ಕರೊನಾ ಸೋಂಕಿಗೆ ಒಳಗಾಗಿದ್ದ ಭುವನಗಿರಿ ಶ್ರೀ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

Tuesday, June 8th, 2021
siddalinga Shivacharya

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಕವಲೆದುರ್ಗದ ಮಹಾಮಹತ್ತಿನ ಭುವನಗಿರಿ ಸಂಸ್ಥಾನಮಠದ ಶ್ರೀ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ  ಲಿಂಗೈಕ್ಯರಾದರು. ಕರೊನಾ ಸೋಂಕಿತರಾಗಿದ್ದ ಸ್ವಾಮೀಜಿಯವರನ್ನು ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ದಿನಗಳ ಹಿಂದೆ ಅವರ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಅವರು ಲಿಂಗೈಕ್ಯರಾದರು. ಕವಲೆದುರ್ಗ ಶ್ರೀಗಳು ಐದು ಪಿಎಚ್ಡಿ ಪದವಿ ಪಡೆದಿದ್ದರು. ಮಠದ ಎಲ್ಲ ಕೆಲಸವನ್ನು ತಾವೇ ಮಾಡುತ್ತಿದ್ದರು  ಮಠದಲ್ಲಿ ಯಾವುದೇ ಸೇವಕ ರಿರಲಿಲ್ಲ . ಅಲ್ಲದೆ ಮಠಕ್ಕೆ ಆಗಮಿಸುವ […]

ನಗರದಲ್ಲಿ ತಾಲಿಬಾನ್ ಪರ ಗೋಡೆಬರಹ, ಮತ್ತೋರ್ವ ಆರೋಪಿ ಸೆರೆ

Wednesday, December 9th, 2020
Terorist

ಮಂಗಳೂರು : ನಗರದಲ್ಲಿ ತಾಲಿಬಾನ್ ಉಗ್ರರ ಪರ ಗೋಡೆಬರಹ ಬರೆದು ಆತಂಕ ಮೂಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಮಂಗಳೂರು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳ ಸಂಬಂಧಿ, ತೀರ್ಥಹಳ್ಳಿಯ ಸಾದತ್ ಎಂಬಾತ ಪೊಲೀಸ್ ವಶದಲ್ಲಿರುವ ಆರೋಪಿ ಎಂದು ತಿಳಿದುಬಂದಿದೆ. ವಶದಲ್ಲಿರುವ ಆರೋಪಿಯು ಪ್ರಕರಣದ ಮೊದಲ ಆರೋಪಿ ಮುಹಮ್ಮದ್ ಶಾರೀಕ್‌ನ ಸಂಬಂಧಿ ಎನ್ನಲಾಗಿದೆ. ಪ್ರಕರಣದಲ್ಲಿ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದ್ದು, ಮೂರನೇ ಆರೋಪಿಯನ್ನು ತೀರ್ಥಹಳ್ಳಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉಗ್ರರ ಪರ ಗೋಡೆ ಬರಹ ಬರೆದ ಇಬ್ಬರು ಆರೋಪಿಗಳ ಬಂಧನ

Saturday, December 5th, 2020
vikasa kumar

ಮಂಗಳೂರು: ಬಿಜೈ ಮತ್ತು  ಕೋರ್ಟ್ ಆವರಣದಲ್ಲಿ ಉಗ್ರರ ಪರ ಗೋಡೆ ಬರಹ ಬರೆದ  ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಮಾಹಿತಿ ನೀಡಿದ್ದಾರೆ. ತೀರ್ಥಹಳ್ಳಿ ಮೂಲದ ಮುಹಮ್ಮದ್ ಶಾರೀಕ್ (22) ಮತ್ತು ಮಾಝ್ ಮುನೀರ್ ಅಹಮ್ಮದ್ (21) ಬಂಧಿತ ಆರೋಪಿಗಳು. ಪ್ರಚಾರ ಪಡೆಯುವ ಉದ್ದೇಶದಿಂದ ವಿವಾದಿತ ಪ್ರಚೋದನಕಾರಿ ಗೋಡೆ ಬರಹವನ್ನು ಬರೆದಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಬಳಿಕ ಪೊಲೀಸ್ ವಶಕ್ಕೆ ನೀಡಲಾಗುತ್ತದೆ. ಆ ಬಳಿಕ […]

