Blog Archive

ಕೇರಳದಿಂದ ಮಂಗಳೂರಿಗೆ ದೋಣಿ ಮೂಲಕ ಬಂದ ಎಂಟು ಮಂದಿಯ ಬಂಧನ

Friday, April 10th, 2020
boat

ಮಂಗಳೂರು : ಕೊರೊನಾ ದಿಂದ ರಸ್ತೆ ಸಂಚಾರ ಬಂದ್ ಆಗಿದ್ದು ದೋಣಿಯ ಮೂಲಕ ಅಕ್ರಮವಾಗಿ ಕೇರಳದಿಂದ ಮಂಗಳೂರಿಗೆ ಆಗಮಿಸಿದ ಎಂಟು ಜನರ ತಂಡವನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಿದ್ದು, ಅಕ್ರಮವಾಗಿ ಮಂಗಳೂರು ಪ್ರವೇಶಿಸಿದ ಯಾಕೂಬ್ ಮತ್ತು ಆತನ ಗ್ಯಾಂಗ್ ನ ಏಳು ಜನರನ್ನು ಬಂಧಿಸಿ, ಆಸ್ಪತ್ರೆಗೆ ಸೇರಿಸಲಾಗಿದೆ. ಎಲ್ಲರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗಿದ್ದು ಜಿಲ್ಲಾಸ್ಪತ್ರೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಕ್ ಡೌನ್ ಸಂಬಂಧ ಕರ್ನಾಟಕ- ಕೇರಳ ಗಡಿ […]

ಕೇರಳದ ರೋಗಿಗಳು ಮಂಗಳೂರಿಗೆ, ಒಬ್ಬ ಚಿಕಿತ್ಸೆ ಲಭ್ಯವಿಲ್ಲದ ವಾಪಾಸ್

Thursday, April 9th, 2020
kerala

ಮಂಗಳೂರು : ಹೃದಯ ಸಂಬಂಧಿ ಕಾಯಿಲೆ ಮತ್ತು ಮೆದುಳು ಸಂಬಂಧಿ ಕಾಯಿಲೆಯ ರೋಗಿ ಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರೂ ಮೆದುಳು ಸಂಬಂಧಿ ರೋಗಿಗೆ ಅಲ್ಲಿ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಮತ್ತೆ ಕಣ್ಣೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಜಿಲ್ಲಾ ವೈದ್ಯರ ಪ್ರಮಾಣ ಪತ್ರ ಅಗತ್ಯವಿರುವುದರಿಂದ ಕಾಸರಗೋಡು ಸರಕಾರಿ ಆಸ್ಪತ್ರೆಯ ಇಬ್ಬರು ವೈದ್ಯರು ಮತ್ತು ಆರೋಗ್ಯ ಸಿಬಂದಿಯನ್ನು ತಾತ್ಕಾಲಿಕವಾಗಿ ಗಡಿ ಪ್ರದೇಶವಾದ ತಲಪಾಡಿಯಲ್ಲಿ ನಿಯೋಜಿಸಿದ್ದು, ಗಡಿಭಾಗದಲ್ಲಿಯೇ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಮಾಡಲಾಗಿದೆ. ಇಲ್ಲೇ ಕೋವಿದ್‌ -19 ತಪಾಸಣೆ ನಡೆಯ […]

ಇಟಲಿಯಿಂದ ಆಗಮಿಸಿದ್ದ ಕೇರಳದ 3 ವರ್ಷದ ಮಗುವಿಗೆ ಕೊರೊನಾ ಸೋಂಕು

Monday, March 9th, 2020
coronavirus

ಕೊಚ್ಚಿನ್ : ರವಿವಾರವಷ್ಟೇ ಕೇರಳದಲ್ಲಿ ಐವರಿಗೆ ತಗುಲಿದ್ದ ಕೊರೊನಾ ಸೋಂಕು ಇಂದು ಮತ್ತೊಂದು ಮಗುವಿಗೆ ತಾಗಿದೆ. ಇಟಲಿಗೆ ಹೋಗಿ ಬಂದಿದ್ದ ಕೇರಳದ ಮೂರು ವರ್ಷದ ಮಗುವಿಗೆ ಸೋಂಕು ಇರುವುದು ದೃಢಪಟ್ಟಿದೆ. ಸೋಮವಾರ ಈ ಹೊಸ ದೃಢಪಡುವ ಮೂಲಕ ಭಾರತದಲ್ಲಿ ಈ ಮಾರಣಾಂತಿಕ ಸೋಂಕಿತರ ಪ್ರಕರಣ 40ಕ್ಕೇರಿದೆ.ಶನಿವಾರ ತನ್ನ ಕುಟುಂಬಿಕರ ಜೊತೆಗೆ ಇಟಲಿಯಿಂದ ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಈ ಮಗು ಮರಳಿತ್ತು. ಸದ್ಯ ಮಗುವನ್ನು ಐಸಲೋಶನ್ ವಾರ್ಡ್ ನಲ್ಲಿ ಇಡಲಾಗಿದೆ. ಮಗುವಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಅವರ ಕುಟುಂಬಿಕರನ್ನೂ […]

