanth

ಕಲಬುರಗಿ : ಯುವಕನೋರ್ವನನ್ನು ಸ್ನೇಹಿತರೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಗರದಲ್ಲಿ ನಡೆದಿದೆ. ಪ್ರಶಾಂತ್ ಕೊಟರಗಿ (28) ಕೊಲೆಯಾದ ಯುವಕ. ನಗರದ ಹೊರವಲಯದ ಅಫಜಲ್ಪುರ ರಸ್ತೆಯ ಖರ್ಗೆ ಕಾಲೋನಿಯ ಮನೆಯೊಂದರಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಪ್ರಶಾಂತ ತನ್ನ ಸ್ನೇಹಿತರೊಡನೆ‌‌ ಪಾರ್ಟಿ ಮಾಡುತ್ತಿದ್ದ. ಈ ವೇಳೆ ಯಾವುದೋ ವಿಷಯಕ್ಕೆ ಜಗಳವಾಗಿದೆ. ಇದೇ ಕೋಪದಲ್ಲಿ‌ ಪ್ರಶಾಂತ್ ನ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಇಂದು ಬೆಳಿಗ್ಗೆ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮಹೇಶ ಮತ್ತು ವಿನೋದ ಕೊಲೆ […]

ಕಲಬುರಗಿಯಲ್ಲಿ ಭೀಕರ ಅಪಘಾತ : ಐವರು ದುರ್ಮರಣ

Wednesday, August 28th, 2019
kalaburgi

ಕಲಬುರಗಿ : ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಸಾವಳಗಿ ಕ್ರಾಸ್ ಬಳಿ ಸಂಭವಿಸಿದೆ. ಸೋಲಾಪುರ ಮೂಲದ ಸಂಜಯ್ ಚಡಚಣ್ (29), ರಾಣಿ ಚಡಚಣ್(26), ಶ್ರೇಯಸ್(3), ಭಾಗ್ಯಶ್ರೀ (22) ಮತ್ತು ಧೀರಜ್(2) ಮೃತರು. ತಿರುಪತಿಯಿಂದ ಸೋಲಾಪುರಕ್ಕೆ ವಾಪಸಾಗುವ ವೇಳೆ ತಡರಾತ್ರಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಉಳಿದಂತೆ ಘಟನೆಯಲ್ಲಿ ಮೂವರು […]

ನನ್ನ ಮಾತು ನಡೆಯಲೇ ಇಲ್ಲ.. ಹೀಗಾಗಿ ನನಗೂ ನೋವಾಗಿದೆ: ಮಲ್ಲಿಕಾರ್ಜುನ ಖರ್ಗೆ

Tuesday, December 25th, 2018
malikarjun-kharge

ಕಲಬುರಗಿ: ‘ಸಂಪುಟ ವಿಸ್ತರಣೆ ವೇಳೆ ಕಲಬುರಗಿ ಜಿಲ್ಲೆಗೆ ಮತ್ತೂಂದು ಸಚಿವ ಸ್ಥಾನ ದೊರಕಿಸಬೇಕು ಎಂದು ನಾನು ಪ್ರಯತ್ನಿಸಿದ್ದೆ. ಆದರೆ ಕೊನೆ ಹಂತದಲ್ಲಿ ನನ್ನ ಪ್ರಯತ್ನ ಫಲ ನೀಡಲಿಲ್ಲ. ನನ್ನ ಮಾತು ನಡೆಯಲೇ ಇಲ್ಲ. ಹೀಗಾಗಿ ನನಗೂ ನೋವಾಗಿದೆ. ಆದರೆ, ಅದನ್ನು ಬಹಿರಂಗಪಡಿಸುವಂತಿಲ್ಲ’ ಎಂದು ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಿಂದ ಡಾ| ಅಜಯಸಿಂಗ್‌ ಹಾಗೂ ಡಾ| ಉಮೇಶ ಜಾಧವ ಅವರ ಹೆಸರನ್ನು ಸಚಿವ ಸ್ಥಾನಕ್ಕೆ ಶಿಫಾರಸು […]

ಅಕ್ರಮ ಪಿಸ್ತೂಲ್​​​ ಹೊಂದಿದ್ದ ಆರೋಪಿಯ ಬಂಧನ

Wednesday, November 28th, 2018
pistool

ಕಲಬುರಗಿ: ಅಕ್ರಮ ನಾಡ ಪಿಸ್ತೂಲ್ ಹೊಂದಿದ್ದ ಆರೋಪಿಯನ್ನ ಮಾದನ ಹಿಪ್ಪರಗಾ ಪೊಲೀಸರು ಬಂಧಿಸಿದ್ದಾರೆ. ಮಾದನ ಹಿಪ್ಪರಗಾ ಗ್ರಾಮದ ರಾಜಕುಮಾರ ಸಾವರೆ ಬಂಧಿತ ಆರೋಪಿ. ಬಂಧಿತನಿಂದ ಒಂದು ನಾಡ ಪಿಸ್ತೂಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೋರ್ವ ಆರೋಪಿ ಶಾಂತಪ್ಪ ಮನೆ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಡ್ರಾಮಿ ತಾಲೂಕಿನ ಕುಮ್ಮನಸಿರಸಗಿ ಗ್ರಾಮದ ಹೊಲದಲ್ಲಿ ಅಕ್ರಮ ಗಾಂಜಾ ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ರಮೇಶ್ ಬಂಧಿತ […]

