Blog Archive

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಅಕ್ಟೋಬರ್​ 2 ರಂದು ನೂತನ ಬ್ರಹ್ಮರಥ ಸಮರ್ಪಣೆ

Monday, September 30th, 2019
subrahmanya

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಮರ್ಪಣೆಗೊಳ್ಳಲಿರುವ ನೂತನ ಬ್ರಹ್ಮರಥವು ಅಕ್ಟೋಬರ್ 2ರಂದು ಉಪ್ಪಿನಂಗಡಿ, ಕಡಬದ ಮೂಲಕ ತೆರಳುವ ರಥಕ್ಕೆ ವಿವಿಧ ಕಡೆಗಳಲ್ಲಿ ಅದ್ಧೂರಿ ಸ್ವಾಗತ ನೀಡಲು ಸಿದ್ಧತೆಗಳು ಆರಂಭವಾಗಿದೆ. ಉದ್ಯಮಿ ಎನ್. ಮುತ್ತಪ್ಪ ರೈ ಹಾಗೂ ಕಡಬದ ಅಜಿತ್ ಶೆಟ್ಟಿ ಅವರು 2.5 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಬ್ರಹ್ಮರಥವನ್ನು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಕಾಣಿಕೆಯಾಗಿ ಸಮರ್ಪಣೆ ಮಾಡಲಿದ್ದಾರೆ. ಬ್ರಹ್ಮರಥವು ಇಂದು ಬೆಳಿಗ್ಗೆ ಕೋಟೇಶ್ವರದಿಂದ ಹೊರಟು ಮೂಲ್ಕಿ, ಬಪ್ಪನಾಡು ಮಾರ್ಗವಾಗಿ ಸಂಜೆ ವೇಳೆ ಮಂಗಳೂರಿನ ಕದ್ರಿಗೆ […]

ಸುಬ್ರಹ್ಮಣ್ಯ : ಔಷಧಿ ತರಲೆಂದು ತೆರಳಿದ್ದ ವ್ಯಕ್ತಿ ನೀರುಪಾಲು

Wednesday, September 4th, 2019
sheshappa

ಸುಬ್ರಹ್ಮಣ್ಯ : ಔಷಧಿ ತರಲೆಂದು ಪಂಜಕ್ಕೆ ತೆರಳಿದ್ದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಘಟನೆ ಕೂತ್ಕುಂಜ ಗ್ರಾಮದಲ್ಲಿ ನಡೆದಿದೆ. ಪಲ್ಲೋಡಿ ಹೊಳೆ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಹುಡುಕಾಟ ಆರಂಭವಾಗಿದೆ. ಪಂಜದ ಕೂತ್ಕುಂಜ ಗ್ರಾಮದ ಕುದ್ವ ಶೇಷಪ್ಪ ಗೌಡ (73) ನಾಪತ್ತೆಯಾಗಿರುವ ವ್ಯಕ್ತಿ. ಮಂಗಳವಾರ ಮಧ್ಯಾಹ್ನ ಶೇಷಪ್ಪ ಗೌಡರು ಮೈ ಹುಷಾರಿಲ್ಲ ಎಂದು ಜ್ವರಕ್ಕೆ ಔಷದ ತರಲು ಪಂಜಕ್ಕೆ ಹೋಗುತ್ತೇನೆ ಎಂದು ಮನೆಯವರಲ್ಲಿ ಹೇಳಿ ಹೋಗಿದ್ದರು. ಸಂಜೆ ಆದರೂ ಮನೆಗೆ ಬರದಿದ್ದರಿಂದ ಮಗ ಹರೀಶ್ ಪಂಜಕ್ಕೆ ಸಂಪರ್ಕಿಸುವ ಕಾಲು ದಾರಿಯಲ್ಲಿ […]

