ಉಡುಪಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವ

Friday, January 26th, 2024
ಉಡುಪಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವ

ಉಡುಪಿ : ಜಿಲ್ಲಾಡಳಿತ ವತಿಯಿಂದ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಗೌರವ ರಕ್ಷೆ ಸ್ವೀಕರಿಸಿದ ಬಳಿಕ ರಾಜ್ಯ ಸರ್ಕಾರದ ಯೋಜನೆಗಳು ಸರ್ವರಿಗೂ ಅನುಕೂಲವಾಗುವಂತಿರಬೇಕು ಎಂಬ ದೃಷ್ಠಿಯಿಂದ ಐದು ಗ್ಯಾರಂಟಿ ಯೋಜನೆಗಳನ್ನು ಜಾತಿ, ಧರ್ಮ, ಲಿಂಗಬೇಧಗಳಿಲ್ಲದೇ ಸರ್ವರಿಗೂ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ […]

ಮಂಗಳೂರು ನೆಹರು ಮೈದಾನದಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ

Friday, January 26th, 2024
Republicday

ಮಂಗಳೂರು : ನೆಹರು ಮೈದಾನದಲ್ಲಿ ನಡೆದ 75ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಧ್ವಜಾರೋಹಣ ಮಾಡಿದರು. ಪರೇಡ್ ವೀಕ್ಷಣೆ ಬಳಿಕ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ‘ದೇಶ ನಿರ್ಮಾಣಕ್ಕೆ ಬುನಾದಿ ಹಾಕಿದ ರಾಷ್ಟ್ರನಾಯಕರನ್ನು ತೆರೆಮರೆಗೆ ಸರಿಸಿ ಅವರ ಬಗ್ಗೆ ಯುವತಲೆಮಾರಿಗೆ ತಿಳಿಯದಂತೆ ಮಾಡುವ ಒಳಸಂಚು ರಾಷ್ಟ್ರದಲ್ಲಿ ನಡೆಯುತ್ತಿದೆ. ಇದು ಕಳವಳಕಾರಿ ಸಂಗತಿ‘ ಎಂದರು.  ಆದರ್ಶ ಪುರುಷ ಶ್ರೀರಾಮನಂತೆ ನಾಡಿನ ಜನರಿಗೆ ನೀಡಿದ ಮಾತನ್ನು ಉಳಿಸಿಕೊಳ್ಳುವ ಮೂಲಕ ರಾಜ್ಯ ಸರ್ಕಾರ ರಾಮರಾಜ್ಯದ ಕನಸು […]

ಕಾಸರಗೋಡಿನಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಸರಕಾರಿ ಅಧಿಕಾರಿಗಳು

Friday, January 28th, 2022
Indian-Flag

ಕಾಸರಗೋಡು :  ಮುನ್ಸಿಪಲ್ ಸ್ಟೇಡಿಯಂನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸರಕಾರೀ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು  ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಘಟನೆ ನಡೆದಿದೆ. ಜಿಲ್ಲಾ ಮಟ್ಟದ ಧ್ವಜಾರೋಹಣವನ್ನು ಸಚಿವ ಅಹ್ಮದ್ ದೇವರಕೋವ್ ನೆರವೇರಿಸಿದರು. ಕಾಸರಗೋಡು ಮುನ್ಸಿಪಲ್ ಸ್ಟೇಡಿಯಂನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಧ್ವಜವನ್ನು ತಲೆಕೆಳಗಾಗಿ ಹಾರಿಸಿರುವುದು ಸಚಿವರಾಗಲೀ ಅಥವಾ ಇತರ ಅಧಿಕಾರಿಗಳಾಗಲೀ ಗಮನ ಕೊಡಲಿಲ್ಲ. ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಿಸಿದ ನಂತರ ಸಚಿವ ಅಹಮದ್ ದೇವರಕೋವಿಲ್ ವಂದಿಸಿದರು. ಇದಾದ ಬಳಿಕ ಧ್ವಜವನ್ನು ತಲೆಕೆಳಗಾಗಿ ಹಾರಿಸಲಾಗಿದೆ ಎಂದು […]

ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಂದ 72ನೇ ಗಣರಾಜ್ಯೋತ್ಸವದ ಸಂದೇಶ, ಧ್ವಜಾರೋಹಣ

Tuesday, January 26th, 2021
Republic Day

ಮಂಗಳೂರು : ನೆಹರೂ ಮೈದಾನದಲ್ಲಿ ದ.ಕ. ಜಿಲ್ಲಾಡಳಿತದಿಂದ ವತಿಯಿಂದ 72ನೇ ಗಣರಾಜ್ಯೋತ್ಸವು‌ ಮಂಗಳವಾರ ನಡೆಯಿತು‌. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಧ್ವಜಾರೋಹಣ ಗೈದು ಪರೇಡ್ ವೀಕ್ಷಿಸಿದರು. ಗಣರಾಜ್ಯೋತ್ಸವದ ಸಂದೇಶ ನೀಡಿದ ಅವರು ಜಿಲ್ಲೆಯ ಅಭಿವೃದ್ಧಿಗಾಗಿ  ಸರಕಾರ ಅನೇಕ ಜನಪಯೋಗಿ ಯೋಜನೆಗಳನ್ನು ಕೈಗೆತ್ತಿಕೊಂಡಿವೆ. ಆ ಪೈಕಿ ಮೂರು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಕೊಚ್ಚಿ ಮಂಗಳೂರು ನಡುವೆ 450 ಕಿಲೋ ಮೀಟರ್ ಉದ್ದದ ನೈಸರ್ಗಿಕ ಅನಿಲ ಪೈಪ್ ಲೈನ್. ಕುಳಾಯಿಯಲ್ಲಿ196.51 ಕೋಟಿರೂಪಾಯಿ ವೆಚ್ಚದ  ಮೀನುಗಾರಿಕಾ ಬಂದರು. ದೇಶದ ಮೊದಲ ಕೋಸ್ಟ್‌ಗಾರ್ಡ್ ಅಕಾಡಮಿಯು ಬಜ್ಪೆ […]

ತುಳುವಿನಲ್ಲಿ ಗಣರಾಜ್ಯೋತ್ಸವದ ಶುಭಾಶಯ ಕೋರಿದ ನಗರ ಪೊಲೀಸ್ ಕಮಿಷನರ್

Monday, January 25th, 2021
commissioner

ಮಂಗಳೂರು :  ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತುಳು ಭಾಷೆಯಲ್ಲಿ ಮಂಗಳೂರಿನ ಜನತೆಗೆ ಗಣರಾಜ್ಯೋತ್ಸವ ಕುರಿತು ಶುಭ ಕೋರಿ ಟ್ವೀಟ್ ಮಾಡಿದ್ದಾರೆ. ಪ್ರತಿವರ್ಷ ಜ.26ರಂದು ವಿಶ್ವದೆಲ್ಲೆಡೆ ದೇಶದ ಗಣರಾಜ್ಯೋತ್ಸವವನ್ನು ಭಾರೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನಗರದ ಸಮಸ್ತ ನಾಗರಿಕರಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್ ತುಳು ಭಾಷೆಯಲ್ಲಿದ್ದು, ಕರಾವಳಿಯ ಜನತೆ ಸಂತಸ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ. ಪ್ರತಿ ವರ್ಷ ಜನವರಿ ಇರ್‌ವತ್ತ ಆಜೆಕ್ಕ್‌ (26) ಲೋಕೊಡು ನಮ್ಮ ಭಾರತ ದೇಶದ ಗಣರಾಜ್ಯೋತ್ಸವನ್‌ ಬಾರೀ ಗೌಜಿಡ್‌ […]

‘ರಾಷ್ಟ್ರಾಭಿಮಾನದ ಅಭಾವ’ವೇ ದೇಶದ ಎಲ್ಲ ಸಮಸ್ಯೆಗಳ ಹಿಂದಿನ ಕಾರಣ !

