Blog Archive

ಮಂಜೇಶ್ವರ ನಿವಾಸಿಗಳಿಂದ ಕಣ್ಣೂರು ವಿಮಾನ ನಿಲ್ದಾಣದಲ್ಲಿ 45 ಲಕ್ಷ ರೂ. ವೌಲ್ಯದ ಚಿನ್ನಾಭರಣ ವಶ

Thursday, August 13th, 2020
gold

ಕಾಸರಗೋಡು :  ಕಣ್ಣೂರು ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಅಕ್ರಮವಾಗಿ ಚಿನ್ನಾಭರಣ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಮಂಜೇಶ್ವರ ನಿವಾಸಿಗಳಾದ ಸತ್ತಾರ್ ಮತ್ತು ಸಮೀರ್ ಬಂಧಿತ ಆರೋಪಿಗಳು. ಬಂಧಿತರಿಂದ 45 ಲಕ್ಷ ರೂ. ವೌಲ್ಯದ ಚಿನ್ನಾಭರಣ ವಶಪಡಿಸಿ ಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇವರು ಶಾರ್ಜಾ ಮತ್ತು ದುಬೈಯಿಂದ ಆಗಮಿಸಿದವರೆನ್ನಲಾಗಿದೆ. ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇತ್ತೀಚಿನ ದಿನಗಳಿಂದ ಅಕ್ರಮ ಚಿನ್ನಾಭರಣ ಸಾಗಾಟ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಸ್ಟಮ್ಸ್ ತಪಾಸಣೆ ತೀವ್ರಗೊಳಿಸಲಾಗಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1605ಕ್ಕೆ ಏರಿಕೆ, ಒಂದೇ ದಿನ 143 ಹೊಸ ಪ್ರಕರಣ ಪತ್ತೆ,

Thursday, May 21st, 2020
Corona Bengaluru

ಬೆಂಗಳೂರು:  ಗುರುವಾರ ಬೆಂಗಳೂರು ನಗರದಲ್ಲಿ 7, ಹಾಸನದಲ್ಲಿ 13, ಮಂಡ್ಯದಲ್ಲಿ 33, ದಕ್ಷಿಣ ಕನ್ನಡದಲ್ಲಿ 5, ಚಿಕ್ಕಬಳ್ಳಾಪುರದಲ್ಲಿ 2, ದಾವಣಗೆರೆಯಲ್ಲಿ 3, ಬೆಳಗಾವಿಯಲ್ಲಿ 9, ವಿಜಯಪುರದಲ್ಲಿ 1, ಬೆಳಗಾವಿಯಲ್ಲಿ 2, ಶಿವಮೊಗ್ಗದಲ್ಲಿ 6, ಧಾರವಾಡದಲ್ಲಿ 5, ಮೈಸೂರಿನಲ್ಲಿ 1, ಉತ್ತರ ಕನ್ನಡದಲ್ಲಿ 7, ಉಡುಪಿಯಲ್ಲಿ 26, ಬಳ್ಳಾರಿಯಲ್ಲಿ 11, ತುಮಕೂರಿನಲ್ಲಿ 1, ಗದಗ 2, ರಾಯಚೂರಿನಲ್ಲಿ 5, ಕೋಲಾರದಲ್ಲಿ 2 ಪ್ರಕರಣಗಳು ವರದಿಯಾಗಿವೆ. ಜೊತೆಗೆ, ಕ್ವಾರಂಟೈನ್ ಗೆ ಒಳಪಟ್ಟಿರುವ ಅನ್ಯ ರಾಜ್ಯ ಮತ್ತು ಅಂತರಾಷ್ಟ್ರೀಯ ಪ್ರಯಾಣಿಕರಲ್ಲಿ ಐವರಲ್ಲಿ […]

