Blog Archive

ಸಂಶೋಧನೆ ಪೇಪರ್‌ನಿಂದ ಜನರಿಗೆ ತಲುಪಲಿ: ಡಾ. ಧರ್ಮಾಧಿಕಾರಿ ಎನ್‌.ಎಸ್‌

Monday, August 9th, 2021
Naganath

ಮಂಗಳೂರು: ಸಂಶೋಧನೆಯನ್ನು ಪೇಪರ್‌ನಿಂದ ಜನರ ಬಳಿಗೆ, ಪ್ರಯೋಗಾಲಯಗಳಿಂದ ಸಮಾಜಕ್ಕೆ ತಲುಪಿಸುವುದು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್‌) ಯ ಆಧ್ಯತೆಯಾಗಿದೆ, ಎಂದು ಶಿಕ್ಷಣ ತಜ್ಞ, ನ್ಯಾಕ್‌ ಮತ್ತು ಯುಜಿಸಿ ಸಮಿತಿ ಸದಸ್ಯ ಡಾ. ನಾಗನಾಥ್‌ ಧರ್ಮಾಧಿಕಾರಿ ಎನ್‌.ಎಸ್‌ ತಿಳಿಸಿದ್ದಾರೆ. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ), ʼನ್ಯಾಕ್‌ ಸಂಬಂಧಿಸಿದಂತೆ ಗುಣಮಟ್ಟ ವರ್ಧನಾ ತಂತ್ರಗಳುʼ ಎಂಬ ಕುರಿತು ಸೋಮವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅವರು, ಕಾಲೇಜುಗಳ ಆಡಳಿತ ಮಂಡಳಿಗಳು ಜಾಗತಿಕ […]

ಜನಜಾಗೃತಿ ವೇದಿಕೆ: ವಾರ್ಷಿಕ ವರದಿ ಬಿಡುಗಡೆ

Saturday, July 31st, 2021
dharmasthala

ಉಜಿರೆ: ಜನಜಾಗೃತಿ ವೇದಿಕೆಯ ಬೆಳ್ತಂಗಡಿ ಪ್ರಾದೇಶಿಕ ವಿಭಾಗದ ವಾರ್ಷಿಕ ವರದಿ ಮತ್ತು ಪ್ರಾಕೃತಿಕ ದುರಂತಗಳು ಹಾಗೂ ನಿರ್ವಹಣೆ ಬಗ್ಯೆ ಮಾಹಿತಿ ಕೈಪಿಡಿಯನ್ನು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ರೂಪಿಸುವಲ್ಲಿ ಜನಜಾಗೃತಿ ವೇದಿಕೆಯ ಸೇವೆಯನ್ನು ಹೆಗ್ಗಡೆಯವರು ಶ್ಲಾಘಿಸಿ ಅಭಿನಂದಿಸಿದರು. ವಿಪತ್ತು ನಿರ್ವಹಣಾ ಸ್ವಯಂ ಸೇವಕರ ಸೇವಾ ಕಾರ್ಯ, ಪರಿಸರ ಸಂರಕ್ಷಣಾ ಕಾರ್ಯಕ್ರಮಗಳು ಕೂಡಾ ಸ್ಥಳೀಯರ ಸಹಕಾರದೊಂದಿಗೆ ಉತ್ತಮವಾಗಿ ಮೂಡಿ ಬರುತ್ತಿವೆ. ಕೊರೊನಾದಿಂದಾಗಿ ಮದ್ಯವರ್ಜನ ಶಿಬಿರಗಳು […]

ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ವಿಸ್ತೃತ ಗ್ರಂಥಾಲಯ ವಿಭಾಗ ಉದ್ಘಾಟನೆ

Tuesday, June 15th, 2021
Library

ಧರ್ಮಸ್ಥಳ : ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ಗ್ರಂಥಾಲಯವನ್ನು ಮಂಜೂಷಾ ವಸ್ತು ಸಂಗ್ರಹಾಲಯದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಶ್ರುತ ಪಂಚಮಿಯ ಶುಭ ದಿನವಾದ ಮಂಗಳವಾರ ಧರ್ಮಾಧಿಕಾರಿ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಉದ್ಘಾಟಿಸಿ ಶುಭ ಹಾರೈಸಿದರು. ಗ್ರಂಥಾಲಯದಲ್ಲಿ 4,707 ತಾಡೋಲೆ ಹಸ್ತಪ್ರತಿಗಳು, 1468 ಕಾಗದ ಹಸ್ತಪ್ರತಿಗಳು, 302  ಕಲ್ಲಚ್ಚಿನ ಪ್ರತಿಗಳು ಹಾಗೂ 25,637 ಮುದ್ರಿತ ಪುಸ್ತಕಗಳ ಅಮೂಲ್ಯ ಸಂಗ್ರಹವಿದೆ. ಕನ್ನಡ, ಇಂಗ್ಲಿಷ್, ಸಂಸ್ಕೃತ, ತುಳು, ಮರಾಠಿ, ತೆಲುಗು, ಪ್ರಾಕೃತ ಹಾಗೂ […]