ಮೊಬೈಲ್ ದಾಖಲೆ ಆಧಾರದಲ್ಲಿ ಉಗ್ರರ ಪರ ಗೋಡೆ ಬರಹ ಬರೆದ ಶಂಕಿತ ಆರೋಪಿ ವಶಕ್ಕೆ

Thursday, December 3rd, 2020
Terorist

ಮಂಗಳೂರು : ಮೊಬೈಲ್ ದಾಖಲೆ ಆಧಾರದಲ್ಲಿ ಮಂಗಳೂರು ನಗರದಲ್ಲಿ ಉಗ್ರರ ಪರ ಗೋಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನ್ನು ಮಂಗಳೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ತೀರ್ಥಹಳ್ಳಿಯ ನಝೀರ್ ಮುಹಮ್ಮದ್ (26)ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ ಕದ್ರಿ ಪೊಲೀಸರು ಆತನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈತ ನಗರದಲ್ಲಿ ಆನ್ ಲೈನ್ ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದ. ಮೊಬೈಲ್ ದಾಖಲೆ ಆಧಾರದಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ನ.27ರಂದು ಕದ್ರಿ‌ […]

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ವರ್ಗಾವಣೆ

Tuesday, July 28th, 2020
sindhu b roopesh

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ‌ ಸಿಂಧೂ ಬಿ. ರೂಪೇಶ್ ಅವರು  ಬೆಂಗಳೂರಿಗೆ ವರ್ಗಾವಣೆ  ಆಗಿದೆ. ದ. ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ರಾಜೇಂದ್ರ ಕೆ.ವಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಡಾ.ರಾಜೇಂದ್ರ ಕೆ.ವಿ ಅವರು ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನಾಗಿ ಸರ್ಕಾರ ನಿಯೋಜಿಸಿದೆ. ಸಿಂಧೂ ರೂಪೇಶ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಇ -ಆಡಳಿತ ವಿಭಾಗದ ನಿರ್ದೆಶಕಿಯನ್ನಾಗಿ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ. ಡಾ. ರಾಜೇಂದ್ರ […]

ಗರ್ಭ ಧರಿಸಿದ ದನದ ಕಾಲು ಕತ್ತರಿಸಿದ ಆರೋಪಿಯ ಬಂಧನ, ಉಳಿದ ಮೂವರಿಗೆ ಶೋಧ

Sunday, April 19th, 2020
ಗರ್ಭ ಧರಿಸಿದ ದನದ ಕಾಲು ಕತ್ತರಿಸಿದ ಆರೋಪಿಯ ಬಂಧನ,  ಉಳಿದ ಮೂವರಿಗೆ ಶೋಧ

ತೀರ್ಥಹಳ್ಳಿ: ಗರ್ಭ ಧರಿಸಿದ  ದನದ ಎರಡೂ ಕಾಲು ಕಡಿದು ಕಸಾಯಿಖಾನೆಗೆ ಸಾಗಾಟ ಮಾಡಲು ಯತ್ನಿಸಿದ್ದ ಆರೋಪಿಯನ್ನು ತೀರ್ಥಹಳ್ಳಿ  ಪೊಲೀಸರು ಬಂಧಿಸಿದ್ದಾರೆ.  ಉಳಿದ ಮೂರು ಮಂದಿ ಆರೋಪಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಬಾಳೇಬೈಲು ಸರ್ಕಾರಿ ಹಿ.ಪ್ರಾ.ಶಾಲೆ ಸಮೀಪ ಶುಕ್ರವಾರ ರಾತ್ರಿ ಗರ್ಭ ಧರಿಸಿದ  ದನವೊಂದರ ಹಿಂದಿನ ಎರಡು ಕಾಲುಗಳನ್ನು ಬರ್ಬರವಾಗಿ ಕಡಿದು ಕಸಾಯಿ ಖಾನೆಗೆ ಸಾಗಿಸುವ ಪ್ರಯತ್ನದಲ್ಲಿದ್ದಾಗ ಮನೆಯವರು ಎಚ್ಚರಗೊಂಡು ನೋಡಿದ್ದರಿಂದ ದನವನ್ನು ಅಲ್ಲಿಯೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದರು. ಆರೋಪಿಗಳ ಪತ್ತೆ ಕಾರ್ಯಚರಣೆ ನಡೆಸಿದ ತೀರ್ಥಹಳ್ಳಿ ಡಿವೈಎಸ್ಪಿ ಡಾ.ಸಂತೋಷ್ ಹಾಗೂ […]