ಮಸ್ಕತ್ ನಿಂದ ಮೊದಲ ವಿಮಾನ ಮಂಗಳೂರಿಗೆ ಆಗಮನ

Wednesday, May 20th, 2020
Muscut-flight

ಮಂಗಳೂರು : ಲಾಕ್ ಡೌನ್ ಬಳಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಸ್ಕತ್ ನಿಂದ ಮೊದಲ ವಿಮಾನ ಇಂದು ರಾತ್ರಿ ಬಂದಿಳಿಯಿತು. ಸುಮಾರು 63 ಪ್ರಯಾಣಿಕರನ್ನು ಹೊತ್ತು ತಂದ ವಿಮಾನ ಸಂಜೆ 8.05 ಕ್ಕೆ ಲ್ಯಾಂಡ್‌ ಆಯಿತು.  ಮಸ್ಕತ್ ನಿಂದ ಬೆಂಗಳೂರಿಗೆ ಆಗಮಿಸಿ, ಅಲ್ಲಿನ ಪ್ರಯಾಣಿಕರನ್ನು ಇಳಿಸಿದ ನಂತರ ಮಂಗಳೂರಿಗೆ ವಿಮಾನ ಆಗಮಿಸಿತು. ಪ್ರಯಾಣಿಕರಿಗೆ ಇಳಿದ ನಂತರ ವಿಮಾನ ನಿಲ್ದಾಣದಲ್ಲಿ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆ ಮಾಡಲಾಯಿತು. ನಂತರ ಆರೋಗ್ಯ […]

ಕೊರೋನಾ ಭೀತಿ : ಇಂದಿನಿಂದ ವಿಮಾನ ನಿಲ್ದಾಣದಲ್ಲಿ ಸ್ಟ್ಯಾಂಪಿಂಗ್ ವ್ಯವಸ್ಥೆ ಜಾರಿ

Thursday, March 19th, 2020
stamping

ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ವೈರಸ್ ಆತಂಕ ಹೆಚ್ಚುತ್ತಲೇ ಇದೆ. ಸೋಂಕು ಹರಡುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಅನೇಕರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಸ್ಟ್ಯಾಂಪಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ವಿದೇಶದಿಂದ ಕರ್ನಾಟಕಕ್ಕೆ ಬರುತ್ತಿರುವವರಿಂದಲೇ ಕೊರೋನಾ ಸೋಂಕು ಹೆಚ್ಚಾಗಿ ಹರಡುತ್ತಿರುವುದರಿಂದ ಆರೋಗ್ಯ ಇಲಾಖೆ ಹೆಚ್ಚಿನ ಕಟ್ಟೆಚ್ಚರ ವಹಿಸಿದೆ. ಏರ್ಪೋರ್ಟ್ಗಳಲ್ಲಿ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸುವಾಗ ಕೊರೋನಾ ಲಕ್ಷಣಗಳು ಕಾಣದಿದ್ದರೆ ಅಂಥವರನ್ನು ಐಸೋಲೇಷನ್ನಲ್ಲಿ ಇರಿಸಲಾಗುತ್ತಿದೆ. ಆದರೆ, ಹಾಗೆ ಮನೆಯಲ್ಲೇ ಸ್ವನಿರ್ಬಂಧ ಹೇರಿಕೊಂಡು 14 ದಿನಗಳು […]

ನಳಿನ್ ಕುಮಾರ್ ಕಟೀಲ್ ರವರಿಗೆ ಮಂಗಳೂರು ಬಿಟ್ಟು ರಾಜ್ಯ ಬಗ್ಗೆ ಏನೂ ಗೊತ್ತಿಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ

Friday, October 18th, 2019
Siddaramaiah

ಮಂಗಳೂರು :  ನಳಿನ್ ಕುಮಾರ್ ಕಟೀಲ್ ಅವರ ಕರ್ನಾಟಕದಲ್ಲಿ 34 ಜಿಲ್ಲೆ ಇದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಳಿನ್ ಕುಮಾರ್ ಅವರಿಗೆ ರಾಜ್ಯ ಬಗ್ಗೆ ಏನೂ ಗೊತ್ತಿಲ್ಲ, ಎಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ ಸಿದ್ದರಾಮಯ್ಯ ಹೇಳಿದರು. ನಳಿನ್ ಅವರಿಗೆ ಮಂಗಳೂರು ಮಾತ್ರ ಗೊತ್ತು, ಮಂಗಳೂರು ಬಿಟ್ಟು ಅವರಿಗೆ ಏನೂ ಗೊತ್ತಿಲ್ಲ, ಅವರಿಗೆ ಕನಿಷ್ಟ ಜ್ಞಾನ ಕೂಡ ಇಲ್ಲ ಎಂದು ಹೇಳಿಕೆ ತಿಳಿಸಿದ್ದಾರೆ. ನಂತರ ಮಾತನಾಡಿದ ಅವರು ಕಾವೇರಿ ಅತಿಥಿ ಗೃಹವನ್ನು ನಾನು ಕೇಳಿದ್ದೇನೆ ಅದು ನೀಡುವುದು […]

