Blog Archive

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಆಗುಂಬೆ ಘಾಟಿಯಲ್ಲಿ ಭೂಕುಸಿತ..!

Friday, June 29th, 2018
agumbe

ಉಡುಪಿ: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿ ಶಿವಮೊಗ್ಗ ಸಂಪರ್ಕಿಸುವ ಆಗುಂಬೆ ಘಾಟಿಯಲ್ಲಿ ಭೂಕುಸಿತ ಉಂಟಾಗಿದೆ. ಉಡುಪಿ ತೀರ್ಥಹಳ್ಳಿ ವಿಭಾಗದ ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆಯ ಶಿವಮೊಗ್ಗ ಜಿಲ್ಲೆಯ ಗಡಿ ಪ್ರದೇಶವಾದ ಏಳನೇ ತಿರುವಿನಲ್ಲಿ 40 ಮೀ.ನಷ್ಟು ಕುಸಿದಿದೆ. ಭೂಕುಸಿತದಿಂದ ರಸ್ತೆ ಅಂಚು ಜರಿದಿದ್ದು ರಸ್ತೆಗೆ ಹಾನಿಯಾಗಿದೆ.ಭೂ ಕುಸಿತ ಪರಿಣಾಮ ವಾಹನ ದಟ್ಟಣೆ ನಿಭಾಯಿಸಲು ಆಗುಂಬೆ ಚೆಕ್ ಪೋಸ್ಟ್ ನಲ್ಲಿ ಪ್ರತೀ ಐದು ನಿಮಿಷಕ್ಕೊಮ್ಮೆ ಬಿಡಲಾಗುತ್ತಿದೆ.ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ,ವಿಶೇಷ ಬಂದೋಬಸ್ತ್ ಗೆ ವ್ಯವಸ್ಥೆ […]

ಮಲೆನಾಡಿನಲ್ಲಿ ಭಾರಿ ಮಳೆ…ಶಾಲಾ-ಕಾಲೇಜುಗಳಿಗೆ ರಜೆ!

Thursday, June 28th, 2018
raining

ತೀರ್ಥಹಳ್ಳಿ: ಮಲೆನಾಡಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಆರ್ಭಟ ಜೋರಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾ ನದಿ ಸೇರಿದಂತೆ ಎಲ್ಲಾ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ನೀರಿ‌ನ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದೆ. ತೀರ್ಥಹಳ್ಳಿ, ಶೃಂಗೇರಿ, ಕೊಪ್ಪ, ಆಗುಂಬೆ ಸೇರಿದಂತೆ ತುಂಗಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಭಾರಿ ಮಳೆಗೆ ಹಲವೆಡೆ ಹಾನಿಯಾಗಿದೆ. ಕೆಲವೆಡೆ ಗುಡ್ಡಗಳು ಕುಸಿದಿರುವ ಬಗ್ಗೆ ವರದಿಯಾಗಿದೆ. ಮುಂಜಾಗ್ರತಾ […]

ಕುಂದಾಪುರದತ್ತ ಸಾಗುತ್ತಿದ್ದ ಖಾಸಗಿ ಬಸ್‌ ಕಾರಿಗೆ ಢಿಕ್ಕಿ ಹೊಡೆದು ಹಲವರಿಗೆ ಗಾಯ

Saturday, September 3rd, 2016
Kundapur-accident

ಕುಂದಾಪುರ: ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ಅನ್ನುವಳ್ಳಿ ಸೇತುವೆ ಬಳಿ ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ ಪಲ್ಟಿಯಾದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ತೀರ್ಥಹಳ್ಳಿಯಿಂದ ಕುಂದಾಪುರದತ್ತ ಸಾಗುತ್ತಿದ್ದ ಬಸ್ಸು ಮೇಗರವಳ್ಳಿ ಹತ್ತಿರ ಬರುತ್ತಿದ್ದಾಗ ಆಗುಂಬೆಯಿಂದ ತೀರ್ಥಹಳ್ಳಿಯತ್ತ ಸಾಗುತ್ತಿದ್ದ ಕಾರು ಬಸ್ಸಿನ ಹಿಂಬದಿಯ ಚಕ್ರಕ್ಕೆ ಬಲವಾಗಿ ಢಿಕ್ಕಿಹೊಡೆದ ಪರಿಣಾಮ ಬಸ್ಸಿನ ಹೌಸಿಂಗ್‌ ಪೂರ್ಣ ತುಂಡಾಗಿದ್ದರಿಂದ ನಿಯಂತ್ರಣ ತಪ್ಪಿದ ಬಸ್‌ ಪಲ್ಟಿಯಾಗಿತ್ತು. ಪಲ್ಟಿಯಾದ ರಭಸಕ್ಕೆ ಬಸ್ಸು ನಜ್ಜುಗುಜ್ಜಾಗಿತ್ತು. ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದ ಕುಂದಾಪುರದ ಬಳಿಯ ಬಸ್ರೂರಿನ ಸಯ್ಯದ್‌ಮಹಜಾಲಿನ್‌ ಹಾಗೂ […]

ತೀರ್ಥಹಳ್ಳಿ ಗಲಭೆ : ಶಾಸಕ ಅರಗ ಜ್ಞಾನೇಂದ್ರ ಸೇರಿ 47 ಮಂದಿ ವಿರುದ್ಧ ಚಾರ್ಜ್ ಶೀಟ್

Saturday, June 6th, 2015
Araga Janendra

ಬೆಂಗಳೂರು: ತೀರ್ಥಹಳ್ಳಿ ವಿದ್ಯಾರ್ಥಿನಿ ನಂದಿತಾ ಸಾವಿನ ಪ್ರಕರಣದ ಸಂಬಂಧ ನಡೆದ ಗಲಭೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು ಶಾಸಕ ಅರಗ ಜ್ಞಾನೇಂದ್ರ ಸೇರಿದಂತೆ 47 ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 2014ರಲ್ಲಿ ನಡೆದ ಈ ಪ್ರಕರಣದಲ್ಲಿ ಕೋಮು ಬಣ್ಣ ಪಡೆದು ಗಲಭೆ ನಡೆದಿತ್ತು. ಇದು ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಬಾಲಕಿ ನಂದಿತಾಳನ್ನು ಮೂವರು ಕಾರಿನಲ್ಲಿ ಹೊತ್ತೊಯ್ದು ಅತ್ಯಾಚಾರ ಎಸಗಿ ವಿಷ ಕುಡಿಸಿ, ಅಸ್ವಸ್ಥಳಾದ ಬಾಲಕಿಯನ್ನು ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿತ್ತು. ಅಕ್ಟೋಬರ್ 31ರಂದು ನಂದಿತಾ […]