Blog Archive

ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟ ಮುನ್ನಡೆ… ಅತಂತ್ರದಲ್ಲಿ ಮೇಘಾಲಯ!

Saturday, March 3rd, 2018
nagaland

ನಾಗಾಲ್ಯಾಂಡ್: ಮೂರು ರಾಜ್ಯಗಳ ಚುನಾವಣೆ ಮತ ಎಣಿಕೆ ಭರದಿಂದ ಸಾಗಿದ್ದು ಕುತೂಹಲ ಹೆಚ್ಚಿಸಿದೆ. ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟ ಮುಂದಕ್ಕೆ ಸಾಗಿದ್ರೆ, ಇತ್ತ ಮೇಘಾಲಯದಲ್ಲಿ ಕಾಂಗೈ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ತ್ರಿಪುರಾದಲ್ಲಿ ಬಿಜೆಪಿ ಮೈತ್ರಿಕೂಟ ಭರ್ಜರಿ ಮುನ್ನಡೆ ಸಾಧಿಸಿದೆ. ಒಟ್ಟು ಇರುವ 59 ಕ್ಷೇತ್ರಗಳ ಪೈಕಿ ಬಿಜೆಪಿ 42 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನುಳಿದಂತೆ ಸಿಪಿಎಂ 17 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆದ್ರೆ ಪ್ರಮುಖ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ಒಂದೇ ಒಂದು ಸ್ಥಾನದಲ್ಲೂ ಮುನ್ನಡೆ ಸಿಕ್ಕಿಲ್ಲ. ಈಶಾನ್ಯ […]

ಬೆಂಗಳೂರನ್ನ ಮೊದಲು ಹಾಳು ಮಾಡಿದ್ದೇ ಬಿಜೆಪಿ: ಹೆಚ್‌ಡಿಕೆ ವಾಗ್ದಾಳಿ

Friday, March 2nd, 2018
kumarswamy

ಮೈಸೂರು: ಮೊದಲು ಬೆಂಗಳೂರನ್ನ ಹಾಳು‌ ಮಾಡಿದ್ದೇ ಬಿಜೆಪಿಯವರು ಎಂದು ಬೆಂಗಳೂರು ರಕ್ಷಿಸಿ ಪಾದಯಾತ್ರೆ ಬಗ್ಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಬಿಜೆಪಿ ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಬಿಜೆಪಿಯವರು ಈಗ ಪಾದಯಾತ್ರೆಯನ್ನ ಏಕೆ ಮಾಡುತ್ತಿದ್ದಾರೆ ಗೊತ್ತಿಲ್ಲ. ಆದರೆ 5 ವರ್ಷದ ಆಡಳಿತದಲ್ಲಿ ಬೆಂಗಳೂರು ಅಭಿವೃದ್ಧಿಗೆ ಸಿದ್ದರಾಮಯ್ಯ ಏನನ್ನು ಕೊಟ್ಟಿಲ್ಲ‌. ಬೆಂಗಳೂರು ಮತ್ತು‌ ಮೈಸೂರನಲ್ಲಿ ಏನಾದರು‌ ಅಭಿವೃದ್ಧಿಯಾಗಿದೆ ಅಂದರೆ ಅದು‌ ನಮ್ಮ […]

ಕಾಂಗ್ರೆಸ್‌-ಬಿಜೆಪಿ ವಿರುದ್ಧ ಮುತಾಲಿಕ್‌ ವಾಗ್ದಾಳಿ

Friday, March 2nd, 2018
muthalik

ಮಂಗಳೂರು: ಬಿಜೆಪಿ, ಕಾಂಗ್ರೆಸ್ ಪಕ್ಷಗಳ ವಿರುದ್ಧ ಕಿಡಿಕಾರಿರುವ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಈ ಎರಡೂ ಪಕ್ಷಗಳು ತುಷ್ಟೀಕರಣದ ಪಕ್ಷಗಳು ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಮುಸ್ಲಿಂ, ಬಿಜೆಪಿ ಹಿಂದೂ ತುಷ್ಟೀಕರಣದ ಪಕ್ಷ. ಈ ಎರಡೂ ಪಕ್ಷಗಳ ಉದ್ದೇಶ ಒಂದೇ. ಅದು ಅಧಿಕಾರವೇ ವಿನಃ ಜನ ಸಾಮಾನ್ಯರ ಅಭಿವೃದ್ಧಿಯಲ್ಲ. ಲೂಟಿ ಮಾಡಬೇಕೆಂಬುದೇ ಇವರ ಗುರಿ ಎಂದು ಟೀಕಿಸಿದರು. ಬಿಜೆಪಿ ಮಾ. 3ರಿಂದ ಹಮ್ಮಿಕೊಂಡಿರುವ ಜನಸುರಕ್ಷಾ ಯಾತ್ರೆಯನ್ನು ಟೀಕಿಸಿರುವ ಅವರು, ಇದೊಂದು ಡೋಂಗಿ ಯಾತ್ರೆ. ಸಾಧ್ಯವಿದ್ದರೆ ಭಟ್ಕಳದಿಂದ […]

