Blog Archive

ಹರಿನಾರಾಯಣ ಅಸ್ರಣ್ಣ ಮನೆಗೆ ಯು.ಟಿ.ಖಾದರ್ ಭೇಟಿ..ಕುಟುಂಬಕ್ಕೆ ಸದಸ್ಯರಿಗೆ ಸಾಂತ್ವಾನ!

Monday, July 30th, 2018
u-t-kader

ಮಂಗಳೂರು: ಇತ್ತೀಚೆಗೆ ನಡೆದ ವಾಹನ ಅಪಘಾತದಲ್ಲಿ ಮೃತ ಪಟ್ಟಿದ್ದ ಕಟೀಲು ದೇವಸ್ಥಾನದ ಅರ್ಚಕರಾದ ಹರಿನಾರಾಯಣ ಅಸ್ರಣ್ಣ ಅವರ ಪುತ್ರ ಶ್ರೀನಿಧಿರವರ ಮನೆಗೆ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ಯು.ಟಿ.ಖಾದರ್ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಟೀಲು ದೇವಾಲಯದ ಅರ್ಚಕರು ನೆಲಮಂಗಲದಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇಂದು ಖಾದರ್ರವರು ಮೃತರ ಮನೆಗೆ ತೆರಳಿ ಹೆತ್ತವರಿಗೆ ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು. ಮೃತರು […]

ಗಾಂಧೀಜಿಯನ್ನೇ ಕೊಂದವರನ್ನು ವೈಭವಿಕರಿಸುವವರ ಬಗ್ಗೆ ಮಾತಾಡಿ ಪ್ರಯೋಜನವಿಲ್ಲ: ಯು ಟಿ ಖಾದರ್

Friday, July 27th, 2018
u-t-kadher

ಮಂಗಳೂರು: ‘ಗೃಹಸಚಿವನಾಗಿದ್ದರೆ ಬುದ್ಧಿಜೀವಿಗಳಿಗೆ ಗುಂಡು ಹಾರಿಸಲು ಹೇಳುತ್ತಿದ್ದೆ’ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಹೇಳಿಕೆಗೆ ಮಂಗಳೂರಿನಲ್ಲಿ ಸಚಿವ ಯು ಟಿ ಖಾದರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‘ಮಹಾತ್ಮ ಗಾಂಧೀಜಿಯನ್ನೇ ಕೊಂದವರನ್ನು ವೈಭವಿಕರಿಸುವವರ ಬಗ್ಗೆ ಮಾತಾಡಿ ಪ್ರಯೋಜನವಿಲ್ಲ. ಅವರನ್ನು ಆಯ್ಕೆ ಮಾಡಿರುವ ಆ ಕ್ಷೇತ್ರದ ಜನರು ಆಲೋಚಿಸಬೇಕು’ ಎಂದರು. ಅಷ್ಟೆ ಅಲ್ಲದೇ, ಇವರ ಹೇಳಿಕೆ ಬಗ್ಗೆ ಸ್ಥಳೀಯ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸುತ್ತದೆ ಎಂದು ಸಚಿವ ಖಾದರ್ ತಿಳಿಸಿದರು.

ಸಚಿವ ಯು.ಟಿ ಖಾದರ್ ಉಡುಪಿಗೆ ಭೇಟಿ..ಸ್ವಾಮೀಜಿ ಸಮಾಧಿಗೆ ನಮನ!