ಟ್ರ್ಯಾಕ್ಟರ್​​ಗೆ ಬೈಕ್​ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

Tuesday, November 20th, 2018
accident

ಕಲಬುರಗಿ: ನಿಂತಿದ್ದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ತಾಪುರ ತಾಲೂಕಿನ ನಾಲವಾರ ಹತ್ತಿರ ನಡೆದಿದೆ. ಯಾದಗಿರಿ ತಾಲೂಕು ಯರಗೋಳ ಗ್ರಾಮದ ನಿವಾಸಿ ಹಳ್ಳೆಪ್ಪ (25) ಮೃತಪಟ್ಟ ಬೈಕ್ ಸವಾರನೆಂದು ಗುರುತಿಸಲಾಗಿದೆ. ಯರಗೋಳದಿಂದ ನಾಲವಾರ ಕಡೆ ಹಳ್ಳೆಪ್ಪ ಬೈಕ್ನಲ್ಲಿ ಹೊರಟ್ಟಿದ್ದ. ಈ ವೇಳೆ ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮೈತ್ರಿ ಸರ್ಕಾರಕ್ಕೆ ಯಾವುದೇ ಕಂಟಕ ಎದುರಾಗಿಲ್ಲ: ಸಿಎಂ ಕುಮಾರಸ್ವಾಮಿ

Monday, September 17th, 2018
government

ಕಲಬುರಗಿ: ಮೈತ್ರಿ ಸರ್ಕಾರಕ್ಕೆ ಯಾವುದೇ ಕಂಟಕ ಎದುರಾಗಿಲ್ಲ. ಐದು ವರ್ಷ ಮೈತ್ರಿ ಸರ್ಕಾರ ಸುಭದ್ರವಾಗಿ ನಡೆಸುವ ಜವಾಬ್ದಾರಿ ಮಾಜಿ ಸಿಎಂ ಸಿದ್ದರಾಮಯ್ಯ ಹೆಗಲಿಗಿದ್ದು, ಬಿಜೆಪಿಯವರು ಸುಮ್ಮನೆ ವ್ಯರ್ಥ ಕಸರತ್ತು ಮಾಡುತ್ತಿದ್ದಾರೆಂದು ಸಿಎಂ ಕುಮಾರಸ್ವಾಮಿ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ನಗರದಲ್ಲಿ ಮಾತನಾಡಿದ ಸಿಎಂ, ಕಳ್ಳನ ಮನಸ್ಸು ಹುಳ್ಳು ಹುಳ್ಳುಗೆ ಎನ್ನುವಂತೆ ಬಿಜೆಪಿಯವರ ಮನಸ್ಥಿತಿಯಾಗಿದೆ. ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ, ನೀಡುತ್ತಿದ್ದಾರೆ ಎಂದು ಸುಮ್ಮನೇ ಇಲ್ಲದ ಸುದ್ದಿಯನ್ನು ಸೃಷ್ಟಿಸಿ ಹರಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್ ಶಾಸಕರು ವಿಲನ್ ಅಲ್ಲ. ಸಮ್ಮಿಶ್ರ […]

ಪ್ರತಿ ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ಮೇಲೆ 2 ರೂಪಾಯಿ ಕಡಿತ: ಕುಮಾರಸ್ವಾಮಿ

Monday, September 17th, 2018
kumarswamy

ಕಲಬುರಗಿ: ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್ಗೆ ಎರಡು ರೂಪಾಯಿ ಕಡಿತಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕಲಬುರಗಿಯಲ್ಲಿ ಏರ್ಪಡಿಸಲಾಗಿದ್ದ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಮುಖ್ಯಮಂತ್ರಿ ಕುಮಾರಸ್ವಾಮಿ ಸೆಸ್ ಕಡಿತದ ನಿರ್ಧಾರ ಪ್ರಕಟಿಸಿದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನ ಮುಖಿಯಾಗಿರುವುದರಿಂದ ಜನತೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಹೀಗಾಗಿ ಜನರ ಒಂದಷ್ಟು ಭಾರವನ್ನಾದರೂ ಇಳಿಸಬೇಕೆಂಬ ಉದ್ದೇಶದಿಂದ ಪ್ರತಿ ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ಕನಿಷ್ಟ 2 ರೂಪಾಯಿ ಸೆನ್ ತೆರಿಗೆ ಕಡಿತಗೊಳಿಸಲಾಗುವುದು […]