ಬಿಜೆಪಿಯ ‘ಜನಸುರಕ್ಷಾ ಯಾತ್ರೆ’ ಕೇವಲ ಢೋಂಗಿ ರಾಜಕಾರಣ: ಮುತಾಲಿಕ್

Thursday, March 1st, 2018
janasuraksha

ಮಂಗಳೂರು: ಬಿಜೆಪಿ ನಡೆಸಲು ಉದ್ದೇಶಿಸಿರುವ ಜನಸುರಕ್ಷಾ ಯಾತ್ರೆ ಕೇವಲ ಢೋಂಗಿ ರಾಜಕಾರಣ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಗುರುವಾರ ಮಾತನಾಡಿದ ಅವರು ಬಿಜೆಪಿಯವರಿಗೆ ಕಾಳಜಿ ಇದ್ದರೆ ಭಟ್ಕಳದಿಂದ ಯಾತ್ರೆ ಆರಂಭಿಸಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. “ಭಟ್ಕಳ ಬಿಜೆಪಿ ಶಾಸಕ ಚಿತ್ತರಂಜನ್ ಕೊಲೆ ಪ್ರಕರಣದಲ್ಲಿ ಈವರೆಗೆ ಆರೋಪಿಗಳ ಪತ್ತೆಯಾಗಿಲ್ಲ. 1997ರಲ್ಲಿ ಭಟ್ಕಳದ 21 ಜನರ ಕೊಲೆ ಪ್ರಕರಣವನ್ನು ಈವರೆಗೂ ಭೇದಿಸಲು ಸಾಧ್ಯವಾಗಿಲ್ಲ. ಭಟ್ಕಳ ತಾಲೂಕು ಬಿಜೆಪಿ ಅಧ್ಯಕ್ಷರಾಗಿದ್ದ ತಿಮ್ಮಪ್ಪ […]

ಮಂಗಳೂರು ಮೇಯರ್ ಎಸ್ಸೆಸ್ಸೆಲ್ಸಿ ಫೇಲ್, ಸಾಮಾನ್ಯ ಸಭೆಯಲ್ಲಿ ಅದೇ ಚರ್ಚೆ!

Wednesday, February 28th, 2018
kavitha-sanil

ಮಂಗಳೂರು: ರಫ್ ಅಂಡ್ ಟಫ್ ಮೇಯರ್ ಎಂದೇ ಹೇಳುವ ಮಂಗಳೂರು ಮೇಯರ್ ಕವಿತಾ ಸನಿಲ್ ಶೈಕ್ಷಣಿಕ ವಿಚಾರ ಭಾರೀ ಚರ್ಚೆಯಲ್ಲಿದೆ. ಕವಿತಾ ಸನಿಲ್ ಎಸ್ಸೆಸ್ಸೆಲ್ಸಿ ಫೇಲ್ ಆಗಿದ್ದಾರೆ ಎಂಬುದು ಸದ್ಯಕ್ಕೆ ವಿಪಕ್ಷಗಳು ಮಾಡುತ್ತಿರುವ ಆರೋಪ. ಅಷ್ಟೇ ಅಲ್ಲ, ಹೀಗೆ ಎಸ್ಸೆಸ್ಸೆಲ್ಸಿ ಫೇಲಾದ ಕವಿತಾ ಸನಿಲ್ ತಮ್ಮದು ಪದವಿ ಆಗಿದೆ ಎಂದು ಸುಳ್ಳು ಹೇಳಿದ್ದಾರೆ ಎಂಬುದು ಆಕ್ಷೇಪ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಮುಖಂಡ ಹಾಗೂ ವಿಪಕ್ಷ ನಾಯಕ ಗಣೇಶ್ ಹೊಸಬೆಟ್ಟು ಇದೇ […]

