Blog Archive

ಖಾಸಗಿ ಬಸ್-ಬೈಕ್ ಡಿಕ್ಕಿ: ಯುವಕ ಮೃತ್ಯು

Thursday, February 25th, 2016
sampath

ಕುಂಬಳೆ: ಖಾಸಗಿ ಬಸ್ ಮತ್ತು ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರರಾದ ಯುವಕ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಪೆರ್ಲ ಸಮೀಪದ ಶೇಣಿ ನಡುಬೈಲು ನಿವಾಸಿ ದಿ.ಅಮ್ಮು ರೈ ಮತ್ತು ಧೂಮಕ್ಕ ದಂಪತಿಯ ಪುತ್ರ ಸಂಪತ್ (28) ಸಾವನ್ನಪ್ಪಿದ ಯುವಕ. ಅಂಗಡಿಮೊಗರು ಬಳಿಯ ನಾಟೆಕಲ್ಲು ಕೋರೆ ಪರಿಸರದ ರಸ್ತೆಯಲ್ಲಿ ಗುರುವಾರ ಪೂರ್ವಾಹ್ನ ಈ ದುರ್ಘಟನೆ ಸಂಭವಿಸಿದೆ. ಸಂಪತ್ ಬೈಕ್‌ನಲ್ಲಿ ಸೀತಾಂಗೋಳಿ ಬರುತ್ತಿದ್ದರು. ಈ ವೇಳೆ ಕುಂಬಳೆಯಿಂದ ಪೆರ್ಲಕ್ಕೆ ಹೋಗುತ್ತಿದ್ದ ಮಹಾಲಕ್ಷ್ಮಿ ಖಾಸಗಿ ಬಸ್ ಮತ್ತು ಬೈಕ್ ಪರಸ್ಪರ […]

ಮುಂಬಯಿ- ಮಂಗಳೂರು ಖಾಸಗಿ ಬಸ್ಸಿನಲ್ಲಿ ಪ್ರಜ್ಞೆ ತಪ್ಪಿಸಿ ಪ್ರಯಾಣಿಕನ ಲೂಟಿ

Friday, August 5th, 2011
Bus-Passenger-Luted/ಬಸ್ಸಿನಲ್ಲಿ ಪ್ರಜ್ಞೆ ತಪ್ಪಿಸಿ ಪ್ರಯಾಣಿಕನ ಲೂಟಿ

ಮಂಗಳೂರು : ಮುಂಬಯಿನಿಂದ ಮಂಗಳೂರಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸಿದ್ದ ಕಾಸರಗೋಡಿನ ಕುಂಬಳೆಯ ವಿಶ್ವನಾಥ ಶೆಟ್ಟಿ (36) ಯವರನ್ನು ಬುಧವಾರ ರಾತ್ರಿ ಮತ್ತು ಬರುವ ಪದಾರ್ಥ ನೀಡಿ. ಪ್ರಜ್ಞೆ ತಪ್ಪಿಸಿ ನಗದು ಹಾಗೂ ಚಿನ್ನಾಭರಣಗಳನ್ನು ಲೂಟಿಗೈಯಲಾಗಿದೆ. ಮಂಗಳೂರಿಗೆ ತಲುಪುವಾಗ ಅರೆ ಪ್ರಜ್ಞಾವಸ್ಥೆಯಲ್ಲಿ ಉಟ್ಟ ಬಟ್ಟೆ ಮತ್ತು ಮೊಬೈಲ್‌ ಫೋನ್‌ ಹೊರತು ಪಡಿಸಿ ಉಳಿದೆಲ್ಲವನ್ನೂ ಕಳೆದುಕೊಂಡಿದ್ದಾರೆ. ಬುಧವಾರ ಮಧ್ಯಾಹ್ನ ಮುಂಬಯಿನ ಮಲಾಡ್‌ನಿಂದ ಖಾಸಗಿ ಸಂಸ್ಥೆಯ ವೋಲ್ವೊ ಬಸ್ಸನ್ನೇರಿದ ವಿಶ್ವನಾಥ ಶೆಟ್ಟಿ ಅವರು ಗುರುವಾರ ಪೂರ್ವಾಹ್ನ 10.30 ಕ್ಕೆ ಮಂಗಳೂರಿಗೆ ತಲುಪಿದಾಗ […]

ಸರಕಾರದ ಆದೇಶದಂತೆ ಶೀಘ್ರದಲ್ಲೇ ಖಾಸಗಿ ಬಸ್ಸ್ ದರ ಏರಿಕೆ : ಜಿಲ್ಲಾಧಿಕಾರಿ

Saturday, July 16th, 2011
Bus Meeting/ಬಸ್ಸ್ ದರ ಏರಿಕೆ

ಮಂಗಳೂರು : ಖಾಸಗಿ ಬಸ್ ಮಾಲೀಕರು ಇತ್ತೀಚಿನ ದಿನಗಳಲ್ಲಿ ಇಂಧನ, ವಾಹನದ ಬಿಡಿಭಾಗಗಳ ಬೆಲೆ ಏರುತ್ತಿರುವುದರಿಂದ ಖಾಸಗಿ ಬಸ್ ಪ್ರಯಾಣದರ ಏರಿಸಬೇಕು ಮನವಿ ಸಲ್ಲಿಸಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ದರ ಏರಿಕೆಯ ಕುರಿತು ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳ ತಿಳಿಸಿದರು. ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ಅವರ ಕಚೇರಿಯ ಸಭಾಂಗಣದಲ್ಲಿ ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು ಬಸ್ ಪ್ರಯಾಣದರ ನಿಗಧಿಗೆ ಸರಕಾರದ ಮಾರ್ಗದರ್ಶನದಂತೆ […]