Blog Archive

ಬಿಜೆಪಿಗೆ ಅವಕಾಶ ಕೊಟ್ಟರೆ ಇದರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ: ಸಿದ್ದರಾಮಯ್ಯ

Wednesday, May 16th, 2018
congress-party

ಬೆಂಗಳೂರು: ಸಂಖ್ಯಾಬಲದ ಆಧಾರದ ಮೇಲೆ ಸರ್ಕಾರ‌‌ ರಚನೆಗೆ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ರಾಜ್ಯಪಾಲರು ಅವಕಾಶ ಕೊಡಬೇಕು. ಒಂದು ವೇಳೆ ಬಿಜೆಪಿಗೆ ಅವಕಾಶ ಕೊಟ್ರೆ ಅದು ಸಂವಿಧಾನ‌ ವಿರೋಧಿ ಕ್ರಮ ಎಂದು ನಿರ್ಗಮಿತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಶಾಸಕಾಂಗ ಸಭೆ ಬಳಿಕ ಮಾತನಾಡಿದ ಅವರು, ಬಿಜೆಪಿಗೆ ಅವಕಾಶ ಕೊಟ್ಟರೆ ಇದರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ. ಸಂವಿಧಾನ ನಿಯಮಾವಳಿಗಳಂತೆ ನಡೆದುಕೊಳ್ಳಬೇಕು. ಸಂವಿಧಾನ ಬಾಹಿರವಾಗಿ ನಡೆದುಕೊಂಡರೆ ಹುದ್ದೆಗೆ ಗೌರವ ಇರಲ್ಲ. ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ. ಆದರೆ ನಮ್ಮ ಶಾಸಕರು ಒಂದಾಗಿದ್ದೇವೆ […]

ಕಾಂಗ್ರೆಸ್ ಸೋತಿದ್ದಕ್ಕೆ ಕಣ್ಣೀರಿಟ್ಟ ಸಿದ್ದರಾಮಯ್ಯ.!

Wednesday, May 16th, 2018
siddaramaih-sad

ಬೆಂಗಳೂರು: ಸಿಎಂ ಕುರ್ಚಿಯಲ್ಲಿ ಕೂರುತ್ತಿದ್ದಾಗ, ಅಕ್ಷರಶಃ ಹುಲಿಯಂತೆ ಘರ್ಜಿಸುತ್ತಿದ್ದ ಸಿದ್ದರಾಮಯ್ಯ ಇದೀಗ ‘ಕುರಿ’ಯಂತಾಗಿದ್ದಾರೆ. ಸದನದಲ್ಲಿ ವಿರೋಧ ಪಕ್ಷಗಳಿಗೆ ಮಾತಲ್ಲೇ ಪೆಟ್ಟು ಕೊಡುತ್ತಿದ್ದ ಸಿದ್ದರಾಮಯ್ಯ ಈಗ ತಾವೇ ಮಂಕಾಗಿಬಿಟ್ಟಿದ್ದಾರೆ. ನಿನ್ನೆಯಷ್ಟೇ (ಮೇ 15) ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿತ್ತು. ”ಈ ಬಾರಿ ಸರ್ಕಾರ ನಮ್ದೇ” ಎಂದು ಬೀಗುತ್ತಿದ್ದ ಸಿದ್ದರಾಮಯ್ಯ, ಜನಾದೇಶ ನೋಡಿ ತಲೆ ಮೇಲೆ ಕೈ ಹೊತ್ತುಕೊಂಡಿದ್ದಾರೆ. ‘ದಾಸ’ ಬಂದರೂ ಸಿದ್ದು ಗೆಲ್ಲಲಿಲ್ಲ: ದರ್ಶನ್ ಪ್ರಚಾರ ಫಲಿಸಲಿಲ್ಲ.! ”ಗೆದ್ದೇ ಗೆಲ್ಲುವೆ” ಎಂಬ ಆತ್ಮವಿಶ್ವಾಸದಿಂದ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ […]

ಅತಂತ್ರ ವಿಧಾನಸಭೆ: ಮರುಕಳಿಸಿದ ಹದಿನಾಲ್ಕು ವರ್ಷದ ಹಿಂದಿನ ಇತಿಹಾಸ!

