Blog Archive

ಹೊಡೆದಾಟದ ವೇಳೆ ಇರಿತಕ್ಕೊಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

Thursday, August 27th, 2020
Kripakar

ಮಂಜೇಶ್ವರ  : ಎರಡು ತಂಡಗಳ ನಡುವೆ ನಡೆದ ಹೊಡೆದಾಟದಲ್ಲಿಇರಿತಕ್ಕೊಳಗಾಗಿ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮೀಯಪದವಿನಲ್ಲಿ ಆಗಸ್ಟ್ 26ರ ಬುಧವಾರ ರಾತ್ರಿ  ನಡೆದಿದೆ. ಮೃತರನ್ನು ಬೇರಿಕೆ ನಿವಾಸಿ ಕೃಪಾಕರ್‌ (28) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ  ನಡೆದ ಹೊಡೆದಾಟದ ಸಂದರ್ಭ ಇರಿತಕ್ಕೊಳಗಾದ ಕೃಪಾಕರ್‌ ಅವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಯಿತ್ತಾದರೂ, ಅವರು ಮೃತಪಟ್ಟಿದ್ದಾರೆ. ಇದಲ್ಲದೇ, ಘಟನೆಯಲ್ಲಿ ಗಾಯಗೊಂಡಿದ್ದ ಜಿತೇಶ್‌ ಹಾಗೂ ವಿಜೇಶ್‌‌ ಎನ್ನುವವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರಿಗೆ ದೊರೆತ ಮಾಹಿತಿಯ ಪ್ರಕಾರ, ಕ್ಷುಲ್ಲಕ ಕಾರಣಕ್ಕೆ  ಹೊಡೆದಾಟದ […]

ನಾಲ್ವರು ಸಂಭಂದಿಕರನ್ನು ನೇಣು ಹಾಕಿ ಹತ್ಯೆಗೈದ ವ್ಯಕ್ತಿ

Monday, August 3rd, 2020
Udaya

ಮಂಜೇಶ್ವರ : ವ್ಯಕ್ತಿಯೊಬ್ಬ ತನ್ನ ನಾಲ್ವರು ಸಂಭಂದಿಕರನ್ನು ನೇಣು ಹಾಕಿ ಹತ್ಯೆಗೈದ ಭೀಕರ ಘಟನೆ ಮಂಜೇಶ್ವರ ಸಮೀಪದ ಬಾಯಾರು ಸುದೆಂಬಳ ಗುರುಕುಮೇರಿ ಎಂಬಲ್ಲಿ ಆಗಸ್ಟ್ 3 ರ ಸೋಮವಾರ ಸಂಜೆ 7 ಗಂಟೆಗೆ  ನಡೆದಿದೆ. ಉದಯ ಎಂಬಾತ ತನ್ನ ಸಂಭಂದಿಕರಾದ ಸದಾಶಿವ (54), ವಿಠ್ಠಲ (52), ಬಾಬು (50) ಮತ್ತು ದೇವಕಿ (58) ನೇಣು ಹಾಕಿ ಹತ್ಯೆಗೈದ ಆರೋಪಿಯಾಗಿದ್ದಾನೆ. ಕೌಟುಂಬಿಕ ಕಲಹವನ್ನು ಅನುಸರಿಸಿ ಈ ಘಟನೆ ನಡೆದಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕಾಸರಗೋಡು  ಡಿಎಸ್‌ಪಿ ಬಾಲಕೃಷ್ಣನ್ […]

