Blog Archive

ಮರಳಿ ಮನೆಗೆ… ‘ಕೈ’ ಬಿಟ್ಟು ‘ತೆನೆ’ ಹೊತ್ತ ನಟ ಶಶಿಕುಮಾರ್

Thursday, April 19th, 2018
shshi-kumar

ಬೆಂಗಳೂರು: ಟಿಕೆಟ್ ಆಕಾಂಕ್ಷಿಗಳ ಪಕ್ಷಾಂತರ ಪರ್ವದ ಪಟ್ಟಿಗೆ ಇದೀಗ ನಟ ಶಶಿಕುಮಾರ್ ಹೆಸರು ಸೇರ್ಪಡೆಯಾಗಿದೆ. ಶಶಿಕುಮಾರ್ ಹೊಸದುರ್ಗ ಟಿಕೆಟ್‌ಗಾಗಿ ‘ಕೈ’ ತೊರೆದು ‘ತೆನೆ’ ಹೊತ್ತಿದ್ದಾರೆ. ಹೌದು, ಮಾಜಿ ಸಂಸದ ಹಾಗೂ ಚಿತ್ರನಟ ಶಶಿಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದು ಜಾತ್ಯತೀತ ಜನತಾದಳವನ್ನು ಸೇರಿದ್ದಾರೆ. ಪದ್ಮನಾಭನಗರದಲ್ಲಿರುವ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ನಿವಾಸಕ್ಕೆ ತೆರಳಿ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪಕ್ಷದ ಶಾಲು ನೀಡುವ ಮೂಲಕ ದೇವೇಗೌಡರು ಶಶಿಕುಮಾರ್‌‌ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು. ಹೊಸದುರ್ಗ ಕ್ಷೇತ್ರದ ಟಿಕೆಟ್ […]

ಬಹಿರಂಗ ಸಭೆ ಬಳಿಕ ನಾಮಪತ್ರ ಸಲ್ಲಿಸಿದ ಸಚಿವ ರೈ

Thursday, April 19th, 2018
namapatra

ಮಂಗಳೂರು: ಕಾಂಗ್ರೆಸ್ ಎಲ್ಲಾ ಭಾಷೆ, ಎಲ್ಲಾ ಧರ್ಮ ಹಾಗೂ ಎಲ್ಲಾ ಭಾಷೆಯ ಜನರನ್ನು ಪ್ರೀತಿಸುತ್ತದೆ. ನಾನು ಕೂಡಾ ಇದೇ ತತ್ವವನ್ನು ಪಾಲಿಸುತ್ತಿದ್ದೇನೆ ಎಂದು ಬಿ.ಸಿ. ರೋಡ್‌‌ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸಚಿವ ಬಿ.ರಮಾನಾಥ್‌‌ ರೈ ಹೇಳಿದರು. ಬಂಟ್ವಾಳ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆಗೆ ಮುಂಚೆ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಇನ್ನೊಂದು ಧರ್ಮವನ್ನು ಪ್ರೀತಿ ಮಾಡುವವರು ನಿಜವಾದ ಹಿಂದೂ ಹಾಗೂ ಎಲ್ಲಾ ಧರ್ಮದ ಜನರನ್ನು ಪ್ರೀತಿ ಮಾಡುವ ಅವಶ್ಯಕತೆ ನಮಗಿದೆ ಎಂದರು. ನನ್ನ ಕೆಲಸವನ್ನು ಅತ್ಯಂತ ನಿಷ್ಠೆಯಿಂದ […]

ದ.ಕ. ಜಿಲ್ಲೆಯ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಗೆ ದಿನಾಂಕ ಫಿಕ್ಸ್‌‌‌