Wednesday, May 16th, 2018
siddarmah

ಬೆಂಗಳೂರು: ಬಹುನಿರೀಕ್ಷಿತ ಕರ್ನಾಟಕ ವಿಧಾನಸಭೆ ಫಲಿತಾಂಶದಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಮೈತ್ರಿ ಸರ್ಕಾರ ರಚನೆಗಾಗಿ ಮೂರು ಪಕ್ಷಗಳ ನಡುವೆ ಜಂಘೀ ಕುಸ್ತಿ ಆರಂಭಗೊಂಡಿದ್ದು, ಮೊದಲ ಪ್ರಯತ್ನದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸುವ ದಿಕ್ಕಿನತ್ತ ದಾಪುಗಾಲಿಟ್ಟಿವೆ. ಹದಿನಾಲ್ಕು ವರ್ಷದ ಹಿಂದಿನ ಇತಿಹಾಸ ಈ ಬಾರಿ ಮತ್ತೆ ಮರುಕಳಿಸಿದೆ. 2004ರ ವಿಧಾನಸಭೆ ಚುನಾವಣೆಯಲ್ಲಿ ಇದೇ ರೀತಿಯ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಆಗ ಮೊದಲ ಹಂತದಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ […]

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

Tuesday, May 15th, 2018
resigns

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಜನಾದೇಶ ಪಡೆಯುವ ಕಾಲ ಇದೀಗ ಬಂದಿದೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಮೇ 12ರಂದು ಮತದಾನವಾಗಿದೆ. ಚುನಾವಣಾ ಪೂರ್ವ ಸಮೀಕ್ಷೆ, ಅಭಿಪ್ರಾಯಗಳ ಸಂಗ್ರಹ ಕುತೂಹಲಕಾರಿ ಫಲಿತಾಂಶವನ್ನು ನೀಡಿದೆ. ಆದರೆ, ಅಂತಿಮ ಜನಾದೇಶ ಇಂದು(ಮೇ 15) ಮಧ್ಯಾಹ್ನ ಹೊರಬೀಳಲಿದೆ.  ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಲ್ಲದೆ ಸರಿ ಸುಮಾರು 28ಕ್ಕೂ ಅಧಿಕ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. 2,622 ಅಭ್ಯರ್ಥಿಗಳಿದ್ದು, ಪುರುಷ ಅಭ್ಯರ್ಥಿಗಳು 2,405, ಮಹಿಳೆಯರು […]

ಜೆಡಿಎಸ್-ಕಾಂಗ್ರೆಸ್ ಮೈತ್ರಿ, ಪ್ರಜಾತಂತ್ರದ ಕಟು ಅಣಕ!

Tuesday, May 15th, 2018
kumaraswamy

ಬೆಂಗಳೂರು: ಕರ್ನಾಟಕದ ಜನತೆಯ ಮತಗಳಿಗೆ, ಮತ ಪ್ರಹಾಪ್ರಭುವಿನ ನಾಲ್ಕು ಕಾಸಿನ ಕಿಮ್ಮತ್ತಿಲ್ಲದಂತೆ, ಪ್ರಜಾಪ್ರಭುತ್ವಕ್ಕೂ ಬೆಲೆಯಿಲ್ಲದಂತೆ ಕಾಂಗ್ರೆಸ್ ಪಕ್ಷ ಜಾತ್ಯತೀಯ ಜನತಾದಳಕ್ಕೆ ಸರಕಾರ ರಚಿಸಲು ಬೆಂಬಲ ನೀಡಿದೆ. ಕುಮಾರಸ್ವಾಮಿಯವರ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ. ಜಾತ್ಯತೀತ ಜನತಾದಳವನ್ನು ಭಾರತೀಯ ಜನತಾ ಪಕ್ಷದ ‘ಬಿ ಟೀಮ್’ ಎಂದು ಪ್ರಚಾರ ಸಮಾವೇಶವೊಂದರಲ್ಲಿ ಬಹಿರಂಗವಾಗಿ ಜರಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಈಗ ಬಹಿರಂಗವಾಗಿಯೇ ಅದೇ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಇಲ್ಲಿ ಏನು ಬೇಕಾದರೂ ಆಗಬಹುದು. ಅವರಿಗೆ ಅಧಿಕಾರ ಸಿಗಬಾರದೆಂದು ಎಂಥ ಅಪವಿತ್ರ ಮೈತ್ರಿಗೂ […]