ಕೊರೋನ ಸೋಂಕು ಶನಿವಾರ : ದಕ್ಷಿಣ ಕನ್ನಡ ಜಿಲ್ಲೆ 237, ಉಡುಪಿ ಜಿಲ್ಲೆ109, ಕಾಸರಗೋಡು 29

Sunday, July 19th, 2020
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಶನಿವಾರ ಒಂದೇ ದಿನದಲ್ಲಿ 237 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇದುವರೆಗಿನ ಕೊರೋನ ಸಾವಿನ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಇದರಲ್ಲಿ 12 ಮಂದಿ ಹೊರ ಜಿಲ್ಲೆಯವರು. ಕೋವಿಡ್‌ನಿಂದಾಗಿ ಶನಿವಾರ ನಾಲ್ವರು ಮೃತಪಟ್ಟಿದ್ದಾರೆ. ಶನಿವಾರ ಸಾವಿಗೀಡಾದವರಲ್ಲಿ ಮೂವರು ಮಹಿಳೆಯರಾಗಿದ್ದರೆ, ಒಬ್ಬರು ಪುರುಷ. ಮೃತರಲ್ಲಿ ಮಂಗಳೂರಿನ ಮೂವರು ಹಾಗೂ ಪುತ್ತೂರಿನ ಮತ್ತೋರ್ವರು ಇದ್ದಾರೆ. ಮೃತರು 49 ವರ್ಷ ಮೇಲ್ಪಟ್ಟವರು. ಇವರೆಲ್ಲರೂ ಕೊರೋನದೊಂದಿಗೆ ಇತರ ಕಾಯಿಲೆಗಳಿಂದಲೂ ಬಳಲುತ್ತಿದ್ದರು ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ. ಮಂಗಳೂರಿನ 67 […]

ಮಂಜೇಶ್ವರ-ಕನ್ನಡ ಭಾಷಾ ಪ್ರದೇಶ ಸ್ಥಾನಮಾನ ಸ್ವಾಗತಾರ್ಹ – ಎಸ್. ಪ್ರದೀಪಕುಮಾರ ಕಲ್ಕೂರ

Saturday, May 16th, 2020
Pradeep Kalkura

ಮಂಗಳೂರು  : ಕನ್ನಡ ಭಾಷಿಕರ ಪ್ರದೇಶವಾದ ಗಡಿನಾಡು ಕಾಸರಗೋಡು, ಭಾಷಾ ಅಲ್ಪಸಂಖ್ಯಾತ ನೆಲೆಯಲ್ಲಿ ಕನ್ನಡ ಭಾಷಾ ಪ್ರದೇಶವೆಂದೇ ಕೇರಳ ರಾಜ್ಯ ಸರಕಾರದ ಆಡಳಿತಾತ್ಮಕ ನೆಲೆಯಲ್ಲಿ ಪರಿಗಣಿಸಲಾಗಿತ್ತು. ಭಾಷಾ ಅಲ್ಪಸಂಖ್ಯಾತ ನೆಲೆಯಲ್ಲಿ ಕೇರಳ ರಾಜ್ಯ ಸರಕಾರವು ಒದಗಿಸಿರುವ ವಿಶೇಷ ಸ್ಥಾನಮಾನವು ಸ್ವಾಗತಾರ್ಹವಾಗಿದೆ ಎಂದು ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಪ್ರದೀಪಕುಮಾರಕಲ್ಕೂರ ತಿಳಿಸಿದ್ದಾರೆ. ಕನ್ನಡ ಪರ ಹೋರಾಟಗಾರರ ಹೋರಾಟದ ಫಲಶ್ರುತಿಯಾಗಿ ಆ ಪ್ರದೇಶದ ಎಲ್ಲಾ ಕನ್ನಡಿಗರಿಗೆ ಆಡಳಿತಾತ್ಮಕವಾಗಿ ಕನ್ನಡ ಭಾಷಾ ಅನುಷ್ಠಾನ ಕನ್ನಡ ಭಾಷಾ ನೆಲೆಯಲ್ಲಿ ಶೈಕ್ಷಣಿಕ ಸವಲತ್ತುಗಳು, […]

