Blog Archive

ತವರಿನಿಂದ ಹಣ ತರಲು ಹೇಳಿದ ಬೆನ್ನಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ 20 ರ ಮಹಿಳೆ

Wednesday, October 7th, 2020
Manjula

ಮೈಸೂರು: ಪ್ರೀತಿಸಿ ಮದುವೆಯಾದ ಮಹಿಳೆಯಲ್ಲಿ  ತವರಿನಿಂದ ಹಣ ತರಲು ಹೇಳಿದ ಬೆನ್ನಲ್ಲೇ  ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಾವನ್ನಪ್ಪಿದ ಮಹಿಳೆ 20 ವರ್ಷದ ಮಂಜುಳಾ ಎಂದು ಗುರುತಿಸಲಾಗಿದೆ. ಹಳ್ಳಿಕೆರೆಹುಂಡಿಯ ನಿವಾಸಿಯಾಗಿದ್ದ ಮಂಜುಳಾ ಮತ್ತು ಮೆಲ್ಲಹಳ್ಳಿ ಗ್ರಾಮದ ಹೇಮಂತ್ ಪ್ರೀತಿಸಿ ಮದುವೆಯಾಗಿದ್ದರು. ಕೆಲ ದಿನಗಳ ಹಿಂದೆ ಹೇಮಂತ್ ಪತ್ನಿಗೆ ತವರಿನಿಂದ ಹಣ ತರಲು ಹೇಳಿದ್ದನಂತೆ. ಮಂಜುಳಾ ತಂದೆ ಸಹ ಒಂದು ತಿಂಗಳಲ್ಲಿ ಹಣ ನೀಡುವದಾಗಿ ಹೇಳಿದ್ದರು ಎನ್ನಲಾಗಿದೆ. ಆದ್ರೆ ಮಂಜುಳಾ ಮಂಗಳವಾರ ಅನುಮಾನಾಸ್ಪದವಾಗಿ […]

ಸರಕಾರದ ಆರೋಗ್ಯ ಇಲಾಖೆಯ ವೈಫಲ್ಯತೆ ಮೈಸೂರು ವೈದ್ಯಾಧಿಕಾರಿಯನ್ನು ಬಲಿ ಪಡೆದಿದೆ

Saturday, August 22nd, 2020
dyfi

ಮಂಗಳೂರು  : ರಾಜ್ಯದಲ್ಲಿ ಸರಕಾರಿ ಆಸ್ಪತ್ರೆಗಳಿಗೆ ಕೊರೊನಾ ಪ್ರಕರಣ ನಿಭಾಯಿಸಲು ವೈದ್ಯರು ಸಹಿತ ನುರಿತ ಸಿಬ್ಬಂಧಿಗಳ ವ್ಯವಸ್ಥೆ ಮಾಡದೆ ಬರೇ ಇರುವ ವೈದ್ಯರುಗಳಿಂದಲೇ ವಿಪರೀತ ಕೆಲಸಗಳನ್ನು ನಿರ್ವಹಿಸಿದ ಕಾರಣ ಒತ್ತಡಕ್ಕೆ ಸಿಲುಕಿದ ವೈದ್ಯರು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಯ ನಿರ್ಮಾಣ ಇದು ಸರಕಾರದ ಆರೋಗ್ಯ ಇಲಾಖೆಯ ವೈಫಲ್ಯತೆ. ಮೈಸೂರಿನ ತಾಲೂಕು ವೈದ್ಯಾಧಿಕಾರಿ ಡಾ ನಾಗೇಂದ್ರ ಅವರನ್ನು ಬಲಿಪಡೆದಿದೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಇಂದು ಉರ್ವಸ್ಟೋರ್ ನಲ್ಲಿ ಡಿವೈಎಫ್ಐ ನೇತೃತ್ವದಲ್ಲಿ ನಡೆದ ಸರಕಾರಿ […]