ಸಚಿವರುಗಳಾದ ಜೆ.ಸಿ. ಮಾಧುಸ್ವಾಮಿ ಮತ್ತು ಅಂಗಾರ ಧರ್ಮಸ್ಥಳ ಭೇಟಿ

Sunday, January 17th, 2021
S Angara

ಉಜಿರೆ : ಸಚಿವರುಗಳಾದ ಜೆ.ಸಿ. ಮಾಧುಸ್ವಾಮಿ ಮತ್ತು ಅಂಗಾರ ಶನಿವಾರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ ಸೇವೆ ಸಲ್ಲಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಹೆಗ್ಗಡೆಯವರು ಉಭಯ ಸಚಿವರಿಗೂ ಶುಭ ಹಾರೈಸಿ ಗೌರವಿಸಿದರು. ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.

ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರಿಂದ ದೀಪಾವಳಿ ಸಂದೇಶ

Saturday, November 14th, 2020
veerendra Heggade

ಧರ್ಮಸ್ಥಳ  : ಬೆಳಕಿನ ಹಬ್ಬ ದೀಪಾವಳಿ ಸುಜ್ಞಾನದ ಪ್ರತೀಕ. ದೀಪಾವಳಿ ಹಬ್ಬವನ್ನು ಎಲ್ಲರೂ ಶ್ರದ್ಧಾ-ಭಕ್ತಿಯಿಂದ ಸರಳವಾಗಿ ಆಚರಿಸೋಣ. ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಸಂಪ್ರದಾಯ ಬದ್ಧವಾಗಿ ಸಂಸ್ಕೃತಿ ರಕ್ಷಣೆಯೊಂದಿಗೆ ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸುವುದು ಎಲ್ಲರ ಕರ್ತವ್ಯವೂ, ಹೊಣೆಗಾರಿಕೆಯೂ ಆಗಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಇಳಿಮುಖವಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದಷ್ಟು ಶೀಘ್ರ ಕೊರೊನಾ ಸಂಪೂರ್ಣ ನಿರ್ಮೂಲನೆಯಾಗಿ ಎಲ್ಲರೂ ಆರೋಗ್ಯ ಭಾಗ್ಯವನ್ನು ಹೊಂದಿ ಭಯ ಮುಕ್ತ ವಾತಾವರಣದಲ್ಲಿ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸುವಂತಾಗಲಿ […]

ಡಿ. ವೀರೇಂದ್ರ ಹೆಗ್ಗಡೆಯವರ 53ನೇ ಪಟ್ಟಾಭಿಷೇಕ ವರ್ಧಂತಿ, ಜನಮಂಗಳ ಯೋಜನೆಗಳಿಗೆ ಚಾಲನೆ

Saturday, October 24th, 2020
SKD

ಧರ್ಮಸ್ಥಳ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ 21 ಕೋಟಿ ರೂ. ವೆಚ್ಚದಲ್ಲಿ 20,000 ಟ್ಯಾಬ್ ಗಳನ್ನು ಹಾಗೂ 10,000 ಲ್ಯಾಪ್ ಟಾಪ್ ಗಳನ್ನು ವಿತರಿಸಲಾಗುವುದು. 15 ಕೋಟಿ ರೂಪಾಯಿ ವೆಚ್ಚದಲ್ಲಿ “ಯಂತ್ರ ಶ್ರೀ” ಯೋಜನೆಯಡಿ ಕೃಷಿಕರಿಗಾಗಿ ಯಂತ್ರಗಳನ್ನು ಖರೀದಿಸಿ ಕೃಷಿಗೆ ಪ್ರೋತ್ಸಾಹ ನೀಡಿ ಎಂಟು ಸಾವಿರ ಎಕರೆ ಪ್ರದೇಶದಲ್ಲಿ ಕೃಷಿಗೆ ಕಾಯಕಲ್ಪ ನೀಡಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ತಿಳಿಸಿದ್ದಾರೆ. ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶನಿವಾರ ತಮ್ಮ 53ನೇ ವರ್ಷದ ಪಟ್ಟಾಭಿಷೇಕ […]

ಧರ್ಮಸ್ಥಳದಲ್ಲಿ ಹೆಗ್ಗಡೆಯವರ ಪಟ್ಟಾಭಿಷೇಕದ 53ನೇ ವರ್ಷದ ವರ್ಧಂತಿ ಆಚರಣೆ ನಾಳೆ

Friday, October 23rd, 2020
veerendra Heggade

ಧರ್ಮಸ್ಥಳ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 53ನೆ ವರ್ಷದ ವರ್ಧಂತಿ ಸಮಾರಂಭ ಇದೇ ೨೪ ರಂದು ಶನಿವಾರ ಸರಳವಾಗಿ ನಡೆಯಲಿದೆ. 1948 ರ ನವೆಂಬರ್ 25 ರಂದು ಜನಿಸಿದ ಅಂದಿನ ವೀರೇಂದ್ರ ಕುಮಾರ್ ತನ್ನ ಇಪ್ಪತ್ತನೆ ವರ್ಷ ಪ್ರಾಯದಲ್ಲಿ ಧರ್ಮಸ್ಥಳದ ಇಪ್ಪತ್ತೊಂದನೆ ಧರ್ಮಾಧಿಕಾರಿಯಾಗಿ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾದರು. 2017 ಅಕ್ಟೋಬರ್ 24ಕ್ಕೆ ಡಿ. ವೀರೇಂದ್ರ ಹೆಗ್ಗಡೆಯವರು 50 ವರ್ಷಗಳ ಸೇವೆಯನ್ನು ಪೂರೈಸಿದ್ದು 2018 ರ ಅ. 24ರ ವರೆಗೆ ಒಂದು ವರ್ಷ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸುವರ್ಣ […]

