Blog Archive

ದಾವಣಗೆರೆಯಲ್ಲಿ ಕೊರೋನಾ ವೈರಸ್ ಗೆ ಮೊದಲ ಬಲಿ, ಮನೆ ಮಂದಿಗೆಲ್ಲ ಹರಡಿದ ಸೋಂಕು

Friday, May 1st, 2020
Davanagere

ದಾವಣಗೆರೆ:  ದಾವಣಗೆರೆಯಲ್ಲಿ ಮಾರಕ ಕೊರೋನಾ ವೈರಸ್ ಗೆ ಮೊದಲ ಬಲಿಯಾಗಿದ್ದು, 69 ವರ್ಷದ ವೃದ್ಧರೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ (ರೋಗಿ ಸಂಖ್ಯೆ 556) ಇಂದು ರಾತ್ರಿ ಸಾವನ್ನಪ್ಪಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾಗೆ ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಜಾಲಿನಗರದ ನಿವಾಸಿಯಾಗಿದ್ದ ವ್ಯಕ್ತಿ ಮೂರು ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಈ ವ್ಯಕ್ತಿಗೆ ಕೊರೋನಾ ಹೇಗೆ ಬಂದಿದೆ ಎನ್ನುವುದು ತಿಳಿದಿಲ್ಲ. ವೃದ್ಧನ ಟ್ರಾವೆಲ್ ಹಿಸ್ಟರಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಈ […]

ಕಾಪು -ಬೆಳ್ಮಣ್ ಪರಿಸರದಲ್ಲಿ ನಕಲಿ ನೋಟ್‌ ಚಲಾವಣೆ ಮಾಡುತ್ತಿದ್ದ ದಾವಣಗೆರೆ ಮೂಲದ ಯುವಕ-ಯುವತಿ ವಶಕ್ಕೆ

Wednesday, September 18th, 2019
Rs-200

ಕಾಪು : ಬೆಂಗಳೂರು ನೋಂದಾವಣೆಯ ಕಾರಿನಲ್ಲಿ ಬಂದು ಕಾಪು ಹಾಗೂ  ಬೆಳ್ಮಣ್ ಪರಿಸರದಲ್ಲಿ  ಇನ್ನೂರು ರೂಪಾಯಿ ಮೌಲ್ಯದ ನಕಲಿ ನೋಟ್‌ನ್ನು ಚಲಾಯಿಸಿದ ದಾವಣಗೆರೆ ಮೂಲದ ಯುವಕ ಮತ್ತು ಯುವತಿಯನ್ನು ಪೊಲೀಸರು ಬುಧವಾರ ಕಾಪುವಿನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ನೋಂದಾವಣೆಯ ಬ್ರೀಜಾ  ಕಾರಿನಲ್ಲಿ ದಾವಣಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಯುವ ಜೋಡಿಯೊಂದು ಲೆಮಿನಾ ಕ್ರಾಸ್‌ನ ಅಂಗಡಿಗೆ ತೆರಳಿ ಝೆರಾಕ್ಸ್ ನೋಟ್‌ನ್ನು ನೀಡಿ ತಿಂಡಿ ಪೊಟ್ಟಣ ಪಡೆದಿದ್ದರು. ಅದೇ ರೀತಿಯಲ್ಲಿ ನಿಟ್ಟೆಯಿಂದ ಬೆಳ್ಮಣ್ ವರೆಗಿನ ಹಲವು ಅಂಗಡಿಗಳಲ್ಲಿ ನೋಟನ್ನು ಚಲಾವಣೆ ಮಾಡಿದ್ದರು. ಕಾರ್ಕಳ ನಿಟ್ಟೆ […]

ನಾನು ಕಾಂಗ್ರೆಸ್ಸಿಗ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸುಳ್ಳು ವದಂತಿ: ಶಾಮನೂರು

Friday, June 8th, 2018
shivshankarappa

ದಾವಣಗೆರೆ: ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲ್ಲ. ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸುಳ್ಳು ವದಂತಿ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ. ದಾವಣಗೆರೆ ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ಸಿಗ. ಸಚಿವ ಸ್ಥಾನ ತಪ್ಪಿದ್ದಕ್ಕೆ ಬೇಸರವಿಲ್ಲ. ಕ್ಷೇತ್ರದ ಕೆಲಸ ಮಾಡುವೆ. ಸಚಿವ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ತಮ್ಮ ಜೊತೆ ಮಾತಾಡಿಲ್ಲ. ಉಳಿದ ಆರು ಸ್ಥಾನಗಳಿಗೆ ಸಚಿವರ ನೇಮಕ ಯಾವಾಗ ಆಗುತ್ತದೆ ಎಂದು ಹೇಳುವುದು ಕಷ್ಟ ಎಂದು ಹೇಳಿದರು.

ಫಾದರ್ ಮುಲ್ಲರ್ ಕಾಲೇಜಿನ ವಿದ್ಯಾರ್ಥಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ

Tuesday, August 1st, 2017
Fr Mullers Student

ಮಂಗಳೂರು : ಮಂಗಳೂರಿನ ಫಾದರ್ ಮುಲ್ಲರ್ ಕಾಲೇಜಿನ ಅಂತಿಮ ವರ್ಷದ ಎಂಡಿ ವಿದ್ಯಾರ್ಥಿ ಎಚ್.ಕೆ.ಪ್ರಸಾದ್(28) ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಜುಲೈ 29, ಶನಿವಾರ ನಡೆದಿರಬಹುದೆಂದು ಶಂಕಿಸಲಾಗಿದೆ. ಹಾಸ್ಟೆಲ್ ಕೊಠಡಿಯಲ್ಲಿ ಒಬ್ಬನೇ ವಾಸಿಸುತ್ತಿದ್ದ ದಾವಣಗೆರೆ ಮೂಲದ ಪ್ರಸಾದ್, ಜುಲೈ 29 ರ ರಾತ್ರಿ ಬ್ಲೇಡಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಶಂಕಿಸಲಾಗಿದೆ. ಜುಲೈ 30 ರ ಬೆಳಿಗ್ಗೆ ಆತನ ತಂದೆ-ತಾಯಿ ಹಲವು ಬಾರಿ ಫೋನ್ ಮಾಡಿದರೂ ಆತ ಫೋನ್ ರಿಸೀವ್ ಮಾಡದಿದ್ದಾಗ ಭಯಗೊಂಡ ತಂದೆ ತಾಯಿ […]