ಬೆಂಗಳೂರು-ಮಂಗಳೂರು ರೈಲು ಮಾರ್ಗದ ಕಾಮಗಾರಿ ಪುನರಾರಂಭ

Tuesday, August 20th, 2019
Railu-haligalu

ಸುಬ್ರಹ್ಮಣ್ಯ : ಬೆಂಗಳೂರು-ಮಂಗಳೂರು ರೈಲು ಮಾರ್ಗದ ಎಡಕುಮೇರಿ ಬಳಿ ಪ್ರಾಕೃತಿಕ ವಿಕೋಪ ಸಂಭವಿಸಿ ಹಳಿಗಳಿಗೆ ಹಾನಿಯುಂಟಾಗಿದ್ದು, ಅದರ ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿದೆ. 20 ಕ್ರೇನ್‌ ಮತ್ತು 500ಕ್ಕೂ ಅಧಿಕ ರೈಲ್ವೇ ಹಾಗೂ ಖಾಸಗಿ ಕಾರ್ಮಿಕರನ್ನು ಬಳಸಿಕೊಂಡು ದುರಸ್ತಿ ನಡೆಸಲಾಗುತ್ತಿದೆ. ಕಾಮಗಾರಿ ಪೂರ್ಣಗೊಂಡು ರೈಲು ಯಾನ ಈ ಮಾರ್ಗದಲ್ಲಿ ಸಂಚರಿಸಲು ಇನ್ನು ಹತ್ತು ದಿನಗಳು ಹಿಡಿಯಬಹುದು ಎಂದು ರೈಲ್ವೇ ಮೂಲಗಳು ತಿಳಿಸಿವೆ.  

ಸುಬ್ರಹ್ಮಣ್ಯದಲ್ಲಿ ಕೆಂಬಣ್ಣಕ್ಕೆ ತಿರುಗಿ ತುಂಬಿ ಹರಿಯುತ್ತಿರುವ ಕಲ್ಮಕಾರು ಹೊಳೆ

Saturday, August 10th, 2019
subramanya

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಹಾಗೂ ಘಟ್ಟದ ಮೇಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ನದಿ ತೀರದ ಹಲವು ಮನೆಗಳು ಮುಳುಗುವ ಸ್ಥಿತಿಯಲ್ಲಿವೆ. ಕಲ್ಮಕಾರು ಭಾಗದಲ್ಲಿ ಬರೆ ಜರಿದು ಮನೆಗೆ ಹಾನಿಯಾಗಿದೆ. ಪ್ರವಾಹಕ್ಕೆ ಕುಮಾರಧಾರಾ ಸ್ನಾನಘಟ್ಟ ಶುಕ್ರವಾರವೂ ಸಂಪೂರ್ಣ ಮುಳುಗಡೆಗೊಂಡಿತ್ತು. ಗುರುವಾರ ಮುಳುಗಡೆಗೊಂಡಿದ್ದ ಪಕ್ಕದ ದರ್ಪಣ ತೀರ್ಥ ನದಿಯ ಸುಬ್ರಹ್ಮಣ್ಯ-ಮಂಜೇಶ್ವರ ಸಂಪರ್ಕ ಸೇತುವೆ ರಾತ್ರಿ ಸಂಚಾರಕ್ಕೆ ಮುಕ್ತವಾಗಿತ್ತು. ಶುಕ್ರವಾರ ಬೆಳಗ್ಗೆ ಮತ್ತೆ ಮುಳುಗಡೆಗೊಂಡಿದೆ. ಪಕ್ಕದಲ್ಲಿ ನದಿಯ ನೆರೆ ನೀರು ರಸ್ತೆಗೆ ಹರಿದು ಸಂಚಾರ ವ್ಯತ್ಯಯಗೊಂಡಿತು. ಸುಬ್ರಹ್ಮಣ್ಯ-ಕಾಣಿಯೂರು-ಪುತ್ತೂರು […]

ಕಡಬದಲ್ಲಿ ಸರಣಿ ಅಪಘಾತ, ಆರು ಮಂದಿಗೆ ಗಾಯ

Wednesday, June 19th, 2019
kadaba-accident

ಉಪ್ಪಿನಂಗಡಿ : ಕಡಬದ ಹಳೇಸ್ಟೇಷನ್ ಸಮೀಪದ ತಿರುವಿನಲ್ಲಿ ಲಾರಿ, ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿ ಆರು ಮಂದಿ ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ . ಕಡಬದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಲಾರಿ ಹಾಗೂ ವಿರುದ್ಧ ದಿಕ್ಕಿನಿಂದ ಸಾಗುತ್ತಿದ್ದ ಕಾರು, ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ಐವರು ಗಂಭೀರ ಗಾಯಗೊಂಡಿದ್ದು, ದ್ವಿಚಕ್ರ ವಾಹನ ಸವಾರರೂ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಳ್ಳಾರಿ ಮೂಲದವರೆಂದು ಗುರುತಿಸಲಾಗಿದ್ದು, ಕಡಬದ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. […]