ವಿಮಾನ ನಿಲ್ದಾಣದಲ್ಲಿ ಬುರ್ಕಾದೊಳಗೆ ಚಿನ್ನ ಸಾಗಾಟ ಮಹಿಳೆ ಬಂಧನ

Monday, June 24th, 2019
gold

ಮಂಗಳೂರು:  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ 15.34 ಲಕ್ಷ ರೂ ಮೌಲ್ಯದ ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜೂನ್ 23 ರಂದು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಸ್ಪೈಸ್ ಜೆಟ್ ವಿಮಾನದ ಪ್ರಯಾಣಿಕನಿಂದ ರೂ 7.17 ಲಕ್ಷ ರೂ ಮೌಲ್ಯದ 211 ಗ್ರಾಂ ಚಿನ್ನ ವಶಪಡಿಸಿಕೊಂಡು ಪ್ರಯಾಣಿಕನನ್ನು ಬಂಧಿಸಲಾಗಿದೆ. ಆರೋಪಿಯು ಚಿನ್ನವನ್ನು ಗೇರ್ ವೀಲ್ನಲ್ಲಿ ಅಡಗಿಸಿಟ್ಟು ತಂದಿದ್ದು, ಬ್ಯಾಗ್ ತಪಾಸಣೆ ವೇಳೆ ಸಿಕ್ಕಿ ಬಿದ್ದಿದ್ದಾನೆ. ಇನ್ನು ಜೂನ್ 24 ರಂದು ಏರ್ […]

ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ..ಓರ್ವ ವ್ಯಕ್ತಿ ಬಂಧನ

Friday, June 8th, 2018
gold-buiscet

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಮಂಗಳೂರು ಡಿ‌ಆರ್‌‌ಐ ಅಧಿಕಾರಿಗಳು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಲದ ಉಮರ್‌ ಫಾರೂಕ್‌ ಕನ್ನದಗುಳಿ‌ ಎಂಬಾತ ಬಂಧಿತ ಆರೋಪಿ. ಬುಧವಾರದಂದು ಸಂಜೆ 6.15 ಕ್ಕೆ ದುಬೈನಿಂದ‌ ಮಂಗಳೂರಿಗೆ ಉಮರ್‌ ಫಾರೂಕ್‌ ಬಂದಿದ್ದ. ಸ್ಪೈಸ್‌ಜೆಟ್‌ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದಿದ್ದ ಆರೋಪಿ ಮಲ್ಟಿ ಮೀಡಿಯಾ ಸ್ಪೀಕರ್‌ ಸಿಸ್ಟಮ್‌ ಒಳಗಡೆ ಚಿನ್ನವನ್ನು ಅಡಗಿಸಿ ತಂದಿದ್ದ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದಾಗ […]