ಗ್ಯಾಸ್ ಟ್ಯಾಂಕರ್ ಮತ್ತು ಟ್ರ್ಯಾಕ್ಸ್ ತೂಫಾನ್ ಡಿಕ್ಕಿ: ಮೂವರು ಸ್ಥಳದಲ್ಲೇ ಮೃತ

Tuesday, June 3rd, 2014
Shiradi Accident

ಮಂಗಳೂರು : ಗ್ಯಾಸ್ ಟ್ಯಾಂಕರ್ ಮತ್ತು ಟ್ರ್ಯಾಕ್ಸ್ ತೂಫಾನ್ ನಡುವೆ ಶಿರಾಡಿಯ ಅಡ್ಡಹೊಳೆ ಸಮೀಪ ಸೋಮವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟು, 13 ಜನರು ಗಾಯಗೊಂಡಿದ್ದಾರೆ. ತೂಫಾನ್‌ ಚಾಲಕ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ದಾವಣಗೆರೆಯ ನಿವಾಸಿಗಳು ಎಂದು ಗುರುತಿಸಲಾಗಿದೆ. ಸುಬ್ರಮಣ್ಯ ದೇವರ ದರ್ಶನ ಪಡೆದು ರಾಷ್ಟ್ರೀಯ ಹೆದ್ದಾರಿ 75ರ ಮಾರ್ಗವಾಗಿ ಉಡುಪಿಗೆ ತೆರಳುತ್ತಿದ್ದಾಗ, ಶಿರಾಡಿ ಗ್ರಾಮದ ಅಡ್ಡಹೊಳೆ ಸಮೀಪ ಸೋಮವಾರ ತೂಫಾನ್‌ ವಾಹನಕ್ಕೆ ಗ್ಯಾಸ್ ಟ್ಯಾಂಕರ್‌ ಡಿಕ್ಕಿ ಹೊಡೆದಿದೆ. ಮೃತಪಟ್ಟವರನ್ನು ತೂಫಾನ್ […]

ವಂಶ, ಜಾತಿ, ಅವಸರ, ಕಾಂಗ್ರೆಸ್ ಜೀವಾಳ

Wednesday, February 19th, 2014
Narendra-Modi

ಮಂಗಳೂರು/ ದಾವಣಗೆರೆ: ವಂಶವಾದ, ಜಾತಿವಾದ, ಸಂಪ್ರದಾಯವಾದ, ಅವಸರವಾದ. ಈ ನಾಲ್ಕೂ ಅಂಶಗಳು ಕಾಂಗ್ರೆಸ್‌ನಲ್ಲಿ ಮೇಳೈಸಿವೆ. ಇದುವೇ ದೇಶದ ಅಭಿವೃದ್ಧಿಗೆ ತೊಡಕಾಗಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಮಂಗಳವಾರ ದಾವಣಗೆರೆಯ ಹೈಸ್ಕೂಲ್ ಮೈದಾನದ ಹಾಗೂ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಆಯೋಜಿಸಿದ್ದ ‘ಭಾರತ ಗೆಲ್ಲಿಸಿ’ ಪ್ರತ್ಯೇಕ ಸಮಾವೇಶದಲ್ಲಿ ಕಾಂಗ್ರೆಸ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಅವರನ್ನು ಗುಣಗಾನ ಮಾಡಿದ್ದು. […]

ಯುವಕನಿಂದ ಶಿಕ್ಷಕಿ ಮೇಲೆ ಆಸಿಡ್ ದಾಳಿ

Saturday, February 1st, 2014
Acid Attack

ದಾವಣಗೆರೆ: ಹರಿಹರ ತಾಲೂಕಿನ ಕೊಕ್ಕನೂರಿನ ಖಾಸಗಿ ಶಾಲೆ ಶಿಕ್ಷಕಿ ಕವಿತಾ ಎಂಬುವರ ಮೇಲೆ ಮಹೇಶ್ ಎಂಬ ಯುವಕ ಶುಕ್ರವಾರ ಆ್ಯಸಿಡ್ ದಾಳಿ ನಡೆಸಿದ್ದಾನೆ. ಮುಖ, ಕೈ, ಕಣ್ಣುಗಳಿಗೆ ಆ್ಯಸಿಡ್ ಬಿದ್ದಿದ್ದು, ಎಡಗಣ್ಣಿಗೆ ತೀವ್ರ ಘಾಸಿಯಾಗಿದೆ. ತನ್ನನ್ನು ಪ್ರೀತಿಸುವಂತೆ ಆತ ಶಿಕ್ಷಕಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಶಿಕ್ಷಕಿಯನ್ನು ದಾವಣಗೆರೆಯ ಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕವಿತಾ ಜತೆಗಿದ್ದ ಎಲ್‌ಕೆಜಿ ವಿದ್ಯಾರ್ಥಿ ರಘುವಿನ ಮೇಲೂ ಆ್ಯಸಿಡ್ ಬಿದ್ದಿದೆ. ಈ ಮಗುವಿಗೆ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕವಿತಾ ಮತ್ತು ಮಹೇಶ್ […]