Blog Archive

ಜಮ್ಮು ಕಾಶ್ಮೀರದ ನಗ್ರೋಟಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರಯೋಧ

Thursday, December 1st, 2016
Akshay-girish-kumar

ಬೆಂಗಳೂರು: ಜಮ್ಮು ಕಾಶ್ಮೀರದ ನಗ್ರೋಟಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರಯೋಧ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರ ಪಾರ್ಥಿವ ಶರೀರ ಗುರುವಾರ ಬೆಳಗ್ಗೆ ಬೆಂಗಳೂರಿಗೆ ತಲುಪಿದೆ. ಅಕ್ಷಯ್ ಪಾರ್ಥಿವ ಶರೀರ ಯಲಹಂಕದ ವಾಯುನೆಲೆಗೆ ತರಲಾಗಿದ್ದು, 12.30ಕ್ಕೆ ಯಲಹಂಕದ ನಿವಾಸಕ್ಕೆ ಪಾರ್ಥಿವ ಶರೀರ ತರಲಾಗುವುದು ಎಂದು ಮೂಲಗಳು ತಿಳಿಸಿವೆ. ಯಲಹಂಕದ ವಾಯುನೆಲೆಯಲ್ಲಿ ಮೇಜರ್ ಅಕ್ಷಯ್ ಕುಮಾರ್ ಗೆ ವಾಯುಸೇನೆ ಅಂತಿಮ ಗೌರವ ಸಲ್ಲಿಸಿತು. ಮಧ್ಯಾಹ್ನ 2ಗಂಟೆಯಿಂದ 4ಗಂಟೆವರೆಗೆ ಹುತಾತ್ಮ ಅಕ್ಷಯ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ […]

ದೇಶದ ಜನರನ್ನು ರಕ್ಷಣೆ ಮಾಡುವ ಯೋಧರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ:ಪ್ರಮೋದ್‌ ಮಧ್ವರಾಜ್‌

Monday, August 29th, 2016
Madwaraj

ಮಲ್ಪೆ: ದೇಶದ 128 ಕೋಟಿ ಜನರನ್ನು ರಕ್ಷಣೆ ಮಾಡುವ ಯೋಧರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಮಲ್ಪೆಯ ಸಮರ್ಪಣಾ ತಂಡದ ಯುವಕರು ಇಂತಹ ಸಂದೇಶವನ್ನು ಸಮಾಜಕ್ಕೆ ನೀಡುವ ಕಾರ್ಯವನ್ನು ಮಾಡಿದ್ದಾರೆ. ಇದು ದೇಶದ ಎಲ್ಲ ಕಡೆಗೂ ವಿಸ್ತಾರಗೊಳ್ಳಬೇಕು ಎಂದು ಮೀನುಗಾರಿಕಾ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. ಮಲ್ಪೆ ಅಯ್ಯಪ್ಪ ಸ್ವಾಮಿ ಮಂದಿರದ ಬಳಿ ನಡೆದ ಮಲ್ಪೆಯ ದೇಶಭಕ್ತ ಯುವಕರು ಹುಲಿವೇಷ ಹಾಕಿ ಸಂಗ್ರಹಿಸಿದ ಧನವನ್ನು ವೀರ ಯೋಧರಿಗೆ ಗೌರವ ಸಮರ್ಪಿಸುವ ವಿಶಿಷ್ಟ ಕಾರ್ಯಕ್ರಮದಲ್ಲಿ ಯೋಧರನ್ನು ಸಮ್ಮಾನಿಸಿ ಮಾತನಾಡಿದರು. […]

ನಿಟ್ಟೆ ವಿದ್ಯಾಸಂಸ್ಥೆಯ ಸಿಬ್ಬಂದಿ ವರ್ಗದಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ದೇಣಿಗೆ

Saturday, October 11th, 2014
Nitte cheque

ಮಂಗಳೂರು: ಜಮ್ಮು ಕಾಶ್ಮೀರದಲ್ಲಿ ನೆರೆಯಲ್ಲಿ ಹಾನಿಗೊಳಗಾದವರ ಪುನರ್ವಸತಿಗಾಗಿ ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ವತಿಯಿಂದ ಸಂಗ್ರಹವಾದ ಒಟ್ಟು ಮೊತ್ತ ರೂಪಾಯಿ ಇಪ್ಪತೈದು ಲಕ್ಷದ ಡಿಮಾಂಡ್ ಡ್ರಾಫ್ಟ್ ಅನ್ನು ಸಂಸ್ಥೆಯ ಪರವಾಗಿ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಸ್. ರಮಾನಂದ ಶೆಟ್ಟಿಯವರು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀಯುತ ಎ.ಬಿ. ಇಬ್ರಾಹಿಂ ಅವರ ಮುಖಾಂತರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಎಮ್.ಎಸ್.ಮೂಡಿತ್ತಾಯ […]