ದನದ ಎರಡೂ ಕಾಲುಗಳನ್ನು ಅಮಾನುಷವಾಗಿ ಕಡಿದು ಕ್ರೂರತೆ ಮೆರೆದ ದೂರ್ತರು

Saturday, April 18th, 2020
Thirthahalli

ತೀರ್ಥಹಳ್ಳಿ : ಬಾಳೇಬೈಲು ಶಾಲೆಯ ಎದುರು ದನದ ಹಿಂದಿನ ಎರಡೂ ಕಾಲುಗಳನ್ನು ಕಡಿದು ಕಸಾಯಿಖಾನೆಗೆ ಸಾಗಿಸುವ ಪ್ರಯತ್ನದಲ್ಲಿ ಅಲ್ಲಿಯೇ ಇದ್ದ ಮನೆಯವರು ಹೊರಬಂದರೆಂದು ಬಿಟ್ಟು ಪರಾರಿಯಾದ  ಘಟನೆ  ಶುಕ್ರವಾರ ರಾತ್ರಿ ನಡೆದಿದೆ. ಹೆದರಿದ ಆ ದನವು ಅಲ್ಲಿಂದ ಸುಮಾರು ದೂರ ಮನುಷ್ಯರೇ ನಡೆಯಲು ಕಷ್ಟವಾಗುವ ಜಾಗದಲ್ಲಿ ಮುಂದಿನ ಎರಡು ಕಾಲಗಳಲ್ಲೇ ಓಡಿ ಹೋಗಿ ಒಂದು ಪೊದೆಯಲ್ಲಿ ಮಲಗಿದೆ. ಇಷ್ಟು ಗಂಭೀರವಾದ ಕತ್ತಿಯೇಟು ಬಿದ್ದು ಎರಡು ಕಾಲುಗಳು ತುಂಡಾಗಿದ್ದರೂ ಆ ದನ ಅಲ್ಲಿ ತನಕ ಹೋಗಿದ್ದೆ ಆಶ್ಚರ್ಯ. ವೈದ್ಯರಾದ ಯುವರಾಜ್ […]

ಎಸ್.ಸಿ ಮತ್ತು ಎಸ್.ಟಿ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ಎಸ್. ಅಂಗಾರ ಆಯ್ಕೆ

Saturday, September 21st, 2019
S-Angara

ಬೆಂಗಳೂರು : ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕಮಾಡಲಾಗಿದ್ದು, ಎಸ್ ಸಿ ಮತ್ತು ಎಸ್ ಟಿ ಕಲ್ಯಾಣ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಸುಳ್ಯ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಅಂಗಾರ ಅವರನ್ನು ನೇಮಕ ಮಾಡಲಾಗಿದೆ. ಇನ್ನುಳಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿ ಕೆ. ಪೂರ್ಣಿಮಾ ಅವನ್ನು ನೇಮಿಸಲಾಗಿದೆ. ಗ್ರಂಥಾಲಯ ಸಮಿತಿಗೆ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ನೇಮಕ ಮಾಡಿದ್ದರೆ , ಪಂಚಾಯತ್ ರಾಜ್ […]

