ಜಾತ್ರೆ ಗೆ ಬಂದಿದ್ದ ಇಬ್ಬರು ಮಹಿಳೆಯರು ನಾಪತ್ತೆ
Tuesday, February 16th, 2021ಬ್ರಹ್ಮಾವರ : ಇಬ್ಬರು ಮಹಿಳೆಯರು ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ನಾಪತ್ತೆಯಾಗಿರುವ ಘಟನೆ ಫೆ.14ರಂದು ನಡೆದಿದೆ. ನಾಪತ್ತೆಯಾದವರನ್ನು ಬೆಳಗಾಂ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಡು ಅಪ್ಪಾಸಾಬ ದಾನವಾಡೆ ಎಂಬವರ ಪತ್ನಿ ಬ್ರಹ್ಮಾವರ ಬೈಕಾಡಿ ಮೂಲದ ಜ್ಯೋತಿ(30) ಹಾಗೂ ಅವರ ತಮ್ಮನ ಪತ್ನಿ ಪ್ರಿಯಾಂಕ(24) ಎಂದು ಗುರುತಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.