Blog Archive

ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ನಾಲ್ವರು ಮೃತ್ಯು

Sunday, August 16th, 2020
boat

ಕುಂದಾಪುರ : ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯೊಂದು ಅಲೆಗಳ ಹೊಡೆತಕ್ಕೆ ಮಗುಚಿ ಬಿದ್ದ ಪರಿಣಾಮ ನಾಲ್ವರು ಮೀನುಗಾರರು ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಕೊಡೇರಿ ಎಂಬಲ್ಲಿ ರವಿವಾರ ಮಧ್ಯಾಹ್ನ 3.30ರ ಸುಮಾರಿಗೆ ನಡೆದಿದೆ. ಬೆಳಗ್ಗೆ 10.30ರ ಸುಮಾರಿಗೆ ಸಾಗರಶ್ರೀ ಎಂಬ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಸಮುದ್ರದ ದೈತ್ಯ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮಗುಚಿ ಬಿತ್ತೆನ್ನಲಾಗಿದೆ. ಇದರಿಂದ ನಾಗರಾಜ್ ಖಾರ್ವಿ, ಲಕ್ಷ್ಮಣ್ ಖಾರ್ವಿ, ಶೇಖರ್, ಮಂಜುನಾಥ್ ನೀರಿನಲ್ಲಿ ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ.  ಒಟ್ಟು 9 ಮಂದಿ ಮೀನುಗಾರರು ತೆರಳಿದ್ದರು. […]

ಮೀನಿನ ಚಿಪ್ಸ್ ಮತ್ತು ಮಸಾಲೆ ಲೋಕಾರ್ಪಣೆ

Friday, June 19th, 2020
Fish-Bi-products

ಬೆಂಗಳೂರು: ಮೀನುಗಾರಿಕೆ ಉದ್ಯಮದಲ್ಲಿ ತೊಡಗಿಕೊಳ್ಳುವ ಸಣ್ಣ ಉದ್ದಿಮೆಗಾರರಿಗೆ ಮೀನು ಮತ್ತು ಮೀನಿನ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಅವಶ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಮತ್ಸಭಂದನ ಸಂಸ್ಥೆಯೊಡನೆ ಮೀನಿನ ಸಸಾರಜನಕ ಪೌಷ್ಟಿಕ ಆಹಾರವನ್ನು ” ಮೀನಿನ ಮೌಲ್ಯವರ್ಧಿತ ಚಿಪ್ಸ್ ಮತ್ತು ಮೀನಿನ ಮಸಾಲೆ ಪಧಾರ್ಥ”ಗಳನ್ನು ಮುಖ್ಯಮಂತಿ ಬಿ.ಎಸ್.ಯಡಿಯೂರಪ್ಪ ಅವರು ಲೋಕಾರ್ಪಣೆ ಮಾಡಿದರು. ಇಂದು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೂತನ […]

ವಿದ್ಯುತ್ ಬಿಲ್ ಅಧಿಕ ಸಮಸ್ಯೆ: ಮೆಸ್ಕಾಂ ಜತೆ ಚರ್ಚೆ- ಉಸ್ತುವಾರಿ ಸಚಿವರು

Friday, May 29th, 2020
srinivas-poojary

ಮಂಗಳೂರು : ವಿದ್ಯುತ್ ಗ್ರಾಹಕರಿಗೆ ಅಧಿಕ ಬಿಲ್ ಬಂದಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಂದಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ. ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಮಾಧ್ಯಮದವರಿಗೆ ಈ ಬಗ್ಗೆ ಮಾಹಿತಿ ನೀಡಿ, ಎರಡು ತಿಂಗಳ ಬಿಲ್‍ಗಳನ್ನು ಒಟ್ಟಿಗೆ ನೀಡಿದ್ದರೂ, ನಿಗದಿತ ಸರಾಸರಿ ದರಕ್ಕಿಂದ ಹೆಚ್ಚು ಮೊತ್ತದ ಬಿಲ್ ಮೆಸ್ಕಾಂ ನೀಡಿರುವುದರ ಬಗ್ಗೆ ಸಾರ್ವಜನಿಕರ ಅಸಮಾಧಾನ ತನ್ನ ಗಮನಕ್ಕೆ […]

ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ ರೆಡ್ ಅಲರ್ಟ್ ಘೋಷಣೆ

Thursday, October 24th, 2019
red-alert

ಮಂಗಳೂರು : ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ  ರೆಡ್ ಅಲರ್ಟ್ ಘೋಷಿಸಲಾಗಿದೆ. ಅರಬ್ಭಿ ಸಮುದ್ರ ಮತ್ತು ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ರೆಡ್ ಅಲರ್ಟ್ ಘೋಷಿಸಿದ್ದು, ಸಾರ್ವಜನಿಕರು ಸೂಕ್ತ ಎಚ್ಚರಿಕೆ ವಹಿಸುವಂತೆ ಪ್ರಕಟನೆಯಲ್ಲಿ ತಿಳಿಸಿದೆ. ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಆರಂಭವಾಗಿದ್ದು, ವಾಯುಭಾರ ಕುಸಿತ ಪ್ರಭಾವದಿಂದ ಕೇರಳ-ಕರ್ನಾಟಕ ಕರಾವಳಿ ಮತ್ತು […]

ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ಒಬ್ಬ ನಾಪತ್ತೆ 9 ಮಂದಿ ಪಾರು

Friday, September 13th, 2019
kasaragod

ಕಾಸರಗೋಡು : ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಮಗುಚಿ ಓರ್ವ ನಾಪತ್ತೆಯಾಗಿ ಒಂಭತ್ತು ಮಂದಿ ಅಪಾಯದಿಂದ ಪಾರಾದ ಘಟನೆ ಬೇಕಲ ಕೀಯೂರಿನಲ್ಲಿ ಸೆ. 13 ರ ಶುಕ್ರವಾರ ನಡೆದಿದೆ. ಕೀಯೂರಿನ ದಾಸನ್ ನಾಪತ್ತೆಯಾದವರು. ಗಾಯಗೊಂಡ ನಾಲ್ವರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ದುರಂತ ನಡೆದಿದ್ದು , ದಾಸನ್ ಸಮುದ್ರಪಾಲಾದರೆ ಉಳಿದವರು ಈಜಿ ದಡ ಸೇರಿದರು. ಈ ಪೈಕಿ ನಾಲ್ವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.  

ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ : ಜನಜೀವನ ಅಸ್ತವ್ಯಸ್ತ

Thursday, September 5th, 2019
Udupi

ಉಡುಪಿ : ಉಡುಪಿಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮುಂಗಾರಿನ ಕೊನೆಯಲ್ಲೂ ಪ್ರಾರಂಭದ ಮಳೆಯನ್ನು ನೆನಪಿಸುವಂತಿದೆ. ಇಂದು ಬೆಳಿಗ್ಗೆ ಗಾಳಿ ಮಳೆ ಬಿರುಸು ಪಡೆದಿದೆ. ಕಳೆದ ಐದು ದಿನಗಳಿಂದಲೂ ನಿತ್ಯ ಮಳೆಯಾಗುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ವಾಹನ ಸವಾರರು, ವಿದ್ಯಾರ್ಥಿಗಳು ಮತ್ತು ಪಾದಚಾರಿಗಳು ಈ ಮಳೆಯನ್ನು ನಿರೀಕ್ಷಿಸದೇ ಇದ್ದ ಕಾರಣ ಸಾಕಷ್ಡು ಒದ್ದಾಡಬೇಕಾಯಿತು. ಮಳೆಯ ಕಾರಣದಿಂದ ಕಳೆದ ಐದು ದಿನಗಳಿಂದ ಮೀನುಗಾರಿಕೆ ಚಟುವಟಿಕೆಗೂ ತೊಂದರೆಯಾಗಿದೆ. ಪ್ರಾರಂಭದಲ್ಲಿದ್ದ ಈ ಋತುವಿನ ಮೀನುಗಾರಿಕೆ ಚಟುವಟಿಕೆ ತುಸು ನಿಧಾನಗೊಂಡಿದೆ. ಸಾಮಾನ್ಯವಾಗಿ ಕರಾವಳಿಯಲ್ಲಿ ಅಷ್ಟಮಿ, ಗಣೇಶ […]

ರಾಜ್ಯಮಟ್ಟದ ಇಲಾಖಾಧಿಕಾರಿಗಳ ನೇತೃತ್ವದಲ್ಲಿ ಸ್ಥಳ ಪರಿಶೀಲನೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ

Saturday, August 31st, 2019
udupi

ಉಡುಪಿ : ಜಿಲ್ಲೆಯಲ್ಲಿ ಮೀನುಗಾರಿಕೆ ಹಾಗೂ ಬಂದರು ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ವಿಳಂಬವಾಗಿದ್ದು, ಈ ಬಗ್ಗೆ ರಾಜ್ಯಮಟ್ಟದ ಇಲಾಖಾಧಿಕಾರಿಗಳ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಮೀನುಗಾರಿಕೆ ಹಾಗೂ ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೊಡೇರಿಯಲ್ಲಿ 33 ಕೋಟಿ ರೂ ವೆಚ್ಚದ ಬ್ರೇಕ್ ವಾಟರ್ ಕಾಮಗಾರಿ ಜನವರಿ […]

