Blog Archive

ಬಾಯಿ ಮಾತಿನಲ್ಲಿ ಸಂವಿಧಾನ ಒಪ್ಪಿಕೊಂಡರೆ ಸಾಲದು: ಅನಂತಕುಮಾರ್‌ ಹೆಗಡೆ

Friday, January 26th, 2018
Ananth-kumar-hegde

ಬೆಂಗಳೂರು: ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಹೊಡೆದು ಬಾಯಿ ಮಾತಿನಲ್ಲಿ ಸಂವಿಧಾನ ಒಪ್ಪಿಕೊಂಡರೆ ಸಾಲದು. ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಒಪ್ಪಿಕೊಂಡಾಗ ಮಾತ್ರ ಸಂವಿಧಾನಕ್ಕೆ ಗೌರವ ನೀಡಿದಂತಾಗುತ್ತದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಎದುರಾಳಿಗಳಿಗೆ ಟಾಂಗ್ ನೀಡಿದ್ದಾರೆ. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ 69ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಭಾಷಣದಲ್ಲಿ ವ್ಯಂಗ್ಯ ಮಿಶ್ರಿತವಾಗಿಯೇ ಕುಹಕವಾಡುತ್ತಿದ್ದರು. ನಾನು ಎಲ್ಲವನ್ನು ಹೇಳುವುದಕ್ಕೆ ಹೋದರೆ ಕೆಲವರು ಒಪ್ಪಿಕೊಳ್ಳುವುದಿಲ್ಲ. ಮೊದಲು ವಾಸ್ತವಿಕತೆಯನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲವನ್ನು ಬಣ್ಣದ ಕನ್ನಡಕದಲ್ಲೆ ನೋಡುತ್ತಾರೆ ಎಂದು […]

69ನೇ ಗಣರಾಜ್ಯೋತ್ಸವ ಆಚರಣೆಗೆ ದೇಶ ಸಜ್ಜು…ಈ ಬಾರಿಯ ವಿಶೇಷತೆ ಏನು?

Friday, January 26th, 2018
republic-day

ನವದೆಹಲಿ: ಇಂದು ದೇಶದ 69ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದ್ದು, ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ದೇಶದ ರಾಜಧಾನಿ ದೆಹಲಿ ಸೇರಿದಂತೆ ಎಲ್ಲಡೆ ಗಣರಾಜ್ಯೋತ್ಸವ ಆಚರಣೆಗೆ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ದೆಹಲಿಯ ಇಂಡಿಯಾ ಗೇಟ್‌ ಬಳಿ ಗಣರಾಜ್ಯೋತ್ಸವ ಆಚರಣೆಗೆ ವೇದಿಕೆ ಸಜ್ಜಾಗಿದೆ. ಈ ಬಾರಿ ಪರೇಡ್‌ ಹಾಗೂ ಮುಖ್ಯ ಅತಿಥಿಗಳಿಂದ ಗಣರಾಜ್ಯೋತ್ಸವ ವಿಶೇಷ ಗಮನ ಸೆಳೆಯುತ್ತಿದೆ. ಇದೇ ಮೊದಲ ಬಾರಿಗೆ ಆಷಿಯಾನ್‌ ರಾಷ್ಟ್ರಗಳ ನಾಯಕರು ಗಣರಾಜ್ಯೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಥಾಯ್ಲೆಂಡ್, ವಿಯೆಟ್ನಾಂ, ಮಲೇಷ್ಯಾ, ಫಿಲಿಫೈನ್ಸ್, […]

ಮಂಗಳೂರಿನಲ್ಲಿ 68ನೇ ಗಣರಾಜ್ಯೋತ್ಸವದ ಧ್ವಜಾರೋಹಣಗೈದ ರಮಾನಾಥ ರೈ

Thursday, January 26th, 2017
Republic day

ಮಂಗಳೂರು: 68ನೇ ಗಣರಾಜ್ಯೋತ್ಸವವನ್ನು ಮಂಗಳೂರಿನ ನೆಹರೂ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣಗೈಯುವ ಮೂಲಕ ಪರಿಸರ, ಅರಣ್ಯ, ಜೀವಿಶಾಸ್ತ್ರ ಮತ್ತು ದ. ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಆಚರಿಸಿದರು. ಬಳಿಕ ಗಣರಾಜ್ಯೋತ್ಸವದ ಸಂದೇಶ ನೀಡಿದ ಸಚಿವ ರೈ, ಸುಮಾರು 125 ಕೋಟಿ ಜನಸಂಖ್ಯೆ ಇರುವ ಬಹುಸಂಸ್ಕೃತಿ, ಬಹುಭಾಷೆ, ಜಾತಿ, ಮತಗಳ ನೆಲೆಯಾಗಿರುವ ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾರಿದ ರಾಷ್ಟ್ರ. ಆದ್ದರಿಂದ ಗಣರಾಜ್ಯೋತ್ಸವವು ಜನತೆಯ, ಜನತಂತ್ರ ವ್ಯವಸ್ಥೆಯ ಹಬ್ಬ ಎಂದರು. ಸಮಾಜದ ಎಲ್ಲಾ ಬಡಜನತೆಯನ್ನು ಆರ್ಥಿಕವಾಗಿ […]