ವಿಧಿಯ ಕ್ರೂರ ಆಟಕ್ಕೆ ರಸ್ತೆ ಮಧ್ಯೆ ಬಲಿಯಾದ ಯುವಕ – ವಿಡಿಯೋ

Friday, February 8th, 2019
Praveen

ಸುಬ್ರಹ್ಮಣ್ಯ : ಸಿಡಿಲು ಬಡಿದು ಯುವಕನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ಮೃತಪಟ್ಟ ಘಟನೆ ಕುಕ್ಕೇ ಸುಬ್ರಹ್ಮಣ್ಯದಲ್ಲಿ ಗುರುವಾರ ಸಂಜೆ ನಡೆದಿದೆ. ಮೃತ ಯುವಕನನ್ನು ಸುಳ್ಯ ತಾಲೂಕಿನ ಕೊಲ್ಲಮೊಗ್ರ ನಿವಾಸಿ ಪ್ರವೀಣ್ (21) ಎಂದು ಗುರುತಿಸಲಾಗಿದೆ. ಕುಮಾರಧಾರಾ ಸಮೀಪ ಕಟ್ಟಡವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸಿಡಿಲು ಬಡಿದಿದ್ದು, ಗಂಭೀರ ಗಾಯಗೊಂಡ ಪ್ರವೀಣ್ ನನ್ನು ತಕ್ಷಣವೇ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದಾಗಲೇ ಮೃತಪಟ್ಟಿದ್ದಾರೆ. ಮೃತದೇಹದ ಅರ್ಧಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಖೋಟಾನೋಟು ಹಾವಳಿ: ಗ್ರಾಮೀಣಕ್ಕೂ ಬಂತು 200 ರೂ. ಖೋಟಾನೋಟು!

Friday, November 23rd, 2018
currency

ಸುಬ್ರಹ್ಮಣ್ಯ: ರಾಜ್ಯದಲ್ಲಿ ಖೋಟಾನೋಟು ಹಾವಳಿ ತೀವ್ರಗೊಂಡಿದೆ ಎನ್ನುವ ಆತಂಕದ ನಡುವೆಯೇ ಧಾರ್ಮಿಕ ಕೇಂದ್ರ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಜಾಲ ಸಕ್ರಿಯವಾಗಿರುವ ಶಂಕೆ ಉಂಟಾಗಿದೆ. ಕೆಲವು ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬ ಇಲ್ಲಿನ ಬಡ ವ್ಯಾಪಾರಸ್ಥ ಮಹಿಳೆಯೊಬ್ಬರಿಂದ ಸಣ್ಣ ಪುಟ್ಟ ವಸುಗಳನ್ನು ಖರೀದಿಸಿ 200 ರೂ. ಮುಖ ಬೆಲೆಯ ನೋಟು ನೀಡಿ ತೆರಳಿದ್ದ. ನೋಟು ಪಡೆದ ಮಹಿಳೆ ತತ್‌ಕ್ಷಣ ಅದನ್ನು ಪರಿಶೀಲಿಸಿರಲಿಲ್ಲ. ಆದರೆ ವ್ಯಕ್ತಿ ಸ್ಥಳದಿಂದ ತೆರಳಿದ ಬಳಿಕ ಅವರಿಗೆ ನೋಟಿನ ಕುರಿತು ಅನುಮಾನ ಮೂಡಿದ್ದು, ಸೂಕ್ಷ್ಮವಾಗಿ ಗಮನಿಸಿದಾಗ ಖೋಟಾ […]