ಎಲೆಕ್ಟ್ರಾನಿಕ್ ಮತಯಂತ್ರದ ಬಗ್ಗೆ ಅನುಮಾನ ಇದೆ: ರಮಾನಾಥ್ ರೈ

Tuesday, May 15th, 2018
ramanath-rai

ಮಂಗಳೂರು: ಎಲೆಕ್ಟ್ರಾನಿಕ್ ಮತಯಂತ್ರದ ಬಗ್ಗೆ ಅನುಮಾನ ಇದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಿದ್ದೇವೆ ಎಂದು ಸಚಿವ, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ರಮಾನಾಥ್ ರೈ ಹೇಳಿದ್ದಾರೆ. ಚುನಾವಣಾ ಸೋಲಿನ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ರೈ, ನಮಗೆ ಕೆಲವು ಬೂತ್ ಗಳಲ್ಲಿ ನಮ್ಮ ಅನುಮಾನಕ್ಕೆ ಪುಷ್ಟಿ ಸಿಕ್ಕಿದೆ. ಚುನಾವಣೆಯಲ್ಲಿ ಕೇಂದ್ರ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿದೆ. ಆದಾಯ ತೆರಿಗೆ ದಾಳಿ ನನ್ನ ರಾಜಕೀಯ ಜೀವನದಲ್ಲೇ ಕಂಡುಕೇಳರಿಯದ ಹಾಗೆ ನಡೆದಿದೆ ಎಂದು ಆರೋಪಿಸಿದರು.

ನನ್ನ ಸೋಲಿಗೆ ಇಲೆಕ್ಟ್ರಾನಿಕ್ ಮತಯಂತ್ರ ಕಾರಣ: ಮೊಯ್ದೀನ್ ಬಾವ

Tuesday, May 15th, 2018
mohuiddin-bava

ಮಂಗಳೂರು: ನನ್ನ ಸೋಲಿಗೆ ಇಲೆಕ್ಟ್ರಾನಿಕ್ ಮತಯಂತ್ರದ ದೋಷ ಕಾರಣ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮೊಯ್ದೀನ್ ಬಾವ ಆರೋಪಿಸಿದ್ದಾರೆ. ತನ್ನ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶದಲ್ಲಿ ನನಗೆ ಕಡಿಮೆ ಮತ ಬಂದಿದೆ. ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಬೇಕಾಗಿದೆ ಎಂದು ಹೇಳಿದರು.

ದಕ್ಷಿಣ ಕನ್ನಡದಲ್ಲಿ ಬಿಜೆಪಿಗೆ ಮುನ್ನಡೆ, ಕಾಂಗ್ರೆಸ್ ಗೆ ಭಾರೀ ಹಿನ್ನಡೆ

Tuesday, May 15th, 2018
janatha-party

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಬಿಜೆಪಿ ಭಾರೀ ಮುನ್ನಡೆ ಕಾಯ್ದುಕೊಂಡಿದೆ. ಜಿಲ್ಲೆಯ 8 ಕ್ಷೇತ್ರಗಳಲ್ಲಿ 5ರಲ್ಲಿ ಬಿಜೆಪಿ ಅಭ್ಯರ್ಥಿಗಳು ಅಚ್ಚರಿಯ ರೀತಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಜಿದ್ದಾಜಿದ್ದಿನಿಂದ ಕೂಡಿದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಂಜೀವ ಮಠಂದೂರು ಕಾಂಗ್ರೆಸಿನ ಶಕುಂತಳಾ ಶೆಟ್ಟಿ ವಿರುದ್ಧ 1,102 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ ಎಸ್. ಅಂಗಾರ ಕಾಂಗ್ರೆಸಿನ ರಘು ವಿರುದ್ಧ 2034 ಮತಗಳಿಂದ ಮುಂದಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಭರತ್ ಶೆಟ್ಟಿ 2 ಸಾವಿರ […]

