Blog Archive

ನೀವು ಎಲ್ಲೇ ಹೋಗಿ ರೋಮಿಂಗ್ ಪ್ರೀ

Monday, October 10th, 2011
Kapil-Sibal

ನವ ದೆಹಲಿ : ರಾಷ್ಟ್ರಾದ್ಯಂತ ಮೊಬೈಲ್‌ ಸೇವೆಯನ್ನು ರೋಮಿಂಗ್‌ನಿಂದ ಮುಕ್ತಗೊಳಿಲು ಕೇಂದ್ರ ಸರಕಾರವು ಹೊಸ ದೂರ ಸಂಪರ್ಕ ನೀತಿಯನ್ನು ಜಾರಿಗೊಳಿಸಲು ಸಜ್ಜಾಗಿದ್ದು, ಈ ಮೂಲಕ ಜನತೆಗೆ ಹೊಸ ಕೊಡುಗೆ ನೀಡಲು ಮುಂದಾಗಿದೆ. ಕೇಂದ್ರದ ಹೊಸ ದೂರ ಸಂಪರ್ಕ ನೀತಿ – 2011 ಮುಂದಿನ ವಾರ ಪ್ರಕಟಗೊಳ್ಳುವ ನಿರೀಕ್ಷೆಯಿದ್ದು, ಬಂಡವಾಳ ಹೂಡಿಕೆಗೆ ಹೊಸ ದೂರ ಸಂಪರ್ಕ ಹಣಕಾಸು ನಿಗಮ ಸ್ಥಾಪನೆ, ಖಾಸಗಿ ದೂರವಾಣಿ ಕಂಪನಿಗಳು ಲೈಸೆನ್ಸ್‌ ಮರಳಿಸಲು ಅವಕಾಶ ಕೊಡುವುದು ಸೇರಿದಂತೆ ಹಲವಾರು ಅಂಶಗಳಿರುವ ದೂರ ಸಂಪರ್ಕ ನೀತಿಯನ್ನು […]

ಅಣ್ಣಾ ಬೇಡಿಕೆ : ಕೊನೆಗೂ ಧ್ವನಿಮತದಿಂದ ಸಮ್ಮತಿಸಿದ ಸರಕಾರ

Saturday, August 27th, 2011
Anna Hazare/ ಅಣ್ಣಾ ಹಜಾರೆ

ನವ ದೆಹಲಿ: ಲೋಕಸಭೆಯಲ್ಲಿ ಲೋಕಪಾಲ ಮಸೂದೆಯ ಚರ್ಚೆಯ ನಂತರ ಸಂಸತ್ತಿನಲ್ಲಿ ಧ್ವನಿಮತದ ಪ್ರಸ್ತಾವನೆಗೆ ಕೊನೆಗೂ ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಲೋಕಪಾಲ ಚರ್ಚೆಯ ನಂತರ ಧ್ವನಿಮತಕ್ಕೆ ಹಾಕುವ ಕೇಂದ್ರ ಸರಕಾರದ ನಿರ್ಧಾರದಿಂದ ಸಂತೋಷವಾಗಿದೆ ಎಂದು ಅಣ್ಣಾ ತಂಡದ ಸದಸ್ಯರಾದ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಸಂಸತ್ತಿನಲ್ಲಿ ನಿರ್ಣಯ ಅಂಗೀಕಾರವಾದ ನಂತರ ಪ್ರಧಾನಿಮಂತ್ರಿ ಮನಮೋಹನ್ ಸಿಂಗ್ ಅವರ ಪತ್ರದೊಂದಿಗೆ ಕೇಂದ್ರ ಸಚಿವ ವಿಲಾಸರಾವ್ ದೇಶಮುಖ್, ಅಣ್ಣಾ ಹಜಾರೆಯವರ ಭೇಟಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಣ್ಣಾ ಹಜಾರೆ, ಜನಲೋಕಪಾಲ ಮಸೂದೆ ಜಾರಿಗೊಳಿಸುವಂತೆ […]

ಕೇಂದ್ರ ಸರಕಾರದ ವಿರುದ್ಧ ಆರೆಸ್ಸೆಸ್ ನಿಂದ ಪ್ರತಿಭಟನಾ ಧರಣಿ

Wednesday, November 10th, 2010
ಕೇಂದ್ರ ಸರಕಾರದ ವಿರುದ್ಧ ಆರೆಸ್ಸೆಸ್ ನಿಂದ ಪ್ರತಿಭಟನಾ ಧರಣಿ

ಮಂಗಳೂರು : 85 ವರ್ಷಗಳ ತನ್ನ ಸುದೀರ್ಘಯಾನದಲ್ಲಿ ಆರೆಸ್ಸೆಸ್ ಯಾವಾಗಲೂ ಸಾಂವಿಧಾನಿಕ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳಲ್ನು ಎತ್ತಿ ಹಿಡಿಯುತ್ತಾ ಬಂದಿದೆ. ಹಾಗೆಯೇ ನಾಡಿನ ಶಾಸನಕ್ಕೆ ಅದೆಂದೂ ಅತೀತವಾಗಿ ನಡೆದುಕೊಂಡಿಲ್ಲ. ಮಹಾತ್ಮ ಗಾಂಧಿಯವರ ಹತ್ಯೆ, ತುತರ್ು ಪರಿಸ್ಥತಿಯಂತಹ ಸಂದರ್ಭದಲ್ಲಿ ಆಳುವವರು ಸ್ವತಃ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿ, ಸುಳ್ಳು ಪ್ರಕರಣಗಳಲ್ಲಿ ಆರೆಸ್ಸೆಸ್ ಅನ್ನು ಸಿಲುಕಿದ ಅತ್ಯಂತ ಪ್ರಚೋದನಾತ್ಮಕ ಸನ್ನಿವೇಶಗಳಲ್ಲಿ ಕೂಡ ಈ ಸಂಘಟನೆ ಶಾಸನಕ್ಕೆ ವಿಧೇಯವಾಗಿ ಮತ್ತು ಜವಾಬ್ದಾರಿಯಿಂದ ನಡೆದುಕೊಂಡಿದೆ. ಇಂತಹ ಒಂದು ಸಂಘಟನೆಗೆ ಇವತ್ತು ಕೆಲವರು ಭಯೋತ್ಪಾದನೆಯ ಹಣೆಪಟ್ಟಿ […]