Blog Archive

ಬ್ರಹ್ಮಕಲಶೋತ್ಸವಗಳಿಂದ ಶಕ್ತಿಸಂಚಯನ: ಡಾ. ಡಿ. ವೀರೇಂದ್ರ ಹೆಗ್ಗಡೆ

Tuesday, March 20th, 2018
veerendra-hegde

ಮೂಲ್ಕಿ: ದೇವಸ್ಥಾನಗಳಲ್ಲಿ ನಡೆಯುವ ಬ್ರಹ್ಮಕಲಶ ವಿಧಿವಿಧಾನಗಳು ಕ್ಷೇತ್ರ ಸಾನ್ನಿಧ್ಯದ ಶಕ್ತಿಯನ್ನು ಸಂಚಯನಗೊಳಿಸಿ ಭಕ್ತ ಸಮುದಾಯಕ್ಕೆ ಮತ್ತು ಊರಿಗೆ ಕ್ಷೇಮವನ್ನು ಉಂಟು ಮಾಡುತ್ತವೆ, ಈ ಕಾರ್ಯದಿಂದ ನಾಡಿನ ಪ್ರಜೆಗಳಲ್ಲಿ ಒಗ್ಗಟ್ಟು ಮತ್ತು ಸಾಮೂಹಿಕ ಸಾಮರಸ್ಯದ ಶಕ್ತಿ ಉಂಟಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಾರತೀಯ ಪರಂಪರೆಯಲ್ಲಿ ಅಧ್ಯಾತ್ಮ ಸಂಪತ್ತು ತುಂಬಿ ತುಳುಕುತ್ತಿದೆ. ಈ […]

ದೇವರಲ್ಲಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಪ್ರತಿಫಲ ಸಿಗುತ್ತದೆ : ವೀರಪ್ಪ ಮೊಯಿಲಿ

Friday, February 23rd, 2018
kudupu

ಮಂಗಳೂರು: ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಕಳೆದ ಐದು ವರ್ಷಗಳಿಂದ ಪರಿಶ್ರಮದಿಂದ ನಡೆಯುತ್ತಾ ಬಂದಿದೆ. ದ.ಕ. ಉಡುಪಿಯಲ್ಲಿರುವ ಬಹಳಷ್ಟು ಹಳೇ ದೇವಸ್ಥಾನಗಳು ಪುನರುತ್ಥಾನವಾಗುತ್ತಿದೆ. ಕುಡುಪು ದೇವಸ್ಥಾನದಲ್ಲಿ ಉತ್ತಮ ಮನಸ್ಸಿನಿಂದ ಬಂದು ಪ್ರಾರ್ಥನೆ ಮಾಡಿದರೆ ಜೀವನ ಸಾರ್ಥಕವಾಗುತ್ತದೆ. ಮನುಷ್ಯನಲ್ಲಿ ಶ್ರದ್ಧೆ, ಭಕ್ತಿ , ವಿಶ್ವಾಸ ಮುಖ್ಯ. ದೈಹಿಕ ಶುದ್ಧಿ ಮಾಡಿ ದೇವರಲ್ಲಿ ಪ್ರಾರ್ಥನೆ ಮಾಡಿದರೆ ಶೂನ್ಯತೆಯಲ್ಲಿರುವ ಮನಸು ತುಂಬುತ್ತವೆ. ಇದರಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ದೇವಸ್ಥಾನಕ್ಕೆ ಉತ್ತಮ ಸಂಸ್ಕೃತಿ ಇದೆ. ಇದನ್ನು ಉತ್ತಮ […]

ಮಂಗಳವಾರ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ 108 ಮಹಾ ಆಶ್ಲೇಷ ಬಲಿ ಪೂಜೆ

Monday, February 19th, 2018
kudupu-anantha

ಮಂಗಳೂರು : ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧಾನ ಕ್ಷೇತ್ರ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯುತ್ತಿದ್ದು ಇಂದು ಪಂಚಮಿಯ ವಿಶೇಷ ಪರ್ವದಿನ. ಕ್ಷೇತ್ರದಲ್ಲಿ ನಾಗವನದಲ್ಲಿರುವ ನಾಗನ ಶಿಲಾ ಬಿಂಬಗಳಿಗೆ ಕಲಾಭಿಷೇಕ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ ನಡೆದು ತಂಬಿಲ ಸೇವೆಯೊಂದಿಗೆ ವಿಶಷ ಮಹಾಪೂಜೆ ನಾಗವನದಲ್ಲಿ ನಡೆಯಲಿದೆ. ಮಧ್ಯಾಹ್ನ ಅನಂತ ಪದ್ಮನಾಭ ದೇವರಿಗೆ ವಿಶೇಷ ಮಹಾಪೂಜೆ ಜರಗಿ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಜೀರ್ಣೋಧ್ದಾರ ಸಮಿತಿಯ ವತಿಯಿಂದ ಸಂಜೆ 5.30 ಕ್ಕೆ […]