ಮೂಡುಬಿದಿರೆ : ಬೈಕ್‍ಗೆ ಬಸ್ ಡಿಕ್ಕಿ : ಸವಾರ ಸ್ಥಳದಲ್ಲೇ ಮೃತ್ಯು

Monday, January 13th, 2020
krishnananda

ಮೂಡುಬಿದಿರೆ : ಬೈಕ್‍ಗೆ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಆಳ್ವಾಸ್ ಆಯುರ್ವೇದ ಕಾಲೇಜಿನ ವೈದ್ಯರೊಬ್ಬರು ಮೃತಪಟ್ಟ ಘಟನೆ ಕೆಸರುಗದ್ದೆ ಬಳಿ ರವಿವಾರ ನಡೆದಿದೆ. ಕೇರಳದ ಕೊಲ್ಲಂನ ಡಾ. ಕೃಷ್ಣಾನಂದ (24) ಮೃತರು. ಅವರು ಕಾರ್ಕಳದಲ್ಲಿ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಳ್ಳಲು ರವಿವಾರ ಮೂಡುಬಿದಿರೆಯಿಂದ ಬೈಕ್‍ನಲ್ಲಿ ಹೊರಟಿದ್ದರು. ಕೆಸರುಗದ್ದೆಯಲ್ಲಿ ಹೋಗುತ್ತಿದ್ದ ವೇಳೆ ಖಾಸಗಿ ಬಸ್ ಓವರ್ ಟೇಕ್ ಮಾಡುವ ಸಂದರ್ಭ ಬೈಕ್‍ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಅಪಘಾತದಿಂದ ವೈದ್ಯ ರಸ್ತೆಗೆ ಬಿದ್ದ ವೇಳೆ ಬಸ್ಸಿನ ಹಿಂಬದಿ ಚಕ್ರ ಅವರ ತಲೆಯ ಮೇಲೆ ಹರಿದು ಗಂಭೀರ ಗಾಯಗೊಂಡು […]

ಕೇರಳದಲ್ಲಿ ಸಿಎಂ ಯಡಿಯೂರಪ್ಪಗೆ ಕಪ್ಪು ಬಾವುಟ ಪ್ರದರ್ಶನ : ಎಸ್​​​ಎಫ್​​ಐ ಮತ್ತು ಕಾಂಗ್ರೆಸ್​​ನ ಐವರು ಬಂಧನ​​

Thursday, December 26th, 2019
BSY

ತಿರುವನಂತಪುರಂ : ಕೇರಳದಲ್ಲಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಕಾರು ಅಡ್ಡಗಟ್ಟಿ ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದ ಆರೋಪದ ಮೇಲೆ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ ಮತ್ತು ಕಾಂಗ್ರೆಸ್ನ ಐವರು ಕಾರ್ಯಕರ್ತರ ಬಂಧನವಾಗಿದೆ. ಸಿಪಿಐನ ಭಾರತೀಯ ವಿದ್ಯಾರ್ಥಿ ಫೆಡರೇಶನ್‌(ಎಸ್‌ಎಫ್‌ಐ)ನ ಮೂವರು ಮತ್ತು ಯುವ ಕಾಂಗ್ರೆಸ್ನ ಇಬ್ಬರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ಧಾರೆ. ಕಳೆದ ಎರಡು ದಿನಗಳ ಹಿಂದೆ ಸೋಮವಾರ(ಡಿ.23) ರಾತ್ರಿ ಕೇರಳದ ತಿರುವನಂತಪುರಂ ಪ್ರವೇಶಿಸುತ್ತಿದ್ದಂತೆ ಸಿಎಂ ಯಡಿಯೂರಪ್ಪನವರ ಕಾರಿಗೆ ಅಡ್ಡ […]