ಶಾಂತಿ ಸೌಹಾರ್ದತೆಯ ಭಾರತ ಕಟ್ಟೋಣ : ಹರ್ಷಾದ್ ವರ್ಕಾಡಿ

Thursday, January 28th, 2016
Harshad

ಮಂಜೇಶ್ವರ : ಜಗತ್ತೇ ಗೌರವಿಸುವ ಪ್ರಜಾಪ್ರಭ್ರುತ್ವ ರಾಷ್ರ್ರ ನಮ್ಮ ಭಾರತವಾಗಿದೆ. ಭಾರತದ ಸಂವಿಧಾನ ಇಡೀ ಜಗತ್ತಿಗೇ ಮಾದರಿಯಾಗಿದ್ದು ಸಹಿಷ್ಣುತೆ, ಸಹಬಾಳ್ವೆಯ ಜೀವನದೊಂದಿಗೆ ಶಾಂತಿ ಸೌಹಾರ್ದತೆ, ಭಾರತವನ್ನು ನಾವು ಕಟ್ಟೋಣ ಎಂದು ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧಕ್ಷ ಹರ್ಷಾದ್ ವರ್ಕಾಡಿ ಕರೆ ನೀಡಿದ್ದಾರೆ. ಅವರು ವರ್ಕಾಡಿ ಕಳಿಯೂರಿನ ಸೈಂಟ್ ಮೇರೀಸ್ ಆಂಗ್ಲ ಮಾಧಮ ಶಾಲೆಯಲ್ಲಿ ಜರುಗಿದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧಕ್ಷ ಸ್ಥಾನ ವಹಿಸಿ ಮಾತನಾಡಿದರು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಡಾ.ಬಿ.ಆರ್ ಅಂಬೇಡ್ಕರ್‌ರವರು ರೂಪಿಸಿದ ಸಂವಿಧಾನ ಇಂದು […]

ನೆಹರೂ ಮೈದಾನದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಆಕರ್ಷಕ ಪಥಸಂಚಲನ, ಸಾಧಕರಿಗೆ ಗೌರವ, ವಿದ್ಯಾರ್ಥಿಗಳ ನೃತ್ಯ ವೈವಿದ್ಯ

Saturday, January 26th, 2013
ನೆಹರೂ ಮೈದಾನದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಆಕರ್ಷಕ ಪಥಸಂಚಲನ, ಸಾಧಕರಿಗೆ ಗೌರವ, ವಿದ್ಯಾರ್ಥಿಗಳ ನೃತ್ಯ ವೈವಿದ್ಯ

ಮಂಗಳೂರು : ನಗರದ ನೆಹರೂ ಮೈದಾನದಲ್ಲಿ ಶನಿವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಉನ್ನತ ಶಿಕ್ಷಣ ಖಾತೆ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ನೆರವೇರಿಸಿದರು. ಧ್ವಜವಂದನೆಯ ಬಳಿಕ ಪಥಸಂಚಲನ ತಂಡಗಳಿಂದ ಗೌರವ ಸ್ವೀಕರಿಸಿ, ಆಕರ್ಷಕ ಪಥಸಂಚಲನ ವೀಕ್ಷಿಸಿದರು. ಸುಮಾರು 20 ವಿವಿಧ ತಂಡಗಳು ಹಾಗೂ 2 ಪೊಲೀಸ್‌ ವಾದ್ಯ ತಂಡ ಪಥ ಸಂಚಲನದಲ್ಲಿ ಭಾಗವಹಿಸಿದ್ದವು. ಜೊತೆಗೆ ಶಾಲಾ ಮಕ್ಕಳ ವಿವಿಧ […]

ನೆಹರು ಮೈದಾನದಲ್ಲಿ ಆಕರ್ಷಕ ಕವಾಯತಿನೊಂದಿಗೆ 62 ನೇ ಗಣರಾಜ್ಯೋತ್ಸವ ಆಚರಣೆ

Wednesday, January 26th, 2011
62 ನೇ ಗಣರಾಜ್ಯೋತ್ಸವ

ಮಂಗಳೂರು:   62 ನೇ ಗಣರಾಜ್ಯೋತ್ಸವದ ಅಂಗವಾಗಿ ಸನ್ಮಾನ್ಯ ದ.ಕ ಜಿಲ್ಲಾ ಉಸ್ತುವಾರಿ ಸಚಿವ  ಶ್ರೀ ಕೃಷ್ಣ ಜೆ. ಪಾಲೆಮಾರ್ ರವರು ಇಂದು ಬೆಳಿಗ್ಗೆ ಮಂಗಳೂರಿನ ನೆಹರು ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡದಲ್ಲಿ ನಡೆದ ಹಾಗೂ ನಡೆಯಲಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ಸಮಗ್ರ ವರದಿಯನ್ನು ತನ್ನ ಗಣರಾಜೋತ್ಸವದ ಭಾಷಣದಲ್ಲಿ ವಿವರಿಸಿದರು. ದೈರ್ಯ ಸಾಹಸಕ್ಕಾಗಿ ನೀಡುವ ರಾಜ್ಯಮಟ್ಟದ ಹೊಯ್ಸಳ ಪ್ರಶಸ್ತಿಯನ್ನು ಪ್ರವೀಣ ಎ.ಕೆ. ಸುಳ್ಯ ಹಾಗೂ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ   […]