ಮಂಜೇಶ್ವರ : ನಾರಾಯಣ ಮಾಸ್ಟರ್ ನಿಧನ

Wednesday, April 8th, 2020
Narayana-Master

ಮಂಜೇಶ್ವರ : ಮಂಜೇಶ್ವರ ದಿ. ಕಂಡಪ್ಪ ಮಾಸ್ಟರ್ ಅವರ ಪುತ್ರ, ಮಂಜೇಶ್ವರದ ಕನಿಲ ಆಂಗ್ಲ ಮಾಧ್ಯಮ ಶಾಲೆಯ ಪ್ರಥಮ ಪ್ರಾಂಶುಪಾಲ ರಾಗಿದ್ದ ಹೊಸಂಗಡಿ, ಪೆಲಪಾಡಿ ಹೌಸ್ ನಾರಾಯಣ ಮಾಸ್ಟರ್ (82) ಇವರು ಅಲ್ಪ ಕಾಲದ ಅನರೋಗ್ಯದಿಂದ ಎ. 8 ರಂದು ದೈವಾದೀನರಾಗಿದ್ದಾರೆ. ಮೃತರು ಪತ್ನಿ, ಪುತ್ರ, ಇಬ್ಬರು ಪತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮಂಜೇಶ್ವರ : ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಸರಕಾರಿ ಬಸ್ ಢಿಕ್ಕಿ; ಓರ್ವ ಮೃತ್ಯು, ಇಬ್ಬರು ಗಂಭೀರ

Wednesday, January 29th, 2020
manjeshwar

ಮಂಜೇಶ್ವರ : ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಪಾದಚಾರಿಯೊಬ್ಬರ ಸಹಿತ ಇಬ್ಬರು ಗಂಭೀರ ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ಮಂಜೇಶ್ವರದಲ್ಲಿ ನಡೆದಿದೆ. ಮೃತರನ್ನು ಬೈಕ್ ಸವಾರ ಕುಂಜತ್ತೂರು ಮಹಾಲಿಂಗೇಶ್ವರ ನಿವಾಸಿ ಲೊಕೇಶ್ (45) ಎಂದು ಗುರುತಿಸಲಾಗಿದೆ. ಬೈಕ್ ಸಹಸವಾರೆಯಾಗಿದ್ದ ಲೋಕೇಶ್‌ರ ಪತ್ನಿ ಉಪ್ಪಳ ಐಲ ನಿವಾಸಿ ಶೈಲಜಾ(41) ಹಾಗೂ ಅಪಘಾತದಲ್ಲಿ ಸಿಲುಕಿದ್ದ ಪಾದಚಾರಿ ಉದ್ಯಾವರ ಫಸ್ಟ್ ಸಿಗ್ನಲ್ ನಿವಾಸಿ ರವಿ(45) ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ […]

ಬೆಂಗಳೂರಿನಲ್ಲಿ ಭೀಕರ ಅಪಘಾತದಲ್ಲಿ ಮಂಜೇಶ್ವರದ ಮೂವರು ಮೃತ್ಯು

Thursday, January 9th, 2020
manjeshwara

ಬೆಂಗಳೂರು : ಬೆಂಗಳೂರಿನಲ್ಲಿ ಬುಧವಾರ ರಾತ್ರಿ ನಡೆದ ಭೀಕರ ಅಪಘಾತಕ್ಕೆ ಮಂಜೇಶ್ವರ ಹೊಸಂಗಡಿಯ ಮೂವರ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಬೆಜ್ಜ ನಿವಾಸಿ, ದುರ್ಗಾ ಬಸ್ ಚಾಲಕ ಕಿಶನ್ ಬೆಜ್ಜ, ಮಂಜೇಶ್ವರ ಚರ್ಚ್ ಬಳಿಯ ನಿವಾಸಿ ಅಕ್ಷಯ್, ಅಂಗಡಿಪದವು ನಿವಾಸಿ ಮೋನಪ್ಪ ಮೇಸ್ತ್ರಿ ಎಂದು ಗುರುತಿಸಲಾಗಿದ್ದು ಅವರು ತಿರುಪತಿಗೆ ತೆರಳಿ ಹಿಂತಿರುಗುತ್ತಿದ್ದ ಸಂದರ್ಭ ಈ ಅಪಘಾತ ಸಂಭವಿಸಿರುವುದಾಗಿ ತಿಳಿದುಬಂದಿದೆ. ಕಾರಿನಲ್ಲಿದ್ದ ಶೇಖರ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಬೆಂಗಳೂರಿನ ಕುದೂರು ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.  