ಮುಂದುವರೆದ ಶಬರಿಮಲೆ ವಿವಾದ: ಇಂದು 12 ಗಂಟೆಗಳ ಕಾಲ ಕೇರಳ ಬಂದ್

Saturday, November 17th, 2018
shabarimale

ಕೊಚ್ಚಿನ್: ಹಿಂದೂ ಐಕ್ಯ ವೇದಿ ಸಂಘಟನೆಯ ಅಧ್ಯಕ್ಷೆ ಕೆ.ಪಿ. ಶಶಿಕಲಾರನ್ನು ಕೇರಳ ಪೊಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ ಇಂದು 12 ಗಂಟೆಗಳ ಕೇರಳ ರಾಜ್ಯ ಬಂದ್ಗೆ ಕರೆ ನೀಡಲಾಗಿದೆ. ಶಬರಿಮಲೆ ಕರ್ಮ ಸಮಿತಿಯು 12 ಗಂಟೆಗಳ ರಾಜ್ಯವ್ಯಾಪಿ ಬಂದ್ಗೆ ಕರೆ ನೀಡಿದ್ದು, ಇಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಂದ್ ಮಾಡಲು ನಿರ್ಧರಿಸಲಾಗಿದೆ. ರಾತ್ರಿ ವೇಳೆ ಶಶಿಕಲಾ ಪ್ರಯಾಣಕ್ಕೆ ಅಡ್ಡಿಪಡಿಸಿದ ಪೊಲೀಸರ ವಿರುದ್ಧ ಪ್ರತಿಭಟಿಸಿದ್ದಕ್ಕೆ ಅವರನ್ನು ಸನ್ನಿಧಾನಂನಲ್ಲಿ ಬಂಧಿಸಲಾಗಿದೆ ಎನ್ನಲಾಗಿದೆ. ಇನ್ನೊಂದೆಡೆ, ನಿನ್ನೆಯಷ್ಟೆ ಅಯ್ಯಪ್ಪನ ದೇಗಲು ಪ್ರವೇಶಿಸಲು […]

ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ: ತೈಲಕ್ಕೆ ಕೇರಳಕ್ಕಿಂತ ಕಡಿಮೆ ದರ

Monday, September 24th, 2018
petrol

ಮಂಗಳೂರು: ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಆಗಿರುವುದರಿಂದ ಕರ್ನಾಟಕ ಮತ್ತು ಕೇರಳದ ಗಡಿ ಭಾಗವಾದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ತಲಪಾಡಿಯಲ್ಲಿ ಕೇರಳದ ವಾಹನ ಸವಾರರಿಗೆ ಸಂತಸ ತಂದಿದೆ. ಕೇರಳದಿಂದ ಉತ್ತರ ಭಾರತಕ್ಕೆ ಸಂಪರ್ಕಿಸುವ ಹೆದ್ದಾರಿಯಲ್ಲಿರುವ ತಲಪಾಡಿಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ತಲಪಾಡಿಯ 2 ಪೆಟ್ರೋಲ್ ಪಂಪ್ನಲ್ಲಿ 1 ಕರ್ನಾಟಕ ವ್ಯಾಪ್ತಿಯಲ್ಲಿದೆ. ಇನ್ನೊಂದು ಕೇರಳ ರಾಜ್ಯದಲ್ಲಿದೆ. ಅರ್ಧ ಕಿಲೋ ಮೀಟರ್ ಅಂತರದಲ್ಲಿರುವ ಈ ಎರಡು ಪೆಟ್ರೋಲ್ ಪಂಪ್ನಲ್ಲಿ ಇದೀಗ ಬೆಲೆ ವ್ಯತ್ಯಾಸವಾಗಿದ್ದು, 1 ಪೆಟ್ರೋಲ್ […]

ಬೆಳ್ತಂಗಡಿ ತಾಲೂಕಿನ ಬಿಷಪ್ ಹೌಸ್​ನಿಂದ 7 ಲೋಡ್​ಗಳಲ್ಲಿ ನೆರೆ ಪರಿಹಾರ..!