ಬಿಜೆಪಿಯವರು ವೋಟಿಗಾಗಿ ರಾಮಭಕ್ತರು, ನಾವು ನೈಜ ರಾಮಭಕ್ತರು: ರಮಾನಾಥ್‌ ರೈ

Tuesday, February 27th, 2018
ramanath-rai

ಮಂಗಳೂರು: ಬಿಜೆಪಿಯವರು ಅನ್ಯಧರ್ಮವನ್ನು ದ್ವೇಷ ಮಾಡುವ ಭಾಷಣ ಮಾಡಿ ಸುಲಭವಾಗಿ ಹಿಂದೂ ಮುಖಂಡರಾಗುತ್ತಾರೆ. ಆದರೆ ಹಿಂದೂ ಧರ್ಮಕ್ಕೆ ಒಂದು ಪೈಸೆ ದೇಣಿಗೆ ನೀಡುವುದಿಲ್ಲ ಎಂದು ಸಚಿವ ರಮಾನಾಥ ರೈ ಹೇಳಿಕೆ ನೀಡಿದ್ದಾರೆ. ಬಂಟ್ವಾಳ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಚಿವ ರೈ, ಬಿಜೆಪಿಯವರು ವೋಟಿಗಾಗಿ ರಾಮಭಕ್ತರಾಗಿದ್ದಾರೆ. ಆದರೆ ಕಾಂಗ್ರೆಸ್‌ನವರು ನೈಜ ರಾಮಭಕ್ತರು. ನಾನು ಪ್ರತಿದಿನ ರಾಮಯಣದ ಶ್ಲೋಕವನ್ನು ಹೇಳಿಯೇ ದಿನಚರಿ ಆರಂಭಿಸುತ್ತೇನೆ ಎಂದಿದ್ದಾರೆ. ಬಿಜೆಪಿಯಲ್ಲಿ ಕೆಲವರು ಅನ್ಯಧರ್ಮವನ್ನು ದ್ವೇಷ ಮಾಡುವ ಭಾಷಣ ಮಾಡಿ ಸುಲಭವಾಗಿ ಹಿಂದೂ ಮುಖಂಡರಾಗುತ್ತಾರೆ. […]

ಮಂಗಳೂರು ಮಹಾನಗರ ಪಾಲಿಕೆಗೆ ಮಿಗತೆ ಬಜೆಟ್… ಬಿಜೆಪಿಯಿಂದ ಟೀಕೆ

Tuesday, February 27th, 2018
mayor

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಗೆ 2018-19ನೇ ಸಾಲಿಗೆ 26,955.07 ಲಕ್ಷ ರೂ.ಗಳ ಉಳಿತಾಯದ ಬಜೆಟ್‌ಅನ್ನು ಮಂಡಿಸಲಾಗಿದೆ. ಆದರೆ, ಯಾವುದೇ ಹೊಸ ಯೋಜನೆಯನ್ನು ಪ್ರಕಟಿಸದೆ ಜನರನ್ನು ನಿರಾಸೆಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿವೆ. ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆಯಲ್ಲಿ ಪಾಲಿಕೆ ಸಭಾಂಗಣದಲ್ಲಿ ನಿನ್ನೆ ನಡೆದ ವಿಶೇಷ ಸಭೆಯಲ್ಲಿ ಹಣಕಾಸು, ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಬಜೆಟ್ ಮಂಡಿಸಿದರು. ಹಿಂದಿನ ಸಾಲಿನ ಉಳಿತಾಯ 28,560.74 ಲಕ್ಷ ರೂ. ಹಾಗೂ ಈ ಸಾಲಿನ ಆದಾಯ 69,840.38 ಲಕ್ಷ ರೂ. ಸೇರಿ […]

ಬೆಂಗರೆಯಲ್ಲಿ ಗಲಭೆ ಸೃಷ್ಟಿಸಿದ್ದೇ ಬಿಜೆಪಿಗರು: ಕಾಂಗ್ರೆಸ್‌ ಆರೋಪ

Friday, February 23rd, 2018
congress

ಮಂಗಳೂರು: ಬಿಜೆಪಿ ಯಾವತ್ತೂ ಹೇಳಿದ್ದನ್ನು ಮಾಡುವುದಿಲ್ಲ. ಹೇಳದೆ ಮಾಡಿ ಅದನ್ನು ಕಾಂಗ್ರೆಸ್ಸಿಗರ ತಲೆಗೆ ಕಟ್ಟುತ್ತಾರೆ. ಬೆಂಗರೆಯಲ್ಲಿ ಮೊನ್ನೆ ಗಲಭೆ ಸೃಷ್ಟಿಸಿದ್ದೇ ಬಿಜೆಪಿಗರು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಜಿಲ್ಲೆಯ ಅಭಿವೃದ್ಧಿ ಪರ ಕಿಂಚಿತ್ತೂ ಕೆಲಸ ಮಾಡದ ಸಂಸದ ನಳಿನ್ ಕುಮಾರ್ ಕಟೀಲ್ ನಂ.1 ಸಂಸದರಾದರೆ ದೇಶದ ಉಳಿದ 523 ಸಂಸದರ ಪಾಡೇನು? ಎರಡನೇ ಬಾರಿ ಜಿಲ್ಲೆಯನ್ನು ಪ್ರತಿನಿಧಿಸುವ ನಳಿನ್ ಅಭಿವೃದ್ಧಿ ಪರ ಯೋಚಿಸುತ್ತಿಲ್ಲ, ಕೆಲಸ ಮಾಡುತ್ತಿಲ್ಲ. […]

