ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ವಿಚಾರಣೆಯನ್ನು ತಿರಸ್ಕರಿಸಿದ ದೆಹಲಿಯ ಹಸಿರು ಪೀಠ
Thursday, July 28th, 2016ಮಂಗಳೂರು: ರಾಜ್ಯದ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ವಿಚಾರಣೆಯನ್ನು ಮರಳಿ ಚೆನ್ನೈ ಹಸಿರು ಪೀಠಕ್ಕೆ ವರ್ಗಾಯಿಸಬೇಕು ಎಂಬ ಕರ್ನಾಟಕ ನೀರಾವರಿ ನಿಗಮ(ಕೆಎನ್ಎನ್ಎಲ್)ದ ಬೇಡಿಕೆಯನ್ನು ದೆಹಲಿಯ ಹಸಿರು ಪೀಠ ತಿರಸ್ಕರಿಸಿದೆ. ಎತ್ತಿನಹೊಳೆ ಯೋಜನೆ ಜಾರಿ ವಿರುದ್ಧದ ಎಲ್ಲಾ ನಾಲ್ಕು ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ಪಂಚ ಸದಸ್ಯರ ಹಸಿರು ಪೀಠ, ಕೆಎನ್ಎನ್ಎಲ್ ಪರವಾಗಿ ವಕೀಲ ನವೀನ್ ಆರ್.ನಾಥ್ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿತು. ಎತ್ತಿನಹೊಳೆ ಯೋಜನೆ ಜಾರಿ ವಿರುದ್ಧದ ನಾಲ್ಕು ಪ್ರಕರಣಗಳನ್ನು ತಾಂತ್ರಿಕ ಕಾರಣಗಳಿಗೆ ಚೆನ್ನೈ ಹಸಿರು ಪೀಠದಿಂದ ದೆಹಲಿಯ ಮುಖ್ಯ ಪೀಠಕ್ಕೆ […]