ಆಂಬ್ಯುಲೆನ್ಸ್ ಮೂಲಕ ಮೈಸೂರಿಗೆ ಪ್ರಯಾಣ; 7 ಮಂದಿಯನ್ನು ಬಂಧಿಸಿದ ಪೊಲೀಸರು

Sunday, April 19th, 2020
Puttur

ಮಂಗಳೂರು: ಆಂಬ್ಯುಲೆನ್ಸ್ ಮೂಲಕ ಪುತ್ತೂರಿನಿಂದ ಮೈಸೂರಿಗೆ ಹೊರಟ 7 ಮಂದಿಯನ್ನು ಪುತ್ತೂರು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಪುತ್ತೂರಿನ ಮಹಮ್ಮದ್ ಜುನೈದ್, ಮಹಮ್ಮದ್ ಇಲ್ಯಾಸ್, ಸಲೀಮುದ್ದೀನ್ ಯಾನೆ ಪಾಪು, ಅಬ್ದುಲ್ ರಜಾಕ್, ರಶೀದ್, ಸಂಶುದ್ದೀನ್, ಮಹಮ್ಮದ್ ಇರ್ಷಾದ್ ಬಂಧಿತರು. ಲಾಕ್‌ಡೌನ್ ನಿಯಮವನ್ನು ಉಲ್ಲಂಘನೆ ಮಾಡಿ ಪುತ್ತೂರಿನ ಏಳು ಮಂದಿ ಆಂಬ್ಯುಲೆನ್ಸ್ ನಲ್ಲಿ ರಾತ್ರಿ ಮೈಸೂರು ಕಡೆ ಹೊರಟಿದ್ದರು. ಕೊಡಗು ಜಿಲ್ಲೆಯ ಕುಶಾಲನಗರ ಸರಹದ್ದಿನ ಕೊಪ್ಪದಲ್ಲಿ ಇವರನ್ನು ತಡೆದ ಪೊಲೀಸರು ತಪಾಸಣೆ ಮಾಡಿದಾಗ ಯಾವುದೇ ತುರ್ತು ಸೇವೆಗೆ ಹೋಗದೇ ಲಾಕ್‌ಡೌನ್‌ ನಿಯಮದಿಂದ […]

ಮೈಸೂರು : ಕೊರೋನ ಸೋಂಕು ಇಲ್ಲ, ಹಕ್ಕಿ ಜ್ವರವೂ ಇಲ್ಲ, ಯಾವುದೇ ಆತಂಕ ಬೇಡ; ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್

Saturday, March 14th, 2020
mysuru

ಮೈಸೂರು : ಮೈಸೂರಿನಲ್ಲಿ ಕೊರೋನ ಸೋಂಕು ಇಲ್ಲ. ಹಕ್ಕಿ ಜ್ವರವೂ ಇಲ್ಲ, ಸದ್ಯ ಜಿಲ್ಲೆಯಲ್ಲಿ ಕೊರೋನ ವೈರಸ್ ಬಗ್ಗೆ ಯಾವುದೇ ಆತಂಕ ಬೇಡ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇದುವರೆಗೂ 100ಕ್ಕೂ ಹೆಚ್ಚು ಜನರನ್ನು ತಪಾಸಣೆ ಮಾಡಲಾಗಿದೆ. ಯಾರಿಗೂ ಕೊರೋನ ವೈರಸ್ ಕಂಡುಬಂದಿಲ್ಲ. ಸೋಂಕಿತ ಅಥವಾ ಶಂಕಿತ ಪ್ರಕರಣ ಅಂತ ಯಾವುದೂ ಇಲ್ಲ. ಸಾರ್ವಜನಿಕರು ನಮ್ಮೊಟ್ಟಿಗೆ ಸಹಕಾರ ನೀಡಬೇಕು. ಕೊರೋನಾ ಭೀತಿ […]