Wednesday, April 18th, 2018
u-t-kader

ಮಂಗಳೂರು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಂಗಳವಾರದಿಂದ ಪ್ರಾರಂಭಗೊಂಡಿದೆ. ರಾಜಕೀಯ ಪಕ್ಷದ ಬಹುತೇಕ ಪ್ರಮುಖ ಅಭ್ಯರ್ಥಿಗಳು ಏ. 19 ರಿಂದ ನಾಮಪತ್ರ ಸಲ್ಲಿಸಲು ತಿರ್ಮಾನಿಸಿದ್ದಾರೆ. ಏ.1 9 ರಂದು ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿ ಬಿ.ರಮಾನಾಥ ರೈ, ಮೂಡಬಿದ್ರೆ ಕಾಂಗ್ರೆಸ್ ಆಭ್ಯರ್ಥಿ ಕೆ.ಅಭಯಚಂದ್ರ ಜೈನ್, ಸುಳ್ಯದ ಕಾಂಗ್ರೆಸ್ ಅಭ್ಯರ್ಥಿ ಡಾ. ರಘು, ಮಂಗಳೂರು ಉತ್ತರ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ನಾಮಪತ್ರ ಸಲ್ಲಿಸಲಿದ್ದಾರೆ. ಏ. 20ರಂದು ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಅಂಗಾರ, […]

ಕಾಂಗ್ರೆಸ್ ಸಾಧನೆಯನ್ನು ಮತದಾರನಿಗೆ ತಿಳಿಸಿ: ಮೊದಿನ್ ಬಾವಾ

Tuesday, April 17th, 2018
mohaiddin-bava

ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದಲ್ಲಿ ಶಾಸಕನಾಗಿ ಕಳೆದ ಐದು ವರ್ಷದಲ್ಲಿ ಆರೋಗ್ಯ ನಿಧಿಯಿಂದ ಹಿಡಿದು ರಸ್ತೆಯವರೆಗೆ ಜನ ಸಾಮಾನ್ಯನಿಗೆ ಬೇಕಾದ ಸವಲತ್ತು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊದಿನ್ ಬಾವಾ ಹೇಳಿದರು.ಕಾಟಿಪಳ್ಳ ೩ನೇ ವಾಡ್ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ. ಬಡವರಿಗೆ ಉಚಿತ ಅಕ್ಕಿ ನೀಡಿದರು. ಗ್ಯಾಸ್ ಒದಗಿಸಿದರು. ನೆಮ್ಮದಿಯಿಂದ ಇರಲು ಸೂರು ಒದಗಿಸಿದರು. ಬುದ್ದಿವಂತ ಮತದಾರರು ಕಾಂಗ್ರೆಸ್ ಏನು […]

ತಪ್ಪಿದ ‘ಕೈ’ ಟಿಕೆಟ್‌: ಕಾಂಗ್ರೆಸ್‌‌ಗೆ ಗುಡ್‌ಬೈ ಹೇಳಿದ ರುಕ್ಮಿಣಿ ಸಾಹುಕಾರ

Tuesday, April 17th, 2018
rukmini

ಹಾವೇರಿ: ಟಿಕೆಟ್ ಸಿಗದ ಹಿನ್ನೆಲೆ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರುಕ್ಮಿಣಿ ಸಾಹುಕಾರ ಕಾಂಗ್ರೆಸ್‌ಗೆ ಗುಡ್‌‌‌‌ಬೈ ಹೇಳಿದ್ದಾರೆ. ರುಕ್ಮಿಣಿ ಸಾಹುಕಾರ ರಾಣೇಬೆನ್ನೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ, ಸ್ಪೀಕರ್ ಕೆ.ಬಿ.ಕೋಳಿವಾಡಗೆ ಟಿಕೆಟ್ ಘೋಷಣೆ ಆಗಿದ್ದಕ್ಕೆ ಅಸಮಾಧಾನಗೊಂಡು ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಈಗಾಗಲೇ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಅವರು, ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್‌ಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