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಐವತ್ತೆರಡನೆ ವರ್ಧಂತ್ಯುತ್ಸವ

Thursday, October 24th, 2019
Pattabhisheka

ಧರ್ಮಸ್ಥಳದ : ನ್ಯಾಯವೇ ನನ್ನ ತಂದೆ, ಸತ್ಯವೇ ನನ್ನ ತಾಯಿ ಎಂಬ ಭಾವನೆಯೊಂದಿಗೆ ತಾನು ನ್ಯಾಯ ಮತ್ತು ಸತ್ಯದ ನೆಲೆಯಲ್ಲಿ ಕೆಲಸ ಮಾಡುತ್ತೇನೆ ಎಂದು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಗುರುವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಐವತ್ತೆರಡನೆ ವರ್ಧಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದರು. ನಮ್ಮ ದೇಶದಲ್ಲಿ ಅನೇಕ ಮಂದಿ ಆಚಾರ್ಯರಿದ್ದಾರೆ ಆದರೆ ಆಚಾರವಿಲ್ಲ. ದೇಶಕ್ಕೆ ದೊಡ್ಡ ಚರಿತ್ರೆ ಇದೆ, ಆದರೆ ಚಾರತ್ರ್ಯವಿಲ್ಲ. ಅಲ್ಲಲ್ಲಿ ಸಂಘರ್ಷವಿದೆ […]

ಸ್ಮಿತಾ ಠಾಕ್ರೆ ಧರ್ಮಸ್ಥಳದಲ್ಲಿ

Monday, October 15th, 2018
Smitha Thakre

ಉಜಿರೆ: ಬಾಳಾ ಸಾಹೇಬ್ ಠಾಕ್ರೆಯವರ ಕುಟುಂಬದ ಸ್ಮಿತಾ ಠಾಕ್ರೆ ಭಾನುವಾರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಸ್ಮಿತಾ ಠಾಕ್ರೆಯವರ ಮಗ ಐಶ್ವರ್ಯ ಠಾಕ್ರೆ ಜೊತೆಗಿದ್ದರು. ಬಳಿಕ ಬೀಡಿನಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ನಶೆಮುಕ್ತಿಗೆ ದೃಢಸಂಕಲ್ಪದ ಆವಶ್ಯಕತೆಯಿದೆ: ಡಾ| ಡಿ. ವೀರೇಂದ್ರ ಹೆಗ್ಗಡೆ

Tuesday, September 27th, 2016
heggade

ಬೆಳ್ತಂಗಡಿ: ನಶೆಮುಕ್ತಿಗೆ ದೃಢಸಂಕಲ್ಪದ ಆವಶ್ಯಕತೆಯಿದೆ. ಮದ್ಯ ಮನುಷ್ಯನಲ್ಲಿ ಭ್ರಮೆ ತುಂಬಿ ಪಾಪದ ಕೆಲಸಗಳನ್ನು ಮಾಡಿಸುತ್ತದೆ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಸೋಮವಾರ ಸಂಜೆ ಇಲ್ಲಿನ ಎಸ್‌ಡಿಎಂ ಕಲಾಭವನದಲ್ಲಿ ನಡೆಯುತ್ತಿರುವ 1000ನೇ ಮದ್ಯವರ್ಜನ ಶಿಬಿರಕ್ಕೆ ಭೇಟಿ ನೀಡಿ ಮಾತನಾಡಿದರು. ಮದ್ಯವ್ಯಸನಿಗಳನ್ನು ಜಗತ್ತು ತಮಾಷೆಯ ವಸ್ತುವಾಗಿ, ಕನಿಕರ, ಅವಮಾನಕಾರಿ, ಅವಹೇಳನಕಾರಿಯಾಗಿ ನೋಡುತ್ತದೆ. ಆದ್ದರಿಂದ ಬುದ್ಧಿ ಭ್ರಮಣೆ ಮಾಡುವ, ಚಿತ್ತಚಾಂಚಲ್ಯಗೊಳಿಸುವ, ನಾಲಿಗೆ ಚಾಪಲ್ಯ ಕೆಡಿಸುವ, ಇಂದ್ರಿಯಗಳ ಹತೋಟಿ ತಪ್ಪಿಸುವ ಮದ್ಯವ್ಯವ್ಯಸನದಿಂದ ದೂರವಾಗಲು ಸ್ಥಿರತೆ ಬೇಕು ಎಂದರು. […]