ಮೈಸೂರು : ಹುಟ್ಟುಹಬ್ಬದ ದಿನವೇ ಬಿಜೆಪಿ ಮುಖಂಡನ ಬರ್ಬರ ಹತ್ಯೆ

Friday, March 6th, 2020
anand

ಮೈಸೂರು : ಹುಟ್ಟುಹಬ್ಬದ ದಿನವೇ ಬಿಜೆಪಿ ಮುಖಂಡನನ್ನು ಆತನ ಸ್ನೇಹಿತರೇ ಕೊಲೆ ಮಾಡಿರುವ ಘಟನೆ ಮೈಸೂರಿನ ಕುವೆಂಪುನಗರದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಬಿಜೆಪಿಯ ಮೈಸೂರು ನಗರ ಸ್ಲಂ ಮೋರ್ಚಾ ಉಪಾಧ್ಯಕ್ಷ ಆನಂದ್ ಎಂದು ಗುರುತಿಸಲಾಗಿದೆ. ಗುರುವಾರ ಆನಂದ್ ಹುಟ್ಟುಹಬ್ಬವಿದ್ದು, ಕುವೆಂಪು ನಗರದ ಲವಕುಶ ಪಾರ್ಕ್ ಬಳಿಯ ಸರ್ವಿಸ್ ಅಪಾರ್ಟ್‍ಮೆಂಟ್‍ನಲ್ಲಿ ರೂಮ್ ಮಾಡಿಕೊಂಡು ಪಾರ್ಟಿ ಮಾಡುತ್ತಿದ್ದಾಗ ಸ್ನೇಹಿತರಿಂದಲೇ ಭೀಕರವಾಗಿ ಹತ್ಯೆಯಾಗಿದ್ದಾನೆ. ಉತ್ತನಹಳ್ಳಿ ಸಮೀಪ ಖಾಸಗಿ ಕಲ್ಯಾಣ ಮಂಟಪದಲ್ಲಿ ಪಾರ್ಟಿ ಮುಗಿಸಿ ಬಂದಿದ್ದ ಆನಂದ್, ನಂತರ ವಾಪಸ್ ಬಂದು ಸರ್ವಿಸ್ […]

ಮೈಸೂರು : ತನ್ವೀರ್​ ಸೇಠ್​ ಆಪ್ತ ಸಹಾಯಕನ ಮೇಲೆ ಮಾರಣಾಂತಿಕ ಹಲ್ಲೆ

Friday, March 6th, 2020
rajani-annayya

ಮೈಸೂರು : ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ ನಡೆದಿತ್ತು. ಆ ಸುದ್ದಿ ಮಾಸುವ ಮುನ್ನವೇ ಇದೀಗ ಅವರ ಆಪ್ತನ ಕೊಲೆ ಯತ್ನ ಸಹ ನಡೆದಿದೆ. ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ರಜನಿ ಅಣ್ಣಯ್ಯ ಎಂಬುವವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಮೈಸೂರಿನ ಯರಗನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮದೇವತೆಯ ಹಬ್ಬದ ವೇಳೆ ಲಾಂಗು ಬೀಸಿರುವ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಕಾಂಗ್ರೆಸ್ ಮುಖಂಡರಾಗಿರುವ […]

ಮೈಸೂರು : ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ

Wednesday, March 4th, 2020
chirate

ಮೈಸೂರು : ಆಗಾಗ ಊರಿಗೆ ನುಗ್ಗಿ ನಾಯಿಗಳನ್ನು ಹೊತ್ತೊಯ್ದು ಜನರಿಗೆ ಭೀತಿ ಹುಟ್ಟಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ. ತಿ.ನರಸೀಪುರ ತಾಲೂಕಿನ ತುಂಬಲ ಗ್ರಾಮದ ಸಮೀಪದ ಬಟ್ಟಳಿಗೆ ಹುಂಡಿ ಗ್ರಾಮದಲ್ಲಿ ಮಹದೇವ್ ಎಂಬುವವರ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ 2 ವರ್ಷದ ಗಂಡು ಚಿರತೆ ಸೆರೆಯಾಗಿದೆ. ನಿನ್ನೆಯಷ್ಟೆ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದವು. ಇಂದು ಸುಮಾರು 2 ವರ್ಷದ ಚಿರತೆ ಸೆರೆಯಾಗಿದೆ. ಹಲವು ದಿನಗಳಿಂದ ಬಟ್ಟಳಿಗೆ ಹುಂಡಿ ಗ್ರಾಮದ ಜನರಿಗೆ […]

ಮೈಸೂರು : ಅಧ್ಯಾಪಕಿಯಿಂದ ಹಲ್ಲೆ ಆರೋಪ; ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದ ಎಂಐಟಿ ವಿದ್ಯಾರ್ಥಿಗಳು