ಅಗ್ರಹಾರ ನಾಗಪಾತ್ರಿ ಯಿಂದ ಮತ್ತೊಂದು ನಾಗ ವಿಗ್ರಹ ಪತ್ತೆ

Saturday, November 24th, 2018
nagaraj-bhat

ತೀರ್ಥಹಳ್ಳಿ: ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ತೀರ್ಥಹಳ್ಳಿ ತಾಲೂಕಿನ ಆರಗ ಅಗ್ರಹಾರ ನಾಗಪಾತ್ರಿಯಾಗಿರುವ ನಾಗರಾಜ್ ಅವರು ಮಾಧ್ಯಮಗಳ ಮುಂದೆಯೇ  ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಗ್ರಾಮಪಂಚಾಯ್ತಿಯ ಮರಗಳಲೆ ಗ್ರಾಮದ ವೆಂಕಟಪ್ಪ ಪೂಜಾರಿಯವರ ಮಗ ನಾಗಪ್ಪ ಪೂಜಾರಿಯವರ ಮನೆಯ ಹಿಂಭಾಗದ ನಾಗರ ಬನದಲ್ಲಿ ನಾಗಬಿಂಬ ಹೊರತೆಗೆದಿದ್ದಾರೆ. ಪಾತ್ರಿಗಳು ಮೊದಲೇ ಹೇಳಿದಂತೆ ಸ್ಥಳದಲ್ಲಿ ತ್ರಿಶೂಲ ಮತ್ತು ನಾಗರ ಕಲ್ಲು ಸಿಕ್ಕಿದ್ದು ಜನರಲ್ಲಿ ಆಶ್ಚರ್ಯ ಉಂಟು ಮಾಡಿದೆ. ಈ ಹಿಂದೆ ಮರಗಳಲೆಯ ಸಣ್ಣ ಉದ್ಯಮಿ ನಾಗಪ್ಪ ಪೂಜಾರಿಯವರು ತಮ್ಮ ಕುಟುಂಬದ ಸಮಸ್ಯೆ ಹಾಗು […]

ತಂಗಿಯನ್ನು ಪ್ರೀತಿಸಬೇಡ ಅಂದಿದ್ದಕ್ಕೆ ಅಣ್ಣನಿಗೆ ಚಾಕು ಇರಿದ ಯುವಕ

Saturday, November 24th, 2018
thirtalli

ತೀರ್ಥಹಳ್ಳಿ : ಜೂನಿಯರ್ ಕಾಲೇಜಿನಲ್ಲಿ ಕಲಿಯುತ್ತಿದ್ದ ತನ್ನ ತಂಗಿಯನ್ನು ಪ್ರೀತಿಸ ಬೇಡ ಅಂದಿದ್ದಕ್ಕೆ ಅಣ್ಣನನ್ನೇ ಚಾಕುವಿನಿಂದ ಇರಿದ ಘಟನೆ ತೀರ್ಥಹಳ್ಳಿಯ ಸರ್ಕಾರಿ ಜೂನಿಯರ್ ಕಾಲೇಜು ಬಳಿ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಹೊಟ್ಟೆಯ ಬಲ ಭಾಗಕ್ಕೆ ಗಂಭೀರ ಗಾಯಗೊಂಡಿರುವ ಬಾಲಕನನ್ನು ತೀರ್ಥಹಳ್ಳಿಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡವನನ್ನು ಯಡೇಹಳ್ಳಿ ಕೆರೆಯ ದರ್ಶನ್ ಎಂದು ಗುರುತಿಸಲಾಗಿದ್ದು ಚಾಕು ಇರಿದ ಆರೋಪಿ ಅವಿನ್ ಡಿಸೋಜ ಸ್ಥಳದಿಂದ ಪರಾರಿಯಾಗಿದ್ದು ಆತನ ಪತ್ತೆಗೆ ಪೋಲಿಸರು ಮುಂದಾಗಿದ್ದಾರೆ. ತೀರ್ಥಹಳ್ಳಿ ಜೂನಿಯರ್ ಕಾಲೇಜಿಲ್ಲಿ […]