ಎರಡೂ ಕ್ಷೇತ್ರಕ್ಕೂ ಒಬ್ಬರೇ ಸಚಿವ : ಕರಾವಳಿಯ ಮೀನುಗಾರರ ವಲಯದಲ್ಲಿ ಹರ್ಷ

Wednesday, August 28th, 2019
srinivas-poojari

ಮಂಗಳೂರು : ರಾಜ್ಯದಲ್ಲಿ ರಚನೆಯಾಗಿರುವ ನೂತನ ಸಚಿವ ಸಂಪುಟದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮೀನುಗಾರಿಕಾ ಮತ್ತು ಬಂದರು ಖಾತೆ ಹಂಚಿಕೆಯಾಗಿರುವುದಕ್ಕೆ ಕರಾವಳಿಯ ಮೀನುಗಾರರ ವಲಯ ಹರ್ಷ ವ್ಯಕ್ತಪಡಿಸಿದೆ. ಮೀನುಗಾರಿಕೆ, ಬಂದರು ಎರಡೂ ಕ್ಷೇತ್ರಗಳು ಒಂದಕ್ಕೊಂದು ಪೂರಕವಾಗಿದ್ದು, ಈ ಹಿಂದೆ ಹಲವು ಬಾರಿ ಎರಡು ಕ್ಷೇತ್ರಗಳನ್ನು ಪ್ರತ್ಯೇಕಿಸಿ ಬೇರೆ ಬೇರೆ ಸಚಿವರಿಗೆ ನೀಡಲಾಗಿತ್ತು. ಆದರೆ ಈ ಬಾರಿ ಎರಡು ಕ್ಷೇತ್ರಗಳನ್ನು ಒಬ್ಬರಿಗೇ ನೀಡಿರುವುದು ಮೀನುಗಾರರಲ್ಲಿ ಸಂತಸ ತಂದಿದೆ. ಮೀನುಗಾರರ ಬಗ್ಗೆ ಕಾಳಜಿ ಇರುವ ವ್ಯಕ್ತಿಗೆ ಆ ಹುದ್ದೆ […]

ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಬೋಟು ಮುಳುಗಡೆ..ಮೀನುಗಾರಿಕರಿಂದ ರಕ್ಷಣೆ!

Tuesday, August 14th, 2018
fishermen

ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಬೋಟು ಕೋಡಿಬೆಂಗ್ರೆ ಸಮೀಪ ಮುಳುಗಡೆಯಾಗಿದ್ದು, ಎರಡು ಬೋಟುಗಳು ಸುರತ್ಕಲ್ ಹಾಗೂ ಭಟ್ಕಳ ಸಮೀಪ ತಾಂತ್ರಿಕ ತೊಂದರೆಯಿಂದ ಸಮುದ್ರ ಮಧ್ಯೆ ಸಿಲುಕಿಕೊಂಡಿರುವ ಘಟನೆ ನಡೆದಿದೆ. ಮಲ್ಪೆ ತೊಟ್ಟಂನ ಶಕುಂತಲ ಕರ್ಕೇರ ಎಂಬವರ ‘ಹನುಮ ಸಾನಿಧ್ಯ’ ಬೋಟು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ್ಟಿದ್ದು, ಕೋಡಿಬೆಂಗ್ರೆಯ 12 ಮಾರು ದೂರದ ಸಮುದ್ರದಲ್ಲಿ ತಾಂತ್ರಿಕ ದೋಷದಿಂದ ಬೋಟಿನ ಇಂಜಿನ್ ಹಾಳಾಯಿತೆನ್ನಲಾಗಿದೆ. ಸಮುದ್ರದಲ್ಲಿ ಭಾರೀ ಗಾಳಿಮಳೆಯ ಪರಿಣಾಮ ಕೆಟ್ಟು ನಿಂತ ಬೋಟು ಏಳು […]

ಮೀನುಗಾರಿಕೆ ಡೀಸೆಲ್ ಸಬ್ಸಿಡಿ ವಾರದೊಳಗೆ ಖಾತೆಗೆ ಜಮಾ ಮಾಡಲಾಗುವುದು: ವೆಂಕಟರಾವ್ ನಾಡಗೌಡ

Wednesday, July 18th, 2018
venkat-rao

ಮಂಗಳೂರು: ಮೀನುಗಾರಿಕಾ ಬೋಟುಗಳಿಗೆ ನೀಡಬೇಕಾದ ಬಾಕಿ ಡೀಸೆಲ್ ಸಬ್ಸಿಡಿಯನ್ನು ಮುಂದಿನ ಒಂದು ವಾರದೊಳಗೆ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ. ಇಂದು ನಗರದ ಧಕ್ಕೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ, ಮೀನುಗಾರ ಮುಖಂಡರ ಅಹವಾಲುಗಳನ್ನು ಆಲಿಸಿ ಮಾತನಾಡಿದರು. ಬಾಕಿ ಡೀಸೆಲ್ ಸಬ್ಸಿಡಿ ಕುರಿತು ಬೆಂಗಳೂರಿಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಹಣ ಬಿಡುಗಡೆ ಮಾಡಲಾಗುವುದು ಎಂದರು. ಮಂಗಳೂರು ಮೀನುಗಾರಿಕಾ ಬಂದರಿನ 3ನೇ ಹಂತದ ವಿಸ್ತರಣೆಯ ಕಾಮಗಾರಿ […]