ಸಜ್ಜನ ರಾಜಕಾರಣಿ ಗೋಪಾಲ ಭಂಡಾರಿ

Friday, May 11th, 2018
gopal-bhandary

ಕಾರ್ಕಳ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮತ್ತೊಬ್ಬ ಸಜ್ಜನ ರಾಜಕಾರಣಿ ಮಾಜಿ ಶಾಸಕ ಗೋಪಾಲ ಭಂಡಾರಿ. ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಸ್ವಜಾತಿ ಮತದಾರರಿದ್ದರು ಜಾತ್ಯತೀತವಾಗಿ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಕ್ಷೇತ್ರ ಕಾರ್ಕಳ. ಮೊದಲಿಗೆ ಮಾರ್ಪಾಡಿ ವೀರಪ್ಪ ಮೊಯ್ಲಿ ಅವರ ಶಾಸಕರಾಗಿ ಮುಖ್ಯಮಂತ್ರಿಯಾದವರು ವೀರಪ್ಪ ಮೊಯ್ಲಿ. ಅದೇ ರೀತಿ ಗೇಪಾಲ ಭಂಡಾರಿ ಅವರು ಎರಡು ಬಾರಿ ಕಾರ್ಕಳ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಜನರ ಪ್ರೀತಿಗೆ ಪಾತ್ರರಾದವರು. ಕಳೆದ 40 ವರ್ಷಗಳಿಂದ ಸಾರ್ವಜನಿಕ […]

ಜನಮನ್ನಣೆ ಪಡೆದ ಜನನಾಯಕ ವಸಂತ ಬಂಗೇರ

Friday, May 11th, 2018
vasanth-bangera

ಮಂಗಳೂರು: ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬೆಳ್ತಂಗಡಿಯ ವಸಂತ ಬಂಗೇರ ಇನ್ನು ಚುನಾವಣೆಯಲ್ಲಿ ಸ್ಪರ್ಧೆಮಾಡದಿರಲು ನಿರ್ಧರಿಸಿದ್ದರು. ಆದರೆ ಕಾರ್ಯಕರ್ತರ ಒತ್ತಡ ಮತ್ತು ಸ್ವತಃ ಮುಖ್ಯಮಂತ್ರಿಸಿದ್ದರಾಮಯ್ಯ ಅವರೇ ಸ್ಪರ್ಧಿಸುವಂತೆ ಒತ್ತಾಯಿಸಿದ ಮೇರೆಗೆ ನಿರ್ಧಾರ ಬದಲಾಯಿಸಿದ, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ವಸಂತ ಬಂಗೇರ ಮತ್ತೆ ನಾಮಪತ್ರ ಸಲ್ಲಿಸಿದ್ದಾರೆ. ರಾಜಕಾರಣದಲ್ಲಿ ಇಂಥ ವ್ಯಕ್ತಿಗಳೂ ಅಪರೂಪ, ಈ ರೀತಿ ವರ್ಚಸ್ಸು ಉಳಿಸಿಕೊಂಡವರೂವಿರಳ. ಅಧಿಕಾರವೋ ವೈಯಕ್ತಿಕ ಪ್ರತಿಷ್ಠೆಯೋ ಮತ್ಯಾವ ಕಾರಣಕ್ಕೋ ಪಕ್ಷಾಂತರ ಮಾಡುತ್ತಾರೆ.ಅಂಥವರ ರಾಜಕೀಯ ಭವಿಷ್ಯ ಆರಕ್ಕೆ ಏರಿದ್ದೂ ಇದೆ. ಮೂರಕ್ಕೆ […]