Monday, August 20th, 2018
church

ಮಂಗಳೂರು: ಕೇರಳದಲ್ಲಿ ನೆರೆ ಪ್ರವಾಹ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಿಷಪ್ ಹೌಸ್ನಿಂದ 7 ಲೋಡ್ಗಳಲ್ಲಿ ನೆರೆ ಪರಿಹಾರ ಸಾಮಾಗ್ರಿಗಳನ್ನು ಕೇರಳಕ್ಕೆ ರವಾನಿಸಲಾಗಿದೆ. ಬೆಳ್ತಂಗಡಿಯ ಕರ್ನಾಟಕ ಸೀರೊ ಮಲಬಾರ್ ಕ್ರಿಶ್ಚಿಯನ್ ಅಸೋಸಿಯೇಷನ್ (ಕೆ ಎಸ್ಎಂಸಿಎ) ಸಂಸ್ಥೆಯು ಬೆಳ್ತಂಗಡಿ ಬಿಷಪ್ ಮಾರ್ ಲಾರೆನ್ಸ್ ಮುಕ್ಕುಯಿ ನೇತೃತ್ವದಲ್ಲಿ ನೆರೆ ಪರಿಹಾರ ಸಂಗ್ರಹಿಸಿತ್ತು. ಸಂಗ್ರಹವಾದ 7 ಲೋಡ್ ಸಾಮಾಗ್ರಿಗಳನ್ನು ಲಾರಿಗಳ ಮೂಲಕ ರವಾನಿಸಲಾಗಿದೆ. ಕೇರಳ ರಾಜ್ಯದ ವಯನಾಡ್ ಹಾಗೂ ಮಾನಂದವಾಡಿಗೆ ಬೆಳ್ತಂಗಡಿಯಿಂದ ಲಾರಿ ಮೂಲಕ ರವಾನೆ ಮಾಡಲಾಗಿದೆ. ಅಕ್ಕಿ, […]

ಬಿಬಿಎಂಪಿಯಿಂದ ಕೊಡಗು-ಕೇರಳಕ್ಕೆ ಮೂರುವರೆ ಕೋಟಿ ರೂ. ಸಹಾಯಧನ

Saturday, August 18th, 2018
bengaluru

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕೊಡಗು ಹಾಗೂ ಕೇರಳಕ್ಕೆ ಅಗತ್ಯ ವಸ್ತುಗಳು, ಶೆಡ್ ನಿರ್ಮಾಣ ಸೇರಿದಂತೆ ಹಣದ ರೂಪದಲ್ಲಿ ಸಹಾಯ ಮಾಡಲು ಮುಂದಾಗಿದೆ. ಬಿಬಿಎಂಪಿ ವತಿಯಿಂದ 2 ಕೋಟಿ ಪರಿಹಾರ ನಿಧಿ, ಹಾಗೂ ಪಾಲಿಕೆ ಸದಸ್ಯರ ಒಂದು‌ ತಿಂಗಳ ಗೌರವಧನ, ನೌಕರರ ಒಂದು ದಿನದ ವೇತನ ನೀಡಲು ತೀರ್ಮಾನಿಸಿದ್ದು ಒಟ್ಟು ಮೂರುವರೇ ಕೋಟಿ ರುಪಾಯಿ ನೀಡಲು ಬಿಬಿಎಂಪಿ ಮುಂದಾಗಿದೆ. ಇದರಲ್ಲಿ ಕೇರಳಕ್ಕೆ ಒಂದು ಕೋಟಿ, ಕೊಡಗಿಗೆ ಎರಡೂವರೆ ಕೋಟಿ ನೀಡಲು ತೀರ್ಮಾನಿಸಲಾಗಿದೆ. ಇನ್ನು ಪಾಲಿಕೆ ಕೇಂದ್ರ […]

ದೇಶದ ಜನರಿಗೆ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್​ ಆರೋಗ್ಯ ಯೋಜನೆ: ನರೇಂದ್ರ ಮೋದಿ

Wednesday, August 15th, 2018
narendra-modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಇಂದು ದೆಹಲಿಯ ಕೆಂಪುಕೋಟೆ ಮೇಲೆ ತಮ್ಮ ಕೊನೆ ಭಾಷಣ ಮಾಡಿದರು. ಈ ವೇಳೆ ದೇಶದ ಜನರಿಗೆ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್ ಆರೋಗ್ಯ ಯೋಜನೆ ಗಿಫ್ಟ್ ನೀಡಿದ್ದಾರೆ. ಈ ಹಿಂದೆ ಕೇಂದ್ರ ಬಜೆಟ್ ವೇಳೆ ಈ ಯೋಜನೆ ಪ್ರಸ್ತಾಪಗೊಂಡಿತ್ತು. ಇದೀಗ ಈ ಯೋಜನೆ ಬಗ್ಗೆ ಪ್ರಧಾನಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದರಿಂದ ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಆರೋಗ್ಯ ವಿಮೆ ಭಾಗ್ಯ ಸಿಗಲಿದೆ. ಈ ಮೂಲಕ […]