Friday, July 20th, 2018
u-t-kadher

ಉಡುಪಿ: ಶೀರೂರು ಶ್ರೀಲಕ್ಷ್ಮೀವರ ಸ್ವಾಮೀಜಿ ಅಕಾಲಿಕ ನಿಧನದ ಬಳಿಕ ಉಡುಪಿಗೆ ಭೇಟಿ ನೀಡಿದ್ದ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಅವರು ಸ್ವಾಮೀಜಿ ಸಮಾಧಿಗೆ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ನಾನು‌ ಆತ್ಮೀಯತೆಯಿಂದ ಸಹೋದರತೆಯಿಂದ ಇಲ್ಲಿಗೆ ಆಗಮಿಸಿದ್ದೇನೆಯೇ ಹೊರತು ಸರ್ಕಾರದ ಪ್ರತಿನಿಧಿಯಾಗಲ್ಲ. ಅಷ್ಟೇ ಅಲ್ಲದೆ, ಶೀರೂರು ಶ್ರೀಗಳೊಂದಿಗೆ ಮೊದಲಿನಿಂದಲೂ ಒಡನಾಟ ಹೊಂದಿದ್ದೆ. ಅವರ ಅಂತ್ಯಸಂಸ್ಕಾರದ ವೇಳೆ ಬರಲು ಸಾಧ್ಯವಾಗದ ಹಿನ್ನಲೆ ಇಂದು ಆಗಮಿಸಿ ಸಮಾಧಿಗೆ ಸಮನ ಸಲ್ಲಿಸಿರುವುದಾಗಿ ತಿಳಿಸಿದರು. ಶ್ರೀಗಳ ಸಾವಿನ ವಿಷಯಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, […]

ಶಿರಾಡಿ ಘಾಟ್ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ: ಯು.ಟಿ.ಖಾದರ್

Monday, July 16th, 2018
kader-meeting

ಮಂಗಳೂರು: ಕಾಂಕ್ರೀಟ್ ರಸ್ತೆ ಕಾಮಗಾರಿ ಬಳಿಕ ಶಿರಾಡಿ ಘಾಟ್ ಮಾರ್ಗ ವಾಹನಗಳಿಗೆ ಮುಕ್ತವಾಗಿದೆ. ಆದರೆ, ಲಘು ವಾಹನಗಳು ಮಾತ್ರ ಸಂಚಾರ ನಡೆಸಬಹುದು. ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅಭಿವೃದ್ಧಿಗೊಂಡಿರುವ ಶಿರಾಢಿ ಘಾಟ್ ರಸ್ತೆಯನ್ನು ಉದ್ಘಾಟಿಸಿದ್ದಾರೆ. ಭಾನುವಾರ ಮಧ್ಯಾಹ್ನ 3ಗಂಟೆಯಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮೊದಲ ದಿನ ಸಾವಿರಕ್ಕೂ ಅಧಿಕ ವಾಹನಗಳು ಕಾಂಕ್ರೀಟ್‌ರಸ್ತೆಯಲ್ಲಿ ಸಂಚಾರ ನಡೆಸಿದವು. ಮೊದಲ ದಿನ ಕಾರು, ಬಸ್, ಕಂಟೈನರ್ ಸೇರಿದಂತೆ ಎಲ್ಲಾ ವಿಧದ ವಾಹನಕ್ಕೆ ಅವಕಾಶ […]

ಇಂದಿರಾ ಕ್ಯಾಂಟೀನ್​ ಅವ್ಯವಹಾರ ಬಗ್ಗೆ ರಾಮದಾಸ್​ ಆರೋಪ: ಯು.ಟಿ.ಖಾದರ್ ಆಕ್ರೋಶ

Monday, July 16th, 2018
u-t-kadher

ಮಂಗಳೂರು: ಇಂದಿರಾ ಕ್ಯಾಂಟೀನ್ನಲ್ಲಿ 50 ಕೋಟಿ ರೂ. ಅವ್ಯವಹಾರವಾಗಿದೆ ಎಂದು ಶಾಸಕ ರಾಮದಾಸ್ ಆರೋಪಕ್ಕೆ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದಿರಾ ಕ್ಯಾಂಟೀನ್ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯಿಲ್ಲದೆ ರಾಜಕೀಯ ಪ್ರೇರಿತ ಹೇಳಿಕೆ ನೀಡಿದ್ದಾರೆ. ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡಿದ್ದಾರೆ. ಸರ್ಕಾರ ಯಾರು ಕೂಡ ಹಸಿದಿರಬಾರದು ಎಂದು ಮಾಡಿರುವ ಈ ಯೋಜನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಪಡೆದಿದೆ. ರಾಮದಾಸ್ ಅವರು ಯಾವುದೇ ಮಾಹಿತಿ ತಿಳಿದುಕೊಳ್ಳದೆ ಆರೋಪ ಮಾಡುತ್ತಿದ್ದಾರೆ. ಜನರಲ್ಲಿ ಗೊಂದಲ ಸೃಷ್ಟಿಸಿ ಹಿಟ್ ಆಂಡ್ ರನ್ ಮಾಡುವ […]

ಉದ್ಘಾಟನೆಯಾದ್ರೂ ಬಸ್​, ಲಾರಿಗಳ ಸಂಚಾರಕ್ಕೆ ನಿಷೇಧ..!