ನಾನು ಭಾರತೀಯ ಮಹಿಳೆ ಎಂದು ಹೇಳಲು ನಾಚಿಕೆಯಾಗುತ್ತಿದೆ : ಪ್ರತಿಭಾ ಕುಳಾಯಿ

Monday, April 16th, 2018
prathiba-speach

ಮಂಗಳೂರು : ಉನ್ನಾವೋ, ಕಥುವಾ ಅತ್ಯಾಚಾರ ಪ್ರಕರಣ ಸಂಬಂಧ ಮಾತನಾಡಿದ ಪ್ರತಿಭಾ ಕುಳಾಯಿ ಅವರು ತುಂಬಾ ಹೆಣ್ಮಕ್ಕಳು ಈ ದೇಶದಲ್ಲಿ ಅತ್ಯಾಚಾರಕ್ಕೊಳಗಾಗಿದ್ದಾರೆ.ನಾನು ಭಾರತೀಯ ಮಹಿಳೆ ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಹಿಂದೂ, ಆದರೆ ಬಿಜೆಪಿ ಹಿಂದೂ ಅಲ್ಲ. ವಿಶ್ವದಲ್ಲಿ ಗಂಡು, ಹೆಣ್ಣು ಜಾತಿ ಮಾತ್ರ ಇರುವುದು. ನನಗೆ, ನಮಗೆ ಖಂಡಿತಾ ಜಾತಿ ಇಲ್ಲ. ಭಾರತ ಮಾತೆ ಅನ್ನುವವರು ಮಹಿಳೆಯರಿಗೆ ರಕ್ಷಣೆ ಕೊಡುತ್ತಿಲ್ಲ. ಸ್ವತಃ ನಾನು ಕೂಡಾ ಹಿಂಸೆ ಅನುಭವಿಸಿದ್ದೇನೆ. ಅದಕ್ಕಾಗಿ ಯಾರು ರಕ್ಷಣೆ […]

ನನ್ನ ಮಗಳ ಹೆಸರಿಗೆ ಕಥುವಾ ಸಂತ್ರಸ್ತ ಬಾಲಕಿಯ ಹೆಸರು ಜೋಡಣೆ: ಪ್ರತಿಭಾ ಕುಳಾಯಿ

Monday, April 16th, 2018
congress-mangaluru

ಮಂಗಳೂರು: ಜಮ್ಮು-ಕಾಶ್ಮೀರದ ಕಥುವಾದಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸುವ ಜತೆಗೆ, ಸಂತ್ರಸ್ತ ಬಾಲಕಿಯ ಹೆಸರನ್ನು ನನ್ನ ಮಗಳ ಹೆಸರಾದ ಪೃಥ್ವಿ ಜತೆ ಸೇರಿಸಿ ಕರೆಯುತ್ತೇನೆ ಎಂದು ಕಾಂಗ್ರೆಸ್‌ನ ಮಹಿಳಾ ನಾಯಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್‌ನ ಮಹಿಳಾ ಘಟಕದ ಸದಸ್ಯರು ಹಾಗೂ ಪುತ್ರಿ ಜತೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಾನು ಹಿಂದೂವಾಗಿದ್ದರೂ ಬಿಜೆಪಿಯ ಹಿಂದೂಗಳೆದುರು ನಾನೂ ಹಿಂದೂ ಎಂದು ಹೇಳಿಕೊಳ್ಳಲು ನಾಚಿಕೆಪಡುವ ಪರಿಸ್ಥಿತಿ ಎದುರಾಗಿದೆ ಎಂದರು. […]

