Blog Archive

ಲಾಲಾಜಿ ಅವರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ನೇಮಕ ಹಿಂಪಡೆದ ಸರಕಾರ

Monday, July 27th, 2020
lalaji mendon

ಉಡುಪಿ : ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಅವರನ್ನು ನೇಮಕ ಮಾಡಿದ ಕೆಲವೇ ಗಂಟೆಗಳಲ್ಲಿ ರಾಜ್ಯ ಸರಕಾರ ಆದೇಶವನ್ನು ಹಿಂಪಡೆದುಕೊಂಡಿದೆ. ಮಧ್ಯಾಹ್ನ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಮೆಂಡನ್ ಅವರ ಅಧ್ಯಕ್ಷ ಸ್ಥಾನವನ್ನು ಸಂಜೆ ವಾಪಸ್ ಪಡೆಯಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಈ ದಿಢೀರ್ ನಿರ್ಧಾರಕ್ಕೆ ನಿಖರವಾದ ಕಾರಣ ಏನು ಎಂಬುದು ತಿಳಿದುಬಂದಿಲ್ಲ.  ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ […]

ದಕ್ಷಿಣ ಕನ್ನಡ ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷ ರಿಗೆ ಕೋವಿಡ್ ಸೋಂಕು ದೃಢ

Friday, July 17th, 2020
MithunRai

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರಿಗೆ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ. ಈ ವಿಚಾರವನ್ನು ಸ್ವತಃ ಮಿಥುನ್ ರೈ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನನಗೆ ಕೋವಿಡ್-19 ಸೋಂಕು ತಾಗಿರುವುದು ದೃಢ ವಾಗಿದೆ. ಸದ್ಯ ನಾನೀಗ ಬೆಂಗಳೂರಿನಲ್ಲಿ ಕ್ವಾರೆಂಟೈನ್ ಆಗಿದ್ದೇನೆ. ನನ್ನ ಜೊತೆ ಕಳೆದ ಕೆಲ ದಿನಗಳಿಂದ ಹತ್ತಿರದ ಸಂಪರ್ಕದಲ್ಲಿದ್ದವರು ಕೋವಿಡ್ -19 ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮಿಥುನ್ ರೈ ಮನವಿ ಮಾಡಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ […]

ಎಪಿಎಂಸಿ ಅಧ್ಯಕ್ಷರಾಗಿ ಕೃಷ್ಣರಾಜ ಹೆಗ್ಡೆ, ಉಪಾಧ್ಯಕ್ಷರಾಗಿ ರಜನಿ ದುಗ್ಗಣ್ಣ ಆಯ್ಕೆ

Wednesday, July 15th, 2020
APMc

ಮಂಗಳೂರು : ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಹಿರಿಯ ಸದಸ್ಯ ಮೂಡಬಿದ್ರೆಯ ಕೃಷ್ಣರಾಜ ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ. ಈ ಹಿಂದೆ ಕಾರ್ಕಳ ತಾಲೂಕು ಪಂಚಾಯತ್‌ ಸದಸ್ಯರಾಗಿ,ಮಂಡಲ ಪ್ರಧಾನರಾಗಿ, ಮೂಡಬಿದ್ರೆ ಪುರಸಭೆಯ ಸದಸ್ಯರಾಗಿ, ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ, ಕೆಎಸ್‌ಆರ್‌ಟಿಸಿ ಸಲಹಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಉಪಾಧ್ಯಕ್ಷರಾಗಿ ಮಾಜಿ ಮೇಯರ್‌ ರಜನಿ ದುಗ್ಗಣ್ಣ ಆಯ್ಕೆಯಾಗಿದ್ದು, ಅವರು  ಮಂಗಳೂರು ಮಹಾನಗರ ಪಾಲಿಕೆಯ ಮೇಯರ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಉಡುಪಿ ತಾಲೂಕು ಪಂಚಾಯತ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ

Friday, August 9th, 2019
Udupi-TP

ಉಡುಪಿ, : ಉಡುಪಿ ತಾಲೂಕು ಪಂಚಾಯತ್‌ನ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ನೀತಾ ಗುರುರಾಜ್ ಪೂಜಾರಿ ಹಾಗೂ ಭುಜಂಗ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕುಂದಾಪುರ ಉಪವಿಭಾಗಾಧಿಕಾರಿ ಡಾ.ಮಧುಕೇಶ್ವರ್ ಅವರು ಚುನಾವಣಾಧಿಕಾರಿಯಾಗಿ ಉಡುಪಿ ತಾಪಂನಲ್ಲಿ ಈ ಆಯ್ಕೆ ನಡೆಯಿತು. 41 ಸದಸ್ಯ ಬಲದ ಉಡುಪಿ ತಾಲೂಕು ಪಂಚಾಯತ್‌ನಲ್ಲಿ ಬಿಜೆಪಿ 27 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತವನ್ನು ಹೊಂದಿದೆ. 2016ರ ಮೇ 26ರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ನಳಿನಿ ಪ್ರದೀಪ್ ರಾವ್ ಹಾಗೂ ರಾಜೇಂದ್ರ ಪಿ.ಪಂದಬೆಟ್ಟು ಅವರು […]

ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಯುವನಾಯಕ ವಜ್ರನಾಥ ಪಿ ಆಯ್ಕೆ

Tuesday, July 26th, 2016
Vajranatha-P

ಬಂಟ್ವಾಳ: ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಯುವನಾಯಕ ಕಲ್ಲಡ್ಕ ಮಡ್ಲಮಜಲು ವಜ್ರನಾಥ ಪಿ. ಆವರು ಆಯ್ಕೆಯಾಗಿರುತ್ತಾರೆ. ಇವರು ಅನೇಕ ಸಾರ್ವಜನಿಕ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ. ಅಲ್ಲದೆ ಪಕ್ಷದಲ್ಲಿ ಸುಮಾರು 20 ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತನಾಗಿ ದುಡಿದು ವಾರ್ಡು ಸಮಿತಿಯ ಅಧ್ಯಕ್ಷನಾಗಿ, ಗೋಳ್ತಮಜಲು ಪಂಚಾಯತ್ ಸಮಿತಿಯ ಅಧ್ಯಕ್ಷನಾಗಿ, ಕಲ್ಲಡ್ಕ ಶಾರದ ಪೂಜಾ ಉತ್ಸವ ಸಮಿತಿಯ ಉಪಾಧ್ಯಕ್ಷನಾಗಿ, ಶ್ರೀ ಗುರೂಜಿ ಸೇವಾ ಸಂಘದ ಸಕ್ರೀಯ ಸದಸ್ಯನಾಗಿರುತ್ತಾರೆ. ಇದೀಗ ಬಿ.ಜೆ.ಪಿ ಯುವ ಮೋರ್ಚಾದ ಅಧ್ಯಕ್ಷ ಪದವಿಯನ್ನು ಅರ್ಹವಾಗಿಯೇ ಪಡೆದಿರುತ್ತಾರೆ. […]

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಅಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ

Tuesday, November 17th, 2015
Jaganantha Shetty

ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್  ಅಸೋಶಿಯೇಶನ್ ದ.ಕ ಜಿಲ್ಲೆ-ಉಡುಪಿ ಜಿಲ್ಲೆ ಇದರ ನೂತನ ಅಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ ಮಂಗಳೂರು ಆಯ್ಕೆಯಾಗಿದ್ದಾರೆ. ಸಲಹಾ ಸಮಿತಿ ಸಂಚಾಲಕರಾಗಿ ವಿಠಲ ಚೌಟ ಮಂಗಳೂರು , ಉಪಾಧ್ಯಕ್ಷರುಗಳಾಗಿ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್ ಬೆಳ್ತಂಗಡಿ , ಶ್ರೀಧರ ಶೆಟ್ಟಿಗಾರ್ ಉಡುಪಿ, ಪ್ರಧಾನ ಕಾರ್ಯದರ್ಶಿ ಮಧು ಮಂಗಳೂರು, ಕೋಶಾಧಿಕಾರಿ ದಯಾನಂದ ಬಂಟ್ವಾಳ್, ಜತೆ ಕಾರ್ಯದರ್ಶಿ ಗಳಾಗಿ ದತ್ತಾತ್ರೇಯ ಕಾರ್ಕಳ, ವಿನೋದ್ ಕಾಂಚನ್ ಕಾಪು, ಸಂಘಟನಾ ಕಾರ್ಯದರ್ಶಿಯಾಗಿ ಸತೀಶ್ ಕೊಂಡಾಡಿ ಬ್ರಹ್ಮಾವರ, ಅಭಯಚಂದ್ರ ಮೂಡಬಿದರೆ, ಸಾರ್ವಜನಿಕ ಸಂಪರ್ಕಾಧಿಕಾರಿ ಭಕ್ತಪ್ರಸಾದ್ […]

ಮಂಗಳೂರು ತಾ: ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ/ಉಪಾಧ್ಯಕ್ಷ ಮೀಸಲಾತಿ ಪಟ್ಟಿ