Saturday, January 23rd, 2021
Republic day

ಮಂಗಳೂರು  :  ಇಂದು ದೇಶದಲ್ಲಿ ಹಲವಾರು ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳಿವೆ. ದೇಶದಲ್ಲಿ ಅನೇಕ ದೇಶದ್ರೋಹಿ ಶಕ್ತಿಗಳು ದಂಗೆ, ಗಲಭೆ, ಹಿಂಸೆ, ಹತ್ಯೆಯಂತಹ ಘಟನೆಗಳ ಮೂಲಕ ಖಾಲಿಸ್ಥಾನ, ಮೊಘಲಸ್ಥಾನ ನಿರ್ಮಾಣ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ದೇಶದ ಗಡಿಗಳು ಕೂಡ ಸುರಕ್ಷಿತವಾಗಿಲ್ಲ. ಚೀನಾ ಯಾವುದೇ ಸಮಯದಲ್ಲಿ ದಾಳಿ ಮಾಡಬಹುದು. ದೇಶದ ಸ್ಥಿತಿ ಹೀಗೆಯೇ ಮುಂದುವರಿದರೆ ನಮ್ಮೆಲ್ಲರ ಅಸ್ತಿತ್ವಕ್ಕೂ ಧಕ್ಕೆಯುಂಟಾಗುವುದು. ಇದಕ್ಕಾಗಿ ನಾವು ದೇಶದ ಭಾವೀ ಪ್ರಜೆಗಳು ಎಂಬ ಸಂಬಂಧದಿಂದ ಈ ವಿಷಯದ ಬಗ್ಗೆ ಗಂಭೀರವಾದ ವಿಚಾರ ಮಾಡಿ ಉಪಾಯವನ್ನು […]

‘ದೇಶಕ್ಕೆ ನಮ್ಮ ಕೊಡುಗೆ ಏನು?’: ನಿವೃತ್ತ ಪೊಲೀಸ್ ಅಧಿಕಾರಿ ಕೆ.ಅಣ್ಣಾಮಲೈ

Monday, January 27th, 2020
Alvas-Republicday

ಮೂಡುಬಿದಿರೆ : ದೇಶದಲ್ಲಿ ನೂರ ಮೂವತ್ತು ಕೋಟಿ ಜನಸಂಖ್ಯೆ ಇದ್ದರೂ ಅಬ್ದುಲ್ ಕಲಾಂ ಕಂಡ 2020 ಯ ಕನಸನ್ನು ಪೂರ್ಣವಾಗಿ ಸಾಕಾರಗೊಳಿಸಲು ವಿಫಲರಾಗಿದ್ದೇವೆ. ಸಾಧಿಸಬೇಕಾದ ವಿಷಯಗಳು ಇನ್ನು ತುಂಬಾ ಇವೆ. ಭಾರತದಲ್ಲಿ ಪ್ರತಿದಿನವು ಹೊಸ ಹೊಸ ಸಮಸ್ಯೆಗಳು ಎದುರಾಗುತ್ತಿವೆ. ದೇಶದಲ್ಲಿ 40 ಕೋಟಿಯಷ್ಟು ಜನರು ತಿನ್ನಲು ಅನ್ನ ಸಿಗದೆ ನರಳುತ್ತಿದ್ದಾರೆ. ನಮ್ಮ ರಕ್ಷಣೆಯಿಂದ ಹಿಡಿದು ದೇಹದ ಆರೋಗ್ಯವನ್ನು ಕಾಪಾಡಿ ಕೊಳ್ಳುವವರೆಗೆ ಪ್ರತೀ ವ್ಯವಸ್ಥೆಯನ್ನು ದೇಶ ಮಾಡಿಕೊಟ್ಟಿದೆ ಹೀಗಿರುವಾಗ ದೇಶ ಚೆನ್ನಾಗಿರಲು ನಾವೇನು ಕೊಡುಗೆ ನೀಡಿದ್ದೇವೆ ಎಂಬುದನ್ನು ಚಿಂತಿಸುವ ಅನಿವಾರ್ಯತೆ ಇದೆ […]

