Blog Archive

ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ನಾಮಪತ್ರ ಸಲ್ಲಿಕೆ

Saturday, April 21st, 2018
srinivas-shetty

ಕುಂದಾಪುರ : ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ತನ್ನ ಅಪಾರ ಬೆಂಬಲಿಗರೊಂದಿಗೆ ಕುಂದಾಪುರ ವಿಧಾನಸೌಧದಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಭೂಬಾಲನ್ ನಾಮಪತ್ರ ಸಿಲ್ಲಿಸಿ ಬಳಿಕ ಮಾತನಾಡಿದ ಅವರು ಈ ಹಿಂದಿನ ಅಭಿವೃದ್ಧಿ ಕೆಲಸಗಳು ಕೈ ಹಿಡಿಯುತ್ತದೆ , ಜನರ ಆಶಿರ್ವಾದ ಮಾಡುತ್ತಾರೆಂದು ಹೇಳಿದರು. ಈ ಸಂದರ್ಭದಲ್ಲಿ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ ಶೆಟ್ಟಿ ಮುಂಖಡರಾದ ಸದಾನಂದ ಬಳ್ಕೂರು, ಟಿ.ಬಿ ಶೆಟ್ಟಿ, ಮಂಜು ಬಿಲ್ಲವ ಭಾಸ್ಕರ ಬಿಲ್ಲವ, ಕಿರಣ್ ಕೊಡ್ಗಿ, ಪ್ರಭಾಕರ, […]

ದಕ್ಷಿಣ ಕನ್ನಡದ 7 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಅಂತಿಮ ?

Friday, April 13th, 2018
election

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಕಣ ರಂಗೇರುತ್ತಿದ್ದು, ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯ ಕಸರತ್ತು ನಡೆಸುತ್ತಿವೆ. ಈ ನಡುವೆ ಬಿಜೆಪಿ ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ಭದ್ರಕೋಟೆಯಂತಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಮಾರ್ಪಟ್ಟಿತ್ತು. ಮೊದಲ ಪಟ್ಟಿಯಲ್ಲಿ ದಕ್ಷಿಣಕನ್ನಡದ ಕೇವಲ ಒಂದು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಾತ್ರ ಘೋಷಿಸಿತ್ತು. ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಎಸ್. ಅಂಗಾರ ಮತ್ತೆ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಉಳಿದ 7 […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ಶೇ. 11 ಹೆಚ್ಚಳ

Tuesday, March 27th, 2018
sesikanth-senthil

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಕ್ರಿಯಗೊಂಡಿದೆ. ಚುನಾವಣೆಯ ಪೂರ್ವ ತಯಾರಿಯ ಕುರಿತು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಈ ಕುರಿತು ವಿವರ ನೀಡಿದರು.ಜಿಲ್ಲೆಗೆ ಇವಿಎಂ ಯಂತ್ರಗಳು ಈಗಾಗಲೇ ಬಂದಿದ್ದು, ಪರಿಶೀಲನೆ ನಡೆಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16,67,194 ಮತದಾರರಿದ್ದು, ಕಳೆದ ಸಾಲಿಗಿಂತ ಶೇ.11ರಷ್ಟು ಮತದಾರರು ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದ್ದಾರೆ ಎಂದು ಹೇಳಿದರು. ಜಿಲ್ಲೆಯಲ್ಲಿ 8,21,123 ಪುರುಷ ಹಾಗೂ 8,46,030 ಮಹಿಳೆ ಮತದಾರರು ಜಿಲ್ಲೆಯಲ್ಲಿದ್ದಾರೆ. ಈ ಬಾರಿ ಚುನಾವಣೆಯಲ್ಲಿ 41 […]

ಜಿಲ್ಲೆಯಲ್ಲಿ ಮತದಾನ ಶಾಂತಿಯುತ : ಬಿರುಸಿನ ಮತದಾನ

Monday, May 16th, 2016
Kerala Vote

ಕಾಸರಗೋಡು: ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಯಿತು. ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆದಿದ್ದು, ವಿದ್ಯುತ್ ಸಂಪರ್ಕ ಸ್ಥಗಿತದಿಂದಾಗಿ ಹಲವೆಡೆ ಸುಗಮ ಮತದಾನಕ್ಕೆ ಅಡ್ಡಿಯುಂಟಾಯಿತು. ವಿದ್ಯುತ್ ಕೈಕೊಟ್ಟ ಮತಗಟ್ಟೆಗಳಲ್ಲಿ ಮೇಣದ ಬತ್ತಿ ಬಳಸಿ ಮತದಾನಕ್ಕೆ ಸೌಕರ್ಯ ಕಲ್ಪಿಸಲಾಯಿತು. ಬಹುತೇಕ ಬೂತ್‌ಗಳಲ್ಲಿ ಬೆಳಗ್ಗಿನಿಂದಲೇ ಮಹಿಳೆಯರ ಉದ್ದನೆಯ ಸರದಿ ಕಂಡು ಬಂತು. ಮೊದಲ ನಾಲ್ಕು ಗಂಟೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಶೇ.28.63 ಮತದಾನವಾಗಿತ್ತು. ಕಾಂಞಂಗಾಡ್ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚ ಶೇ.39 ಮತದಾನವಾಗಿದ್ದರೆ, ತೃಕ್ಕರಿಪುರದಲ್ಲಿ ಶೇ. 28.3 ಮತದಾನವಾಗಿತ್ತು. […]

ತಹಶೀಲ್ದಾರರು ವಿಚಾರಣೆ ನಡೆಸದೇ ಸ್ಮಶಾನ ಜಮೀನು ನೀಡುವುದಾಗಿ ಕಡತವನ್ನು ನಿರ್ಮಿಸಿದ್ದರು

Wednesday, October 14th, 2015
crematorium

ಮಂಗಳೂರು : ಅತ್ತಾವರ ಗ್ರಾಮದ ಸ.ನಂ. 251/1 ರಲ್ಲಿ 0.26 ಎಕ್ರೆ ವಿಸ್ತೀರ್ಣದ ಜಮೀನನ್ನು ಮುಸ್ಲಿಂ ಜನಾಂಗದವರಿಗೆ ಸ್ಮಶಾನಕ್ಕಾಗಿ ಕಾದಿರಿಸುವ ಬಗ್ಗೆ ಕೋರಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಇವರು ತಹಶೀಲ್ದಾರರು ಮಂಗಳೂರು ಇವರಿಗೆ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಅದರಂತೆ ತಹಶೀಲ್ದಾರರು ಪ್ರಸ್ತಾವನೆ ತಯಾರಿಸಿದ್ದು, ಈ ಬಗ್ಗೆ ವಿಶ್ವ ಹಿಂದು ಪರಿಶತ್, ಕಟೀಲ್ ದಿನೇಶ್ ಪೈ ಹಾಗೂ ಅತ್ತಾವರ ಗ್ರಾಮದ ಗ್ರಾಮಸ್ಥರು ಆಕ್ಷೇಪಣೆ ಸಲ್ಲಿಸಿದ್ದು, ತಹಶೀಲ್ದಾರರು ಈ ಬಗ್ಗೆ ವಿಚಾರಣೆ ನಡೆಸದೇ ಕಡತವನ್ನು ಸಲ್ಲಿಸಿದ್ದು ಈ ಆಕ್ಷೇಪಣೆಗಳ ಬಗ್ಗೆ ಸಹಾಯಕ […]