Monday, June 8th, 2015
GP Reservation

ಮಂಗಳೂರು : ಮಂಗಳೂರು ತಾಲೂಕು ವ್ಯಾಪ್ತಿಯ ಗ್ರಾಮ ಪಂಚಯತುಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಸೋಮವಾರ ನಡೆಸಲಾಯಿತು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಉಪಸ್ಥಿತಿಯಲ್ಲಿ ಮೀಸಲಾತಿಗಳನ್ನು ಗ್ರಾಮ ಪಂಚಾಯತ್ ಸದಸ್ಯರ ಸಮಕ್ಷಮದಲ್ಲಿ ನಿಗದಿಪಡಿಸಲಾಯಿತು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮಿಸಲಾತಿ ನಿಗದಿ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಮಂಗಳೂರು ಉಪವಿಭಾಗಾಧಿಕಾರಿ ಡಾ.ಅಶೋಕ್ ಉಪಸ್ಥಿತರಿದ್ದರು. ಮೀಸಲಾತಿ ವಿವರ ಇಂತಿವೆ; ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಅಡ್ಯಾರ್ ಪರಿಶಿಷ್ಟ ಜಾತಿ ಸಾಮಾನ್ಯ (ಮ) ಐಕಳ ಸಾಮಾನ್ಯ ಪರಿಶಿಷ್ಟ ಜಾತಿ (ಮ) […]

ಭಾರತೀಯ ವೈದ್ಯಕೀಯ ಶಾಸ್ತ್ರ ತಜ್ಞರ ಸಂಘ (ಎ.ಪಿ.ಐ.) ಅಧ್ಯಕ್ಷರಾಗಿ ಡಾ| ಎಚ್. ಪ್ರಭಾಕರ ಆಯ್ಕೆ

Saturday, March 28th, 2015
H Prabhakar

ಮಂಗಳೂರು: ನಗರದ ಖ್ಯಾತ ಹೃದ್ರೋಗ ಶಾಸ್ತ್ರತಜ್ಞ ಹಾಗೂ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ| ಎಚ್. ಪ್ರಭಾಕರ್ ರವರು ಪ್ರತಿಷ್ಟಿತ ಭಾರತೀಯ ವೈದ್ಯಕೀಯ ಶಾಸ್ತ್ರ ತಜ್ಞರ ಸಂಘದ ದ.ಕ. ಜಿಲ್ಲಾ ಶಾಖೆಯ ೨೦೧೫-೧೬ನೇ ಸಾಲಿನ ಅಧ್ಯಕ್ಷರಾಗಿ ಇತ್ತೀಚೆಗೆ ಜರಗಿದ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ೦೧.೦೪.೨೦೧೫ರಿಂದ ಅಧಿಕಾರವನ್ನು ಸ್ವೀಕರಿಸಲಿದ್ದಾರೆ. ಡಾ| ರಾಘವ ಶರ್ಮ ಉಪಾಧ್ಯಕ್ಷರಾಗಿ, ಡಾ| ಸುನಿಲ್ ಕುಮಾರ್ ರವರು ಕಾರ್ಯದರ್ಶಿಯಾಗಿ ಹಾಗೂ ಡಾ| […]

ಮುಂಬಯಿ ಬಿಲ್ಲವರ ಅಸೋಸಿಯೇಶನ್ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ. ಕೋಟ್ಯಾನ್ ಅಯ್ಕೆ

Saturday, August 9th, 2014
Billava Mumbai

ಮುಂಬಯಿ: ನಗರದ ಹಿರಿಯ ಸಾಮಾಜಿಕ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ. ಕೋಟ್ಯಾನ್ ಆಯ್ಕೆಯಾದರು. ಕಳೆದ ಶುಕ್ರವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ಜರಗಿದ ಬಿಲ್ಲವರ ಅಸೋಸಿಯೇಶನ್ನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಡೆಸಲಾದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಿತ್ಯಾನಂದ ಡಿ.ಕೋಟ್ಯಾನ್ ನೂತನ ಅಧ್ಯಕ್ಷರಾಗಿ, ಜ್ಯೋತಿ ಕೆ.ಸುವರ್ಣ ಅವರು ಉಪಾಧ್ಯಕ್ಷ, ಡಾ| (ನ್ಯಾಯವಾದಿ) ಯು. ಧನಂಜಯ ಕುಮಾರ್ ಅವರು ನೂತನ ಗೌರವ ಪ್ರಧಾನ ಕಾರ್ಯ ದರ್ಶಿ ಆಗಿ ಆಯ್ಕೆಯಾದರು. ಕಳೆದ 23 […]