Monday, July 16th, 2018
prohibition

ಮಂಗಳೂರು: ಇಂದು ಉದ್ಘಾಟನೆಯಾದ ಶಿರಾಡಿ ಘಾಟ್ ಕಾಂಕ್ರೀಟ್ ರಸ್ತೆ ಕಾಮಗಾರಿ ಅಪೂರ್ಣವಾಗಿರುವುದರಿಂದ ಘನ ವಾಹನ ಮತ್ತು ಬಸ್ ಸಂಚಾರವನ್ನು ನಿರ್ಬಂಧಿಸಲಾಗಿದೆ. ಶಿರಾಡಿ ಐ.ಬಿ ಯಲ್ಲಿ ನಗರಾಭಿವೃದ್ಧಿ ಸಚಿವ ಯು ಟಿ ಖಾದರ್, ಜಿಲ್ಲಾಧಿಕಾರಿ, ಜಿಲ್ಲಾ ವರಿಷ್ಠಾಧಿಕಾರಿ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಗುತ್ತಿಗೆದಾರರು 15 ದಿನಗಳಲ್ಲಿ ಡೇಂಜರ್ ಝೋನ್ ಕಾಮಗಾರಿ ಮುಗಿಸುವಂತೆ ಸಭೆಯಲ್ಲಿ ಸೂಚಿಸಲಾಗಿದೆ. ಈ ಅವಧಿಯಲ್ಲಿ ಕೇವಲ ದ್ವಿಚಕ್ರ, ಮಿನಿಬಸ್, ಟೆಂಪೋ ಟ್ರಾವೆಲರ್ಸ್ಗಳಿಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಶಿರಾಡಿ ಘಾಟ್ ಉದ್ಘಾಟನೆಗೆ ಬರ್ತಾರೆ ನೋಡಿ ಕೇಂದ್ರದ ಮಂತ್ರಿಗಳು ಗಡ್ಕರಿ, ಆಸ್ಕರ್ 

Monday, July 9th, 2018
Khader

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಾಟ್ ರಸ್ತೆ ದುರಸ್ತಿಗೊಂಡು ಸಜ್ಜುಗೊಳ್ಳುತ್ತಿದ್ದು, ಉದ್ಘಾಟನೆಗೆ ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಹಾಗೂ ಮಾಜಿ ಕೇಂದ್ರ ಸಚಿವರಾದ ಆಸ್ಕರ್ ಫೆರ್ನಾಂಡಿಸ್ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಗಡ್ಕರಿ ದಿನಾಂಕ ನಿಗದಿಗಾಗಿ ಸಚಿವರ ದೆಹಲಿಯ ಕಛೇರಿಗೆ ಕರ್ನಾಟಕ ಸರಕಾರದ ಲೋಕೋಪಯೋಗಿ ಇಲಾಖೆಯಿಂದ ಫ್ಯಾಕ್ಸ್ ಸಂದೇಶ ರವಾನಿಸಲಾಗಿದೆ ಎಂದು ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ಯು.ಟಿ.ಖಾದರ್ ತಿಳಿಸಿದ್ದಾರೆ. ಸೋಮವಾರ (09/07) ವಿಧಾನಸೌಧದ 313ನೇ ಕೊಠಡಿಯಲ್ಲಿ ಸಭೆ ಸೇರಿದ ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣ, […]

ಕುಮಾರಸ್ವಾಮಿ ಮಂಡಿಸಿದ ಚೊಚ್ಚಲ ಬಜೆಟ್ ಉತ್ತಮ ಹಾಗೂ ಸ್ವಾಗತಾರ್ಹ: ಯು.ಟಿ.ಖಾದರ್

Thursday, July 5th, 2018
u-t-khader

ಮಂಗಳೂರು:‌ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು‌ ಮಂಡಿಸಿದ ಚೊಚ್ಚಲ ಬಜೆಟ್ ಉತ್ತಮ ಹಾಗೂ ಸ್ವಾಗತಾರ್ಹ ಎಂದು ವಸತಿ ಇಲಾಖೆ ಸಚಿವ ಯು.ಟಿ.ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ವ ಜನಾಂಗಕ್ಕೆ ಸಮನಾದ ಬಜೆಟ್ ಇದಾಗಿದೆ.‌‌ ಕರಾವಳಿ ಭಾಗಕ್ಕೆ ಈ ಬಾರಿ ಅಗತ್ಯ ಅನುದಾನ ನೀಡದಿದ್ದರೂ ಹಿಂದೆ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ನಲ್ಲಿ ಕರಾವಳಿಗೆ ಸಾಕಷ್ಟು ಅನುದಾನ ನೀಡಿದ್ದರು ಎಂದರು. ಬಿಜೆಪಿಯವರಿಗೆ ಟೀಕೆ ಮಾಡುವುದೇ ಅವರ ಕೆಲಸ. ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಶಿವಮೊಗ್ಗ ಜಿಲ್ಲೆಗೆ‌ ನೀಡಿದ ಅನುದಾನ‌ದ ಬಗ್ಗೆ ನಮಗೆ ಗೊತ್ತಿದೆ. ಅಲ್ಪಸಂಖ್ಯಾತ […]

ಸ್ಕಾರ್ಪ್ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ: ಯು.ಟಿ ಖಾದರ್

Saturday, June 30th, 2018
u-t-kader

ಮಂಗಳೂರು: ಸ್ಕಾರ್ಪ್ ವಿವಾದ ಬಗೆಹರಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇವೆ ಎಂದು ಸಚಿವ ಯು.ಟಿ ಖಾದರ್ ಮಂಗಳೂರಿನಲ್ಲಿ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಾದರ್ ಅವರು ಸ್ಕಾರ್ಪ್ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಜಿಲ್ಲಾಧಿಕಾರಿ ಗೆ ಸೂಚನೆ ನೀಡಲಾಗಿದೆ ಎಂದರು. ಜಿಲ್ಲಾಧಿಕಾರಿ ಕಾನೂನಾತ್ಮಕ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಾಟ್ಸಪ್ ನಲ್ಲಿ ಬರುವ ಅಪಪ್ರಚಾರದ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಮೂಲರಪಟ್ಣ ಸೇತುವೆ ಸ್ಥಳಕ್ಕೆ ಯು.ಟಿ ಖಾದರ್ ಭೇಟಿ ನೀಡಿ ಪರಿಶೀಲನೆ..!

Saturday, June 30th, 2018
mullarpatna

ಮಂಗಳೂರು: ಇತ್ತೀಚೆಗೆ ಮಂಗಳೂರಿನ ಕುಪ್ಪೆಪದವಿನಿಂದ ಬಂಟ್ವಾಳ ಸಂಪರ್ಕಿಸುವ ಮೂಲರಪಟ್ಣ ಸೇತುವೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ಸಚಿವ ಯು.ಟಿ ಖಾದರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯರೊಂದಿಗೆ ಸಮಸ್ಯೆ ಆಲಿಸಿದ ಅವರು, ಶೀಘ್ರ ಪರ್ಯಾಯ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಮೂಲರಪಟ್ಣದಿಂದ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ನದಿಯ ಎರಡೂ ಕಡೆಯವರ ಸಂಪರ್ಕಕ್ಕಾಗಿ ಬೋಟ್ ವ್ಯವಸ್ಥೆ ಮಾಡಲು ಪರಿಶೀಲನೆ ನಡೆಸುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗುವುದು ಎಂದರು. ಮಳೆಗಾಲ ಕಳೆದ ಬಳಿಕ ಹೊಸ […]