ಮಂಗಳೂರು ವಿಮಾನ ನಿಲ್ದಾಣದಲ್ಲಿ ಇನ್ಮುಂದೆ ಮಲ್ಲಿಗೆಯ ಕಂಪು

Wednesday, April 4th, 2018
airport

ಮಂಗಳೂರು: ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ದೇಶಕ ವಿ.ವಿ.ರಾವ್, ವಿಮಾನದಿಂದ ಇಳಿದು ಮಂಗಳೂರು ವಿಮಾನ ನಿಲ್ದಾಣದ ಹೊರಗೆ ಬರಬೇಕಾದರೆ ಇನ್ನು ಮಲ್ಲಿಗೆಯ ಸುವಾಸನೆ ಸ್ವಾಗತಿಸಲಿದೆ. ಜಾಗತಿಕವಾಗಿ ಮನ್ನಣೆ ತಂದುಕೊಟ್ಟ ಮಂಗಳೂರು ಮಲ್ಲಿಗೆಯ ಖ್ಯಾತಿಯನ್ನು ಇನ್ನಷ್ಟು ಪಸರಿಸಲು ಹೊರಹೋಗುವ ಪ್ರಯಾಣಿಕರಿಗೆ ಮಲ್ಲಿಗೆಯ ಕಂಪು ಘಮಿಸಲಿದೆ ಎಂದು ಹೇಳಿದರು. ಇದಲ್ಲದೆ ವಿಮಾನ ನಿಲ್ದಾಣದ ಒಳಹೊರಗು ಗೋಡೆಗಳಲ್ಲಿ ಮಂಗಳೂರಿನ ಪ್ರಾದೇಶಿಕತೆ, ಸಂಸ್ಕೃತಿಯನ್ನು ಸಾರುವ ಚಿತ್ರಪಟಗಳು ಕಣ್ಮನ ಸೆಳೆಯಲಿವೆ. ಇದಕ್ಕಾಗಿಯೇ ಸುಮಾರು 1 ಕೋಟಿ ರೂ. ವೆಚ್ಚ ಮಾಡಲಾಗುವುದು. […]

ಮಂಗಳೂರು ವಿಮಾನ ನಿಲ್ದಾಣದಲ್ಲಿ 39 ಲಕ್ಷ ರೂ. ಮೌಲ್ಯದ ಚಿನ್ನ ವಶ

Thursday, February 1st, 2018
airport

ಮಂಗಳೂರು: ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ)ದ ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 39 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆದು, ಅಕ್ರಮವಾಗಿ ಸಾಗಿಸಲೆತ್ನಿಸಿದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತನನ್ನು ಕಾಸರಗೋಡಿನ ಅಹಮದ್ ನಬೀಳ್ ಗಫೂರ್ (21) ಎಂದು ಗುರುತಿಸಲಾಗಿದೆ. ಈತ ದುಬೈನಿಂದ ಸ್ಪೈಸ್‌ಜೆಟ್ ವಿಮಾನ ಮೂಲಕ ಬಂದಿದ್ದು, ತಪಾಸಣೆ ವೇಳೆ ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವುದು ಪತ್ತೆಯಾಗಿದೆ. ಈತ ಮೊಬೈಲ್ ಕವರ್‌ನೊಳಗೆ ಚಿನ್ನವನ್ನು ಅಡಗಿಸಿಟ್ಟು ಪ್ಯಾಂಟಿನ ಜೇಬಿನಲ್ಲಿರಿಸಿ ಸಾಗಿಸಲು ಯತ್ನಿಸಿದ್ದ. 1.282 […]

ರನ್‌‌ ವೇಯಲ್ಲಿ ಟ್ರ್ಯಾಕ್ಟರ್‌‌ ಇರಲಿಲ್ಲ: ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕರ ಸ್ಪಷ್ಟನೆ

Friday, January 12th, 2018
Airport

ಮಂಗಳೂರು: ವಿಮಾನ ನಿಲ್ದಾಣದ ರನ್‌‌ ವೇಯಲ್ಲಿ ಟ್ರ್ಯಾಕ್ಟರ್‌‌ ಇರಲಿಲ್ಲ. ಇದು ಸತ್ಯಕ್ಕೆ ದೂರವಾದ ವಿಷಯ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ.ರಾವ್ ಸ್ಪಷ್ಟಪಡಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ ಎಂದು ಎಎನ್ಐ ವರದಿ ಮಾಡಿತ್ತು. ರನ್‌‌ ವೇ ಸಮೀಪವೇ ಟ್ರ್ಯಾಕ್ಟರ್‌‌ವೊಂದು ನಿಲ್ಲಿಸಲಾಗಿತ್ತು. ಆಗ ಮುಂಬೈನತ್ತ ತೆರಳಬೇಕಾಗಿದ್ದ ವಿಮಾನವೊಂದು ಟೇಕಾಫ್ ಆಗುತ್ತಿತ್ತು. ಇದು ಏರ್‌‌ ಟ್ರಾಫಿಕ್ ಕಂಟ್ರೋಲರ್‌‌ ಗಮನಕ್ಕೆ ಬಂದಿತ್ತು. ಎಟಿಎಸ್‌‌ ಸಿಬ್ಬಂದಿ ಕೂಡಲೇ ವಿಮಾನದ ಪೈಲಟ್‌ಗೆ ಸಂದೇಶ […]