‘ರಾಹುಲ್ ಗೆ ಕೊನೆ ದಿಕ್ಕು ಕರ್ನಾಟಕ, ಉಳಿದೆಡೆ ಮಾತನಾಡೋರು ಗತಿಯಿಲ್ಲ’

Wednesday, February 21st, 2018
yedeyurappa

ಮಂಗಳೂರು : ರಾಹುಲ್ ಗಾಂಧಿ ಅವರು ಬಂದರೆ ಕರ್ನಾಟಕಕ್ಕೆ, ಬೆಂಗಳೂರಿಗೆ ಬರಬೇಕು. ಏಕೆಂದರೆ ಬೇರೆಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ಇವರು ಹೋದರೆ ಮಾತನಾಡಿಸುವವರು ಸಹ ಗತಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳೂರಿನಲ್ಲಿ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶದಲ್ಲಿ ಬುಧವಾರ ವ್ಯಂಗ್ಯವಾಡಿದರು. ಉತ್ತರಪ್ರದೇಶದಲ್ಲಿ ಬಿಜೆಪಿ ಮೂನ್ನೂರಾ ಇಪ್ಪತ್ತೈದು ಸ್ಥಾನ ಗೆಲ್ಲುತ್ತದೆ ಅಂತ ಯಾವ ಮಾಧ್ಯಮದ ಬಂಧುಗಳು ನಿರೀಕ್ಷೆ ಮಾಡಿರಲಿಲ್ಲ. ಉತ್ತರ ಪ್ರದೇಶದಲ್ಲಿ ಕ್ರಾಂತಿಯಾಯಿತು. ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು, ರಾಹುಲ್ ಗಾಂಧಿಯವರು ಇಲ್ಲೂ ಕಾಲಿಡದಂತೆ ಮಾಡಬೇಕು ಎಂದರು. […]

ಜಾಣಮೌನದ ಹಿಂದಿದೆ ಸರಳ ರಹಸ್ಯ

Wednesday, February 21st, 2018
mangaluru

ಮಂಗಳೂರು: ಅನೈತಿಕ ಪೊಲೀಸ್‌ಗಿರಿಯ ಘಟನೆಗಳಿಂದಾಗಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ದೇಶದಾದ್ಯಂತ ಆಗಾಗ ಸುದ್ದಿ ಮಾಡಿದರೂ, ಅನೈತಿಕ ಪೊಲೀಸ್‌ಗಿರಿಯು ಚುನಾವಣೆಯ ವಿಷಯವಾಗಿ ಗುರುತಿಸಿಕೊಳ್ಳದೇ ಇರುವುದು ವಿಪರ್ಯಾಸ. ಅಭಿವೃದ್ಧಿಯ ಸಮಸ್ಯೆಗಳು, ನಿರುದ್ಯೋಗದ ಪರಿಣಾಮವಾದ ನಿರಂತರ ವಲಸೆ ಅಥವಾ ನೀರು ನಿರ್ವಹಣೆಯ ಸ್ಥಳೀಯ ಸಮಸ್ಯೆಗಳು ಕರಾವಳಿಯಲ್ಲಿ ಚುನಾವಣೆಯ ವಿಷಯವಾಗುತ್ತಿಲ್ಲ. ಇದೇ ಸಾಲಿಗೆ ಅನೈತಿಕ ಪೊಲೀಸ್‌ಗಿರಿಯೂ ಸೇರಿದೆ ಎನ್ನಬಹುದು. ಜಿಲ್ಲೆಯಲ್ಲಿ ಶಿಕ್ಷಣ ಪಡೆದ ಜನರೇ ಇರುವುದರಿಂದ ರಾಜ್ಯ ರಾಜಕೀಯ ವಿದ್ಯಮಾನ ಮತ್ತು ದೇಶದ ರಾಜಕೀಯ ಚಿತ್ರಣವೂ ಇಲ್ಲಿನ ಮತದಾರರ ಮನಸ್ಸಿನ ಮೇಲೆ […]