ಬಾಲಕಿಯನ್ನು ಗರ್ಭವತಿಯಾಗಿಸಿದ ಯುವಕನ ಬಂಧನ

Wednesday, September 5th, 2018
arrested

ಮಂಗಳೂರು: ಪ್ರೀತಿಸುವುದಾಗಿ ಹೇಳಿ ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಆರೋಪಿಯನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ. ಯತೀಶ್ (28) ಎಂಬಾತ ಬಂಧಿತ ಆರೋಪಿ. ಆರೋಪಿಯು ತನ್ನ ಪರಿಚಯದ ಎಂಟನೇ ತರಗತಿ ಕಲಿಯುತ್ತಿರುವ 14 ವರ್ಷದ ವಿದ್ಯಾರ್ಥಿನಿಯನ್ನು ಐದು ತಿಂಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಪ್ರೀತಿಸುವುದಾಗಿ ಹೇಳಿ ದೈಹಿಕ ಸಂಪರ್ಕ ನಡೆಸಿದ್ದ ಎನ್ನಲಾಗಿದೆ. ಯುವತಿ ಇದೀಗ ಗರ್ಭವತಿಯಾಗಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜಿನಲ್ಲಿ ಆರು ಅವಳಿ ಮಕ್ಕಳು

Friday, July 27th, 2018
Subrahmanya

ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತಕ್ಕೊಳಪಟ್ಟ ಕೆ.ಎಸ್.ಎಸ್ ಕಾಲೇಜಿನಲ್ಲಿ ಆರು ಮಂದಿ ಅವಳಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಇಷ್ಟು ಸಂಖ್ಯೆಯ ಅವಳಿಗಳು ಪ್ರಥಮ ವರ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಹಿಂದೆ ಕಾಲೇಜಿನಲ್ಲಿ ಮೂರರಿಂದ ನಾಲ್ಕು ಜೊತೆ ಅವಳಿ ಸಹೋದರ-ಸಹೋದರಿಗಳು ವ್ಯಾಸಂಗ ಮಾಡಿದ್ದರು. ಈ ವರ್ಷ ಪ್ರಥಮ ಕಲಾ ಮತ್ತು ಪ್ರಥಮ ವಾಣಿಜ್ಯ ಪದವಿಯ ತರಗತಿಗಳಲ್ಲಿ ಒಟ್ಟಾಗಿ 12 ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಕೊಣಾಜೆಯ ಜಯರಾಮ.ಡಿ ಮತ್ತು ಕುಸುಮ.ಡಿ ದಂಪತಿಗಳ ಪುತ್ರಿಯರಾದ ಕೃಪಾ.ಡಿ.ಜೆ ಮತ್ತು ಕೃತಿ ಡಿ.ಜೆ, ಹೊಸ್ಮಠದ […]

ದ.ಕ. ಜಿಲ್ಲೆಯಾದ್ಯಂತ ವರುಣನ ಅಬ್ಬರ..ಹಲವೆಡೆ ಹಾನಿ!

Saturday, July 7th, 2018
heavy-rain-again

ಮಂಗಳೂರು: ದ.ಕ. ಜಿಲ್ಲೆಯಾದ್ಯಂತ ವರುಣನ ಅಬ್ಬರ ಮುಂದುವರೆದಿದೆ. ಜಿಲ್ಲೆಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಬಿರುಸಿನ ಮಳೆ ಸುರಿಯುತ್ತಿದ್ದು, ಇಂದು ಕೂಡ ಕುಂಭದ್ರೋಣ ಮಳೆ ಮುಂದುವರೆದಿದೆ. ಜೊತೆಗೆ ಹಲವೆಡೆ ಹಾನಿಯೂ ಸಂಭವಿಸಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮವಾಗಿ ಕಡಬ-ಉಪ್ಪಿನಂಗಡಿ ನಡುವಣ ಸಂಪರ್ಕ ಕೊಂಡಿ ಹೊಸ್ಮಠ ಸೇತುವೆ ಮುಳುಗಡೆಯಾಗಿದೆ. ಜೊತೆಗೆ ಸುಬ್ರಹ್ಮಣ್ಯದ ಸ್ನಾನಘಟ್ಟ ಕೂಡ ಜಲಾವೃತಗೊಂಡಿದೆ. ಪುತ್ತೂರಿನಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಮನೆಯೊಂದರ ತಡೆಗೋಡೆ ಕುಸಿದು, ಮನೆಯೊಳಗೆ […]