ಮಂಜೇಶ್ವರ ಉಪ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ಗೆಲುವು

Thursday, October 24th, 2019
UDF

ಕಾಸರಗೋಡು : ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ರವೀಶ್ ತಂತ್ರಿ ಕುಂಟಾರು ಅವರನ್ನು 7,923 ಮತಗಳ ಅಂತರದಿಂದ ಸೋಲಿಸಿದ ಖಮರುದ್ದೀನ್, ಎಲ್‌ಡಿಎಫ್ ಅನ್ನು ಮತ್ತೊಮ್ಮೆ ತೃತೀಯ ಸ್ಥಾನಕ್ಕೆ ತಳ್ಳಿದ್ದಾರೆ. ಆರಂಭದಲ್ಲೇ ಮುನ್ನಡೆ ಸಾಧಿಸಿದ್ದ ಖಮರುದ್ದೀನ್ ಕೊನೆಯವರೆಗೂ ಅದನ್ನು ಕಾಯ್ದುಕೊಂಡರಲ್ಲದೇ, ಹಂತ ಹಂತವಾಗಿ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದರು. ಅಂತಿಮವಾಗಿ  7,923 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಅವರ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ರವೀಶ್ […]

ಮಂಜೇಶ್ವರ : ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಆರಂಭ

Thursday, October 24th, 2019
Manjeshwara

ಕಾಸರಗೋಡು : ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದೆ. ಆದರೆ ಪ್ರಥಮ ಸುತ್ತು ಮುಗಿಯುತ್ತಿದ್ದಂತೆ ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪ್ರಥಮ ಸುತ್ತಿನ ಮತ ಎಣಿಕೆಯನ್ನು ಮರು ಎಣಿಕೆ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಮೊದಲ ಸುತ್ತಿನಲ್ಲಿ ಎಣಿಕೆ ಮಾಡಲಾಗಿದ್ದ ಮತಗಳ ಮರು ಎಣಿಕೆ ಮಾಡಲಾಗುತ್ತಿದೆ. ಈ ವೇಳೆ ಯುಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ಅವರು ಆರಂಭಿಕ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.  

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ : ಮಧ್ಯಾಹ್ನದ ಸುಮಾರಿಗೆ 34.72 ಶೇ. ಮತದಾನ

Monday, October 21st, 2019
Manjeshwara

ಕಾಸರಗೋಡು : ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆ ಶಾಂತಿಯುತವಾಗಿ ನಡೆಯುತ್ತಿದ್ದು, ಮಧ್ಯಾಹ್ನ 12:30ರ ಸುಮಾರಿಗೆ 34.72 ಶೇ. ಮತದಾನವಾಗಿದೆ. ಹಿಂದೆಂದೂ ಕಾಣದ ಬಿಗಿ ಭದ್ರತೆಯಲ್ಲಿ ಮತದಾನ ನಡೆಯುತ್ತಿದೆ. ಮುಂಜಾನೆಯಿಂದ ಮಳೆ ಸುರಿಯುತ್ತಿದ್ದರೂ ಮತದಾರರು ಅದನ್ನು ಲೆಕ್ಕಿಸದೆ ಮತಗಟ್ಟೆಗೆ ತಲುಪಿ ತಮ್ಮ ಹಕ್ಕು ಚಲಾಯಿಸಿದರು. ಕೆಲವೆಡೆ ಮತಯಂತ್ರಗಳಲ್ಲಿ ದೋಷ ಹಾಗೂ ಸಣ್ಣಪುಟ್ಟ ಘಟನೆ ಹೊರತುಪಡಿಸಿ ಮತದಾನ ಶಾಂತಿಯುತವಾಗಿದೆ . ಎಲ್.ಡಿ.ಎಫ್. ಅಭ್ಯರ್ಥಿ ಎಂ. ಶಂಕರ ರೈ ಇಂದು ಬೆಳಗ್ಗೆ ಅಂಗಡಿಮೊಗರು ಶಾಲೆಯ 165ನೇ ಮತಗಟ್ಟೆಯಲ್ಲಿ ಮತ […]