ತಪ್ಪಿದ ಟಿಕೆಟ್: ಕಾರ್ಕಳದಲ್ಲಿ ಉದಯಕುಮಾರ್ ಬೆಂಬಲಿಗರಿಂದ ಪ್ರತಿಭಟನೆ

Monday, April 16th, 2018
uday-kumar

ಕಾರ್ಕಳ: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ನಿನ್ನೆ ರಾತ್ರಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ವಂಚಿತರಾಗಿರುವ ಪಕ್ಷದ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಬೆಂಬಲಿಗರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಉದಯಕುಮಾರ್ ಶೆಟ್ಟಿಯವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಅವರ ಬೆಂಬಲಿಗರಾದ ಸುಮಾರು ಮೂರು ಸಾವಿರ ಕಾಂಗ್ರೆಸ್ ಕಾರ್ಯಕರ್ತರು ಕಾರ್ಕಳ ತಾಲೂಕು ಕಚೇರಿ ಬಳಿಯಿರುವ ಶೆಟ್ಟಿಯವರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಅಲ್ಲಿಂದ ಮೆರವಣಿಗೆಯ ಮೂಲಕ ಸಾಗಿದ […]

ಕಾಂಗ್ರೆಸ್ ಹಿರಿಯ ಮುಖಂಡರಿಗೆ ಸಮ್ಮಾನ

Monday, April 16th, 2018
congress

ಮಂಗಳೂರು: ದೇಶವನ್ನು ಕಟ್ಟಿದ ಕಾಂಗ್ರೆಸ್ ಪಕ್ಷಕ್ಕೆ ದುಡಿದ ಅನೇಕ ನಾಯಕರು ಇಂದೂ ಪಕ್ಷದ ಏಳಿಗೆಗಾಗಿ ಚಿಂತಿಸುತ್ತಲೇ ಇರುತ್ತಾರೆ . ಅಂತಹ ನಾಯಕರನ್ನು ಗುರುತಿಸಿ, ಅವರು ನೀಡಿರುವ ಕೊಡುಗೆಯನ್ನು ಗುರುತಿಸಿ ಸಮ್ಮಾನಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಶಾಸಕ ಮೊದಿನ್ ಬಾವಾ ಹೇಳಿದರು. ಸುರತ್ಕಲ್ 6ನೇ ವಾರ್ಡ್‌ನ ಕಾರ್ಯಕರ್ತರ ,ನಾಯಕರ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸ್ವರೂಪವೇ ಬದಲಾಗಿದೆ. ಎಲ್ಲ ಕಡೆಗಳಲ್ಲಿ ಅಭಿವೃದ್ಧಿಯನ್ನು ಕಾಣಬಹುದಾಗಿದೆ. ಸಮುದಾಯ ಭವನ, ರಸ್ತೆ, […]

ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ… ಈ ಬಾರಿಯ ವಿಶೇಷತೆಗಳು ಇಂತಿವೆ!

Monday, April 16th, 2018
siddaramaih

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಟಿಕೆಟ್ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾರುಪತ್ಯ ಮೆರೆದಿದ್ದಾರೆ. ಜೆಡಿಎಸ್‌ನಿಂದ ಬಂದವರಿಗೆ ಟಿಕೆಟ್ ಕೊಡಿಸುವಲ್ಲಿ ಕಡೆಗೂ ಯಶಸ್ವಿಯಾಗಿದ್ದು, 12 ಹಾಲಿಗಳ ಬದಲು ಹೊಸ ಮುಖಗಳಿಗೂ ಅವಕಾಶ ನೀಡಿದ್ದಾರೆ. ಹೌದು, ನಿರೀಕ್ಷೆಯಂತೆ ಸಿಎಂ ಶಿಫಾರಸಿಗೆ ಅಂಕಿತ ಹಾಕಿರುವ ಹೈಕಮಾಂಡ್ ಸಿದ್ದು ಅಣತಿಯಂತೆ ಟಿಕೆಟ್ ಹಂಚಿಕೆ ಮಾಡಿದೆ. ಈ ಬಾರಿಯ ಟಿಕೆಟ್ ಹಂಚಿಕೆಯ ಹೈಲೈಟ್ಸ್ ಎಂದರೆ 15 ಮಹಿಳೆಯರಿಗೆ ಟಿಕೆಟ್, ಕಾಂಗ್ರೆಸ್ ಸೇರಿದ 7 ಶಾಸಕರಿಗೂ ಟಿಕೆಟ್ ನೀಡಿರುವುದು. ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್, […]