ಗಣರಾಜ್ಯೋತ್ಸವ : ಸರಕಾರಿ ನೌಕರರ ಹಾಜರಾತಿ ಕಡ್ಡಾಯ

Friday, January 10th, 2020
republic

ಮಂಗಳೂರು : ಜನವರಿ 26 ರಂದು ನಗರದ ನೆಹರೂ ಮೈದಾನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಸಮಾರಂಭದಲ್ಲಿ ನಗರದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸರಕಾರಿ ನೌಕರರು ಕಡ್ಡಾಯವಾಗಿ ಹಾಜರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ ಸೂಚನೆ ನೀಡಿದ್ದಾರೆ. ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರಿ ಸಿಬ್ಬಂದಿಗಳ ಹಾಜರಾತಿ ಪಡೆದು ನೀಡಲು ಎಲ್ಲಾ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಜನವರಿ 26 ರಂದು ಬೆಳಗ್ಗಿನ ಕಾರ್ಯಕ್ರಮ ನೆಹರು ಮೈದಾನದಲ್ಲಿ […]

ಗಣರಾಜ್ಯೋತ್ಸವದ ಪರೇಡ್ ನಲ್ಲಿ ಪಶ್ಚಿಮಬಂಗಾಳದ ಸ್ತಬ್ದಚಿತ್ರ ಪ್ರಸ್ತಾಪ ತಿರಸ್ಕರಿಸಿದ ಕೇಂದ್ರ ಸರ್ಕಾರ

Thursday, January 2nd, 2020
mamatha

ಕೋಲ್ಕತಾ : ಜನವರಿ 26 ರಂದು ರಾಷ್ಟ್ರರಾಜಧಾನಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಪಶ್ಚಿಮಬಂಗಾಳದ ಟ್ಯಾಬ್ಲೋ(ಸ್ತಬ್ದಚಿತ್ರ) ಪ್ರದರ್ಶಿಸುವ ಪ್ರಸ್ತಾಪವನ್ನು ಕೇಂದ್ರ ರಕ್ಷಣಾ ಸಚಿವಾಲಯ ತಿರಸ್ಕರಿಸಿದ್ದು, ಈ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಸರ್ಕಾರದ ನಡುವಿನ ಜಟಾಪಟಿ ಮುಂದುವರಿದಂತಾಗಿದೆ. ಪಶ್ಚಿಮಬಂಗಾಳ ಸರ್ಕಾರದ ಟ್ಯಾಬ್ಲೋ ಪ್ರಸ್ತಾಪವನ್ನು ತಜ್ಞರ ಸಮಿತಿ ಎರಡು ಬಾರಿ ಸಭೆ ನಡೆಸಿ ಪರಿಶೀಲನೆ ನಡೆಸಿತ್ತು. ಪಶ್ಚಿಮಬಂಗಾಳದ ಟ್ಯಾಬ್ಲೋ ಪ್ರದರ್ಶನದ ಪ್ರಸ್ತಾಪವನ್ನು ಪರಿಗಣಿಸದಿರಲು ಸಮಿತಿ ನಿರ್ಧರಿಸಿದೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಗಣರಾಜ್ಯೋತ್ಸವ […]

ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ

Thursday, November 14th, 2019
Bresil

ನವದೆಹಲಿ : ಪ್ರತಿ ಬಾರಿಯೂ ಗಣರಾಜ್ಯೋತ್ಸವಕ್ಕೆ ಆಹ್ವಾನಿಸುವ ವಿಶೇಷ ಅತಿಥಿಯ ಕುರಿತು ಕುತೂಹಲವಿರುತ್ತದೆ. ಈ ಬಾರಿ ವಿಶೇಷ ಅತಿಥಿಯನ್ನು ಈಗಾಗಲೇ ಆಹ್ವಾನಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನವನ್ನು ಅವರು ಸಹ ಸ್ವೀಕರಿಸಿ ಆಗಮಿಸಲು ಒಪ್ಪಿಗೆ ನೀಡಿದ್ದಾರೆ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಆಗಮಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ಆಹ್ವಾನವನ್ನು ಬ್ರೆಜಿಲ್ ಅಧ್ಯಕ್ಷ ಬುಧವಾರ ಸ್ವೀಕರಿಸಿದ್ದು, ಈ ಮೂಲಕ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಪಕ್ಕಾ ಆಗಿದೆ. ಭಯೋತ್ಪಾದನೆ ನಿಗ್ರಹಕ್ಕೆ ಸಹಕಾರ […]