Tuesday, March 3rd, 2020
mysuru

ಮೈಸೂರು : ಮೈಸೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಮೇಲೆ ಅಧ್ಯಾಪಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ತಾಂಡವಪುರ ಬಳಿಯ ಎಂಐಟಿ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಹಲ್ಲೆ ಮಾಡಿದ ಅಧ್ಯಾಪಕಿ ಮೇಲೆ ಕ್ರಮ ಕೈಗೊಳ್ಳುವಂತೆ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ತಾಂಡವಪುರದ ಬಳಿಯ ಎಂಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿದ್ದ ಕ್ರೀಡಾಕೂಟದ ವೇಳೆ ವಿದ್ಯಾರ್ಥಿಗಳು ಹಾಗು ಶಿಕ್ಷಕರ ನಡುವೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ನಡೆಯುತ್ತಿದ್ದ ವೇಳೆ ವಿದ್ಯಾರ್ಥಿನಿಯರ ಮೇಲೆ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ […]

ಎರಡು ತಲೆ ಹಾವಿನ ಕಳ್ಳ ಸಾಗಾಟ : ಇಬ್ಬರ ಬಂಧನ

Saturday, February 22nd, 2020
mahadeshwara

ಮೈಸೂರು : ಇಲ್ಲಿಗೆ ಸಮೀಪದ ಮಲೈ ಮಹದೇಶ್ವರ ವನ್ಯ ಜೀವಿ ವಿಭಾಗಕ್ಕೆ ಸೇರಿದ ಹೂಗ್ಯಂ ವಲಯದ ಶಾಂತನೂರು ಬಯಲು ಅರಣ್ಯದಲ್ಲಿ ಇಬ್ಬರು ಐನಾತಿಗಳು ಎರಡು ತಲೆ ಹಾವನ್ನು ಹಿಡಿದಿದ್ದಾಗಲೇ ಅರಣ್ಯ ಅಧಿಕಾರಿಗಳ ಕೈಗೆ ಸಿಕ್ಕು ಬಿದ್ದಿದ್ದಾರೆ. ಇಂದು ಬೆಳಿಗ್ಗೆ ಬೀಟ್‌ ತಿರುಗುತ್ತಿರುವಾಗ ಅರಣ್ಯದೊಳಗೆ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರು. ಸಿಬ್ಬಂದಿಗಳು ಹತ್ತಿರ ಹೋಗಿ ವಿಚಾರಿಸಿದಾಗ ಚೀಲವೊಂದರಲ್ಲಿ ಎರಡು ತಲೆ ಹಾವು ಕಂಡು ಬಂದಿತು. ಕೂಡಲೇ ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ ಎಂದು ವನ್ಯ ಜೀವಿ ವಿಭಾಗ […]

ಮೈಸೂರು : ತಲಕಾಡು ಸಮೂಹ ದೇವಾಲಯಗಳ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

Saturday, January 18th, 2020
abhiram

ಮೈಸೂರು : ಐತಿಹಾಸಿಕ ಪಂಚಲಿಂಗ ದರ್ಶನ ಮಹೋತ್ಸವವು 2020ನೇ ವರ್ಷಾಂತ್ಯದಲ್ಲಿ ಜರುಗಲಿದ್ದು, ಈ ನಿಟ್ಟಿನಲ್ಲಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ನಿನ್ನೆ ತಲಕಾಡು ಸಮೂಹ ದೇವಾಲಯಗಳ ಸ್ಥಳ ಪರಿಶೀಲಿಸಿ ಪೂರ್ವಭಾವಿ ಸಭೆ ನಡೆಸಲು ಮಾಹಿತಿ ಸಂಗ್ರಹಿಸಿದರು. ಏಳು ವರ್ಷಗಳ ನಂತರ ನಡೆಯುತ್ತಿರುವ ಪಂಚಲಿಂಗ ದರ್ಶನವು ಡಿಸೆಂಬರ್ 14 ರಿಂದ ಹತ್ತು ದಿನಗಳ ಕಾಲ ನಡೆಯಲಿದ್ದು, ಆಗಮಿಸುವ ಭಕ್ತಾದಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮೂಲಭೂತ ಸೌಕರ್ಯಗಳನ್ನು ಹಾಗೂ ಕಾಮಗಾರಿಗಳ ಕುರಿತು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರ ಜೊತೆ […]