ಮನುಷ್ಯ ಸಂಬಂಧ ವೃದ್ಧಿ ವರ್ತಮಾನದ ತುರ್ತು : ಡಾ. ಕೈರೋಡಿ
Monday, February 29th, 2016ಬಂಟ್ವಾಳ: ಕಳೆದ ಎರಡು ದಶಕಗಳಿಂದೀಚೆಗೆ ಯಾಂತ್ರಿಕವಾಗಿ, ಸೌಲಭ್ಯ ಕೇಂದ್ರಿತವಾಗಿ ಸಾಕಷ್ಟು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ ಮನುಷ್ಯ ಮನುಷ್ಯನೊಂದಿಗೆ ಅರಿತು ಬೆರೆತು ಬದುಕುವ ವಾತಾವರಣ ಕ್ಷಿಣಿಸುತ್ತಿವೆ. ಸ್ವಾರ್ಥಪರ ಹಾಗೂ ಸಂಕುಚಿತ ಮನೋಭಾವ ಬಿತ್ತುವ ಸಂಗತಿಗಳೇ ವಿಜೃಂಭಿಸುತ್ತಿವೆ. ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ನುಡಿದರು. ಅವರು ಬಂಟ್ವಾಳ ತಾಲೂಕಿನ ಕುಕ್ಕಿಪಾಡಿಯ ನೇಲ್ಯಕುವೇರಿನಲ್ಲಿ ಯುವ ಫ್ರೆಂಡ್ಸ್ ಬಳಗದ ವತಿಯಿಂದ ನಡೆದ ಸಾಂಸ್ಕೃತಿಕ ಉತ್ಸವವನ್ನು ಉದ್ಟಾಟಿಸಿ ಮಾತನಾಡುತ್ತಿದ್ದರು. ಭತ್ತದ ಕೃಷಿಯಲ್ಲಿ ಹಾಸು ಹೊಕ್ಕಾಗಿದ್ದ ಮನುಷ್ಯ ಭಾಂಧವ್ಯವಾಗಲಿ ಜನಪದ […]