ಫೆ.18ರಿಂದ ಫೆ. 25ರವರೆಗೆ ಕುಡುಪು ದೇವಳದಲ್ಲಿ ಬ್ರಹ್ಮಕಲಶೋತ್ಸವ

Saturday, February 3rd, 2018
Kudupu Temple

ಮಂಗಳೂರು: ಸುಮಾರು ನೂರು ವರ್ಷಗಳ ನಂತರ  ಇತಿಹಾಸ ಪ್ರಸಿದ್ಧ ಕ್ಷೇತ್ರ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಿದ್ಧತೆ ನಡೆಯುತ್ತಿದೆ. ಫೆ.18ರಿಂದ ಫೆ. 25ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಇದು  ಶತಮಾನದ ವೈಭವದ ಬ್ರಹ್ಮಕಲಶಾಭಿಷೇಕ ಎಂದು ವಾಸ್ತು ತಜ್ಞ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಕೆ.ಕೃಷ್ಣರಾಜ ತಂತ್ರಿ ತಿಳಿಸಿದರು. ಕ್ಷೇತ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಫೆ. 25ರಂದು ಅನಂತ ಪದ್ಮನಾಭ ದೇವರಿಗೆ  ಬೆಳಗ್ಗೆ 6:45ರಿಂದ 7:45ರವರೆಗೆ ಬ್ರಹ್ಮಕಲಶಾಭಿಷೇಕ  ನಡೆಯಲಿದೆ ಎಂದು ತಿಳಿಸಿದರು. ಧಾರ್ಮಿಕ ದತ್ತಿ ಇಲಾಖೆಯಿಂದ ಅನುಮೋದಿಸಲ್ಪಟ್ಟ 21 […]

ಶಾಂತಿಪಳಿಕೆ ಮಿತ್ತಮೊಗರಾಯ ದೈವಸ್ಥಾನದ ಭಂಡಾರ ಸ್ಥಾನದ ಬ್ರಹ್ಮಕಲಶೋತ್ಸವ

Monday, May 8th, 2017
Shree Mittamogaraya Bhandara Sthana, Shanthipalike

ವರ್ಕಾಡಿ : ಶಾಂತಿಪಳಿಕೆ ವರ್ಕಾಡಿ ಶ್ರೀ ಮಿತ್ತಮೊಗರಾಯ ದೈವಸ್ಥಾನದ ಭಂಡಾರಸ್ಥಾನದ ಬ್ರಹ್ಮಕಲಶೋತ್ಸವವು ತಂತ್ರಿವರ್ಯರಾದ ವೇದ ಮೂರ್ತಿ ವರ್ಕಾಡಿ ಹೊಸಮನೆ ರಾಜೇಶ್ ತಾಳಿತ್ತಾಯರ ದಿವ್ಯ ಹಸ್ತದಿಂದ ಮೇ 7 ರ ಭಾನುವಾರ ಬೆಳಿಗ್ಗೆ  10.20 ರ ಮಿಥುನ ಲಗ್ನದಲ್ಲಿ ವಿವಿಧ ವೈಧಿಕ ವಿಧಿವಿಧಾನಗಳಿಂದ ನಡೆಯಿತು. ಮಿತ್ತಮೊಗರಾಯ ದೈವವು ನರಿಂಗಾನ ಮತ್ತು ವರ್ಕಾಡಿ ಗ್ರಾಮಸ್ಥರ ಆರಾಧ್ಯ ದೈವ, ಸುಮಾರು 800 ವರ್ಷಗಳ ಇತಿಹಾಸವಿರುವ ಈ ದೈವಕ್ಕೆ ಎರಡು ಸ್ಥಳಗಳಲ್ಲಿ ನೇಮ ನಡೆಯುತ್ತದೆ. ಊರಿನ ಭಕ್ತಾದಿಗಳಲ್ಲದೆ ಪರವೂರಿನವರು ಈ ದೈವವನ್ನು ಆರಾಧಿಸುತ್ತಾರೆ. […]

ಕರಾವಳಿ ಜಿಲ್ಲೆಯಲ್ಲಿ ಕೋಮುಸಾಮರಸ್ಯಕ್ಕೆ ಸಾಕ್ಷಿಯಾದ ಉಳ್ಳಾಲದ ಬ್ರಹ್ಮಕಲಶೋತ್ಸವ ಮೆರವಣಿಗೆ

Saturday, January 7th, 2017
Ullala

ಮಂಗಳೂರು: ಕೋಮು ಗಲಭೆಯಿಂದಲೇ ಸುದ್ದಿಯಲ್ಲಿರುವ ಕರಾವಳಿ ಜಿಲ್ಲೆ ಇದೀಗ ಕೋಮುಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಹೌದು, ಉಳ್ಳಾಲದ ಬ್ರಹ್ಮಕಲಶೋತ್ಸವ ಮೆರವಣಿಗೆಯನ್ನು ಮುಸ್ಲಿಂ ಬಾಂಧವರು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿ, ಭಕ್ತರಿಗೆ ತಂಪುಪಾನೀಯ ಪೂರೈಸಿದರು. ಉಳ್ಳಾಲದ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶುಕ್ರವಾರ ತೊಕ್ಕೊಟ್ಟಿನಿಂದ ಕ್ಷೇತ್ರದವರೆಗೆ ಹಸಿರುವಾಣಿ ಹೊರೆಕಾಣಿಕೆ ವೈಭವದ ಮೆರವಣಿಗೆ ನಡೆಯಿತು. ಈ ವೇಳೆ ಮೆರವಣಿಗೆಯನ್ನು ಮಾಸ್ತಿಕಟ್ಟೆಯಲ್ಲಿ ಮುಸ್ಲಿಂ ಬಾಂಧವರು ಸ್ವಾಗತಿಸಿದರು. ಜೊತೆಗೆ ತಂಪುಪಾನೀಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕೂಡಾ ಮಾಡಿದರು. ಸಾವಿರಕ್ಕೂ ಹೆಚ್ಚು ಮಂದಿ […]